LG ಕಂಪನಿಯಿಂದ ಎರಡು ಹೊಸ ಬ್ಲೂಟೂತ್ ಸ್ಪೀಕರ್‌ ಬಿಡುಗಡೆ; AI ಆಧಾರಿತ ಆಡಿಯೊ ಫೀಚರ್ಸ್

HIGHLIGHTS

ಎಲ್‌ಜಿ ಕಂಪನಿಯಿಂದ ಎರಡು ಹೊಸ ಸ್ಪೀಕರ್ಸ್‌ ಬಿಡುಗಡೆ

ಈ ಎರಡು ಸ್ಪೀಕರ್ಸ್‌ IP67 ರೇಟಿಂಗ್ ಸೌಲಭ್ಯ ಪಡೆದಿವೆ

ಈ ಎರಡೂ ಹೊಸ ಸ್ಪೀಕರ್ಸ್‌ ಬ್ಲ್ಯಾಕ್‌ ಕಲರ್‌ನಲ್ಲಿ ಲಭ್ಯ

ಜನಪ್ರಿಯ LG ಕಂಪನಿಯು ಭಾರತದಲ್ಲಿ ತನ್ನ ಹೊಸ Xboom Bounce ಮತ್ತು Xboom Grab ಬ್ಲೂಟೂತ್ ಸ್ಪೀಕರ್‌ಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಪೋರ್ಟಬಲ್ ಸ್ಪೀಕರ್‌ಗಳು ಅತ್ಯಾಧುನಿಕ AI ಆಧಾರಿತ ಆಡಿಯೊ ತಂತ್ರಜ್ಞಾನವನ್ನು ಹೊಂದಿವೆ. ಅಲ್ಲದೇ ಈ ಎರಡು ಸ್ಪೀಕರ್‌ಗಳು ವಿಶ್ವಪ್ರಸಿದ್ಧ ಸಂಗೀತಗಾರ ಹಾಗೂ ತಂತ್ರಜ್ಞಾನ ಉದ್ಯಮಿ will.i.am ಅವರೊಂದಿಗೆ ಎಲ್‌ಜಿ ಮಾಡಿಕೊಂಡಿರುವ ಜಾಗತಿಕ Xboom ಸಹಯೋಗದಡಿಯಲ್ಲಿ ಬಿಡುಗಡೆಯಾದ ಮೊದಲ ಉತ್ಪನ್ನಗಳಾಗಿವೆ. ಈ ಸ್ಪೀಕರ್‌ಗಳ ಪ್ರಮುಖ ಆಕರ್ಷಣೆ ಎಂದರೆ AI ಆಧಾರಿತ ಆಡಿಯೊ ಫೀಚರ್ಸ್‌. ಹಾಗಾದರೇ ಎಲ್‌ಜಿ ಕಂಪನಿಯ ಈ ಹೊಸ ಸ್ಪೀಕರ್‌ಗಳ ಫೀಚರ್ಸ್‌ ಹಾಗೂ ಬೆಲೆಯ ಮಾಹಿತಿ ಮುಂದೆ ತಿಳಿಯೋಣ.

Also Read : ವಾಟ್ಸಾಪ್‌ Username ಫೀಚರ್‌ಗೆ ಕೇಂದ್ರ ಸರ್ಕಾರ ಬ್ರೇಕ್! Meta ಸಂಸ್ಥೆಗೆ ನೋಟಿಸ್ ಜಾರಿ

LG Xboom Bounce ಮತ್ತು Xboom Grab ಬೆಲೆ ಹಾಗೂ ಲಭ್ಯತೆ

ಭಾರತದಲ್ಲಿ ಎಲ್‌ಜಿ ಕಂಪನಯ ಲಾಂಚ್ ಮಾಡಿರುವ Xboom Bounce ಮತ್ತು Xboom Grab ಬ್ಲೂಟೂತ್ ಸ್ಪೀಕರ್‌ಗಳು ಆಕರ್ಷಕ ಫೀಚರ್ಸ್‌ ಮೂಲಕ ಗಮನ ಸೆಳೇದಿವೆ. ಅವುಗಳ ಪೈಕಿ Xboom Bounce ಬೆಲೆ 12,999 ರೂ.ಗಳು ಆಗಿದೆ. ಹಾಗೆಯೇ Xboom Grab ಡಿವೈಸ್ ದರವು 9,999 ರೂ.ಗಳು ಆಗಿದೆ. ಪ್ರಸ್ತುತ ಅವು ಎಲ್‌ಜಿ ಇಂಡಿಯಾ ವೆಬ್‌ಸೈಟ್ ಮೂಲಕ ಬ್ಲ್ಯಾಕ್‌ ಬಣ್ಣದಲ್ಲಿ ದೇಶದಲ್ಲಿ ಖರೀದಿಗೆ ಲಭ್ಯವಿದೆ.

Xboom Bounce ಮತ್ತು Xboom Grab ಫೀಚರ್ಸ್

Xboom Bounce ಸ್ಪೀಕರ್ 2.1 ಚಾನೆಲ್ ಆಡಿಯೊ ವ್ಯವಸ್ಥೆಯನ್ನು ಹೊಂದಿದೆ. ಇದರಲ್ಲಿ ಎರಡು 20mm ಡೋಮ್ ಟ್ವೀಟರ್‌ಗಳು, 93 x 53mm ವೂಫರ್ ಮತ್ತು ಎರಡು ಪ್ಯಾಸಿವ್ ರೇಡಿಯೇಟರ್‌ಗಳು ನೀಡಲಾಗಿದೆ. ಹಾಗೆಯೇ Xboom Grab 1.1-ಚಾನೆಲ್ ಟು ವೇ ಆಡಿಯೊ ವ್ಯವಸ್ಥೆಯನ್ನು ಒಳಗೊಂಡಿದೆ. ಇದರಲ್ಲಿ 16mm ಡೋಮ್ ಟ್ವೀಟರ್, 80 x 45mm ವೂಫರ್ ಹಾಗೂ ಎರಡು ಪ್ಯಾಸಿವ್ ರೇಡಿಯೇಟರ್‌ಗಳು ಅಳವಡಿಸಲಾಗಿದೆ.

Xboom Bounce ಸ್ಪೀಕರ್ ಒಂದೇ ಬಾರಿ ಪೂರ್ಣ ಚಾರ್ಜ್ ಮಾಡಿದರೆ 30 ಗಂಟೆಗಳವರೆಗೆ ಬ್ಯಾಟರಿ ಬ್ಯಾಕಪ್ ನೀಡುತ್ತದೆ. ಮತ್ತೊಂದೆಡೆ, Xboom Grab ಸ್ಪೀಕರ್ 20 ಗಂಟೆಗಳವರೆಗೆ ನಿರಂತರ ಬಳಕೆಗೆ ಅವಕಾಶ ಮಾಡಿಕೊಡುತ್ತದೆ. ಈ ಎರಡೂ ಸ್ಪೀಕರ್‌ಗಳನ್ನು USB Type-C ಪೋರ್ಟ್ ಮೂಲಕ ಸುಮಾರು ಮೂರು ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು ಎಂದು ಕಂಪನಿ ತಿಳಿಸಿದೆ. ಇದಲ್ಲದೆ, ಈ ಎರಡೂ ಬ್ಲೂಟೂತ್ ಸ್ಪೀಕರ್‌ಗಳು IP67 ರೇಟಿಂಗ್ ಹೊಂದಿದ್ದು, ಧೂಳು ಮತ್ತು ನೀರಿನಿಂದ ಉತ್ತಮ ರಕ್ಷಣೆ ನೀಡುತ್ತವೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :