ನೀವು Airtel ಗ್ರಾಹಕರೇ? ಕಡಿಮೆ ಬೆಲೆಯಲ್ಲಿ ಪ್ರತಿದಿನ 2GB ಡೇಟಾ ಅಗತ್ಯ ಇದ್ದರೆ, ಈ ಪ್ಲಾನ್ ಸೂಕ್ತ!
ಏರ್‌ಟೆಲ್ ಸಂಸ್ಥೆಯ ಈ ಪ್ಲ್ಯಾನಿನಲ್ಲಿ ಪ್ರತಿದಿನ 2GB ಡೇಟಾ ಸೌಲಭ್ಯ
ಏರ್‌ಟೆಲ್ ಕಂಪನಿಯ 379 ರೂ.ಗಳ ಪ್ಲಾನ್‌ನಲ್ಲಿ 30 ದಿನಗಳ ವ್ಯಾಲಿಡಿಟಿ
ಏರ್‌ಟೆಲ್ ಟೆಲಿಕಾಂನ ಈ ಯೋಜನೆಯಲ್ಲಿ ಪ್ರತಿದಿನ 100 ಎಸ್‌ಎಮ್‌ಎಸ್ ಪ್ರಯೋಜನ
ದೇಶದ ಜನಪ್ರಿಯ ಟೆಲಿಕಾಂ ಎಂದು ಗುರುತಿಸಿಕೊಂಡಿರುವ ಭಾರ್ತಿ Airtel ಭಿನ್ನ ಡೇಟಾ ಸೌಲಭ್ಯ ಇರುವ ಯೋಜನೆಗಳ ಆಯ್ಕೆಯನ್ನು ಹೊಂದಿದೆ. ಆಕರ್ಷಕ ಪ್ಲಾನ್‌ಗಳ ಈ ಮೂಲಕ ಜಿಯೋ ಹಾಗೂ ವಿ ಟೆಲಿಕಾಂಗಳಿಗೆ ಸೆಡ್ಡು ಹೊಡೆಯುತ್ತಾ ಮುಂದೆ ಸಾಗಿದೆ. ಆ ಪೈಕಿ ಏರ್‌ಟೆಲ್ ಟೆಲಿಕಾಂ ಕಂಪನಿಯ ಆಕರ್ಷಕ ವ್ಯಾಲಿಡಿಟಿ ಜೊತೆಗೆ ಪ್ರತಿದಿನ ಅಧಿಕ ಡೇಟಾ ಪ್ರಯೋಜನ ಒಳಗೊಂಡ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನ್‌ಗಳು ಬಳಕೆದಾರರನ್ನು ಆಕರ್ಷಿಸಿವೆ. ಮುಖ್ಯವಾಗಿ ದೈನಂದಿನ ಡೇಟಾ ಪ್ರಯೋಜನದೊಂದಿಗೆ ಇತರೆ ಹೆಚ್ಚುವರಿ ಸೌಲಭ್ಯ ಪಡೆದುಕೊಂಡಿರುವ ಯೋಜನೆಗಳು ಹೆಚ್ಚು ಲೀಡಿಂಗ್‌ನಲ್ಲಿ ಇವೆ. ಆ ಪೈಕಿ ಏರ್‌ಟೆಲ್ ಟೆಲಿಕಾಂನ 379 ರೂ. ಗಳ ಯೋಜನೆ ಗ್ರಾಹಕರ ಗಮನ ಸೆಳೆದಿದೆ. ಹಾಗಾದರೆ ಏರ್‌ಟೆಲ್ ಟೆಲಿಕಾಂನ ಕಡಿಮೆ ದರದಲ್ಲಿ ನಿತ್ಯ ಡೇಟಾ ಪ್ರಯೋಜನ ನೀಡುವ ಕೆಲವು ಜನಪ್ರಿಯ ಯೋಜನೆಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
SurveyAlso Read : ಅಂತೂ ಇಂತೂ ಲಾಂಚ್ ಆಯ್ತು Redmi Turbo 5 ಸ್ಮಾರ್ಟ್‌ಫೋನ್! 100W ಫಾಸ್ಟ್ ಚಾರ್ಜಿಂಗ್ ಹೈಲೈಟ್
Airtel ಸಂಸ್ಥೆಯ 379 ರೂ.ಗಳ ಪ್ಲಾನ್ ಮಾಹಿತಿ
ಭಾರ್ತಿ ಏರ್‌ಟೆಲ್ ಕಂಪನಿಯ 379 ರೂ.ಗಳ ಈ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯು 30 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ವ್ಯಾಲಿಡಿಟಿ ಅವಧಿಯ ವರೆಗೂ ಬಳಕೆದಾರರಿಗೆ ಪ್ರತಿದಿನ 2GB Data ಪ್ರಯೋಜನ ಸಿಗಲಿದೆ. ಹಾಗೆಯೇ ಈ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಇರಲಿದೆ. ಬಜೆಟ್ ದರದಲ್ಲಿ ಅಧಿಕ ಡೇಟಾ ಬಯಸುವ ಗ್ರಾಹಕರಿಗೆ ಈ ಪ್ಲಾನ್ ಸೂಕ್ತ ಎನ್ನಬಹುದು. ಹಾಗೆಯೇ ಈ ಯೋಜನೆಯು ಅಡೋಬ್ ಎಕ್ಸ್‌ಪ್ರೆಸ್ ಪ್ರಿಮಿಯಮ್, ಫ್ರೀ ಹೆಲ್ಲೋ ಟ್ಯೂನ್, ಗೂಗಲ್ ಒನ್ ಸೌಲಭ್ಯಗಳನ್ನು ಪಡೆದುಕೊಂಡಿದೆ.

ಇತರೆ ಆಕರ್ಷಕ ಪ್ಲಾನ್‌ಗಳ ಮಾಹಿತಿ
ಏರ್‌ಟೆಲ್ ಕಂಪನಿಯ 429 ರೂ.ಗಳ ಈ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯು 30 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ವ್ಯಾಲಿಡಿಟಿ ಅವಧಿಯ ವರೆಗೂ ಬಳಕೆದಾರರಿಗೆ ಪ್ರತಿದಿನ 2.5GB Data ಪ್ರಯೋಜನ ಸಿಗಲಿದೆ. ಹಾಗೆಯೇ ಈ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಇರಲಿದೆ. ಬಜೆಟ್ ದರದಲ್ಲಿ ಅಧಿಕ ಡೇಟಾ ಬಯಸುವ ಗ್ರಾಹಕರಿಗೆ ಈ ಪ್ಲಾನ್ ಸೂಕ್ತ ಎನ್ನಬಹುದು. ಹಾಗೆಯೇ ಈ ಯೋಜನೆಯು ಅಡೋಬ್ ಎಕ್ಸ್‌ಪ್ರೆಸ್ ಪ್ರಿಮಿಯಮ್ ಸೌಲಭ್ಯ ಪಡೆದುಕೊಂಡಿದೆ.
ಏರ್‌ಟೆಲ್ ಕಂಪನಿಯ 449 ರೂ.ಗಳ ಈ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯು 28 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ವ್ಯಾಲಿಡಿಟಿ ಅವಧಿಯ ವರೆಗೂ ಬಳಕೆದಾರರಿಗೆ ಪ್ರತಿದಿನ ಅನಿಯಮಿತ Data ಪ್ರಯೋಜನ ಸಿಗಲಿದೆ. ಹಾಗೆಯೇ ಈ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಇರಲಿದೆ. ಬಜೆಟ್ ದರದಲ್ಲಿ ಅಧಿಕ ಡೇಟಾ ಬಯಸುವ ಗ್ರಾಹಕರಿಗೆ ಈ ಪ್ಲಾನ್ ಸೂಕ್ತ ಎನ್ನಬಹುದು. ಹಾಗೆಯೇ ಈ ಯೋಜನೆಯು ಜಿಯೋ ಹಾಟ್‌ಸ್ಟಾರ್ ಮೊಬೈಲ್ ಸೌಲಭ್ಯ ಪಡೆದುಕೊಂಡಿದೆ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile
