Vivo T4 5G vs Moto Edge 60 Fusion ಸ್ಮಾರ್ಟ್ ಫೋನ್‌ಗಳಲ್ಲಿ ‌ಯಾವುದು ಬೆಸ್ಟ್? ಬೆಲೆ ಮತ್ತು ಟಾಪ್ ಫೀಚರ್‌ಗಳೇನು ತಿಳಿಯಿರಿ

Updated on 22-Apr-2025
HIGHLIGHTS

Vivo T4 5G ಸ್ಮಾರ್ಟ್ ಫೋನ್ ಇಂದು ಅಧಿಕೃತವಾಗಿ ಬಿಡುಗಡೆಯಾಗಿದೆ.

Vivo T4 5G vs Moto Edge 60 Fusion ಸ್ಮಾರ್ಟ್ ಫೋನ್‌ಗಳೊಂದಿಗೆ ಹೋಲಿಸಿ.

Vivo T4 5G vs Moto Edge 60 Fusion ಫೋನ್‌ಗಳಲ್ಲಿ ‌ಯಾವುದು ಬೆಸ್ಟ್? ಬೆಲೆ ಮತ್ತು ಟಾಪ್ ಫೀಚರ್‌ಗಳೇನು?

Vivo T4 5G vs Moto Edge 60 Fusion: ಭಾರತದಲ್ಲಿ ಇಂದು ವಿವೋ ತನ್ನ ಇತ್ತೀಚಿನ ಬಜೆಟ್ ಸ್ಮಾರ್ಟ್‌ಫೋನ್ Vivo T4 5G ಅನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಇದಕ್ಕೆ ಸೈಡ್ ಹೊಡೆಯಲು ಈಗಾಗಲೇ ಮಾರುಕಟ್ಟೆಯಲ್ಲಿ ಇತ್ತೀಚಿಗೆ ಬಿಡುಗಡೆಯಾದ Moto Edge 60 Fusion ನೇರವಾಗಿ ಪ್ರತಿಸ್ಪರ್ಧಿಯಾಗಿ ನಿಲ್ಲುತ್ತದೆ. ನೀವೊಂದು ಹೊಸ 5G ಪವರ್ಫುಲ್ ಫೀಚರ್ ಲೋಡೆಡ್ ಸ್ಮಾರ್ಟ್ ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಈ ಎರಡೂ ನಿಮ್ಮ ಜನಪ್ರಿಯ ಆಯ್ಕೆಗಳಲ್ಲಿ ಒಂದನ್ನು ಇವುಗಳ ಬೆಲೆ, ಫೀಚರ್ ಮತ್ತು ವಿಶೇಷತೆಗಳ ಆಧಾರದ ಮೇಲೆ ಒಂದಕ್ಕೊಂದು ಹೋಲಿಸಿ ನೋಡಿ ಪರಿಗಣಿಸಬಹುದು.

Vivo T4 5G vs Moto Edge 60 Fusion ಡಿಸ್ಪ್ಲೇ ಮಾಹಿತಿ:

Vivo T4 5G ಫೋನ್ 6.7 ಇಂಚಿನ ಪೂರ್ಣ HD AMOLED ಡಿಸ್ಪ್ಲೇಯನ್ನು ಹೊಂದಿದ್ದು 5,000 ನಿಟ್ಸ್ ಗರಿಷ್ಠ ಹೊಳಪನ್ನು ಹೊಂದಿದೆ. ಇದು ಬಾಳಿಕೆಗಾಗಿ ಮಿಲಿಟರಿ ದರ್ಜೆಯ MIL-STD-810H ಪ್ರಮಾಣೀಕರಣ ಮತ್ತು ನೀರು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP65 ವಾಟರ್ ಮತ್ತು ಡಸ್ಟ್ ಪ್ರತಿರೋಧದೊಂದಿಗೆ ಬರುತ್ತದೆ.

Vivo T4 5G vs Moto Edge 60 Fusion

Moto Edge 60 Fusion ಫೋನ್ 1.5K (1220 x 2712 ಪಿಕ್ಸೆಲ್‌ಗಳು) ರೆಸಲ್ಯೂಶನ್‌ನೊಂದಿಗೆ 6.7 ಇಂಚಿನ ಆಲ್-ಕರ್ವ್ಡ್ pOLED ಡಿಸ್ಪ್ಲೇಯನ್ನು ಹೊಂದಿದೆ. ಪ್ಯಾನೆಲ್ 120Hz ರಿಫ್ರೆಶ್ ದರ, 300Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 4,500 ನಿಟ್ಸ್ ಗರಿಷ್ಠ ಹೊಳಪನ್ನು ಬೆಂಬಲಿಸುತ್ತದೆ. ಹೆಚ್ಚುವರಿಯಾಗಿ ಇದು HDR10+ ಬೆಂಬಲವನ್ನು ನೀಡುತ್ತದೆ.

Vivo T4 5G vs Moto Edge 60 Fusion ಕ್ಯಾಮೆರಾ ವಿವರಗಳು:

Vivo T4 5G ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದ್ದು 50MP ಪ್ರೈಮರಿ ಶೂಟರ್ ಮತ್ತು 2MP ಡೆಪ್ತ್ ಸೆನ್ಸರ್ ಜೊತೆಗೆ ಆರಾ ಲೈಟ್ ಬೆಂಬಲದೊಂದಿಗೆ ಬರುತ್ತದೆ. ಮುಂಭಾಗದಲ್ಲಿ ಸೆಲ್ಫಿಗಳು ಮತ್ತು ವಿಡಿಯೋ ಕರೆಗಳಿಗಾಗಿ 32MP ಶೂಟರ್ ಇದೆ. ಈ ಫೋನ್ 90W ವೈರ್ಡ್ ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ ಬೃಹತ್ 7300mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ.

ಇದನ್ನೂ ಓದಿ: Best Budget Air Cooler: ಬೇಸಿಗೆಯ ಬೆವರನ್ನು ತಂಪಾಗಿಸುತ್ತೆ ಈ ಕೈಗೆಟಕುವ 40 ಲೀಟರ್‌ನ ಜಬರ್ದಸ್ತ್ ಏರ್ ಕೂಲರ್!

Moto Edge 60 Fusion ಸ್ಮಾರ್ಟ್‌ಫೋನ್‌ನಲ್ಲಿ 50MP ಸೋನಿ LYT700C ಪ್ರೈಮರಿ ಸೆನ್ಸರ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಮತ್ತು f/1.8 ಅಪರ್ಚರ್ ಹೊಂದಿದೆ. ಇದರೊಂದಿಗೆ f/2.2 ಅಪರ್ಚರ್ ಹೊಂದಿರುವ 13MP ಅಲ್ಟ್ರಾವೈಡ್ ಕ್ಯಾಮೆರಾ ಇದೆ. ಮುಂಭಾಗದಲ್ಲಿ ಬಳಕೆದಾರರು 4K ವೀಡಿಯೊವನ್ನು ರೆಕಾರ್ಡ್ ಮಾಡುವ ಸಾಮರ್ಥ್ಯವಿರುವ 32MP ಸೆಲ್ಫಿ ಕ್ಯಾಮೆರಾವನ್ನು ಕಾಣಬಹುದು.

Vivo T4 5G vs Motorola Edge 60 Fusion ಹಾರ್ಡ್ವೇರ್ ಮಾಹಿತಿ:

ಮೊದಲಿಗೆ Vivo T4 5G ಸ್ಮಾರ್ಟ್ಫೋನ್ ಹಾರ್ಡ್ವೇರ್ ಬಗ್ಗೆ ಮಾತಾನಡುವುದಾದರೆ ಇದರಲ್ಲಿ ನಿಮಗೆ Vivo T4 5G ಸ್ಮಾರ್ಟ್ಫೋನ್‌ Qualcomm Snapdragon 7s Gen 3 ಪ್ರೊಸೆಸರ್‌ನೊಂದಿಗೆ ಬರುತ್ತದೆ. Vivo T4 5G ಸ್ಮಾರ್ಟ್ಫೋನ್ ಆರಂಭಿಕ 8GB RAM ಆನ್‌ಬೋರ್ಡ್ ಮೆಮೊರಿ ಮತ್ತು 128GB ಸ್ಟೋರೇಜ್ ಸ್ಟೋರೇಜ್ ಜೊತೆಗೆ ಈ ಫೋನ್ ಆಂಡ್ರಾಯ್ಡ್ 15 ನಲ್ಲಿ ಕಾರ್ಯನಿರ್ವಹಿಸುತ್ತದೆ.

Vivo T4 5G vs Motorola Edge 60 Fusion

Motorola Edge 60 Fusion ಸ್ಮಾರ್ಟ್ ಫೋನ್ MediaTek Dimensity 7300 ನಲ್ಲಿ ಕಾರ್ಯನಿರ್ವಹಿಸುತ್ತದೆ. ಆರಂಭಿಕ 12GB ವರೆಗಿನ LPDDR4X RAM ಮತ್ತು 256GB uMCP ಸಂಗ್ರಹಣೆಯೊಂದಿಗೆ ಜೋಡಿಸಲಾಗಿದೆ. ಹೆಚ್ಚುವರಿ ಸಂಗ್ರಹಣೆಯ ಅಗತ್ಯವಿರುವ ಬಳಕೆದಾರರಿಗೆ ಫೋನ್ 1TB ವರೆಗೆ ಮೈಕ್ರೊ SD ವಿಸ್ತರಣೆಯನ್ನು ಬೆಂಬಲಿಸುತ್ತದೆ. ಇದು ಆಂಡ್ರಾಯ್ಡ್ 15-ಆಧಾರಿತ ಹಲೋ UI ನಲ್ಲಿ ಕಾರ್ಯನಿರ್ವಹಿಸುತ್ತದೆ.

Vivo T4 5G vs Motorola Edge 60 Fusion ಬ್ಯಾಟರಿ ಮತ್ತು ಕನೆಕ್ಟಿವಿಟಿ:

Vivo T4 5G ಸ್ಮಾರ್ಟ್ ಫೋನ್ ಬರೋಬ್ಬರಿ 90W ವೈರ್ಡ್ ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ ಬೃಹತ್ 7,300mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಇದರ ಕ್ರಮವಾಗಿ Moto Edge 60 Fusion ಸ್ಮಾರ್ಟ್ಫೋನ್ 68W ಫಾಸ್ಟ್ ಚಾರ್ಜ್ ಜೊತೆಗೆ 5000 mAH ಬ್ಯಾಟರಿಯನ್ನು ಸಪೋರ್ಟ್ ಮಾಡುತ್ತದೆ.

Vivo T4 5G vs Motorola Edge 60 Fusion ಬೆಲೆ ಮತ್ತು ಲಭ್ಯತೆ:

Vivo T4 5G ಸ್ಮಾರ್ಟ್ ಫೋನ್ ಆರಂಭಿಕ 8GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಬೆಲೆ ₹ 21,999 ರೂಗಳಾಗಿವೆ ಆದರೆ ಬ್ಯಾಂಕ್ ಆಫರ್ ಜೊತೆಗೆ 2000 ರೂಗಳ ಡಿಸ್ಕೌಂಟ್ ಪಡೆಯಬಹುದು. ಕ್ರಮವಾಗಿ 8GB RAM ಮತ್ತು 256GB ಸ್ಟೋರೇಜ್ ರೂಪಾಂತರದ ಬೆಲೆ ₹ 23,999 ಮತ್ತು ಕೊನೆಯದಾಗಿ ಇದರ 12GB RAM ಮತ್ತು 256GB ಸ್ಟೋರೇಜ್ ಮಾದರಿಯ ಬೆಲೆ ₹ 25,999 ರೂಗಳಾಗಿವೆ. ಇದರ ಕ್ರಮವಾಗಿ Moto Edge 60 Fusion ಸ್ಮಾರ್ಟ್ಫೋನ್ ಆರಂಭಿಕ 8GB RAM ಮತ್ತು 256GB ಸ್ಟೋರೇಜ್ ರೂಪಾಂತರದ ಬೆಲೆ ರೂ. 22,999 ಆಗಿದ್ದರೆ ಇದರ ಮತ್ತೊಂದು 12GB RAM ಮತ್ತು 256GB ಮಾದರಿಯ ಬೆಲೆ ರೂ. 24,999 ಲಭ್ಯವಿದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :