iQOO Z10 Lite vs Realme Narzo 80 Lite
ಭಾರತದ ಸ್ಪರ್ಧಾತ್ಮಕ ಬಜೆಟ್ 5G ಸ್ಮಾರ್ಟ್‌ಫೋನ್ ವಿಭಾಗವು ಇತ್ತೀಚೆಗೆ iQOO Z10 Lite ಮತ್ತು Realme Narzo 80 Lite ಬಿಡುಗಡೆಯೊಂದಿಗೆ ಮತ್ತಷ್ಟು ಬಿಸಿಯಾಗಿದೆ. ಈ ಎರಡೂ 5G ಸ್ಮಾರ್ಟ್‌ಫೋನ್ ಸುಮಾರು 10,000 ರೂಗಳೊಳಗೆ ಲಭ್ಯವಿದೆ. ಈ ಕೈಗೆಟುಕುವ ಬೆಲೆಯಲ್ಲಿ ವಿಶ್ವಾಸಾರ್ಹ 5G ಸಂಪರ್ಕ ಮತ್ತು ಉತ್ತಮ ಕಾರ್ಯಕ್ಷಮತೆಯನ್ನು ನೀಡುವ ಮೂಲಕ ಗ್ರಾಹಕರ ಗಮನ ಸೆಳೆಯುತ್ತಿವೆ. ನಿಮ್ಮ ಬಜೆಟ್‌ಗೆ ಸರಿಹೊಂದುವ ಫೋನ್ ಯಾವುದು ಎಂಬುದನ್ನು ತಿಳಿಯಲು iQOO Z10 Lite vs Realme Narzo 80 Lite ನಡುವಿನ ಈ ನೇರ ಹೋಲಿಕೆಯನ್ನು ಈ ಕೆಳಗೆ ನೋಡಬಹುದು.
ಮೊದಲಿಗೆ iQOO Z10 Lite 5G ಆರಂಭಿಕ ಬೆಲೆ ₹9,499 (ಬ್ಯಾಂಕ್ ಆಫರ್‌ಗಳೊಂದಿಗೆ) 4GB+128GB ಮಾದರಿಗೆ. ಇದು ಮೀಡಿಯಾಟೆಕ್ ಡೈಮೆನ್ಸಿಟಿ 6300 5G ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಅದೇ ರೀತಿ Realme Narzo 80 Lite 5G ಸಹ ₹9,999 ರಿಂದ (ಆಫರ್‌ಗಳೊಂದಿಗೆ) ಪ್ರಾರಂಭವಾಗುತ್ತದೆ ಮತ್ತು ಇದರಲ್ಲಿಯೂ Dimensity 6300 ಪ್ರೊಸೆಸರ್ ಅಳವಡಿಸಲಾಗಿದೆ. ಕಾರ್ಯಕ್ಷಮತೆಯ ವಿಷಯದಲ್ಲಿ ಎರಡೂ ಫೋನ್‌ಗಳು ಸಮಾನವಾಗಿದ್ದು ದೈನಂದಿನ ಕಾರ್ಯಗಳು ಮತ್ತು ಸಾಮಾನ್ಯ ಗೇಮಿಂಗ್ ಉತ್ತಮ ಅನುಭವ ನೀಡುತ್ತವೆ.
ಎರಡೂ ಸ್ಮಾರ್ಟ್‌ಫೋನ್‌ಗಳು HD+ ಡಿಸ್ಪ್ಲೇಯನ್ನು 90Hz ಮತ್ತು 120Hz ರಿಫ್ರೆಶ್ ರೇಟ್‌ನೊಂದಿಗೆ ಹೊಂದಿವೆ. iQOO Z10 Lite 5G ಸ್ಮಾರ್ಟ್ಫೋನ್ 6.74 ಇಂಚಿನ LCD ಡಿಸ್ಪ್ಲೇಯನ್ನು 1000 ನಿಟ್ಸ್ ಪೀಕ್ ಬ್ರೈಟ್‌ನೆಸ್‌ನೊಂದಿಗೆ ಹೊಂದಿದೆ. Realme Narzo 80 Lite 5G ಸ್ಮಾರ್ಟ್ಫೋನ್ 6.67 ಇಂಚಿನ HD+ IPS LCD ಯನ್ನು ಹೊಂದಿದೆ. ಕ್ಯಾಮೆರಾಗಾಗಿ Realme Narzo 80 Lite ಸ್ಮಾರ್ಟ್ಫೋನ್ 50MP ಪ್ರೈಮರಿ ಕ್ಯಾಮೆರಾ ಮತ್ತು 5MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದ್ದರೆ Realme Narzo 80 Lite 32MP ಪ್ರೈಮರಿ ರಿಯರ್ ಕ್ಯಾಮೆರಾ ಮತ್ತು 8MP ಮುಂಭಾಗದ ಕ್ಯಾಮೆರಾವನ್ನು ನೀಡುತ್ತದೆ.
Also Read: BSNL Q-5G: ಬಿಎಸ್ಎನ್ಎಲ್ ತನ್ನ 5G ಸೇವೆಗೆ ಅಧಿಕೃತವಾಗಿ ಹೊಸ ನಾಮಕರಣವನ್ನು ಘೋಷಿಸಿದೆ!
ಬ್ಯಾಟರಿ ಬಾಳಿಕೆಯು ಎರಡೂ ಫೋನ್‌ಗಳ ಪ್ರಮುಖ ಪ್ಲಸ್ ಪಾಯಿಂಟ್ ಆಗಿದೆ ಎರಡೂ 6000mAh ಬ್ಯಾಟರಿಯನ್ನು ಹೊಂದಿದ್ದು ದಿನವಿಡೀ ಬಾಳಿಕೆ ಬರುತ್ತವೆ. iQOO Z10 Lite 5G ಸ್ಮಾರ್ಟ್ಫೋನ್ ಮತ್ತು Realme Narzo 80 Lite ಎರಡೂ 15W ಫಾಸ್ಟ್ ಚಾರ್ಜಿಂಗ್ ಬೆಂಬಲಿಸುತ್ತವೆ. ಎರಡೂ ಫೋನ್‌ಗಳು IP64 ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧವನ್ನು ಹೊಂದಿದ್ದು Realme Narzo 80 Lite ಹೆಚ್ಚುವರಿಯಾಗಿ MIL-STD-810H ಮಿಲಿಟರಿ-ಗ್ರೇಡ್ ಬಾಳಿಕೆ ಪ್ರಮಾಣೀಕರಣವನ್ನು ಹೊಂದಿದೆ. ಆಂಡ್ರಾಯ್ಡ್ 15 ಆಧಾರಿತ Funtouch OS 15 (iQOO) ಮತ್ತು Realme UI 6.0 (Narzo) ನೊಂದಿಗೆ ಎರಡರಲ್ಲೂ ಬಳಕೆದಾರ ಸ್ನೇಹಿ ಅನುಭವ ದೊರೆಯುತ್ತದೆ.