September Updates 2025
September Updates: ಭಾರತದಲ್ಲಿ ಇದೆ 1ನೇ ಸೆಪ್ಟೆಂಬರ್‌ನಿಂದ ಹಲವಾರು ಹೊಸ ನಿಯಮಗಳು ಜಾರಿಗೆ ಬರಲಿವೆ. ಯಾಕೆಂದರೆ ಹೆಚ್ಚು ಸಾಮಾನ್ಯ ಬಳಕೆಯಲ್ಲಿರುವ ಬ್ಯಾಂಕಿಂಗ್, ಆಭರಣ ಮಾರುಕಟ್ಟೆ ಮತ್ತು ಎಲ್‌ಪಿಜಿ ಸಿಲಿಂಡರ್ ಬೆಲೆಗಳ ಮೇಲೆ ಈ ಬದಲಾವಣೆಗಳು ಪರಿಣಾಮ ಬೀರಲಿವೆ. ಬೆಳ್ಳಿಯ ಆಭರಣಗಳಿಗೆ ಕಡ್ಡಾಯ ಹಾಲ್ಮಾರ್ಕ್, ಎಸ್‌ಬಿಐ ಕ್ರೆಡಿಟ್ ಕಾರ್ಡ್‌ಗಳಿಗೆ ಹೊಸ ಶುಲ್ಕಗಳು, ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆ ಪರಿಷ್ಕರಣೆ, ಎಟಿಎಂ ಬಳಕೆಗೆ ಹೆಚ್ಚಿನ ಶುಲ್ಕ ಹಾಗೂ ಸ್ಥಿರ ಠೇವಣಿ (ಎಫ್‌ಡಿ) ಬಡ್ಡಿದರದಲ್ಲಿ ಬದಲಾವಣೆ ಈ ನಿಯಮಗಳಲ್ಲಿ ಪ್ರಮುಖವಾಗಿವೆ. ಈ ಬದಲಾವಣೆಗಳ ಬಗ್ಗೆ ತಿಳಿದುಕೊಳ್ಳುವುದು ನಾಗರಿಕರಿಗೆ ಅತ್ಯಗತ್ಯವಾಗಿದೆ.
ಇದುವರೆಗೆ ಚಿನ್ನದ ಆಭರಣಗಳಿಗೆ ಮಾತ್ರ ಇದ್ದ ಹಾಲ್ಮಾರ್ಕ್ ವ್ಯವಸ್ಥೆಯನ್ನು ಈಗ ಬೆಳ್ಳಿಯ ಆಭರಣಗಳು ಮತ್ತು ಬೆಳ್ಳಿಯಿಂದ ತಯಾರಿಸಿದ ಇತರ ವಸ್ತುಗಳಿಗೂ ವಿಸ್ತರಿಸಲಾಗಿದೆ. ಈ ಹೊಸ ನಿಯಮದಿಂದಾಗಿ ಮಾರುಕಟ್ಟೆಯಲ್ಲಿ ಮಾರಾಟವಾಗುವ ಪ್ರತಿ ಬೆಳ್ಳಿಯ ವಸ್ತುವಿನ ಮೇಲೆ ಹಾಲ್ಮಾರ್ಕ್ ಗುರುತು ಇರುವುದು ಕಡ್ಡಾಯ. ಈ ಗುರುತು ಬೆಳ್ಳಿಯ ಶುದ್ಧತೆಯನ್ನು ಖಚಿತಪಡಿಸುತ್ತದೆ.
ಇದರಿಂದ ಗ್ರಾಹಕರು ನಕಲಿ ಅಥವಾ ಕಡಿಮೆ ಗುಣಮಟ್ಟದ ಬೆಳ್ಳಿ ವಸ್ತುಗಳನ್ನು ಖರೀದಿಸುವುದರಿಂದ ತಪ್ಪಿಸಿಕೊಳ್ಳಬಹುದು. ಇದು ಗ್ರಾಹಕರಿಗೆ ಸಂಪೂರ್ಣ ಸುರಕ್ಷತೆಯನ್ನು ನೀಡುವ ಒಂದು ಪ್ರಮುಖ ಹೆಜ್ಜೆಯಾಗಿದೆ. ಈ ನಿಯಮ ಜಾರಿಗೆ ಬಂದ ನಂತರ ಬೆಳ್ಳಿಯ ಬೆಲೆ ಸ್ವಲ್ಪ ಹೆಚ್ಚಾಗಬಹುದು ಆದ್ದರಿಂದ ಹೂಡಿಕೆದಾರರು ಮತ್ತು ಖರೀದಿದಾರರು ಈ ಬದಲಾವಣೆಯನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಕ್ರೆಡಿಟ್ ಕಾರ್ಡ್ ಬಳಕೆದಾರರಿಗೆ ಹೊಸ ಶುಲ್ಕ ನಿಯಮಗಳನ್ನು ಜಾರಿಗೆ ತಂದಿದೆ. ಇನ್ನು ಮುಂದೆ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಯ ಆಟೋ-ಡೆಬಿಟ್ ವಿಫಲವಾದರೆ ಶೇಕಡಾ 2% ರಷ್ಟು ದಂಡ ವಿಧಿಸಲಾಗುತ್ತದೆ. ಅಂದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಸಾಕಷ್ಟು ಹಣವಿಲ್ಲದೆ ಆಟೋ-ಡೆಬಿಟ್ ಪ್ರಯತ್ನ ವಿಫಲವಾದರೆ ನೀವು ದಂಡ ಪಾವತಿಸಬೇಕಾಗುತ್ತದೆ.
ಜೊತೆಗೆ ಅಂತರರಾಷ್ಟ್ರೀಯ ವಹಿವಾಟುಗಳು ಮತ್ತು ಇಂಧನ ಖರೀದಿಗೆ ಹೆಚ್ಚು ಶುಲ್ಕವನ್ನು ವಿಧಿಸಲಾಗುವುದು. ಮತ್ತೊಂದು ಪ್ರಮುಖ ಬದಲಾವಣೆಯೆಂದರೆ ಆನ್‌ಲೈನ್ ಶಾಪಿಂಗ್‌ಗೆ ಸಿಗುತ್ತಿದ್ದ ರಿವಾರ್ಡ್ ಪಾಯಿಂಟ್‌ಗಳ ಮೌಲ್ಯ ಕಡಿಮೆಯಾಗಿದೆ. ಇದು ಕ್ರೆಡಿಟ್ ಕಾರ್ಡ್ ಬಳಕೆದಾರರು ತಮ್ಮ ಖರ್ಚುಗಳ ಬಗ್ಗೆ ಇನ್ನಷ್ಟು ಜಾಗರೂಕರಾಗಿರುವಂತೆ ಪ್ರೋತ್ಸಾಹಿಸುತ್ತದೆ.
ಪ್ರತಿ ತಿಂಗಳ ಮೊದಲ ದಿನದಂತೆ 1ನೇ ಸೆಪ್ಟೆಂಬರ್ 2025ರಂದು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪರಿಷ್ಕರಿಸಲಾಗಿದೆ. ಈ ಬೆಲೆ ಬದಲಾವಣೆಯು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲದ ಬೆಲೆ ಮತ್ತು ಡಾಲರ್ ವಿನಿಮಯ ದರದಂತಹ ಅಂಶಗಳನ್ನು ಆಧರಿಸಿದೆ. ಬೆಲೆ ಏರಿಕೆಯಾದರೆ ಮನೆಯ ಮಾಸಿಕ ಬಜೆಟ್ ಮೇಲೆ ನೇರ ಪರಿಣಾಮ ಬೀರಬಹುದು. ಆದರೆ ಬೆಲೆ ಕಡಿಮೆಯಾದರೆ ಕುಟುಂಬಗಳಿಗೆ ಸ್ವಲ್ಪ ಆರ್ಥಿಕವಾಗಿ ಅನುಕೂಲವಾಗುತ್ತದೆ. ಈ ಬೆಲೆ ಬದಲಾವಣೆಗಳು ಅಡುಗೆ ಅನಿಲ ಬಳಸುವ ಎಲ್ಲ ಕುಟುಂಬಗಳ ಮೇಲೆ ನೇರ ಪರಿಣಾಮ ಬೀರುವುದರಿಂದ ಇದು ಒಂದು ಪ್ರಮುಖ ವಿಷಯವಾಗಿದೆ.
ಕೆಲವು ಬ್ಯಾಂಕುಗಳು ಎಟಿಎಂನಿಂದ ಹಣ ತೆಗೆಯುವ ನಿಯಮಗಳನ್ನು ಬದಲಾಯಿಸಿವೆ. ಇನ್ನು ಮುಂದೆ ಬ್ಯಾಂಕ್ ನಿರ್ಧರಿಸಿದ ಉಚಿತ ಮಿತಿಯನ್ನು ಮೀರಿ ಎಟಿಎಂನಿಂದ ಹಣ ತೆಗೆದರೆ ಪ್ರತಿ ವಹಿವಾಟಿಗೆ ಹೆಚ್ಚುವರಿ ಶುಲ್ಕ ವಿಧಿಸಲಾಗುವುದು. ಉದಾಹರಣೆಗೆ ತಿಂಗಳಿಗೆ ನಾಲ್ಕು ಉಚಿತ ವಹಿವಾಟುಗಳನ್ನು ನೀಡಿದರೆ ಐದನೇ ವಹಿವಾಟಿನಿಂದ ಶುಲ್ಕ ಅನ್ವಯವಾಗುತ್ತದೆ. ಈ ಕ್ರಮವು ಜನರನ್ನು ಡಿಜಿಟಲ್ ಪಾವತಿ ವಿಧಾನಗಳಾದ ಯುಪಿಐ, ನೆಟ್ ಬ್ಯಾಂಕಿಂಗ್ ಮತ್ತು ಮೊಬೈಲ್ ವ್ಯಾಲೆಟ್‌ಗಳತ್ತ ಪ್ರೋತ್ಸಾಹಿಸುವ ಉದ್ದೇಶ ಹೊಂದಿದೆ.