ಫೋಟೋಗಳನ್ನು ಡಿಲೀಟ್ ಮಾಡದೇ ಮೊಬೈಲ್ Storage ಖಾಲಿ ಮಾಡಲು ಇಲ್ಲಿದೆ ಸುಲಭ ವಿಧಾನ

ಸ್ಮಾರ್ಟ್‌ಫೋನ್ ಬಳಸುವ ಬಹುತೇಕ ಎಲ್ಲರಿಗೂ ಎದುರಾಗುವ ಸಾಮಾನ್ಯ ಸಮಸ್ಯೆ ಎಂದರೆ Storage Full ಎಂಬ ಮೆಸೆಜ್‌. ಫೋನ್‌ ಸ್ಟೋರೇಜ್ ತುಂಬಿದಾಗ ಹೊಸ ಫೋಟೋ ಅಥವಾ ವಿಡಿಯೋ ತೆಗೆಯಲು ಸಾಧ್ಯವಾಗುವುದಿಲ್ಲ. ಅಲ್ಲದೆ ಹೊಸ ಆಪ್‌ಗಳನ್ನು ಇನ್‌ಸ್ಟಾಲ್ ಮಾಡಲು ಅಥವಾ ಸಾಫ್ಟ್‌ವೇರ್ ಅಪ್‌ಡೇಟ್ ಮಾಡಲು ಕೂಡ ತೊಂದರೆ ಉಂಟಾಗುತ್ತದೆ. ಬಹಳಷ್ಟು ಮಂದಿ ಈ ಸಮಸ್ಯೆಗೆ ಪರಿಹಾರವಾಗಿ ಫೋಟೋಗಳು ಮತ್ತು ವಿಡಿಯೋಗಳನ್ನು ಡಿಲೀಟ್‌ ಮಾಡಲು ಮುಂದಾಗುತ್ತಾರೆ. ಆದರೆ ನಿಮ್ಮ ಅಮೂಲ್ಯ ಮೆಮೊರಿಗಳನ್ನು ಕಳೆದುಕೊಳ್ಳದೆ ಕೂಡ ಮೊಬೈಲ್‌ನಲ್ಲಿ ಸಾಕಷ್ಟು ಸ್ಟೋರೇಜ್ ಖಾಲಿ ಮಾಡಬಹುದು. ಅದಕ್ಕಾಗಿ ಈ ಮುಂದಿನ ಸರಳ ವಿಧಾನಗಳನ್ನು ಅನುಸರಿಸಿ.

Also Read : ನಿಮ್ಮ ವೈಯಕ್ತಿಕ ಮಾಹಿತಿ ಸುರಕ್ಷಿತವೇ? Data Privacy ಬಗ್ಗೆ ತಿಳಿಯಲೇಬೇಕಾದ ವಿಷಯಗಳು

– Storage ಫುಲ್‌: ಅನಗತ್ಯ Cache ಕ್ಲಿಯರ್ ಮಾಡಿ

ಪ್ರತಿದಿನ ಬಳಸುವ WhatsApp, Instagram, Facebook, YouTube ಮುಂತಾದ ಆಪ್‌ಗಳು ತಾತ್ಕಾಲಿಕ ಫೈಲ್‌ಗಳನ್ನು ಸಂಗ್ರಹಿಸುತ್ತವೆ. ಕಾಲಕ್ರಮೇಣ ಇವು ಹಲವು GB ಸ್ಟೋರೇಜ್ ಬಳಸುತ್ತವೆ. Settings ತೆರೆಯಿರಿ > Apps ಆಯ್ಕೆ ಮಾಡಿ > ಬೇಕಾದ App ತೆರೆಯಿರಿ > Storage ಮತ್ತು Cache ಮೇಲೆ ಕ್ಲಿಕ್ ಮಾಡಿ > Clear Cache ಆಯ್ಕೆ ಮಾಡಿ. ಇದರಿಂದ ಯಾವುದೇ ಫೋಟೋ ಅಥವಾ ವೈಯಕ್ತಿಕ ಮಾಹಿತಿ ಡಿಲೀಟ್‌ ಆಗುವುದಿಲ್ಲ.

– WhatsApp Storage ನಿರ್ವಹಿಸಿ

ಹೆಚ್ಚಿನ ಜನರ ಮೊಬೈಲ್‌ನಲ್ಲಿ ಹೆಚ್ಚು ಸ್ಟೋರೇಜ್ ಬಳಸುವುದು ವಾಟ್ಸಾಪ್‌ ಆಗಿರುತ್ತದೆ. ವಾಟ್ಸಾಪ್‌ > ಸೆಟ್ಟಿಂಗ್ > ಸ್ಟೋರೇಜ್‌ ಮತ್ತು ಡೇಟಾ > ಮ್ಯಾನೇಜ್ ಸ್ಟೋರೇಜ್‌. ಇಲ್ಲಿ ದೊಡ್ಡ ವಿಡಿಯೋಗಳು ಹಾಗೂ ಅನಗತ್ಯ ಫೈಲ್‌ಗಳನ್ನು ಮಾತ್ರ ಡಿಲೀಟ್‌ ಮಾಡಬಹುದು.

– Downloads ಫೋಲ್ಡರ್ ಚೆಕ್‌ ಮಾಡಿ

ಬಹಳಷ್ಟು ಬಾರಿ PDF, APK, ZIP, ಡಾಕ್ಯುಮೆಂಟ್ ಹಾಗೂ ಇತರ ಫೈಲ್‌ಗಳು Downloads ಫೋಲ್ಡರ್‌ನಲ್ಲಿ ಸೇವ್ ಆಗಿರುತ್ತವೆ. ಅಗತ್ಯವಿಲ್ಲದ ಫೈಲ್‌ಗಳನ್ನು ಡಿಲೀಟ್‌ ಮಾಡಿದರೆ ಸಾಕಷ್ಟು ಸ್ಟೋರೇಜ್ ಖಾಲಿಯಾಗುತ್ತದೆ.

– ಬಳಸದೇ ಇರುವ ಆಪ್‌ಗಳನ್ನು ತೆಗೆದುಹಾಕಿ

ತಿಂಗಳುಗಟ್ಟಲೆ ಬಳಸದೇ ಇರುವ ಅನೇಕ Apps ಫೋನ್‌ನಲ್ಲಿ ಸೇವ್ ಆಗಿರುತ್ತವೆ. Settings > Apps ಕಳೆದ ಕೆಲವು ತಿಂಗಳಿಂದ ಬಳಸದ Apps ಅನ್ನು Uninstall ಮಾಡಿ.

– Duplicate Files ಡಿಲೀಟ್‌ ಮಾಡಿ

ಒಂದೇ ಫೋಟೋ ಅಥವಾ ವಿಡಿಯೋ ಹಲವಾರು ಬಾರಿ ಸೇವ್ ಆಗಿರುವ ಸಾಧ್ಯತೆ ಇರುತ್ತದೆ. Google Files App ಅಥವಾ Files by Google ನಲ್ಲಿ ಇರುವ ಡ್ಯುಬ್ಲಿಕೇಟ್ Cleaner ಬಳಸಿ ಒಂದೇ ಫೈಲ್‌ನ ಅನಗತ್ಯ ಪ್ರತಿಗಳನ್ನು ಅಳಿಸಬಹುದು.

– Lite Apps ಬಳಸಿ

ಫೇಸ್‌ಬುಕ್‌ ಲೈಟ್‌, ಮೆಸೆಂಜರ್ ಲೈಟ್ ಅಥವಾ ಇತರ Lite Apps ಕಡಿಮೆ ಸ್ಟೋರೇಜ್ ಬಳಸುತ್ತವೆ. ಹಳೆಯ ಅಥವಾ ಕಡಿಮೆ ಸ್ಟೋರೇಜ್ ಇರುವ ಫೋನ್‌ಗಳಿಗೆ ಇದು ಉತ್ತಮ ಆಯ್ಕೆಯಾಗಿದೆ.

ಕೊನೆಯ ಮಾತು

ಮೊಬೈಲ್ ಸ್ಟೋರೇಜ್ ತುಂಬಿದಾಗ ಮೊದಲ ಪರಿಹಾರ ಫೋಟೋಗಳನ್ನು ಡಿಲೀಟ್‌ ಮಾಡುವುದಲ್ಲ. Cache ಕ್ಲಿಯರ್ ಮಾಡುವುದು, ಅನಗತ್ಯ ಫೈಲ್‌ಗಳನ್ನು ತೆಗೆದುಹಾಕುವುದು, Google Photos ಬ್ಯಾಕಪ್ ಬಳಸುವುದು ಹಾಗೂ Files by Google ನಂತಹ ಉಪಯುಕ್ತ ಸಾಧನಗಳನ್ನು ಬಳಸುವುದರಿಂದ ನಿಮ್ಮ ಅಮೂಲ್ಯ ಫೋಟೋಗಳನ್ನು ಉಳಿಸಿಕೊಂಡೇ ಹಲವು GB ಸ್ಟೋರೇಜ್ ಖಾಲಿ ಮಾಡಬಹುದು.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :