A Girl fooling cyber fraudster Viral Video
Viral Video: ಪ್ರಸ್ತುತ ಇಂದಿನ ದಿನಗಳಲ್ಲಿ ಟೆಕ್ನಾಲಜಿ ಆಧಾರಿತ ಸೋಷಲ್ ಮೀಡಿಯಾ ಎಷ್ಟು ಅಧಿಕವಾಗಿ ಬಳಕೆಯಾಗುತ್ತಿದೆ ಅಂದ್ರೆ ಸಣ್ಣ ಪುಟ್ಟ ಕಲಿಕೆಗಳಿಂದ ಹಿಡಿದು ನಮ್ಮ ಜೀವನದ ಗಳಿಕೆಯವರೆಗೆ ಪ್ರತಿ ದಿನ ಪ್ರತಿ ಗಂಟೆ ಬಳಸಲಾಗುತ್ತಿರುವ ಏಕೈಕ ಸಾಧನ ಈ ಸೋಶಿಯಲ್ ಮೀಡಿಯಾ ಆಗಿದೆ. ಇದರಿಂದಲೇ ಲಕ್ಷಾಂತರ ಫ್ಯಾಮಿಲಿಗಳು ಸಾಗುತ್ತಿವೆ. ಆದರೆ ಈ ಟೆಕ್ನಾಲಜಿ ಎಷ್ಟು ಉಪಯುಕ್ತವಾಗಿದೆಯೋ ಅಷ್ಟೇ ದುರುಪಯೋಗ ಮತ್ತು ಅನಾನುಕೂಲವಾಗಿದೆ ಎನ್ನುವುದನ್ನು ಗಮನಿಸಬೇಕಿದೆ. ಯಾಕೆಂದರೆ ಸೈಬರ್ ವಂಚನೆ (Cyber Fraud) ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಸುದ್ದಿಯನ್ನು ನೀವು ಕಂಡು ಕೇಳಿರಬಹುದು.
ಆದರೆ ಕಳದೆ 3 ದಿನಗಳ ಹಿಂದೆ ನಡೆದ ಸೈಬರ್ ವಂಚನೆಯ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದ್ದು ಈಗ Ghar Ke Kalesh ಎಂಬ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿದ್ದು ಸೈಬರ್ ವಂಚಕನಿಗೆ ಯಾಮಾರಿಸಿ ಬುದ್ದಿವಂತೆಕೆಯನ್ನು ಮೆರೆದ ಸ್ಮಾರ್ಟ್ ಯುವತಿಯ ವಿಡಿಯೋ ವೈರಲ್ ಆಗಿದೆ. ಹಾಗಾದ್ರೆ ಆಗಿದ್ದೇನು ವಿಡಿಯೋ ಎಲ್ಲಿದೆ ಎಲ್ಲವನ್ನು ಹಂತ ಹಂತವಾಗಿ ಈ ಕೆಳಗೆ ವಿವರಿಸಲಾಗಿದೆ. ಒಂದು ವೇಳೆ ನಿಮಗೂ ಈ ರೀತಿಯ ಕರೆಗಳು ಬಂದ್ರೆ ಈ ಹುಡುಗಿಯ ಟ್ರಿಕ್ ಬಳಸಿ ನಿಮ್ಮ ಚಾತುರ್ಯವನ್ನು ತೋರಬಹುದು.
ಮೊದಲು ಯುವತಿಗೆ ಅಪರಿಚಿತ ನಂಬರ್ನಿಂದ ಒಂದು ಕರೆ ಬರುತ್ತದೆ ಕರೆಯಲ್ಲಿ ವಂಚಕ “ನಾನು ನಿಮ್ಮ ತಂದೆಯ ಸ್ನೇಹಿತ ನಿಮ್ಮ ತಂದೆಗೆ 12,000 ರೂಗಳ ಹಣದ ಪೇಮೆಂಟ್ ಒಂದನ್ನು ಮಾಡಬೇಕಿತ್ತು ನಾನು ನಿಮ್ಮ ಮೊಬೈಲ್ ನಂಬರ್ಗೆ PhonePe ಮಾಡ್ಲಾ ಅಥವಾ PayTm ಮಾಡ್ಲಾ ಎಂದು ಕೇಳುತ್ತಾನೆ. ಆಗ ಯುವತಿ ಯಾವುದರಲ್ಲಾದರೂ ಹಾಕಿ ಆದರೆ ಅಪ್ಪ ಹಣ ಬರುವುದರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ ಅಂದಾಗ ವಂಚಕ ಅವರು ಬೇರೆ ಕೆಲಸದಲ್ಲಿ ಬಿಸಿಯಾಗಿರಬಹುದು ಇದೆ ನಂಬರ್ಗೆ ಪೇಮೆಂಟ್ ಮಾಡ್ತಿದ್ದೀನಿ ಅಂತಾನೆ ಆಗಯುವತಿ ಆಯ್ತು ಆಂಗಲ್ ಮಾಡಿ ಅಂತಳೆ
ಮೊದಲಿಗೆ ವಂಚಕ 10 ರೂಗಳ ಪೇಮೆಂಟ್ ಮಾಡಿ ನೋಡು ಮಗಳೇ ಮೆಸೇಜ್ ಬಂದಿರಬೇಕು ನಾನು 10 ರೂಪಾಯಿ ಕಳುಹಿಸಿದ್ದೀನಿ ಅಂತಾನೆ ಆಗ ಬುದ್ದಿವಂತೆ ಯುವತಿ ಹೌದು ಆಂಗಲ್ ಮೆಸೇಜ್ ಬಂತು ಅಂದಾಗ ಮತ್ತೆ ವಂಚಕ 10,000 ರೂಗಳ ಪೇಮೆಂಟ್ ಮಾಡಿ ನೋಡು ಮತ್ತೆ ಮೇಸಜ್ ಬಂತು ಅಂತಾನೆ ಅದಕ್ಕೆ ಯುವತಿ ಹೌದು ಬಂತು ಅಂತಳೆ ಕೊನೆಯದಾಗಿ ಒಂದು ನಿಮಿಷ ಇರು ಇನ್ನೂ 2000 ರೂಗಳನ್ನು ಕಳುಹಿಸುತ್ತಿದ್ದೇನೆ ಎಂದು ಹೇಳಿ 2000 ರೂಗಳ ಬದಲಿಗೆ 20,000 ರೂಗಳ ಮೆಸೇಜ್ ಕಳುಹಿಸುತ್ತಾನೆ.
Also Read: ನಿಮ್ಮ Aadhaar Card ಎಲ್ಲೆಲ್ಲಿ ಬಳಸಲಾಗಿದೆ ನಿಮಗೊತ್ತಾ? ಈ ರೀತಿ ಸುಲಭವಾಗಿ ಪರಿಶೀಲಿಸಿಕೊಳ್ಳಿ!
ಆಗ ಯುವತಿ ಆಂಗಲ್ ಈಗ 2000 ಅಲ್ಲ 20,000 ಬಂತು ಅಂತಳೆ ಆಗ ವಂಚಕ ಅರೇ ಸಾರಿ ಮಗಳೇ ತಪ್ಪಾಗಿ 20,000 ಸೆಂಡ್ ಆಯ್ತು ಪರವಾಗಿಲ್ಲ ನಾನು ನನ್ನ ಫೋನ್‌ಪೇ ನಂಬರ್ ಕೊಡ್ತೀನಿ ಉಳಿದ 18,000 ಹಣವನ್ನು ನನ್ನ ನಂಬರ್ಗೆ ಕಳುಹಿಸು ಅಂತಾನೆ ಅದಕ್ಕೆ ಯುವತಿ ಆಯಿತು ನಂಬರ್ ನೋಟ್ ಮಾಡುವ ಹಾಗೆ ನಟಿಸಿ ಅವನಿಂದ ಬಂದ Text Message ಅನ್ನು ಕಾಪಿ ಮಾಡಿ 18,000 ರೂಗಳನ್ನು ಎಡಿಟ್ ಮಾಡಿ ಅವನಿಗೆ ಸೆಂಡ್ ಮಾಡಿ ನೋಡಿ ಆಂಗಲ್ ಮೆಸೇಜ್ ಬಂದಿದೆ ಎಂದು ಅವನಿಗೆ ಉಗಿದು ಉಪ್ಪಿನಕಾಯಿ ಹಾಕ್ತಾಳೆ.
ಸಾಮಾನ್ಯವಾಗಿ ನಿಮಗೆ ಪೇಮೆಂಟ್ ಬಂದರೆ ಅಥವಾ ನೀವು ಯಾರಿಗಾದರೂ ಪೇಮೆಂಟ್ ಮಾಡಿದರೆ ಬ್ಯಾಂಕ್ ಮೂಲಕ ನಂಬರ್ ಮತ್ತು ಅಕ್ಷಗಳಿಂದ ಕೂಡಿದ ಮೆಸೇಜ್ ಬ್ಯಾಂಕ್ ಮೂಲಕ ಬರುತ್ತದೆ ವಿನಃ ಯಾವುದೇ ಮೊಬೈಲ್ ನಂಬರ್ಗಳಿಂದಲ್ಲ ಎನ್ನುವುದನ್ನು ಗಮನಿಸುವುದು ಮುಖ್ಯವಾಗಿದೆ. ಆದ್ದರಿಂದ ಅವನಿಂದ ಬಂದ ಮೆಸೇಜ್ ಅನ್ನು ಅವನಿಗೆ ಕಳುಹಿಸಿ ಬಂದ ದಾರಿಗೆ ಸುಂಕವಿಲ್ಲ ಎನ್ನುವಂತೆ ಮಾಡಿದ್ದಾಳೆ. ಯಾವುದೇ ಪೇಮೆಂಟ್ ಸಂಭಡಿತ ಮೆಸೇಜ್ ಮೇಲೆ ಭರವಸೆ ಮಾಡದೆ ನೇರವಾಗಿ ನಿಮ್ಮ ಬ್ಯಾಂಕ್ ಅಪ್ಲಿಕೇಶನ್ಗಳ ಮೂಲಕ ಸ್ಟೇಟ್ಮೆಂಟ್ ಪರಿಶೀಲಿಸಿ ಖಚಿತ ಪಡಿಸುವುದು ಮುಖ್ಯವಾಗಿದೆ.