Latest Max Kannada Movie TV Release
Max OTT Release: ಕಳೆದ ವರ್ಷ 25ನೇ ಡಿಸೆಂಬರ್ 2024 ರಂದು ಬಿಡುಗಡೆಯಾಗಿ ಇನ್ನೂ ಸಿಕ್ಕಾಪಟ್ಟೆ ಸೂಪರ್ ಹಿಟ್ ಆಗುತ್ತಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಸೂಪರ್ ಹಿಟ್ ಸಿನಿಮಾ ಮ್ಯಾಕ್ಸ್ ಚಿತ್ರ ದೊಡ್ಡ ಸ್ಕ್ರೀನ್ ಮೇಲೆ ಪ್ರದರ್ಶನ ಕಂಡ ನಂತರ ಈಗ ಚಿತ್ರದ ತಯಾರಕರು ಸದ್ದಿಲ್ಲದೇ OTT ಬಿಡುಗಡೆಗೂ ಮುಂಚೆಯೇ ಜೀ ಕನ್ನಡ ಟಿವಿ ವಾಹಿನಿಯಲ್ಲಿ ಪ್ರಸಾರಗೊಳಿಸಲು ಸಜ್ಜಾಗಿದ್ದಾರೆ. ಈ ಕನ್ನಡ ಚಲನಚಿತ್ರ ಮ್ಯಾಕ್ಸ್ ಮಾಸ್ ಥ್ರಿಲ್ಲರ್ ಪ್ಯಾಕ್ಡ್ ಕಥೆ ಮತ್ತು ರೋಮಾಂಚಕ ಸಿನಿಮಾವನ್ನು ಈಗ ಅಭಿಮಾನಿಗಳು ತಮ್ಮ ಮನೆಗಳ ಕುಳಿತು ಮನೆಯವರೊಂದಿಗೆ ತಮ್ಮೆಲ್ಲ ಸೌಕರ್ಯದೊಂದಿಗೆ ವೀಕ್ಷಿಸಬಹುದು.
ವಿಜಯ್ ಕಾರ್ತಿಕೇಯನ್ ನಿರ್ದೇಶನದ ಮತ್ತು ಕಿಚ್ಚ ಸುದೀಪ್ ಅಭಿನಯದ ಸೂಪರ್ ಹಿಟ್ ಸಿನಿಮಾ ಮ್ಯಾಕ್ಸ್ ಚಿತ್ರ ಇದೇ 15ನೇ ಫೆಬ್ರುವರಿ 2025 ರಂದು ಸಂಜೆ 7.30ಕ್ಕೆ ಜೀ ಕನ್ನಡ ಟಿವಿ ವಾಹಿನಿಯಲ್ಲಿ ಪ್ರಸಾರವಾಗಲಿದೆ ಎಂದು ಸ್ವತಃ ಜೀ ಕನ್ನಡ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ. ಅಂದ್ರೆ ಮ್ಯಾಕ್ಸ್ ಸಿನಿಮಾ ಈಗ OTT ಬಿಡುಗಡೆಗೂ ಮುಂಚೆಯೇ ಜೀ ಕನ್ನಡ ಟಿವಿ ವಾಹಿನಿಯಲ್ಲಿ ವೀಕ್ಷಿಸಬಹುದು. OTT ವೀಕ್ಷಕರಿಗೆ ಮತ್ತು ಇನ್ನೂ ಮ್ಯಾಕ್ಸ್ ಸಿನಿಮಾವನ್ನು ವೀಕ್ಷಿಸದ ವೀಕ್ಷಕರಿಗೆ ಸಿಹಿಸುದ್ದಿಯನ್ನು ನೀಡಿದ್ದಾರೆ.
ಯಾಕೆಂದರೆ ಈ ಮುಂಚೆ ಈ ಸಿನಿಮ ಇವರದೇ ZEE5 ಮೂಲಕ OTT ಅಪ್ಲಿಕೇಶನ್ ಮೂಲಕ 22ನೇ ಫೆಬ್ರವರಿಗೆ ಸ್ಟ್ರೀಮಿಂಗ್ ಆರಂಭವಾಗುವುದಾಗಿ ಹೇಳಲಾಗಿತ್ತು ಆದರೆ ಅಚಾನಕ್ಕಾಗಿ ಈಗ ಟಿವಿ ವಾಹಿನಿಯಲ್ಲಿ ಪ್ರಾಸರ ಮಾಡುವ ಬಗ್ಗೆ ಮಾಹಿತಿ ನೀಡಿದ್ದಾರೆ. ಈ ರೀತಿಯ ಪ್ರಸಾರ ಕನ್ನಡ ಚಿತ್ರೋದ್ಯಮದಲ್ಲಿ ಮೊದಲ ಬಾರಿಗೆ ನಡೆಯುತ್ತಿರುವುದನ್ನು ಸಹ ಪರಿಗಣಿಸಬೇಕಿದೆ.
Also Read: ಕಾಂತಾರದಿಂದ ಲೂಸಿಯಾದವರೆಗೆ ನಿಮ್ಮನ್ನು ಹಿಡಿದಿಡುವ Kannada Thriller Movies ಇಲ್ಲಿವೆ!
ಈ ಕನ್ನಡದ MAX ಚಿತ್ರದ ಅದ್ಭುತ ಪಾತ್ರವರ್ಗವು ತಮ್ಮ ರೋಮಾಂಚಕಾರಿ ಅಭಿನಯದಿಂದ ಚಿತ್ರವನ್ನು ಇನ್ನಷ್ಟು ಮೆರುಗುಗೊಳಿಸುತ್ತದೆ. ಕಿಚ್ಚ ಸುದೀಪ್ ತಮ್ಮ ವಿಶಿಷ್ಟ ನೋಟ ಮತ್ತು ಪ್ರಭಾವಶಾಲಿ ಉಪಸ್ಥಿತಿಯಿಂದ ಸ್ಕ್ರೀನ್ ಮೇಲೆ ಪ್ರಾಬಲ್ಯ ಸಾಧಿಸಿದ್ದಾರೆ. ಮತ್ತು ವರಲಕ್ಷ್ಮಿ ಶರತ್‌ಕುಮಾರ್, ಸುನಿಲ್, ಇಳವರಸು, ಉಗ್ರಂ ಮಂಜು, ಸಂಯುಕ್ತಾ ಹೊರನಾಡ್, ಸುಕೃತಾ ವಾಗ್ಲೆ, ಸುಧಾ ಬೆಳವಾಡಿ ಮತ್ತು ಶರತ್ ಲೋಹಿತಾಶ್ವ ತಮ್ಮ ಪಾತ್ರಗಳಿಗೆ ಸೂಕ್ಷ್ಮತೆಯನ್ನು ನೀಡುತ್ತಾರೆ. ಅವರ ನಿರರ್ಗಳ ಭಾವನಾತ್ಮಕ ನಿರೂಪಣೆ ಮತ್ತು ತೀವ್ರವಾದ ಆಕ್ಷನ್ ದೃಶ್ಯಗಳು ಚಿತ್ರದ ಒಟ್ಟಾರೆ ಆಕರ್ಷಣೆಯನ್ನು ಹೆಚ್ಚಿಸುತ್ತವೆ.