iQOO Z7 5G vs Realme Narzo 50 Pro 5G ಟಾಪ್ 5 ಫೀಚರ್‌ ಹೋಲಿಕೆ! ಯಾವುದು ಬೆಸ್ಟ್ ನೀವೇ ಹೇಳಿ!

Updated on 03-May-2023
HIGHLIGHTS

iQOO Z7 5G vs Realme Narzo 50 Pro 5G: ಫೋನ್‌ಗಳ ಟಾಪ್ 5 ಫೀಚರ್‌ ಹೋಲಿಕೆ!

ಈ ಎರಡು ಫೋನ್ ಗಳ ಟಾಪ್ 5 ಫೀಚರ್‌ಗಳೇನು ಇವುಗಳಲ್ಲಿ ಯಾವುದು ಬೆಸ್ಟ್ ಬೆಸ್ಟ್ ನೀವೇ ಹೇಳಿ!

iQOO Z7 5G vs Realme Narzo 50 Pro 5G:ಸ್ಮಾರ್ಟ್‌ಫೋನ್‌ಗಳು ವಿಶಿಷ್ಟ ಫೀಚರ್‌ಗಳೊಂದಿಗೆ ಬರುತ್ತವೆ.

iQOO Z7 5G vs Realme Narzo 50 Pro 5G: ಪ್ರತಿ ವರ್ಷ ಸ್ಮಾರ್ಟ್‌ಫೋನ್ ಮಾರುಕಟ್ಟೆ ಬದಲಾಗುತ್ತೆಲೆಯಿರುತ್ತದೆ. ಅತ್ಯಾಧುನಿಕ ಸಾಮರ್ಥ್ಯಗಳೊಂದಿಗೆ ಹೊಸ ಮಾದರಿಯ ಪೋನ್‌ಗಳನ್ನು ಪರಿಚಯಿಸಲಾಗುತ್ತದೆ. ಅಂತಹ ಎರಡು ಇತ್ತೀಚಿನ ಮಾದರಿಗಳೆಂದರೆ iQOO Z7 5G ಮತ್ತು Realme Narzo 50 Pro 5G ಎರಡೂ ಭಾರತದಲ್ಲಿ ಒಂದೇ ರೀತಿಯ ಬೆಲೆಯನ್ನು ಹೊಂದಿವೆ. ಈ ಎರಡೂ ಸ್ಮಾರ್ಟ್‌ಫೋನ್‌ಗಳು ವಿಶಿಷ್ಟ ಫೀಚರ್‌ಗಳೊಂದಿಗೆ ಬರುತ್ತವೆ ಮತ್ತು ಯಾವುದನ್ನು ಆಯ್ಕೆ ಮಾಡಬೇಕೆಂದು ನಿರ್ಧರಿಸಲು ಕಷ್ಟಕರವಾಗಿರುತ್ತದೆ. ಇಂದು ನಾವು ಇವುಗಳನ್ನು ಹೋಲಿಸುತ್ತಿದ್ದೇವೆ. ಈ ಎರಡು ಫೋನ್ ಗಳ ಟಾಪ್ 5 ಫೀಚರ್‌ಗಳೇನು ಇವುಗಳಲ್ಲಿ ಯಾವುದು ಬೆಸ್ಟ್ ನೋಡೋಣ.

iQOO Z7 5G vs Realme Narzo 50 Pro 5G ಡಿಸ್ಪ್ಲೇ

 iQoo Z7 5G ಸ್ಮಾರ್ಟ್ಫೋನ್ 6.38 ಇಂಚಿನ ಫುಲ್ HD+  AMOLED ಡಿಸ್ಪ್ಲೇಯನ್ನು ಹೊಂದಿದೆ. ಈ ಡಿಸ್ಪ್ಲೇ 1080 x 2400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಜೊತೆಗೆ 90Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿದೆ. ಅಲ್ಲದೆ ಈ ಫೋನ್ 413 PPI ಡೆನ್ಸಿಟಿ ಅನ್ನು ಹೊಂದಿದೆ. Realme Narzo 50 Pro 5G ಫೋನ್ 90Hz ರಿಫ್ರೆಶ್ ದರ 360Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 1,000 nits ಗರಿಷ್ಠ ಬ್ರೈಟ್ನೆಸ್ನೊಂದಿಗೆ 6.4 ಇಂಚಿನ ಸೂಪರ್ AMOLED ಡಿಸ್ಪ್ಲೇಯನ್ನು ಹೊಂದಿದೆ.

iQOO Z7 5G vs Realme Narzo 50 Pro 5G ಕ್ಯಾಮೆರಾ

 iQoo Z7 5G ಸ್ಮಾರ್ಟ್ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟ್ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಸೆನ್ಸಾರ್ ಅನ್ನು ಪಡೆದಿದೆ. ಇದಲ್ಲದೆ 16MP ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಈ ಫೋನ್ ಒಳಗೊಂಡಿದೆ. Realme Narzo 50 Pro 5G 48MP ಪ್ರೈಮರಿ ಶೂಟರ್ ಅನ್ನು 8MP ಅಲ್ಟ್ರಾ-ವೈಡ್ ಮತ್ತು 2MP ಮ್ಯಾಕ್ರೋ ಸೆನ್ಸರ್ ನಿಂದ ಬೆಂಬಲಿಸುತ್ತದೆ. ಇದರ ಮುಂಭಾಗದಲ್ಲಿ ಫೋನ್ 16MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

iQOO Z7 5G vs Realme Narzo 50 Pro 5G: ಪ್ರೊಸೆಸರ್

 iQoo Z7 5G ಸ್ಮಾರ್ಟ್ಫೋನ್ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 920 ಪ್ರೊಸೆಸರ್ ಅನ್ನು ಹೊಂದಿದೆ. ಇದು 8GB ವರೆಗೆ ಮೆಮೊರಿ ಮತ್ತು 128GB ಇಂಟರ್ನಲ್ ಸ್ಟೋರೇಜ್ ಜೊತೆಗೆ ಆಂಡ್ರಾಯ್ಡ್ 13 ಆಧರಿಸಿದ FunTouchOS 13 ಸ್ಕಿನ್ ಅನ್ನು ಹೊಂದಿದೆ. Realme 50 Pro 5G ಮೀಡಿಯಾ ಟೆಕ್ ಡೈಮೆನ್ಸಿಟಿ 920 5G ಪ್ರೊಸೆಸರ್ ಮತ್ತು ಆರ್ಮ್ ಮಾಲಿ-G68 GPU ನಿಂದ ನಡೆಸಲ್ಪಡುತ್ತದೆ. ಇದು 8GB RAM RAM ಮತ್ತು 128GB ಸ್ಟೋರೇಜ್ ಸ್ಪೇಸ್ ನೊಂದಿಗೆ ಸಂಯೋಜಿಸಲ್ಪಟ್ಟಿದೆ. ಈ ಫೋನ್ ಆಂಡ್ರಾಯ್ಡ್ 12 ಆಧಾರಿತ Realme UI 3.0 ಅನ್ನು ರನ್ ಮಾಡುತ್ತದೆ.  

iQOO Z7 5G vs Realme Narzo 50 Pro 5G: ಬ್ಯಾಟರಿ

iQOO Z7 5G ಸ್ಮಾರ್ಟ್ಫೋನ್ 4500mAh ಬ್ಯಾಟರಿಗೆ ಅನ್ನು ಹೊಂದಿದೆ. ಇದು ಸಹ USB ಟೈಪ್-C ಕನೆಕ್ಟರ್‌ನಲ್ಲಿ 44W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. Realme Narzo 50 Pro 5G 33W ಡಾರ್ಟ್ ಚಾರ್ಜ್ ತಂತ್ರಜ್ಞಾನದೊಂದಿಗೆ 5000mAh ಬ್ಯಾಟರಿಯಿಂದ ಚಾಲಿತವಾಗಿದೆ. ಈ ಬ್ಯಾಟರಿಯನ್ನು ಕೇವಲ 31 ನಿಮಿಷಗಳಲ್ಲಿ 50% ಪ್ರತಿಶತ ಮತ್ತು ಕೇವಲ 70% ನಿಮಿಷಗಳಲ್ಲಿ 100% ಪ್ರತಿಶತದವರೆಗೆ ಚಾರ್ಜ್ ಮಾಡಬಹುದು ಎಂದು Realme ಹೇಳುತ್ತದೆ.

iQOO Z7 5G vs Realme Narzo 50 Pro 5G: ಬೆಲೆ

iQoo Z7 5G ನಾರ್ವೆ ಬ್ಲೂ ಮತ್ತು ಪೆಸಿಫಿಕ್ ನೈಟ್ ಕಲರ್‌ಗಳ ಆಯ್ಕೆಯಲ್ಲಿ ರೂ 18,999 ರ ಬೆಲೆಯಲ್ಲಿ ಆನ್ಲೈನ್ ಪ್ಲಾಟ್ ಫಾರ್ಮ್ ನಲ್ಲಿ ಲಭ್ಯವಿದೆ. Realme Narzo 50 Pro 5G ಹೈಪರ್  ಬ್ಲೂ  ಮತ್ತು ಹೈಪರ್  ಬ್ಲಾಕ್  ಕಲರ್‌ಗಳ ಆಯ್ಕೆಯಲ್ಲಿ 17,999 ರ ಬೆಲೆಯಲ್ಲಿ ಆನ್ಲೈನ್ ಪ್ಲಾಟ್ ಫಾರ್ಮ್ ನಲ್ಲಿ ಲಭ್ಯವಿದೆ.

Disclaimer: Digit, like all other media houses, gives you links to online stores which contain embedded affiliate information, which allows us to get a tiny percentage of your purchase back from the online store. We urge all our readers to use our Buy button links to make their purchases as a way of supporting our work. If you are a user who already does this, thank you for supporting and keeping unbiased technology journalism alive in India.
Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :