Huawei ಸಂಸ್ಥೆಯಿಂದ FreeBuds 7i ಮತ್ತು FreeBuds SE 4 ಇಯರ್‌ಬಡ್ಸ್‌ ಬಿಡುಗಡೆ!

HIGHLIGHTS

ಹುವಾವೇ ಕಂಪನಿಯಿಂದ ಎರಡು ಹೊಸ ಇಯರ್‌ಬಡ್ಸ್‌ ಲಾಂಚ್

ಹುವಾವೇ ಫ್ರೀಬಡ್ಸ್ 7i ಪಿಂಕ್, ವೈಟ್‌ ಮತ್ತು ಬ್ಲ್ಯಾಕ್‌ ಕಲರ್ ಆಯ್ಕೆಯಲ್ಲಿ ಲಭ್ಯ

ಫ್ರೀಬಡ್ಸ್ SE 4 ಡಿವೈಸ್‌ 10 ಎಂಎಂ ಡೈನಾಮಿಕ್ ಆಡಿಯೋ ಡ್ರೈವರ್ ಸೌಲಭ್ಯ ಹೊಂದಿದೆ

Huawei ಸಂಸ್ಥೆಯಿಂದ FreeBuds 7i ಮತ್ತು FreeBuds SE 4 ಇಯರ್‌ಬಡ್ಸ್‌ ಬಿಡುಗಡೆ!

Huawei ಸಂಸ್ಥೆಯು ದೇಶೀಯ ಮಾರುಕಟ್ಟೆಗೆ ಹೊಸದಾಗಿ FreeBuds 7i ಮತ್ತು FreeBuds SE 4 ಹೆಸರಿನ ಎರಡು ಇಯರ್‌ಬಡ್ಸ್‌ ಡಿವೈಸ್‌ ಅನ್ನು ಬಿಡುಗಡೆ ಮಾಡಿದೆ. ಹುವಾವೇ ಫ್ರೀಬಡ್ಸ್ 7i ಇಯರ್‌ಬಡ್ಸ್‌ ಡಿವೈಸ್‌ ಇಂಟೆಲಿಜೆಂಟ್ ಡೈನಾಮಿಕ್ ANC 4.0 ಸೌಲಭ್ಯ ಪಡೆದಿದ್ದು, ಹಾಗೆಯೇ 35 ಗಂಟೆಗಳ ಪ್ಲೇಬ್ಯಾಕ್ ಸಮಯ ಒದಗಿಸಲಿದೆ. ಇನ್ನು ಫ್ರೀಬಡ್ಸ್ SE 4 ಇಯರ್‌ಬಡ್ಸ್‌ ಡಿವೈಸ್‌ 50 ಗಂಟೆಗಳ ಬ್ಯಾಟರಿ ಬ್ಯಾಕ್‌ಅಪ್‌ ಸಪೋರ್ಟ್‌ ಪಡೆದುಕೊಂಡಿದೆ. ಫ್ರೀಬಡ್ಸ್ 7i ಮೂರು ಆಕರ್ಷಕ ಕಲರ್‌ ಆಯ್ಕೆಯಲ್ಲಿ ಲಭ್ಯ. ಫ್ರೀಬಡ್ಸ್ SE 4 ಇಯರ್‌ಬಡ್ಸ್‌ ಎರಡು ಬಣ್ಣಗಳ ಆಯ್ಕೆಯಲ್ಲಿ ಲಭ್ಯವಾಗಲಿದೆ. ಹಾಗಾದರೆ ಹುವಾವೇ ಕಂಪನಿಯ ಈ ಡಿವೈಸ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Digit.in Survey
✅ Thank you for completing the survey!

Also Read : ನೀವು Airtel ಗ್ರಾಹಕರೇ? ಕಡಿಮೆ ಬೆಲೆಯಲ್ಲಿ ಪ್ರತಿದಿನ 2GB ಡೇಟಾ ಅಗತ್ಯ ಇದ್ದರೆ, ಈ ಪ್ಲಾನ್‌ ಸೂಕ್ತ!

Huawei FreeBuds ಡಿವೈಸ್‌ಗಳ ಬೆಲೆ ಮಾಹಿತಿ

ಹುವಾವೇ ಕಂಪನಿಯು ಭಾರತದಲ್ಲಿ ಹುವಾವೇ ಫ್ರೀಬಡ್ಸ್ 7i ಹಾಗೂ ಹುವಾವೇ ಫ್ರೀಬಡ್ಸ್ SE 4 ಡಿವೈಸ್‌ಗಳನ್ನು ಪರಿಚಯಿಸಿದೆ. ಸ್ಟೈಲಿಶ್‌ ಡಿಸೈನ್‌ ಹೊಂದಿರುವ ಈ ಡಿವೈಸ್‌ಗಳು ಗ್ರಾಹಕರ ಗಮನ ಸೆಳೆದಿವೆ. ಅಂದಹಾಗೆ ಹುವಾವೇ ಫ್ರೀಬಡ್ಸ್ 7i ಇಯರ್‌ಬಡ್ಸ್‌ ಡಿವೈಸ್‌ 8,799 ರೂ.ಗಳ ಪ್ರೈಸ್‌ ಟ್ಯಾಗ್‌ ಹೊಂದಿದೆ. ಹಾಗೆಯೇ ಹುವಾವೇ ಫ್ರೀಬಡ್ಸ್ SE 4 ಇಯರ್‌ಬಡ್ಸ್‌ ಡಿವೈಸ್‌ 4,799 ರೂ.ಗಳ ಪ್ರೈಸ್‌ ಟ್ಯಾಗ್‌ ಪಡೆದುಕೊಂಡಿದೆ. ಇನ್ನು ಈ ಎರಡೂ ಮಾಡೆಲ್‌ಗಳು ಜೂನ್ 18 ರಂದು ಫ್ಲಿಪ್‌ಕಾರ್ಟ್ ಮೂಲಕ ಮತ್ತು RTC ಇಂಡಿಯಾ ಅಧಿಕೃತ ವೆಬ್‌ಸೈಟ್ ಮೂಲಕ ಲಭ್ಯ. ಫ್ರೀಬಡ್ಸ್ 7i ಡಿವೈಸ್‌ ಪಿಂಕ್, ವೈಟ್‌ ಮತ್ತು ಬ್ಲ್ಯಾಕ್‌ ಕಲರ್ ಆಯ್ಕೆಯಲ್ಲಿ ಲಭ್ಯ. ಅದೇ ರೀತಿ ಫ್ರೀಬಡ್ಸ್ SE 4 ಡಿವೈಸ್‌ ಬ್ಲ್ಯಾಕ್‌ ಹಾಗೂ ವೈಟ್‌ ಬಣ್ಣಗಳ ಆಯ್ಕೆಯಲ್ಲಿ ಲಭ್ಯ.

Huawei

ಹುವಾವೇ ಫ್ರೀಬಡ್ಸ್ 7i ಫೀಚರ್ಸ್‌

ಹುವಾವೇ ಫ್ರೀಬಡ್ಸ್ 7i ಸಾಧನವು ಇಂಟೆಲಿಜೆಂಟ್ ಡೈನಾಮಿಕ್ ANC 4.0 ಸೌಲಭ್ಯ ಪಡೆದಿದ್ದು, ಸ್ಪಷ್ಟ ವಾಯ್ಸ್‌ ಗುಣಮಟ್ಟ ಸಿಗಲಿದೆ. ಹಾಗೆಯೇ ಇದು ಇನ್‌ಫ್ರಾರೆಡ್, ಹಾಲ್, ಟಚ್, ಗೈರೊಸ್ಕೋಪ್, ಆಕ್ಸಿಲರೊಮೀಟರ್, ಬೋನ್ ವಾಯ್ಸ್ ಸೆನ್ಸರ್ ಆಯ್ಕೆಗಳನ್ನು ಪಡೆದುಕೊಂಡಿದೆ. ಅಲ್ಲದೇ ಬ್ಲೂಟೂತ್ 5.4, ಡ್ಯುಯಲ್-ಡಿವೈಸ್ ಸಪೋರ್ಟ್, ಪಾಪ್-ಅಪ್ ಪೇರಿಂಗ್ ಕನೆಕ್ಟಿವಿಟಿ ಆಯ್ಕೆಗಳನ್ನು ಇದು ಪಡೆದುಕೊಂಡಿದೆ. ಇದರ ಇಯರ್‌ಬಡ್‌ಗಳು 55 mAh ಬ್ಯಾಟರಿ ಹೊಂದಿದ್ದು, ಇನ್ನು ಇದರ ಕೇಸ್ 510 mAh ಬ್ಯಾಟರಿ ಬಲ ಪಡೆದುಕೊಂಡಿದೆ. ಹಾಗೆಯೇ ಇದು IP54 ರೇಟಿಂಗ್ ಸಹ ಒಳಗೊಂಡಿದೆ.

ಹುವಾವೇ ಫ್ರೀಬಡ್ಸ್ SE 4 ಫೀಚರ್ಸ್‌

ಹುವಾವೇ ಫ್ರೀಬಡ್ಸ್ SE 4 ಡಿವೈಸ್‌ 10 ಎಂಎಂ ಡೈನಾಮಿಕ್ ಆಡಿಯೋ ಡ್ರೈವರ್ ಸೌಲಭ್ಯ ಪಡೆದಿದೆ. ಹಾಗೆಯೇ ಇದು ಹಾಲ್ ಹಾಗೂ ಟಚ್ ಸೆನ್ಸರ್ ಆಯ್ಕೆಗಳನ್ನು ಪಡೆದುಕೊಂಡಿದೆ. ಅಲ್ಲದೇ SBC, AAC, mSBC, ಬ್ಲೂಟೂತ್ 5.4, ಲೋ-ಲೇಟೆನ್ಸಿ ಗೇಮಿಂಗ್ ಸಪೋರ್ಟ್ ಆಯ್ಕೆಗಳನ್ನು ಇದು ಪಡೆದುಕೊಂಡಿದೆ. ಇದರ ಇಯರ್‌ಬಡ್‌ಗಳು 41 mAh ಬ್ಯಾಟರಿ ಹೊಂದಿದ್ದು, ಇನ್ನು ಇದರ ಕೇಸ್ 510 mAh ಬ್ಯಾಟರಿ ಬಲ ಪಡೆದುಕೊಂಡಿದೆ. ಹಾಗೆಯೇ ಇದು IP54 ರೇಟಿಂಗ್ (ಆದರೆ ಇದರ ಕೇಸ್‌ ವಾಟರ್‌ ರೆಸಿಸ್ಟನ್ಸ್‌ ಬೆಂಬಲವಿಲ್ಲ) ಸಹ ಒಳಗೊಂಡಿದೆ.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile