ಸ್ಯಾಮ್‌ಸಂಗ್ ತನ್ನ ಹೊಚ್ಚ ಹೊಸ Samsung Galaxy Buds 3 FE ಅನ್ನು ಸದ್ದಿಲ್ಲದೇ ಆಯ್ದ ದೇಶಗಳ ಮಾರುಕಟ್ಟೆಗಾಗಿ ಬಿಡುಗಡೆಗೊಳಿಸಲಾಗಿದೆ. ಈ ದಕ್ಷಿಣ ಕೊರಿಯಾದ ಟೆಕ್ ಸಮೂಹದಿಂದ ಇತ್ತೀಚಿನ ಕೈಗೆಟುಕುವ ಟ್ರೂ ವೈರ್‌ಲೆಸ್ ಸ್ಟೀರಿಯೊ (TWS) ಇಯರ್‌ಫೋನ್‌ಗಳು ANC ಮತ್ತು AI ಫೀಚರ್ಗಳೊಂದಿಗೆ ಪರಿಚಯಿಸಲಾಗಿದೆ. ಅದರ ಮೂಲದಲ್ಲಿ ಈ ಇಯರ್ ಬಡ್ಸ್ ಆಕ್ಟಿವ್ ನೋಯಿಸ್ ಕ್ಯಾನ್ಸಲೇಷನ್ (ANC) ಮತ್ತು Galaxy AI ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಈ TWS ಇಯರ್‌ಬಡ್‌ಗಳು ಪಿಂಚ್ ಮತ್ತು ಸ್ವೈಪ್ ಗೆಸ್ಚರ್‌ಗಳನ್ನು ಬೆಂಬಲಿಸುತ್ತವೆ. ಹೆಚ್ಚುವರಿಯಾಗಿ ಇವು ANC ಆಫ್‌ನೊಂದಿಗೆ ಒಂದೇ ಚಾರ್ಜ್‌ನಲ್ಲಿ ಸುಮಾರು 8.5 ಗಂಟೆಗಳ ಪ್ಲೇಟೈಮ್ ಅನ್ನು ಸ್ಯಾಮ್‌ಸಂಗ್ ಭರವಸೆ ನೀಡುತ್ತದೆ.
ಪ್ರಸ್ತುತ ಈ ಸ್ಯಾಮ್‌ಸಂಗ್ ಬಡ್ಸ್ ಭಾರತದಲ್ಲಿ ಬಿಡುಗಡೆಯಾಗಿಲ್ಲ, ಆದರೆ ಇದೆ ಸೆಪ್ಟೆಂಬರ್ ತಿಂಗಳಲ್ಲಿ ಭಾರತಕ್ಕೆ ಕಾಲಿಡಲಿರುವ ನಿರೀಕ್ಷೆಗಳಿವೆ. ಈ Samsung Galaxy Buds 3 FE ಬೆಲೆ ಬಗ್ಗೆ ಮಾತನಾಡುವುದಾದರೆ ಅಮೇರಿಕಾದಲ್ಲಿ ಸುಮಾರು $149.99 (ಭಾರತದಲ್ಲಿ ಸರಿಸುಮಾರು ರೂ. 13,000) ಬೆಲೆಗೆ ಪರಿಚಯಿಸಿದೆ. ಪ್ರಸ್ತುತ ಇದರ TWS ಇಯರ್‌ಬಡ್‌ಗಳನ್ನು ಆಯ್ದ ಜಾಗತಿಕ ಮಾರುಕಟ್ಟೆಗಳಲ್ಲಿ ಎರಡು ಕಪ್ಪು ಮತ್ತು ಬೂದು ಎಂಬ ಬಣ್ಣಗಳಲ್ಲಿ ಖರೀದಿಸಬಹುದು.
ಸ್ಯಾಮ್‌ಸಂಗ್ ಬಡ್ಸ್ TWS ಇಯರ್‌ಬಡ್‌ಗಳ ಬೀನ್ ತರಹದ ಆಕಾರವನ್ನು ತೆಗೆದುಹಾಕುತ್ತದೆ. ಪ್ರತಿಯೊಂದು ಇಯರ್‌ಬಡ್ ಡೈನಾಮಿಕ್ ಡ್ರೈವರ್ ಅನ್ನು ಹೊಂದಿದ್ದು ಇದರ ಆಯ್ಕೆಗಳನ್ನು ಮಾಡಲು ಅವು ಬ್ಲೇಡ್ ಮೂಲಕ ಪಿಂಚ್ ಸಂವಹನಗಳನ್ನು ಬೆಂಬಲಿಸುತ್ತವೆ. ಸ್ವೈಪ್ ಗೆಸ್ಚರ್ ಮೂಲಕವೂ ವಾಲ್ಯೂಮ್ ನಿಯಂತ್ರಣವನ್ನು ಪ್ರವೇಶಿಸಬಹುದು. ಕಂಪನಿಯ ಪ್ರಕಾರ ಗ್ಯಾಲಕ್ಸಿ ಡಿವೈಸ್ಗಳ ನಡುವೆ ಬದಲಾಯಿಸಲು ಪ್ರತ್ಯೇಕ ಬಟನ್ ಹೊಂದಿದೆ. ಈ ಹೊಸ ಸ್ಯಾಮ್‌ಸಂಗ್ ಬಡ್ಸ್ ಆಟೋ ಸ್ವಿಚ್ ಅನ್ನು ಸಹ ಹೊಂದಿದ್ದು ಇದು ಸ್ವಯಂಚಾಲಿತವಾಗಿ ಆಡಿಯೊ ಆಕ್ಟಿವಿಟಿಗಳನ್ನು ಪತ್ತೆ ಮಾಡುತ್ತದೆ.
ಸ್ಯಾಮ್‌ಸಂಗ್ ಬಡ್ಸ್ ಆಲಿಸುವ ನಿರಂತರತೆಯನ್ನು ಕಾಪಾಡಲು ಸಂಪರ್ಕವನ್ನು ವರ್ಗಾಯಿಸುತ್ತದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಬಡ್ಸ್ ನಿಮಗೆ ಆಕ್ಟಿವ್ ನೋಯಿಸ್ ಕ್ಯಾನ್ಸಲೇಷನ್ (ANC) ಸಹ ಅನ್ನು ಬೆಂಬಲಿಸುತ್ತದೆ. ಇದು ಕ್ರಿಸ್ಟಲ್ ಕ್ಲಿಯರ್ ಕಾಲ್ ತಂತ್ರಜ್ಞಾನವನ್ನು ಸಹ ಒಳಗೊಂಡಿದೆ. ಇದು ಸ್ಪೀಕರ್‌ನ ಸೌಂಡ್ ಅನ್ನು ಪ್ರತ್ಯೇಕಿಸಲು ಮತ್ತು ಕರೆಗಳ ಸಮಯದಲ್ಲಿ ಬ್ಯಾಕ್ ಗ್ರೌಂಡ್ ಮರೆಮಾಚಲು ಪ್ರೀ-ಟ್ರೈನಿಂಗ್ ಪಡೆದ ಮೇಷನ್ ಲರ್ನಿಂಗ್ ಮಾದರಿಯನ್ನು ಬಳಸಿಕೊಳ್ಳುತ್ತದೆ. ಇದಕ್ಕಾಗಿಯೇ ಇದರ ಬೆಲೆ ತುಂಬ ಜಾಸ್ತಿ. ಇಂದಿನ ಟೆಕ್ನಾಲಜಿಯ ಪ್ರಾಡಕ್ಟ್ ಕೇವಲ ಅವುಗಲ್ ಮೂಲ ಕೆಲಸ ಮಾತ್ರವಲ್ಲದೆ ಅದರೊಂದಿಗೆ `ಬಹು ಕಾರ್ಯಗಳನ್ನು ನಿರ್ವಾಹಿಸುತ್ತದೆ.