Noise ಕಂಪನಿಯು ಇಂದು (ಫೆಬ್ರವರಿ 27 ರಂದು) ಭಾರತದಲ್ಲಿ Noise Master Buds 2 ಡಿವೈಸ್ ಅನ್ನು ಬಿಡುಗಡೆ ಮಾಡಿದೆ. ಹೊಸದಾಗಿ ನಾಯ್ಸ್ ಮಾಸ್ಟರ್ ಬಡ್ಸ್ 2 ಲಾಂಚ್ ಮಾಡುವ ಮೂಲಕ ಸಂಸ್ಥೆಯು ತನ್ನ ಟ್ರೂ ವೈರ್‌ಲೆಸ್ ಸ್ಟೀರಿಯೊ (TWS) ಇಯರ್‌ಫೋನ್‌ಗಳ ಶ್ರೇಣಿ ವಿಸ್ತರಿಸಿದೆ. ಈ ಇಯರ್‌ಬಡ್ಸ್ 10mm PU+ PEEK ಡ್ರೈವರ್‌ಗಳು ಮತ್ತು 6 ಮೈಕ್ ಎನ್ವಿರಾನ್ಮೆಂಟ್ ನಾಯ್ಸ್ ಕ್ಯಾನ್ಸಲೇಶನ್ (ENC) ಸೌಲಭ್ಯವನ್ನು ಒಳಗೊಂಡಿದೆ. ಹಾಗೆಯೇ Bose ಟ್ಯೂನ್ ಮಾಡಿದ ಆಡಿಯೊ ಮತ್ತು 51dB ANC ವರೆಗಿನ ಸಪೋರ್ಟ್ ಅನ್ನು ಹೊಂದಿದೆ. ಹಾಗಾದರೆ ನಾಯ್ಸ್ ಮಾಸ್ಟರ್ ಬಡ್ಸ್ 2 ಇಯರ್‌ಬಡ್ಸ್ ಡಿವೈಸ್‌ನ ಇತರೆ ಫೀಚರ್ಸ್ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : Vivo ಹಾಗೂ iQOO ಮೊಬೈಲ್ ಖರೀದಿಸುವ ಗ್ರಾಹಕರಿಗೆ ಬಿಗ್ ಶಾಕ್! ಸದ್ಯದಲ್ಲೇ ಬೆಲೆ ಏರಿಕೆ ಸಾಧ್ಯತೆ
ಮಾರುಕಟ್ಟೆಗೆ ಹೊಸದಾಗಿ ಲಗ್ಗೆ ಇಟ್ಟಿರುವ ನಾಯ್ಸ್ ಮಾಸ್ಟರ್ ಬಡ್ಸ್ 2 ಇಯರ್‌ಬಡ್ಸ್ ಡಿವೈಸ್ inaugural ಲಾಂಚ್ ಬೆಲೆ 7,999 ರೂ.ಗಳಿಗೆ ಲಭ್ಯವಿರುತ್ತದೆ. ಈ ಇಯರ್‌ಬಡ್ಸ್ ಡಿವೈಸ್ ಕಾರ್ಬನ್, ಆರಮ್ ಮತ್ತು ಮರ್ಕ್ಯುರಿ ಎಂಬ ಮೂರು ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿರುತ್ತದೆ. ಅಂದಹಾಗೆ ಮಾಸ್ಟರ್ ಬಡ್ಸ್ 2 ಇಯರ್‌ಬಡ್ಸ್ ಡಿವೈಸ್‌ಗಾಗಿ ಪೂರ್ವ-ಬುಕಿಂಗ್ ಈಗ ತೆರೆದಿದೆ. ಆಸಕ್ತ ಗ್ರಾಹಕರು ನಾಯ್ಸ್ ಕಂಪನಿಯ ಅಧಿಕೃತ ವೆಬ್‌ಸೈಟ್ ಮತ್ತು ರಿಟೇಲ್ ಸ್ಟೋರ್‌ಗಳ ಮೂಲಕ ನಾಯ್ಸ್ ಮಾಸ್ಟರ್ ಬಡ್ಸ್ 2 ಡಿವೈಸ್ ಅನ್ನು ಪೂರ್ವ-ಬುಕ್ ಮಾಡಬಹುದು. ಇನ್ನು ನಾಯ್ಸ್ ಮಾಸ್ಟರ್ ಬಡ್ಸ್ 2 ಡಿವೈಸ್ ಇದೇ ಮಾರ್ಚ್ 19 ರಂದು ಮಾರಾಟಕ್ಕೆ ಬರಲಿದೆ.
ನೂತನ ನಾಯ್ಸ್ ಮಾಸ್ಟರ್ ಬಡ್ಸ್ 2 ಡಿವೈಸ್ ವಿನೈಲ್ ಡಿಸ್ಕ್-ಪ್ರೇರಿತ ವಿನ್ಯಾಸ ಹೊಂದಿದೆ. ಇದು ಸ್ಪಷ್ಟ ಕರೆಗಳಿಗಾಗಿ 6 ಮೈಕ್ ಎನ್ವಿರಾನ್ಮೆಂಟಲ್ ನಾಯ್ಸ್ ಕ್ಯಾನ್ಸಲೇಷನ್ ಸೌಲಭ್ಯವನ್ನು ಪಡೆದುಕೊಂಡಿದೆ. ನಾಯ್ಸ್ ಮಾಸ್ಟರ್ ಬಡ್ಸ್ 2 ಇಯರ್‌ಬಡ್ಸ್ ಬುದ್ಧಿವಂತ ಹೆಡ್ ಟ್ರ್ಯಾಕಿಂಗ್ ಜೊತೆಗೆ 360 ಡಿಗ್ರಿ ಸ್ಪಾಟಿಯಲ್ ಆಡಿಯೊ ಅನ್ನು ಸಹ ಸಪೋರ್ಟ್ ಮಾಡುತ್ತದೆ. ಈ ಹೊಸ ಇಯರ್‌ಬಡ್‌ಗಳು ಉತ್ತಮ ಆಡಿಯೊ ಬೆಂಬಲಕ್ಕಾಗಿ 10mm ಡ್ರೈವರ್‌ಗಳನ್ನು ಪಡೆದುಕೊಂಡಿವೆ. ಈ ಡಿವೈಸ್‌ನಲ್ಲಿ ಬಳಕೆದಾರರು ಕೇಸ್‌ನೊಂದಿಗೆ 30 ಗಂಟೆಗಳ ವರೆಗೆ ಆಡಿಯೊ ಪ್ಲೇಬ್ಯಾಕ್ ಪಡೆಯಬಹುದು. ಇನ್ನು ಇಯರ್‌ಬಡ್‌ಗಳೊಂದಿಗೆ 6 ಗಂಟೆಗಳ ವರೆಗೆ ಆಡಿಯೊ ಪ್ಲೇಬ್ಯಾಕ್ ಪಡೆಯಬಹುದು ಎಂದು ನಾಯ್ಸ್ ಹೇಳುತ್ತದೆ.
ಹಾಗೆಯೇ ನಾಯ್ಸ್ ಮಾಸ್ಟರ್ ಬಡ್ಸ್ 2 ಇಯರ್‌ಬಡ್ಸ್ ಸೌಂಡ್ ಬೈ ಬೋಸ್ ಬ್ರಾಂಡಿಂಗ್‌ನ ಬೆಂಬಲ ಇದೆ. ಈ ಸಹಯೋಗವು ಹೆಚ್ಚು ಸಮತೋಲಿತ ಮತ್ತು ತಲ್ಲೀನಗೊಳಿಸುವ ಆಡಿಯೊ ಅನುಭವವನ್ನು ಒದಗಿಸುತ್ತದೆ ಎಂದು ನಾಯ್ಸ್ ಹೇಳಿಕೊಂಡಿದೆ. ಹಾಗೆಯೇ ನಾಯ್ಸ್ ಮಾಸ್ಟರ್ ಬಡ್ಸ್ 2 ಕಂಪನಿಯ ಅತ್ಯಾಧುನಿಕ 51dB ವರೆಗೆ ಬೆಂಬಲಿಸುವ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಷನ್ (ANC) ಸೌಲಭ್ಯ ಪಡೆದುಕೊಂಡಿದೆ. ಅಲ್ಲದೇ ನಾಯ್ಸ್ ಆಡಿಯೋ ಕಂಪ್ಯಾನಿಯನ್ ಆಪ್ ಮೂಲಕ ಪ್ರವೇಶಿಸಬಹುದಾದ AI ವಾಯ್ಸ್ ಚಾಟ್ ಅಸಿಸ್ಟೆಂಟ್ ಅನ್ನು ಸಜ್ಜುಗೊಳಿಸಲಾಗಿದೆ. ಇದರೊಂದಿಗೆ ಹೆಡ್-ಗೆಸ್ಚರ್ ಕಂಟ್ರೋಲ್ ಸೌಲಭ್ಯ ಸಹ ಲಭ್ಯವಿದೆ.