Vivo T4x 5G vs POCO M7 Pro 5G feature, price comparison
ಪ್ರಸ್ತುತ Vivo T4x 5G vs POCO M7 Pro 5G ಪ್ರಸ್ತುತ ಭಾರತದಲ್ಲಿ ನಿಮಗಿಂದು ಲೇಟೆಸ್ಟ್ ಬಜೆಟ್ ಸ್ಮಾರ್ಟ್ಫೋನ್ ಸುಮಾರು 15,000 ರೂಗಳೊಳಗೆ ಹುಡುಕುತ್ತಿದ್ದರೆ ಈ Vivo T4x 5G vs POCO M7 Pro 5G ಸ್ಮಾರ್ಟ್‌ಫೋನ್‌ಗಳ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ವಿವರಿಸಲಾಗಿದೆ. ಸ್ಮಾರ್ಟ್ಫೋನ್ ನಿಮಗಾಗಿ ಅಥವಾ ಯಾರಿಗಾದರೂ ಗಿಫ್ಟ್ ನೀಡಲು ಈ ಬಜೆಟ್ ಬೆಲೆಗೆ ಹುಡುಕುತ್ತಿದ್ದರೆ ಈ ಸ್ಮಾರ್ಟ್ಫೋನ್ಗಳಲ್ಲಿ ಒಂದನ್ನು ನೀವು ಪರಿಶೀಲಿಸಬಹುದು. ಹಾಗಾದ್ರೆ Vivo T4x 5G vs POCO M7 Pro 5G ಸ್ಮಾರ್ಟ್ಫೋನ್ಗಳಲ್ಲಿ ಬೆಲೆ ಮತ್ತು ಫೀಚರ್ಗಳ ಆಧಾರ ಮೇಲೆ ಯಾವುದು ಬೆಸ್ಟ್ ನೀವೇ ನೋಡಿ.
ಈಗ ಈ ಮೇಲಿನ ಫೀಚರ್ ಮತ್ತು ಬೆಲೆಯ ಆಧಾರದ ಮೇರೆಗೆ ಯಾವುದು ಬೆಸ್ಟ್ ಅನ್ನುವುದನ್ನು ನೀವು ಕಾಣಬಹುದು. ಇದನ್ನೂ ನಿಮಗೆ ಅರ್ಥವಾಗುವ ರೀತಿಯಲ್ಲಿ ವಿವರಿಸುವುದಾದರೆ ಮೊದಲಿಗೆ ಈ ಸ್ಮಾರ್ಟ್ಫೋನ್ಗಳ ಡಿಸ್ಪ್ಲೇ ನೋಡಿ Vivo ಸ್ಮಾರ್ಟ್ಫೋನ್ ಸಾಧಾರಣ IPS ಡಿಸ್ಪ್ಲೇ ಹೊಂದಿದ್ದರೆ POCO ನಿಮಗೆ ಹೆಚ್ಚು ಕಲರ್ ಮತ್ತು ಉತ್ತಮ ಅನುಭವಕ್ಕೆ AMOLED ಡಿಸ್ಪ್ಲೇಯನ್ನು ನೀಡುತ್ತಿದೆ. ಇದರ ಕ್ರಮವಾಗಿ ಈ ಸ್ಮಾರ್ಟ್ಫೋನ್ ಕ್ಯಾಮೆರಾವನ್ನು ನೋಡುವುದಾದರೆ ಒಂದೇ ಮಾದರಿಯ ಸೆನ್ಸರ್ ನೀಡಿದ್ದು POCO ಫೋನಿಗೆ ಹೋಲಿಸಿದರೆ ಇಲ್ಲಿ ವಿವೋ ನಿಮಗೆ ಕೊಂಚ ಆಕರ್ಷಕ ಮತ್ತು ಉತ್ತಮ ಫೋಟೋ ಮತ್ತು ವಿಡಿಯೋಗಳನ್ನು ನೀಡುತ್ತದೆ.
ಇದನ್ನೂ ಓದಿ: ನಿಮ್ಮ ದಿನ ಬಳಕೆಗೆ ಸುಮಾರು 15,000 ರೂಗಳಿಗಿಂತ ಕಡಿಮೆ ಬೆಲೆಗೆ ಬರುವ ಜಬರ್ದಸ್ತ್ 5G Smartphones ಪಟ್ಟಿ ಇಲ್ಲಿದೆ
ಅಲ್ಲದೆ ನೀವು ಸೇಲ್ಫಿ ಪ್ರಿಯರಾಗಿದ್ದಾರೆ ನಿಮಗೆ POCO ಸ್ಮಾರ್ಟ್ಫೋನ್ ಒಳ್ಳೆ ಆಯ್ಕೆಯಾಗಿದೆ. ಯಾಕೆಂದರೆ ವಿವೋಗೆ ಹೋಲಿಸಿದರೆ ಪೊಕೋ 20MP ಸೇಲ್ಫಿ ಕ್ಯಾಮೆರಾ ಸೆನ್ಸರ್ ನೀಡಿ ಮುಂದೆ ನುಗ್ಗುತ್ತದೆ. ಅಲ್ಲದೆ ಈ ಸ್ಮಾರ್ಟ್ಫೋನ್ ಹಾರ್ಡ್ವೇರ್ ಬಗ್ಗೆ ನೋಡುವುದಾದರೆ ಎರಡು ಫೋನ್ ಮೀಡಿಯಾಟೆಕ್ ಚಿಪ್ ಹೊಂದಿದ್ದು ವಿವೋ ಪೊಕೋಕ್ಕಿಂತ ಕೊಂಚ ಉತ್ತಮ MediaTek Dimensity 7300 ಅನ್ನು ಅನ್ದ್ರೋಯಿಡ್ ಆಂಡ್ರಾಯ್ಡ್ 15 ಜೊತೆಯ ಚಿಪ್ ಅನ್ನು ವಿವೋ ಹೊಂದಿದೆ
ಇದರ ಕ್ರಮವಾಗಿ ವಿವೋ ಫೋನ್ ಬ್ಯಾಟರಿಯಲ್ಲೂ ಮುಂದೆ ಸಾಕುತ್ತದೆ ಯಾಕೆಂದರೆ ಪೊಕೋ ಸ್ಮಾರ್ಟ್ಫೋನ್ ಡೀಸೆಂಟ್ ಬ್ಯಾಟರಿಗೆ ಹೋಲಿಸಿದರೆ ವಿವೋ ಬರೋಬ್ಬರಿ 6500mAh ಬ್ಯಾಟರಿಯನ್ನು ಹೊಂದಿದೆ.ಅಲ್ಲದೆ 44w ಫಾಸ್ಟ್ ಚಾರ್ಜ್ ಜೊತೆಗೆ ಮುಂದೆ ನಿಲ್ಲುತ್ತದೆ. ಅಲ್ಲದೆ ಕೊನೆಯದಾಗಿ ಬೆಲೆಯನ್ನು ನೋಡುವುದಾದರೆ ಸುಮಾರು 1000 ರೂಗಳ ವ್ಯತ್ಯಾಸದೊಂದಿಗೆ ಬರುವ ಈ Vivo T4x 5G ಸ್ಮಾರ್ಟ್ಫೋನ್ ಹಾರ್ಡ್ವೇರ್ ಮತ್ತು ಬ್ಯಾಟರಿಯಲ್ಲಿ ಮುಂದಿದ್ದರೆ POCO M7 Pro 5G ಸೇಲ್ಫಿ ಕ್ಯಾಮೆರಾ ಮತ್ತು ಡಿಸ್ಪ್ಲೇಯೊಂದಿಗೆ ಇನ್ ಡಿಸ್ಪ್ಲೇ ಸೆನ್ಸರ್ ಜೊತೆಗೆ ಮುಂದಿದೆ ಅಷ್ಟೇ ವ್ಯತ್ಯಾಸ.