how to check android phone battery health follow these simple steps
ಹೊಸ ಸ್ಮಾರ್ಟ್‌ಫೋನ್ ಕೊಳ್ಳುವಾಗ ಜನರು ಅದರ ಬ್ಯಾಟರಿ ಎಷ್ಟು ಹೊತ್ತು ಬರುತ್ತೆ ಎಂಬುದಕ್ಕೆ ಹೆಚ್ಚು ಗಮನ ಕೊಡುತ್ತಾರೆ. ಮೊಬೈಲ್ ಕಂಪನಿಗಳು ಸಾಮಾನ್ಯವಾಗಿ ಬ್ಯಾಟರಿ ಬಗ್ಗೆ ಜಾಹೀರಾತು ನೀಡುತ್ತವೆ. ನಮ್ಮ ಫೋನ್ 7000 mAh ಬ್ಯಾಟರಿ ಹೊಂದಿದೆ’ ಎಂದು ಹೇಳುತ್ತವೆ. ಫೋನ್ mAh ಸಾಮರ್ಥ್ಯ ಹೆಚ್ಚಿದ್ದರೆ ಬ್ಯಾಟರಿ ಹೆಚ್ಚು ಕಾಲ ಬಾಳಿಕೆ ಬರುತ್ತೆ ಎಂದು ಅನೇಕರು ನಂಬುತ್ತಾರೆ. ಆದರೆ ಇದು ಸರಿಯಲ್ಲ. ಮೊಬೈಲ್ ಬ್ಯಾಟರಿ ಬಾಳಿಕೆ ಕೇವಲ ಬ್ಯಾಟರಿ ಸಾಮರ್ಥ್ಯ (mAh) ಮೇಲೆ ಮಾತ್ರ ನಿಂತಿಲ್ಲ. ಇದು ಮೊಬೈಲ್ ಬಳಸುವ ವಿದ್ಯುತ್ ಅದರ ಡಿಸ್‌ಪ್ಲೇ ಗುಣಮಟ್ಟ, ಸಾಫ್ಟ್‌ವೇರ್ ಮತ್ತು ನೆಟ್‌ವರ್ಕ್ ಸಂಪರ್ಕ ನಿರ್ವಹಣೆ ಸೇರಿದಂತೆ ಹಲವು ವಿಷಯಗಳ ಮೇಲೆ ಅವಲಂಬಿಸಿರುತ್ತದೆ.
ಸಿಲಿಕಾನ್-ಕಾರ್ಬನ್‌ನಂತಹ ಹೊಸ ಬ್ಯಾಟರಿ ತಂತ್ರಜ್ಞಾನಗಳು ಬಂದ ನಂತರ ಬಹುತೇಕ ಎಲ್ಲಾ ಚೀನೀ ಮೊಬೈಲ್ ತಯಾರಕರು 5,000 mAh ಗಿಂತ ಹೆಚ್ಚಿನ ಬ್ಯಾಟರಿಗಳನ್ನು ಕೊಡುತ್ತಿದ್ದಾರೆ. ಅದರಲ್ಲೂ Xiaomi 17 Pro Max ಫೋನ್ 7500mAh ದೊಡ್ಡ ಬ್ಯಾಟರಿಯೊಂದಿಗೆ ಬರುತ್ತಿದೆ. ಅದೇ ರೀತಿ iQOO 15, OnePlus 15 ಮತ್ತು Realme GT ಕೆಲವು ಮಾದರಿಗಳು ಸುಮಾರು 7000mAh ಬ್ಯಾಟರಿಗಳನ್ನು ಹೊಂದಿವೆ ಇದು ನಂಬರ್ ಅಸ್ತೇ ಆದರೆ ಬ್ಯಾಕ್ ಅಪ್ ಅದೇ 4500 mAH ಯಿಂದ 5000 mAh ಮಾದರಿಗೆ ಸಮಾವಾಗಿದೆ. ಸರಳ ಭಾಷೆ ನೀವು ಹೊಸ ಫೋನ್ ನೋಡುತ್ತಿದ್ದರೆ ನಿಮ್ಮ ಬ್ಯಾಟರಿ ನಂಬಿಕೆಗಳನ್ನು ಬದಲಾಯಿಸಿಕೊಳ್ಳಿ.
Also Read: 7000mAh ಬ್ಯಾಟರಿಯೊಂದಿಗೆ ಸುಮಾರು ₹25 ಸಾವಿರದೊಳಗೆ ಬರುವ ಟಾಪ್ 5 ಲೇಟೆಸ್ಟ್ ಸ್ಮಾರ್ಟ್‌ಫೋನ್‌ಗಳು!
ಮೊಬೈಲ್ ಬ್ಯಾಟರಿ ಎಷ್ಟು ಕಾಲ ನಿಲ್ಲುತ್ತದೆ ಎಂಬುದು ಅದರ ಡಿಸ್‌ಪ್ಲೇ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ. 120Hz ಅಥವಾ 144Hz OLED ಡಿಸ್ಪ್ಲೇ ಹೆಚ್ಚು ವಿದ್ಯುತ್ ಬಳಸುತ್ತವೆ. ಈ ಫೋನ್‌ಗಳು ನಿರಂತರವಾಗಿ ಹೆಚ್ಚು ರಿಫ್ರೆಶ್ ದರದಲ್ಲಿ ಕೆಲಸ ಮಾಡಿದರೆ ಬ್ಯಾಟರಿ ಬೇಗ ಖಾಲಿಯಾಗುತ್ತದೆ. ಡಿಸ್ಪ್ಲೇ ರೆಸಲ್ಯೂಶನ್ ಕೂಡ ಮುಖ್ಯ. ಹೊಳಪು ಮತ್ತು ರಿಫ್ರೆಶ್ ದರ ಒಂದೇ ಇದ್ದರೂ ಪೂರ್ಣ HD+ ಡಿಸ್ಪ್ಲೇಯನ್ನು ಹೊಂದಿರುವ ಫೋನ್‌ಗಳು QHD+ ಡಿಸ್ಪ್ಲೇಗಳಿರುವ ಫೋನ್‌ಗಳಿಗಿಂತ ಕಡಿಮೆ ಪವರ್ ಬಳಸುತ್ತವೆ. ದೊಡ್ಡ ಬ್ಯಾಟರಿ ಇದ್ದರೂ ಹೆಚ್ಚಿನ ರಿಫ್ರೆಶ್ ದರದ ಡಿಸ್ಪ್ಲೇ ಇದ್ದರೆ ಅದು ಹೆಚ್ಚು ಶಕ್ತಿಯನ್ನು ಬಳಸುತ್ತದೆ.
ಮೊಬೈಲ್‌ನ ಪ್ರೊಸೆಸರ್ ಕೂಡ ಬ್ಯಾಟರಿ ಬಾಳಿಕೆಯ ಮೇಲೆ ಪರಿಣಾಮ ಬೀರುತ್ತದೆ. ಸ್ನಾಪ್‌ಡ್ರಾಗನ್ 8 ಎಲೈಟ್ ಜೆನ್ 5 ಅಥವಾ ಡೈಮೆನ್ಸಿಟಿ 9500 ನಂತಹ ಹೊಸ ಪ್ರೊಸೆಸರ್‌ಗಳು ಉತ್ತಮ ಬ್ಯಾಟರಿ ಬಾಳಿಕೆ ಕೊಡುತ್ತವೆ. ಹೆಚ್ಚು ಗೇಮಿಂಗ್ ಮಾಡಿದರೆ ಅಥವಾ ಕ್ಯಾಮೆರಾವನ್ನು ಜಾಸ್ತಿ ಬಳಸಿದರೆ ಅದು ಯಾವುದೇ ಫೋನ್‌ನಲ್ಲಿ ಬಿಸಿ ಹೆಚ್ಚಾಗಲು ಕಾರಣವಾಗುತ್ತದೆ ಇದರಿಂದ ವಿದ್ಯುತ್ ಬಳಕೆ ಹೆಚ್ಚುತ್ತದೆ. ಫೋನ್ ಕೊಳ್ಳುವಾಗ ಯಾವಾಗಲೂ ಅಪ್‌ಗ್ರೇಡ್ ಆದ ಪ್ರೊಸೆಸರ್‌ಗೆ ಮುಖ್ಯ ಗಮನ ಕೊಡಿ.