Vivo T4 5G vs Realme 14T 5G Comparison
Vivo T4 5G vs Realme 14T 5G: ಭಾರತದಲ್ಲಿ ಇಂದು ರಿಯಲ್ಮಿ ತನ್ನ ಇತ್ತೀಚಿನ ಬಜೆಟ್ ಸ್ಮಾರ್ಟ್‌ಫೋನ್ Realme 14T 5G ಅನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಇದಕ್ಕೆ ಸೈಡ್ ಹೊಡೆಯಲು ಈಗಾಗಲೇ ಮಾರುಕಟ್ಟೆಯಲ್ಲಿ ಇತ್ತೀಚಿಗೆ ಬಿಡುಗಡೆಯಾದ Vivo T4 5G ನೇರವಾಗಿ ಪ್ರತಿಸ್ಪರ್ಧಿಯಾಗಿ ನಿಲ್ಲುತ್ತದೆ. ಪ್ರಸ್ತುತ ನೀವೊಂದು ಹೊಸ 5G ಪವರ್ಫುಲ್ ಫೀಚರ್ ಲೋಡೆಡ್ ಸ್ಮಾರ್ಟ್ ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಈ ಎರಡೂ ನಿಮ್ಮ ಜನಪ್ರಿಯ ಆಯ್ಕೆಗಳಲ್ಲಿ ಒಂದಾಗಬಹುದು. Vivo T4 5G vs Realme 14T 5G ಇವುಗಳ ಬೆಲೆ, ಫೀಚರ್ ಮತ್ತು ವಿಶೇಷತೆಗಳ ಆಧಾರದ ಮೇಲೆ ಒಂದಕ್ಕೊಂದು ಹೋಲಿಸಿ ನೋಡಿ ಯಾವುದು ಬೆಸ್ಟ್ ಪರಿಗಣಿಸಬಹುದು.
Vivo T4 5G ಫೋನ್ 6.7 ಇಂಚಿನ ಪೂರ್ಣ HD AMOLED ಡಿಸ್ಪ್ಲೇಯನ್ನು ಹೊಂದಿದ್ದು 5,000 ನಿಟ್ಸ್ ಗರಿಷ್ಠ ಹೊಳಪನ್ನು ಹೊಂದಿದೆ. ಇದು ಬಾಳಿಕೆಗಾಗಿ ಮಿಲಿಟರಿ ದರ್ಜೆಯ MIL-STD-810H ಪ್ರಮಾಣೀಕರಣ ಮತ್ತು ನೀರು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP65 ವಾಟರ್ ಮತ್ತು ಡಸ್ಟ್ ಪ್ರತಿರೋಧದೊಂದಿಗೆ ಬರುತ್ತದೆ.
Realme 14T 5G ಸ್ಮಾರ್ಟ್‌ಫೋನ್ 6.67 ಇಂಚಿನ Full HD+ (180×2400 ಪಿಕ್ಸೆಲ್‌ಗಳು) AMOLED ಸ್ಕ್ರೀನ್ ಅನ್ನು ಹೊಂದಿದ್ದು 120Hz ರಿಫ್ರೆಶ್ ದರ ಹೊಂದಿದ್ದು ಹೆಚ್ಚುವರಿಯಾಗಿ 111 ಪ್ರತಿಶತ DCI-P3 ವೈಡ್ ಕಲರ್ ಗ್ಯಾಮಟ್ ಮತ್ತು ರಾತ್ರಿಯಲ್ಲಿ ಕಣ್ಣಿನ ಒತ್ತಡವನ್ನು ಕಡಿಮೆ ಮಾಡಲು TÜV ರೈನ್‌ಲ್ಯಾಂಡ್ ಪ್ರಮಾಣೀಕರಣವನ್ನು ಹೊಂದಿದೆ.
Vivo T4 5G ಸ್ಮಾರ್ಟ್ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದ್ದು 50MP ಪ್ರೈಮರಿ ಶೂಟರ್ ಮತ್ತು 2MP ಡೆಪ್ತ್ ಸೆನ್ಸರ್ ಜೊತೆಗೆ ಆರಾ ಲೈಟ್ ಬೆಂಬಲದೊಂದಿಗೆ ಬರುತ್ತದೆ. ಮುಂಭಾಗದಲ್ಲಿ ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ 32MP ಶೂಟರ್ ಇದೆ. ಈ ಫೋನ್ 90W ವೈರ್ಡ್ ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ ಬೃಹತ್ 7300mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ.
ಇದನ್ನೂ ಓದಿ: 32 ಇಂಚಿನ ಈ ಜಬರ್ದಸ್ತ್ Smart TV ಅಮೆಜಾನ್‌ನಲ್ಲಿ 15,000 ರೂಗಳಿಗಿಂತ ಕಡಿಮೆ ಬೆಲೆಗೆ ಸಿಕ್ಕಾಪಟ್ಟೆ ಮಾರಾಟವಾಗುತ್ತಿವೆ!
Realme 14T 5G ಫೋನಿನಲ್ಲಿ f/1.8 ಅಪರ್ಚರ್ ಹೊಂದಿರುವ 50MP ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಜೊತೆಗೆ f/2.4 ಅಪರ್ಚರ್ ಹೊಂದಿರುವ 2MP ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸರ್ ಹೊಂದಿದೆ. ಮುಂಭಾಗದಲ್ಲಿ f/2.4 ಅಪರ್ಚರ್ ಹೊಂದಿರುವ 16MP ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇದೆ. ಹ್ಯಾಂಡ್‌ಸೆಟ್ ಲೈವ್ ಫೋಟೋ ವೈಶಿಷ್ಟ್ಯ ಹಾಗೂ AI- ಬೆಂಬಲಿತ ಇಮೇಜಿಂಗ್ ಪರಿಕರಗಳನ್ನು ಬೆಂಬಲಿಸುತ್ತದೆ.
ಮೊದಲಿಗೆ Vivo T4 5G ಸ್ಮಾರ್ಟ್ಫೋನ್ ಹಾರ್ಡ್ವೇರ್ ಬಗ್ಗೆ ಮಾತಾನಡುವುದಾದರೆ ಇದರಲ್ಲಿ ನಿಮಗೆ Vivo T4 5G ಸ್ಮಾರ್ಟ್ಫೋನ್ Qualcomm Snapdragon 7s Gen 3 ಪ್ರೊಸೆಸರ್‌ನೊಂದಿಗೆ ಬರುತ್ತದೆ. Vivo T4 5G ಸ್ಮಾರ್ಟ್ಫೋನ್ ಆರಂಭಿಕ 8GB RAM ಆನ್‌ಬೋರ್ಡ್ ಮೆಮೊರಿ ಮತ್ತು 128GB ಸ್ಟೋರೇಜ್ ಸ್ಟೋರೇಜ್ ಜೊತೆಗೆ ಈ ಫೋನ್ ಆಂಡ್ರಾಯ್ಡ್ 15 ನಲ್ಲಿ ಕಾರ್ಯನಿರ್ವಹಿಸುತ್ತದೆ.
Vivo T4 5G ಸ್ಮಾರ್ಟ್ ಫೋನ್ ಬರೋಬ್ಬರಿ 90W ವೈರ್ಡ್ ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ ಬೃಹತ್ 7,300mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಇದರ ಕ್ರಮವಾಗಿ Realme 14T 5G ಸ್ಮಾರ್ಟ್ಫೋನ್ 65W ಫಾಸ್ಟ್ ಚಾರ್ಜ್ ಜೊತೆಗೆ 6000 mAH ಬ್ಯಾಟರಿಯನ್ನು ಸಪೋರ್ಟ್ ಮಾಡುತ್ತದೆ.
Vivo T4 5G ಸ್ಮಾರ್ಟ್ ಫೋನ್ ಆರಂಭಿಕ 8GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಬೆಲೆ ₹ 21,999 ರೂಗಳಾಗಿವೆ ಆದರೆ ಬ್ಯಾಂಕ್ ಆಫರ್ ಜೊತೆಗೆ 2000 ರೂಗಳ ಡಿಸ್ಕೌಂಟ್ ಪಡೆಯಬಹುದು. ಕ್ರಮವಾಗಿ 8GB RAM ಮತ್ತು 256GB ಸ್ಟೋರೇಜ್ ರೂಪಾಂತರದ ಬೆಲೆ ₹ 23,999 ಮತ್ತು ಕೊನೆಯದಾಗಿ ಇದರ 12GB RAM ಮತ್ತು 256GB ಸ್ಟೋರೇಜ್ ಮಾದರಿಯ ಬೆಲೆ ₹25,999 ರೂಗಳಾಗಿವೆ.
ಇದರ ಕ್ರಮವಾಗಿ Realme 14T 5G ಸ್ಮಾರ್ಟ್ಫೋನ್ ಆರಂಭಿಕ 8GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಬೆಲೆ ರೂ. 17,999 ಆಗಿದ್ದರೆ ಇದರ ಮತ್ತೊಂದು 8GB RAM ಮತ್ತು 256GB ಮಾದರಿಯ ಬೆಲೆ ರೂ. ₹21,999 ಲಭ್ಯವಿದೆ. ಆದರೆ ಬ್ಯಾಂಕ್ ಆಫರ್ ಜೊತೆಗೆ 1000 ರೂಗಳ ಡಿಸ್ಕೌಂಟ್ ಪಡೆಯಬಹುದು.