Su From So - Kannada Movie
Su From So OTT Release: ಕನ್ನಡದ ಸೂಪರ್‌ಹಿಟ್ ಹಾರರ್ ಕಾಮಿಡಿ ಸಿನಿಮಾ ಸು ಫ್ರಮ್ ಸೋ ಶೀಘ್ರದಲ್ಲೇ ಒಟಿಟಿಗೆ ಕಾಲಿಡಲಿದ್ದು ಈ ಹಾರರ್ ಕಾಮಿಡಿ ಬ್ಲಾಕ್‌ಬಸ್ಟರ್‌ನ ನಿಖರವಾದ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲವಾದರೂ ಈ ‘ಸು ಫ್ರಮ್ ಸೋ ಬಿಡುಗಡೆಯಾಗಿ ಇಂದಿಗೆ 32 ದಿನಗಳು ಕಳೆದಿದ್ದು ಸುಮಾರು 115 ಕೋಟಿ ಕಲೆಕ್ಷನ್ ಬಾಚಿಕೊಂಡಿದೆ. ಆದರೆ ಸಿನಿಮಾದ ಅಬ್ಬರ ಮಾತ್ರ ಕಡಿಮೆ ಆಗುತ್ತಿಲ್ಲ. ಈ ಸೂಪರ್ ಹಿಟ್ ಕನ್ನಡ ಸಿನಿಮಾದ ಒಟಿಟಿ ದಿನಾಂಕ ರಿವೀಲ್ ಆಗಿದೆ ಆದರೂ ಜನ ಚಿತ್ರಮಂದಿರಕ್ಕೆ ಬರೋದನ್ನು ನಿಲ್ಲಿಸುತ್ತಿಲ್ಲ. ಇದು ಚಿತ್ರದ ಮೆಚ್ಚುಗೆ ಮತ್ತು ಅತ್ಯುತ್ತಮ ಕಥಾವಸ್ತು ಹೇಗೆ ವೀಕ್ಷಕರನ್ನು ತನ್ನತ್ತ ಸೆಳೆಯುತ್ತದೆ ಎನ್ನುವುದಕ್ಕೆ ಉತ್ತಮ ಉದಾಹರಣೆಯಾಗಿದೆ.
ಸಿನಿಮಾ ಒಟಿಟಿಗೆ ಬಂದ ಬಳಿಕವೂ ಇದನ್ನು ಕೆಲವರು ಥಿಯೇಟರ್ನಲ್ಲಿ ನೋಡುವುದನ್ನು ಮುಂದುವರಿಸಬಹುದು ಎಂದು ಊಹಿಸಲಾಗಿದೆ. ಸಾಮಾನ್ಯವಾಗಿ ಸಿನಿಮಾಗಳು ಥಿಯೇಟರ್ನಲ್ಲಿ 45 ದಿನ ನಡೆದ ನಂತರ OTT ಪ್ಲಾಟ್ಫಾರ್ಮ್ಗಳಿಗೆ ಬರುವುದು ರೂಢಿಯಲ್ಲಿದೆ. ಕನ್ನಡದ ಸೂಪರ್ ಹಿಟ್ ‘ಸು ಫ್ರಮ್ ಸೋ’ ಸಿನಿಮಾ ಸೆಪ್ಟೆಂಬರ್ ಮೊದಲ ವಾರದಲ್ಲಿ Jio Hotstar ಪ್ಲಾಟ್‌ಫಾರ್ಮ್‌ನಲ್ಲಿ ಸ್ಟ್ರೀಮ್ ಆಗುವ ನಿರೀಕ್ಷೆಯಿದೆ. ಸಿನಿಮಾ ಈಗಾಗಲೇ 32 ದಿನಗಳಿಂದ ಥಿಯೇಟರ್‌ಗಳಲ್ಲಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದ್ದು ಡಿಜಿಟಲ್ ರೈಟ್ ಸುಮಾರು ₹5.5 ಕೋಟಿ ಮತ್ತು GST ಜೊತೆಗೆ Jio Hotstar ಖರೀದಿಸಿದೆ.
ಸ್ಯಾಟಿಲೈಟ್ ಹಕ್ಕುಗಳನ್ನು Colors Kannada ಪಡೆದುಕೊಂಡಿದೆ. ಮತ್ತು ತೆಲುಗು ಡಬ್ಬಿಂಗ್ ಆವೃತ್ತಿ Star Maaನಲ್ಲಿ ಪ್ರಸಾರವಾಗಲಿದೆ. ಆದರೆ ಇದರ ನಿಖರವಾದ ದಿನಾಂಕವನ್ನು ಚಲನಚಿತ್ರ ನಿರ್ಮಾಪಕರು ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ. ಅಲ್ಲದೆ ಈ ಸ್ಪರ್ಧೆಯಲ್ಲಿ ಅಮೆಜಾನ್ ಪ್ರೈಮ್ ವಿಡಿಯೋ ಮುಂದಿತ್ತು ಆದರೆ ಜಿಯೋ ಹಾಟ್‌ಸ್ಟಾರ್ ಒಳ್ಳೆ ಡೀಲ್ ಕೊಟ್ಟು ಸಿನಿಮಾದ ಡಿಜಿಟಲ್ ರೈಟ್ ಪಡೆದುಕೊಂಡಿತು.
ಈ ಚಿತ್ರವು ಸೋಮೇಶ್ವರ ಕಡಲತೀರದ ಬಳಿಯ ಮಾರ್ಲೂರ್ ಎಂಬ ಪ್ರಶಾಂತ ಕರಾವಳಿ ಗ್ರಾಮದಲ್ಲಿ ತೆರೆದುಕೊಳ್ಳುತ್ತದೆ. ಹಳ್ಳಿಯ ಹುಡುಗಿಯ ಮೇಲಿನ ಅವನ ನಿರುಪದ್ರವ ಪ್ರೀತಿಯು ಶೀಘ್ರದಲ್ಲೇ ಅನುಮಾನಕ್ಕೆ ತಿರುಗುತ್ತದೆ ನಿವಾಸಿಗಳು ಅವನು ಸುಲೋಚನಾಳ ಆತ್ಮದ ನಿಯಂತ್ರಣದಲ್ಲಿದ್ದಾನೆ ಎಂದು ಮನವರಿಕೆ ಮಾಡಿಕೊಳ್ಳುತ್ತಾರೆ. ಈ ಭಯ-ಪ್ರೇರಿತ ನಂಬಿಕೆ ವ್ಯವಸ್ಥೆಯು ಕಥೆಯ ಕೇಂದ್ರ ಸಂಘರ್ಷವನ್ನು ರೂಪಿಸುತ್ತದೆ.
ಕನ್ನಡ ಈ ಸೂಪರ್ ಹಿಟ್ ‘ಸು ಫ್ರಮ್ ಸೋ’ ಕನ್ನಡದ ಹಾರರ್-ಹಾಸ್ಯ ನಾಟಕವಾಗಿದ್ದು ಇದನ್ನು ಜೆ.ಪಿ. ತುಮಿನಾಡ್ ಅವರ ನಿರ್ದೇಶನದ ಮೊದಲ ಚಿತ್ರವಾಗಿದ್ದು ಅವರೇ ಚಿತ್ರಕಥೆಯನ್ನೂ ಬರೆದಿದ್ದಾರೆ. ಸು ಫ್ರಮ್ ಸೋ ಕನ್ನಡ ಸಿನಿಮಾವನ್ನು ಲೈಟರ್ ಬುದ್ಧ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ಶಶಿಧರ್ ಶೆಟ್ಟಿ ಬರೋಡಾ, ರವಿ ರೈ ಕಳಸ ಮತ್ತು ರಾಜ್ ಬಿ. ಶೆಟ್ಟಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಶನೀಲ್ ಗೌತಮ್, ಜೆ.ಪಿ. ತುಮಿನಾಡ್, ಸಂಧ್ಯಾ ಅರಕೆರೆ, ಪ್ರಕಾಶ್ ತುಮಿನಾಡ್, ದೀಪಕ್ ರೈ ಪಣಾಜೆ, ಮೈಮ್ ರಾಮದಾಸ್ ಮತ್ತು ರಾಜ್ ಬಿ. ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.