Amazon Great Freedom Festival 2025
Amazon Great Freedom Festival 2025: ಆನ್‌ಲೈನ್ ಶಾಪಿಂಗ್ ಪ್ಲಾಟ್ ಫಾರ್ಮ್ ಅಮೆಜಾನ್ ಮತ್ತೊಮ್ಮೆ ತನ್ನ ಅತಿದೊಡ್ಡ ಹಬ್ಬದ ಮಾರಾಟದಲ್ಲಿ ಗ್ರಾಹಕರಿಗೆ ಉತ್ತಮ ರಿಯಾಯಿತಿಗಳನ್ನು ನೀಡಲಿದೆ. ಅಮೆಜಾನ್ ಗ್ರೇಟ್ ಫ್ರೀಡಂ ಸೇಲ್ 2025 ಅನ್ನು ಘೋಷಿಸಲಾಗಿದ್ದು ಈ ಮಾರಾಟವು ಅಗಸ್ಟ್ 1 ರಿಂದ ಪ್ರಾರಂಭವಾಗಲಿದ್ದು ದೇಶಾದ್ಯಂತ ಸ್ಮಾರ್ಟ್ ಫೋನ್ ಗ್ರಾಹಕರಿಗೆ ದೊಡ್ಡ ಅವಕಾಶವನ್ನು ತರಲಿದೆ. ಈ ಮಾರಾಟವು ಮಧ್ಯಾಹ್ನ 12 ಗಂಟೆಗೆ ಪ್ರಾರಂಭವಾಗುತ್ತದೆ. ಆದರೆ ಪ್ರೈಮ್ ಸದಸ್ಯರು ನಾಳೆ ರಾತ್ರಿಯಿಂದಲೇ ಅಂದರೆ 31ನೇ ಜುಲೈ 2025 ರಂದು ಮಧ್ಯರಾತ್ರಿ 12:00am ಗಂಟೆಯಿಂದ ಇದನ್ನು ಪ್ರವೇರಿಸಲು ಸಾಧ್ಯವಾಗುತ್ತದೆ.
ಈ ಬಾರಿ ಅಮೆಜಾನ್ ಮಾರಾಟ ಪ್ರಾರಂಭವಾಗುವ ಮೊದಲೇ ಕೆಲವು ದೊಡ್ಡ ಕೊಡುಗೆಗಳನ್ನು ಬಹಿರಂಗಪಡಿಸಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 24 ಅಲ್ಮಾದಂತಹ ಪ್ರಮುಖ ಫೋನ್‌ಗಳಿಗೆ ಹೆಚ್ಚಿನ ರಿಯಾಯಿತಿಯೊಂದಿಗೆ ನೀಡಲಾಗುತ್ತಿದೆ. ಇದರ ಹೊರತಾಗಿ OnePlus 1R ಮತ್ತು Galaxy Z Fold ನಂತಹ ಪ್ರೀಮಿಯಂ ಮತ್ತು ಇತ್ತೀಚಿನ ಲೇಟೆಸ್ಟ್ ಸ್ಮಾರ್ಟ್ ಫೋನ್‌ಗಳು ಸಹ ವಿಶೇಷ ರಿಯಾಯಿತಿಯಲ್ಲಿ ಲಭ್ಯವಿರುತ್ತವೆ. ಅಲ್ಲದೆ SBI ಕಾರ್ಡ್ ಬಳಸಿಕೊಂಡು 10% ತ್ವರಿತ ಡಿಸ್ಕೌಂಟ್ ಸಹ ಪಡೆಯಬಹುದು.
ಇದನ್ನೂ ಓದಿ: ಕೈಗೆಟಕುವ ಬೆಲೆಗೆ Moto G86 Power 5G ಪ್ರೀಮಿಯಂ ಫೀಚರ್ಗಳೊಂದಿಗೆ ಬಿಡುಗಡೆ! ಬೆಲೆ ಮತ್ತು ಮಾರಾಟ ಯಾವಾಗ?
ಈ ಬಾರಿಯ ಸೇಲ್‌ನಲ್ಲಿ ಅಮೆಜಾನ್ ಎಸ್‌ಬಿಐ ಬ್ಯಾಂಕ್‌ನೊಂದಿಗೆ ಪಾಲುದಾರಿಕೆ ಹೊಂದಿದ್ದು ಗ್ರಾಹಕರಿಗೆ ಹೆಚ್ಚುವರಿ ಶೇಕಡಾ 10 ರಷ್ಟು ತ್ವರಿತ ರಿಯಾಯಿತಿಯನ್ನು ನೀಡುತ್ತಿದೆ. ಇದು ಎಸ್‌ಬಿಐ ಕ್ರೆಡಿಟ್ ಕಾರ್ಡ್ ಮತ್ತು ಇಎಂಐ ವಹಿವಾಟುಗಳ ಮೇಲೆ ಅನ್ವಯವಾಗುತ್ತದೆ. ಇದರ ಹೊರತಾಗಿ ನೋ-ಕಾಸ್ಟ್ ಇಎಂಐ, ಎಕ್ಸ್‌ಚೇಂಜ್ ಅವರ್ ಮತ್ತು ಅಮೆಜಾನ್ ಕೂಪನ್ಗಳಂತಹ ಸೌಲಭ್ಯಗಳನ್ನು ಸಹ ನೀಡಲಾಗುತ್ತಿದ್ದು ಇದು ಸ್ಮಾರ್ಟ್ ಫೋನ್‌ನ ಬೆಲೆಯನ್ನು ಮತ್ತಷ್ಟು ಕಡಿಮೆ ಮಾಡಬಹುದು.
ದೀರ್ಘಕಾಲದವರೆಗೆ ಪ್ರೀಮಿಯಂ ಸ್ಮಾರ್ಟ್‌ಫೋನ್ ಖರೀದಿಸಲು ಯೋಜಿಸುತ್ತಿರುವವರಿಗೆ ಈ ಮಾರಾಟವು ಅವರಿಗೆ ಉತ್ತಮ ಅವಕಾತವಾಗಿದೆ. ಹೊಸ ತಂತ್ರಜ್ಞಾನ ಹೊಂದಿರುವ ಸ್ಮಾರ್ಟ್ ಫೋನ್‌ಗಳು ಈಗ ಅಮೆಜಾನ್ ಜೀ ಕೊಡುಗೆಗಳು, ಬ್ಯಾಂಕ್ ರಿಯಾಯಿತಿಗಳು ಮತ್ತು ವಿನಿಮಯ ಪ್ರಯೋಜನಗಳೊಂದಿಗೆ ತುಂಬಾ ಅಗ್ಗವಾಗಿ ಕಂಡುಬರುತ್ತವೆ. ಕಡಿಮೆ ಬಜೆಟ್‌ನಲ್ಲಿಯೂ ಸಹ ಅವುಗಳನ್ನು ಖರೀದಿಸಬಹುದು.