ನಿಮ್ಮ Telegram ಚಾಟ್‌ಗಳನ್ನು ಬ್ಯಾಕ್‌ಅಪ್ ಮಾಡಬೇಕೆ? ಈ ಕ್ರಮ ಅನುಸರಿಸಿ
ಇತ್ತೀಚಿನ ದಿನಗಳಲ್ಲಿ Telegram ವಿಶ್ವದ ಅತ್ಯಂತ ಜನಪ್ರಿಯ ಮೆಸೇಜಿಂಗ್ ಆಪ್‌ಗಳಲ್ಲಿ ಒಂದಾಗಿದೆ. ವೈಯಕ್ತಿಕ ಚಾಟ್‌ಗಳು, ಗ್ರೂಪ್ ಕಮ್ಯೂನಿಕೇಷನ್, ಫೋಟೋಗಳು, ವಿಡಿಯೋಗಳು ಮತ್ತು ಪ್ರಮುಖ ದಾಖಲೆಗಳನ್ನು ಅನೇಕರು ಟೆಲಿಗ್ರಾಮ್‌ನಲ್ಲಿ ಸಂಗ್ರಹಿಸಿಟ್ಟಿರುತ್ತಾರೆ. ಕೆಲವೊಮ್ಮೆ ಬ್ಯಾಕ್‌ಅಪ್ ಉದ್ದೇಶಕ್ಕಾಗಿ ಅಥವಾ ಹಳೆಯ ಚಾಟ್‌ಗಳನ್ನು ಸುರಕ್ಷಿತವಾಗಿ ಸೇವ್ ಮಾಡಲು ಟೆಲಿಗ್ರಾಮ್ ಡೇಟಾ ಮತ್ತು ಚಾಟ್ ಹಿಸ್ಟರ್ ಡೌನ್‌ಲೋಡ್ ಮಾಡುವ ಅಗತ್ಯ ಉಂಟಾಗಬಹುದು. ಸಾಮಾನ್ಯವಾಗಿ ವಾಟ್ಸಾಪ್ ನಲ್ಲಿ ಚಾಟ್ ಎಕ್ಸ್‌ಪೋರ್ಟ್ ಆಯ್ಕೆಯಿರುವಂತೆ, ಟೆಲಿಗ್ರಾಮ್‌ನಲ್ಲಿ ಕೂಡ ಬಳಕೆದಾರರಿಗೆ ತಮ್ಮ ಸಂಪೂರ್ಣ ಡೇಟಾವನ್ನು ಡೌನ್‌ಲೋಡ್ ಮಾಡಿಕೊಳ್ಳುವ ಅವಕಾಶ ನೀಡುತ್ತದೆ. ಆದರೆ ಈ ಸೌಲಭ್ಯ ಮುಖ್ಯವಾಗಿ ಟೆಲಿಗ್ರಾಮ್ ಡೆಸ್ಕ್‌ಟಾಪ್ ಆಪ್‌ನಲ್ಲಿ ಲಭ್ಯವಿರುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
SurveyAlso Read : 80W SuperVOOC ಚಾರ್ಜಿಂಗ್ ಇರುವ Oppo F33 5G ಫೋನ್ ಈಗ ಆಫರ್‌ನಲ್ಲಿ ಲಭ್ಯ!
Telegram Data ಡೌನ್‌ಲೋಡ್ ಮಾಡಲು ಹೀಗೆ ಮಾಡಿ
ಮೊದಲು ನಿಮ್ಮ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್‌ನಲ್ಲಿ ಟೆಲಿಗ್ರಾಮ್ ಡೆಸ್ಕ್‌ಟಾಪ್ ಆಪ್ ಅನ್ನು ಇನ್‌ಸ್ಟಾಲ್ ಮಾಡಿ. ಆ ಬಳಿಕ ನಿಮ್ಮ ಟೆಲಿಗ್ರಾಮ್ ಖಾತೆಗೆ ಲಾಗಿನ್ ಆಗಿ. ಆ ನಂತರ ಈ ಮುಂದಿನ ಹಂತಗಳನ್ನು ಫಾಲೋ ಮಾಡಿ.
ಹಂತ 1. ಟೆಲಿಗ್ರಾಮ್ ಡೆಸ್ಕ್‌ಟಾಪ್ ತೆರೆಯಿರಿ.
ಹಂತ 2. ಮೇಲ್ಭಾಗದಲ್ಲಿರುವ ಮೂರು ಗೆರೆಗಳ (Menu) ಮೇಲೆ ಕ್ಲಿಕ್ ಮಾಡಿ.
ಹಂತ 3. ಸೆಟ್ಟಿಂಗ್ ಆಯ್ಕೆಗೆ ಕ್ಲಿಕ್ ಮಾಡಿ.
ಹಂತ 4. ಆ ನಂತರ Advanced ಆಯ್ಕೆಯನ್ನು ತೆರೆಯಿರಿ.
ಹಂತ 5. ಕೆಳಭಾಗದಲ್ಲಿರುವ Export ಟೆಲಿಗ್ರಾಮ್ ಡೇಟಾ ಆಯ್ಕೆಯನ್ನು ಆಯ್ಕೆ ಮಾಡಿ.

ಯಾವ ರೀತಿಯ ಡೇಟಾವನ್ನು ಡೌನ್‌ಲೋಡ್ ಮಾಡಬೇಕು ಎಂಬುದನ್ನು ಆಯ್ಕೆ ಮಾಡಬಹುದು. ಉದಾಹರಣೆಗೆ –
– ವೈಯಕ್ತಿ ಚಾಟ್
– ಗ್ರೂಪ್ ಚಾಟ್
– ಚಾನೆಲ್
– ಫೋಟೋಗಳು
– ವೀಡಿಯೊಗಳು
– ವಾಯ್ಸ್ ಮೆಸೆಜ್
– ಸ್ಟಿಕ್ಕರ್‌ಗಳು
– ಕಾಂಟ್ಯಾಕ್ಟ್ಸ್
ಅಗತ್ಯವಿರುವ ಆಯ್ಕೆಗಳನ್ನು ಗುರುತಿಸಿದ ಬಳಿಕ Export ಬಟನ್ ಕ್ಲಿಕ್ ಮಾಡಿದರೆ ಡೇಟಾ ಡೌನ್‌ಲೋಡ್ ಪ್ರಕ್ರಿಯೆ ಆರಂಭವಾಗುತ್ತದೆ.
ಡೌನ್‌ಲೋಡ್ ಆದ ಫೈಲ್‌ಗಳ ವೀಕ್ಷಣೆ ಹೇಗೆ?
ಡೇಟಾ ಎಕ್ಸ್‌ಪೋರ್ಟ್ ಪೂರ್ಣಗೊಂಡ ಬಳಿಕ ಟೆಲಿಗ್ರಾಮ್ ನಿಮ್ಮ ಕಂಪ್ಯೂಟರ್‌ನಲ್ಲಿ ಒಂದು ಫೋಲ್ಡರ್ ರಚಿಸುತ್ತದೆ. ಅಲ್ಲಿ HTML ಅಥವಾ JSON ಫಾರ್ಮ್ಯಾಟ್‌ನಲ್ಲಿ ಚಾಟ್‌ಗಳು ಹಾಗೂ ಮೀಡಿಯಾ ಫೈಲ್‌ಗಳು ಸಂಗ್ರಹವಾಗಿರುತ್ತವೆ. HTML ಫೈಲ್ ತೆರೆಯುವ ಮೂಲಕ ಹಳೆಯ ಕಮ್ಯೂನಿಕೇಷನ್ ಗಳನ್ನು ಸುಲಭವಾಗಿ ವೀಕ್ಷಿಸಬಹುದು.
ಟೆಲಿಗ್ರಾಮ್‌ನ ಈ ಆಯ್ಕೆ ಉಪಯುಕ್ತ
ಟೆಲಿಗ್ರಾಮ್ ಡೇಟಾ Export ಫೀಚರ್ ಪ್ರಮುಖ ಮಾಹಿತಿಯನ್ನು ಸುರಕ್ಷಿತವಾಗಿ ಬ್ಯಾಕಪ್ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಫೋನ್ ಬದಲಾಯಿಸುವಾಗ, ಖಾತೆ ಡಿಲೀಟ್ ಮಾಡುವ ಮೊದಲು ಅಥವಾ ಹಳೆಯ ದಾಖಲೆಗಳನ್ನು ಸಂಗ್ರಹಿಸಿಡಲು ಇದು ತುಂಬಾ ಉಪಯುಕ್ತವಾಗಿದೆ. ವಿಶೇಷವಾಗಿ ಕೆಲಸ, ಶಿಕ್ಷಣ ಅಥವಾ ವ್ಯವಹಾರ ಸಂಬಂಧಿತ ಮಾಹಿತಿಯನ್ನು ಟೆಲಿಗ್ರಾಮ್ ನಲ್ಲಿ ಇಟ್ಟುಕೊಳ್ಳುವವರಿಗೆ ಈ ಸೌಲಭ್ಯ ಹೆಚ್ಚು ಪ್ರಯೋಜನಕಾರಿಯಾಗಿದೆ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile
