ಇ ಕಾಮರ್ಸ್ ಪ್ಲಾಟ್‌ಫಾರ್ಮ್ ದೈತ್ಯ ಎಂದೇ ಗುರುತಿಸಿಕೊಂಡಿರುವ Amazon ತನ್ನ ಎಲೆಕ್ಟ್ರಾನಿಕ್ಸ್ ಪ್ರೀಮಿಯರ್ ಲೀಗ್ (Electronics Premier League) ಸೇಲ್ ಅನ್ನು ಅಧಿಕೃತವಾಗಿ ಘೋಷಿಸಿದೆ. ಅಮೆಜಾನ್‌ನಲ್ಲಿ ಎಲೆಕ್ಟ್ರಾನಿಕ್ಸ್ ಪ್ರೀಮಿಯರ್ ಲೀಗ್ ಮಾರಾಟವು ಇದೇ ಮಾರ್ಚ್ 6 ರಿಂದ ಮಾರ್ಚ್ 12 ರ ವರೆಗೆ ನಡೆಯಲಿದೆ. ಈ ಮಾರಾಟದ ಸಮಯದಲ್ಲಿ ಗ್ರಾಹಕರು ರಿಯಾಯಿತಿ ಡೀಲ್‌ಗಳು, ಪವರ್ ಪ್ಲೇ ಡೀಲ್‌ಗಳು ಸೇರಿದಂತೆ ಮತ್ತಷ್ಟು ಹೆಚ್ಚಿನ ಡಿಸ್ಕೌಂಟ್ ಪ್ರಯೋಜನ ಪಡೆಯಬಹುದಾಗಿದೆ. ಇದಲ್ಲದೇ ಖರೀದಿದಾರರು HDFC ಕ್ರೆಡಿಟ್ ಕಾರ್ಡ್ ಮತ್ತು EMI ವಹಿವಾಟುಗಳ ಮೇಲೆ 4,500 ರೂಗಳ ವರೆಗಿನ ಇನ್‌ಸ್ಟಂಟ್ ಡಿಸ್ಕೌಂಟ್ ಪಡೆಯಬಹುದು. ಅಲ್ಲದೇ ಪವರ್ ಪ್ಲೇ ಡೀಲ್ಸ್‌ಗಳು ಲಭ್ಯವಾಗಲಿವೆ. ಇನ್ನುಳಿದಂತೆ ಅಮೆಜಾನ್ ತಾಣವು ಆಯೋಜಿಸಿರುವ ಎಲೆಕ್ಟ್ರಾನಿಕ್ಸ್ ಪ್ರೀಮಿಯರ್ ಲೀಗ್ ಸೇಲ್ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : ವೇಗದ ಪ್ರೊಸೆಸರ್ ಇರುವ Realme GT 7 Pro ಮೊಬೈಲ್ ಬೆಲೆಯಲ್ಲಿ ಬೊಂಬಾಟ್ ಇಳಿಕೆ
ಜನಪ್ರಿಯ ಇ ಕಾಮರ್ಸ್ ಪ್ಲಾಟ್‌ಫಾರ್ಮ್ ಆಗಿರುವ ಅಮೆಜಾನ್ ಇದೀಗ ಎಲೆಕ್ಟ್ರಾನಿಕ್ಸ್ ಪ್ರೀಮಿಯರ್ ಲೀಗ್ ಮಾರಾಟವನ್ನು ಘೋಷಿಸಿದೆ. ಈ ವಿಶೇಷ ಮಾರಾಟವು ಇದೇ ಮಾರ್ಚ್ 6 ರಿಂದ ಮಾರ್ಚ್ 12 ರ ವರೆಗೆ ನಡೆಯಲಿದೆ. ಈ ಮಾರಾಟದಲ್ಲಿ ಸ್ಮಾರ್ಟ್‌ಫೋನ್, ಟಿವಿಗಳು ಸೇರಿದಂತೆ ಹಲವು ಎಲೆಕ್ಟ್ರಾನಿಕ್ಸ್ ಉತ್ಪನ್ನಗಳು ಆಕರ್ಷಕ ರಿಯಾಯಿತಿ ದರದಲ್ಲಿ ಖರೀದಿಗೆ ಲಭ್ಯವಾಗಲಿವೆ. ಮುಖ್ಯವಾಗಿ ಗ್ರಾಹಕರು HDFC ಕ್ರೆಡಿಟ್ ಕಾರ್ಡ್ ಮತ್ತು EMI ವಹಿವಾಟುಗಳ ಮೂಲಕ ಖರೀದಿ ಮಾಡಿದರೆ 4,500 ರೂಗಳ ವರೆಗಿನ ಇನ್‌ಸ್ಟಂಟ್ ರಿಯಾಯಿತಿ ಸಹ ಪಡೆಯಬಹುದಾಗಿದೆ. ಈ ಕೊಡುಗೆಯು ಖರೀದಿದಾರರಲ್ಲಿ ಶಾಪಿಂಗ್ ಉತ್ಸಾಹವನ್ನು ಹೆಚ್ಚಿಸುವಂತಿದೆ.
ಅಮೆಜಾನ್ ಎಲೆಕ್ಟ್ರಾನಿಕ್ಸ್ ಪ್ರೀಮಿಯರ್ ಲೀಗ್ ಮಾರಾಟದಲ್ಲಿ ಸ್ಮಾರ್ಟ್‌ಫೋನ್‌ಗಳಿಗೆ ಶೇ 40% ರ ವರೆಗೂ ನೇರ ಡಿಸ್ಕೌಂಟ್ ಲಭ್ಯವಿರಲಿದೆ. ಹಾಗೆಯೇ ಲ್ಯಾಪ್‌ಟಾಪ್ ಹಾಗೂ ಟ್ಯಾಬ್ಲೆಟ್ ಡಿವೈಸ್‌ಗಳಿಗೆ ಶೇ 45% ರ ವರಗೆ ರಿಯಾಯಿತಿ ದೊರೆಯುತ್ತದೆ. ಇನ್ನು ಹೋಮ್ ಅಪ್ಲೈಯನ್ಸ್ ಉತ್ಪನ್ನಗಳಿಗೆ ಶೇ 65% ರ ವರಗೆ ಡಿಸ್ಕೌಂಟ್ ಲಭ್ಯವಾಗಲಿದೆ. ಅದೇ ರೀತಿ ಸ್ಮಾರ್ಟ್ ಟಿವಿಗಳು ಹಾಗೂ ಪ್ರೊಜೆಕ್ಟರ್ ಉತ್ಪನ್ನಗಳ ಮೇಲೆ ಶೇ 65% ರ ವರೆಗೂ ರಿಯಾಯಿತಿ ಸಿಗಲಿದೆ. ಅಲ್ಲದೇ ಕ್ಯಾಮೆರಾ, ಹೆಡ್‌ಫೋನ್ ಮತ್ತು ಸ್ಪೀಕರ್ ಡಿವೈಸ್‌ಗಳಿಗೆ ಶೇ 80% ರ ವರೆಗೂ ಡಿಸ್ಕೌಂಟ್ ಲಭ್ಯವಾಗಲಿದೆ.
ಅಮೆಜಾನ್ ಆಯೋಜಿಸಿರುವ ಎಲೆಕ್ಟ್ರಾನಿಕ್ಸ್ ಪ್ರೀಮಿಯರ್ ಲೀಗ್ ಮಾರಾಟದಲ್ಲಿ ಬೊಂಬಾಟ್ ರಿಯಾಯಿತಿ ಲಭ್ಯವಾಗಲಿವೆ. ಈ ಮಾರಾಟದಲ್ಲಿ ಸ್ಮಾರ್ಟ್‌ಫೋನ್‌ಗಳು ಐಕ್ಯೂ 15R, ಶಿಯೋಮಿ ಪ್ಯಾಡ್ 7, ಸ್ಯಾಮ್‌ಸಂಗ್ ಗ್ಯಾಲಕ್ಸಿ S26 ಅಲ್ಟ್ರಾ, TCL 139 cm 4K QD Mini LED ಗೂಗಲ್ ಟಿವಿ, HP ಓಮಿನಿಬುಕ್ 5 OLED, ಸ್ಯಾಮ್‌ಸಂಗ್ 653 L ಡಬಲ್ ಡೋರ್ ರೆಫ್ರಿಜರೇಟರ್, ಸೋನಿ 139 cm BRAVIA 2M2 4K ಗೂಗಲ್ ಟಿವಿ, Lumio Arc 5 ಪ್ರೊಜೆಕ್ಟರ್, ಸೋನಿ ಅಲ್ಫಾ ILCE-7M4K ಹೈಬ್ರಿಡ್ ಕ್ಯಾಮೆರಾ, ಒನ್‌ಪ್ಲಸ್ ಬಡ್ಸ್ 4 TWS, ಹೈಯರ್ 1,5 Ton 4 Star AI ಕ್ಲೈಮೇಟ್ ಕಂಟ್ರೋಲ್ ಸ್ಪ್ಲಿಟ್ AC, ಸೋನಿ WH-1000XM6 ಹೆಡ್‌ಫೋನ್, ರಿಯಲ್‌ಮಿ ಬಡ್ಸ್ ಏರ್8 ಹಾಗೂ ಜಬ್ರಾನಿಕ್ಸ್ PIXAPLAY Pro 90 ಇಂಚಿನ ಸ್ಕ್ರೀನ್‌ಗಳಿಗೆ ಪವರ್ ಪ್ಲೇ ಡೀಲ್‌ಗಳು ಲಭ್ಯವಿರುತ್ತವೆ.