Instagram Tips: ನಿಮ್ಮ ಮಕ್ಕಳು ಇನ್‌ಸ್ಟಾಗ್ರಾಮ್‌ನಲ್ಲಿ ಏನೇನು ಮಾಡುತ್ತಿದ್ದರೆ ಎಲ್ಲವನ್ನು ಈ ರೀತಿ ತಿಳಿಯಬಹುದು!

Updated on 05-Mar-2025
HIGHLIGHTS

ಪ್ರಸ್ತುತ ಫೇಸ್ಬುಕ್, ಯುಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್‌ ಜೀವನದ ದಿನಚರಿಯ ಭಾಗವಾಗಿದೆ.

ಇಂದಿನ ಹೆಚ್ಚಿನ ಮಕ್ಕಳ ವರ್ತನೆಯಲ್ಲಿ ಸ್ಮಾರ್ಟ್ಫೋನ್ ಬಗ್ಗೆ ಇರುವ ಆಸಕ್ತಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

Instagram Tips ನಿಮ್ಮ ಮಕ್ಕಳು ಇನ್‌ಸ್ಟಾಗ್ರಾಮ್‌ನಲ್ಲಿ ಏನೇನು ಮಾಡುತ್ತಿದ್ದರೆ ಎಲ್ಲವನ್ನು ಈ ಫೀಚರ್ ಮೂಲಕ ತಿಳಿಯಿರಿ.

Instagram Tips: ಇಂದಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾ ಚಿಕ್ಕವರಿಂದ ಹಿರಿಯರವರೆಗೆ ಎಲ್ಲರ ಜೀವನದ ದಿನಚರಿಯ ಭಾಗವಾಗಿದೆ. ಅದರಲ್ಲೂ ಪ್ರಮುಖವಾಗಿ ಫೇಸ್ಬುಕ್, ಯುಟ್ಯೂಬ್ ಮತ್ತು ಇನ್‌ಸ್ಟಾಗ್ರಾಮ್‌ ಸಾಮಾನ್ಯವಾಗಿ ಸ್ಮಾರ್ಟ್ಫೋನ್ ಬಳಸುವ ಪ್ರತಿಯೊಬ್ಬರೂ ಬಳಸುವ ಅಪ್ಲಿಕೇಶನ್ಗಳಲ್ಲಿ ಒಂದಾಗಿದೆ. ಇಂದಿನ ಹೆಚ್ಚಿನ ಮಕ್ಕಳ ವರ್ತನೆಯಲ್ಲಿ ಈ ಸ್ಮಾರ್ಟ್ಫೋನ್ ಅಥವಾ ಸ್ಮಾರ್ಟ್ ಟಿವಿಯ ಬಗ್ಗೆ ಇರುವ ಆಸಕ್ತಿಯನ್ನು ನೀವು ಕಂಡು ಕೇಳಿರಬಹುದು. ಈಗ ಮಕ್ಕಳಿಗೆ ಸ್ಕ್ರೀನ್ ತೋರಿಸಲೇಬಾರದು ಅಂದ್ರೆ ಸರಿಯೇ ಹೊರತು ನಿಜ ಜೀವನದಲ್ಲಿ ಇದರ ಮೇಲೆ ಅಮಲು ಮಾಡೋದು ಕೊಂಚ ಕಷ್ಟದ ಕೆಲಸವಾಗಿದೆ.

ಆದರೆ ಮಕ್ಕಳಿಗೆ ಫೋನ್ ನೀಡುವುದು ತಪ್ಪು ಎಂದು ಅರಿತರೂ ಕೆಲವೊಮ್ಮೆ ಅವರನ್ನು ಸಮಾಧಾನ ಮಾಡುವ ದಾರಿಯಂತೆ ಪೋಷಕರು ಬಳಸುವುದನ್ನು ಸಹ ನೀವು ನೋಡಿರಬಹುದು. ಆದರೆ ಪೋಷಕರಿಗೆ ಮಕ್ಕಳು ಇನ್‌ಸ್ಟಾಗ್ರಾಮ್‌ನಲ್ಲಿ ಏನೇನು ಮಾಡುತ್ತಾರೆ ಎನ್ನೋದು ತಿಳಿಯಲು ಸದಾ ಕಾಯುತ್ತಿರುತ್ತಾರೆ ಹಾಗಾದ್ರೆ ಇದಕ್ಕೆ ಪರಿಹಾರವೇನು? ನಿಮ್ಮ ಮಕ್ಕಳು ಇನ್‌ಸ್ಟಾಗ್ರಾಮ್‌ನಲ್ಲಿ ಏನೇನು ಮಾಡುತ್ತಿದ್ದರೆ ತಿಳಿಯಲು ಈ ಫೀಚರ್ ಬಗ್ಗೆ ಮಾಹಿತಿ ನೀಡಲಿದ್ದೇನೆ.

Instagram Tips: ಮಕ್ಕಳಿಗಾಗಿಯೇ ಇನ್‌ಸ್ಟಾಗ್ರಾಮ್‌ ಈ ಫೀಚರ್ ಹೊಂದಿದೆ:

ಇನ್‌ಸ್ಟಾಗ್ರಾಮ್ ಭಾರತದ ಬಳಕೆದಾರರಿಗಾಗಿ ಟೀನ್ ಅಕೌಂಟ್ಸ್ (Teen Accounts) ಎಂಬ ಹೊಸ ವೈಶಿಷ್ಟ್ಯ ಪರಿಚಯಿಸಿದ್ದು ಇದು 16 ವರ್ಷದೊಳಗಿನವರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಈ ಫೀಚರ್‌ ಗುರಿಯನ್ನು ನೋಡುವುದಾದರೆ ಸುರಕ್ಷಿತ ಮತ್ತು ವಯಸ್ಸಿಗೆ ಸೂಕ್ತವಾದ ಆನ್‌ಲೈನ್ ಕಂಟೆಂಟ್‌ಗಳನ್ನು ಒದಗಿಸುವುದಾಗಿದೆ. ಅಂದರೆ ಯಾವುದೇ ಕೆಟ್ಟ, ಕ್ರೂರ ಅಥವಾ ಅಗತ್ಯವಿಲ್ಲದ ಯಾವುದೇ ಕಂಟೆಂಟ್ ಇವರ ಫೀಡ್ ಅಲ್ಲಿ ಬರೋದಿಲ್ಲ. ಇದರಿಂದ ಮಕ್ಕಳ ಬುದ್ದಿ ಮತ್ತು ಮಾನಸಿಕ ಸಂತೋಲನ ಹದಗೆಡುವುದನ್ನು ಒಂದು ಹಂತದ ಮಟ್ಟದಲ್ಲಿ ಕಾಪಾಡಬಹುದು.

Instagram Tips – Parental Control Feature Explained-

ಹೌದು, ಮೇಲೆ ತಿಳಿಸಿರುವಂತೆ ಇನ್‌ಸ್ಟಾಗ್ರಾಮ್‌ ಮಕ್ಕಳಿಗಾಗಿಯೇ ಮತ್ತೊಂದು Parental Control Feature ಅನ್ನು ಸಹ ಹೊಂದಿದೆ. ಸಾಮಾನ್ಯವಾಗಿ ಈಗ ಎಲ್ಲ ಸ್ಮಾರ್ಟ್ಫೋನ್ ಈ ಫೀಚರ್ ಹೊಂದಿರುತ್ತವೆ ಆದರೆ ತುಂಬ ಜನರಿಗೆ ಈ ಫೀಚರ್ ಬೇಕಿದ್ದರೂ ಅಷ್ಟಾಗಿ ತಿಳಿಯದ ಕಾರಣದಿಂದಾಗಿ ಇದನ್ನು ಬಳಸುತ್ತಿಲ್ಲ.

ಆದರೆ ಈ ಮಾಹಿತಿ ನಿಮಗೆ ಇಷ್ಟವಾದರೆ ತಿಳಿಯದವರೊಂದಿಗೆ ಹಂಚಿಕೊಳ್ಳಬಹುದು. ಈ Parental Control Feature ಫೀಚರ್ ನಿಜಕ್ಕೂ ತುಂಬ ಉಪಯುಕ್ತವಾಗಿದ್ದು ಸ್ಮಾರ್ಟ್ಫೋನ್ ಮತ್ತು ಅಪ್ಲಿಕೇಶನ್ಗಳನ್ನು ನಿಮಗಿಷ್ಟ ಬರುವ ಹಾಗೆ ಅವರು ಬಳಸಲು ನಿರ್ಧರಿಸುವುದರಿಂದ ನಿಮ್ಮ ಮಕ್ಕಳು ಏನೇನು ನೋಡುತ್ತಾರೋ ಅವೆಲ್ಲ ನೀವು ತಿಳಿಯಬಹುದು.

Also Read: Nothing Phone (2a) ಭಾರಿ ಬೆಲೆ ಕಡಿತ! ಬೆಸ್ಟ್ ಡಿಸ್ಕೌಂಟ್‍ನೊಂದಿಗೆ ಮಾರಾಟವಾಗುತ್ತಿರುವ ನಥಿಂಗ್ ಫೋನ್!

Instagram Teen Accounts Feature Explained

ಈ ಟೀನ್‌ ಅಕೌಂಟ್ಸ್‌ನ (Teen Accounts) ಪ್ರಮುಖ ಫೀಚರ್ ಅಂದ್ರೆ ಪೋಷಕರ ನಿಯಂತ್ರಣ ಆಯ್ಕೆ (Parental Control Feature) ಆಗಿದ್ದು ಪೋಷಕರು ತಮ್ಮ ಮಕ್ಕಳು ಯಾರೊಂದಿಗೆ ಚಾಟಿಂಗ್ ಮಾಡುತ್ತಿದ್ದಾರೆ ಮತ್ತು ಯಾವ ಕಂಟೆಂಟ್ ವೀಕ್ಷಿಸುತ್ತಾರೆ ಮತ್ತು ಅವರು ಅಪ್ಲಿಕೇಶನ್‌ನಲ್ಲಿ ಎಷ್ಟು ಸಮಯ ಕಳೆಯುತ್ತಾರೆ ಎಂಬುದನ್ನು ತಿಳಿಯಬಹುದು. ಅಲ್ಲದೆ ಈ ಟೀನ್‌ ಅಕೌಂಟ್ಸ್‌ನ (Teen Accounts) ಮುಂಚಿತವಾಗಿಯೇ ಪ್ರೈವೇಟ್‌ ಮೋಡ್‌ನಲ್ಲಿ ಇರುವಂತೆ ತಯಾರಿಸಲಾಗಿದೆ.

Instagram Tips – Parental Control Feature Explained-

ಅಂದ್ರೆ ನಿಮ್ಮ ಮಕ್ಕಳು ತಮಗೆ ಬೇಕಾದವರನ್ನು ಮಾತ್ರ ಸ್ನೇಹಿತರಾಗಬಹುದು ಅಥವಾ ಮೆಸೇಜ್‌ ಮಾಡಬಹುದು. ಈ ಖಾತೆಯನ್ನು ಈ ರೀತಿ ಆಕ್ಟಿವೇಟ್ ಮಾಡಬಹುದು ಮೊದಲಿಗೆ Go to Settings > Family Center > Supervision, and send an invite to your teen’s account. then Your teen needs to accept the invite to enable supervision ಅಷ್ಟೇ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :