boAt Cinematic Dolby Audio Soundbar
boAt Cinematic Dolby Soundbar: ಮನೆಯಲ್ಲೇ ನಿಮಗೆ ಸಿನಿಮೀಯ ಆಡಿಯೊ ಅನುಭವವನ್ನು ಪಡೆಯಲು ಬಯಸುತ್ತಿದ್ದರೆ ಬೋಟ್ ಕಂಪನಿಯ ಈ ಜಬರ್ದಸ್ತ್ ಸೌಂಡ್ ಬಾರ್ ನಿಮಗೆ ಅತ್ಯುತ್ತಮ ಆಯ್ಕೆಯಾಗಿದೆ. ಯಾಕೆಂದರೆ ಈ boAt Aavante Prime 5.1 5000D ಸೌಂಡ್ ಬಾರ್ ನಿಮ್ಮ ಮನೆ ಅಥವಾ ಆಫೀಸ್ ಅಲ್ಲಿ ಎಂಟರ್ಟೈನ್ಮೆಂಟ್ ಅನ್ನು ಅಪ್‌ಗ್ರೇಡ್ ಮಾಡಲು ಸೂಕ್ತ ಆಯ್ಕೆಯಾಗಿದೆ. ಇದರ 5.1 ಚಾನಲ್ ಡಾಲ್ಬಿ ಆಡಿಯೋ ಸೌಂಡ್ ಸಿಸ್ಟಮ್ ಜೊತೆಗೆ ಸಿನಿಮೇಟಿಕ್ ಸೌಂಡ್ ಅನುಭವದೊಂದಿಗೆ ಪ್ರೀಮಿಯಂ ಮಟ್ಟದ ಸೌಂಡ್ ಕ್ವಾಲಿಟಿಯನ್ನು ನೀಡಿ ಪ್ರತಿಯೊಂದು ಕಂಟೆಂಟ್ ಅನ್ನು ಮತ್ತಷ್ಟು ಇಂಟ್ರೆಸ್ಟಿಂಗ್ ಮಾಡುತ್ತದೆ. ಈಗ ಅಮೆಜಾನ್ ‘Early Deals’ ಸೇಲ್‌ನಲ್ಲಿ ಸಿಕ್ಕಾಪಟ್ಟೆ ಕಡಿಮೆ ಬೆಲೆಗೆ ಲಭ್ಯವಿದ್ದು ನಿಮ್ಮ ಸ್ಮಾರ್ಟ್ ಟಿವಿ ಸೌಂಡ್ ಕ್ವಾಲಿಟಿಯನ್ನು ಹೆಚ್ಚಿಸುತ್ತದೆ.
ಮೊದಲಿಗೆಮಾರುಕಟ್ಟೆಯಲ್ಲಿ ಹತ್ತಾರು ಸೌಂಡ್ ಬಾರ್ ಲಭ್ಯವಿರುವಾಗ ಈ ಸೌಂಡ್ ಯಾಕೆ ಖರೀದಿಸಬೇಕು ಎನ್ನುವುದು ಸಾಮಾನ್ಯವಾಗಿ ನಮ್ಮ ತಲೆಗೆ ಬರುವ ಪ್ರಶ್ನೆಯಾಗಿದೆ. ಇದಕ್ಕೆ ಉತ್ತರವಾಗಿ ಸುಮಾರು 10,000 ರೂಗಳಲ್ಲಿ ಈ ಬೋಟ್ ಕಂಪನಿ ಸೌಂಡ್ ಖರೀದಿಸಲು ಮುಖ್ಯ ಕಾರಣ ಮತ್ತು ಇದೆ ಬೆಲೆಗೆ ಬೇರೆ ಕಂಪನಿಗಳ ಸೌಂಡ್ ಹೊಂದಿಲ್ಲದ ಅಂಶಗಳನ್ನು ಈ ಕೆಳಗೆ ವಿವರಿಸಲಾಗಿದೆ.
ಪ್ರಸ್ತುತ ದೊಡ್ಡ ಸೇಲ್ ಮುಂಚಿತವಾಗಿ ಅಮೆಜಾನ್ ಈ boAt Aavante Prime 5.1 5000D ಬೆಲೆ ನೋಡುವುದಾದರೆ ಮೊದಲಿಗೆ ಫ್ಲಿಪ್‌ಕಾರ್ಟ್‌ನಲ್ಲಿ ₹12,999 ರೂಗಳಿಗೆ ಮತ್ತು ಅಮೆಜಾನ್‌ನಲ್ಲಿ ₹9,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಅಮೆಜಾನ್ ಆರಂಭಿಕ ಡೀಲ್ಸ್ ಸೇಲ್ ಸಮಯದಲ್ಲಿ ಆಯ್ದ ಕ್ರೆಡಿಟ್ ಕಾರ್ಡ್‌ಗಳ ಮೇಲೆ 10% ರಿಯಾಯಿತಿಯೊಂದಿಗೆ ಬಳಕೆದಾರರು ಆಯ್ದ ಬ್ಯಾಂಕ್ ಕಾರ್ಡ್ ಬಳಸಿಕೊಂಡು ಸುಮಾರು 1500 ರೂಗಳವರೆಗೆ ತ್ವರಿತ ಡಿಸ್ಕೌಂಟ್ ಪಡೆಯಬಹುದು.
ನಿರ್ದಿಷ್ಟ ಪಾವತಿ ವಿಧಾನಗಳ ಮೇಲೆ ತ್ವರಿತ ಕ್ಯಾಶ್‌ಬ್ಯಾಕ್‌ನಂತಹ ಹೆಚ್ಚುವರಿ ಬ್ಯಾಂಕ್ ಕೊಡುಗೆಗಳನ್ನು ನೀವು ಪಡೆಯಲು ಸಾಧ್ಯವಾಗಬಹುದು. ಯಾವುದೇ ವೆಚ್ಚವಿಲ್ಲದ EMI ಆಯ್ಕೆಗಳು ಸಹ ಆಗಾಗ್ಗೆ ಲಭ್ಯವಿದ್ದು ಕಂತುಗಳಲ್ಲಿ ಪಾವತಿಸಲು ನಿಮಗೆ ಅವಕಾಶ ನೀಡುತ್ತದೆ. ಇತ್ತೀಚಿನ ಬೆಲೆ ಮತ್ತು ಬ್ಯಾಂಕ್ ಕೊಡುಗೆಗಳಿಗಾಗಿ Amazon ಅನ್ನು ಪರಿಶೀಲಿಸಲು ಶಿಫಾರಸು ಮಾಡಲಾಗಿದೆ.
ಈ ಬೋಟ್ ಆವಂತೆ ಪ್ರೈಮ್ 5.1 5000D ಸೌಂಡ್‌ಬಾರ್ ಬೃಹತ್ 500W RMS ಔಟ್‌ಪುಟ್ ಮತ್ತು ಡಾಲ್ಬಿ ಆಡಿಯೊ ಬೆಂಬಲವನ್ನು ಹೊಂದಿದ್ದು ಇದು ತಲ್ಲೀನಗೊಳಿಸುವ ಸಿನಿಮೀಯ ಅನುಭವಕ್ಕಾಗಿ ಇದು ವೈರ್ಡ್ ಸಬ್ ವೂಫರ್ ಮತ್ತು ಅಧಿಕೃತ ಸರೌಂಡ್ ಸೌಂಡ್‌ಗಾಗಿ ಎರಡು ವೈರ್ಡ್ ಸ್ಯಾಟಲೈಟ್ ಸ್ಪೀಕರ್‌ಗಳನ್ನು ಒಳಗೊಂಡಿದೆ. ಪ್ರಮುಖ ವೈಶಿಷ್ಟ್ಯಗಳಲ್ಲಿ ಬ್ಲೂಟೂತ್ v5.3, HDMI (ARC) ಮತ್ತು USB ನಂತಹ ಬಹು ಸಂಪರ್ಕ ಆಯ್ಕೆಗಳು ಜೊತೆಗೆ ಚಲನಚಿತ್ರಗಳು, ಮ್ಯೂಸಿಕ್ ಮತ್ತು ಸುದ್ದಿಗಳಿಗಾಗಿ ಮಾಸ್ಟರ್ ರಿಮೋಟ್ ಮತ್ತು ಮೀಸಲಾದ EQ ಮೋಡ್‌ಗಳು ಸೇರಿವೆ. ಈ ಸೌಂಡ್‌ಬಾರ್ ನಿಮ್ಮ ಮನೆಯ ಮನರಂಜನಾ ವ್ಯವಸ್ಥೆಗೆ ಪ್ರಬಲ ಮತ್ತು ವೈಶಿಷ್ಟ್ಯ-ಭರಿತ ಆಡಿಯೊ ಪರಿಹಾರವನ್ನು ನೀಡುತ್ತದೆ.