Google Pixel 11 vs iPhone 17: ಈ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳಲ್ಲಿ ಖರೀದಿಗೆ ಯಾವುದು ಉತ್ತಮ?
ಪಿಕ್ಸೆಲ್ 11 vs ಐಫೋನ್ 17 ಸ್ಮಾರ್ಟ್‌ಫೋನ್‌ಗಳಲ್ಲಿ ಯಾವುದು ಬೆಸ್ಟ್
ಪಿಕ್ಸೆಲ್ 11 ಮೊಬೈಲ್ Tensor G6 ಚಿಪ್‌ಸೆಟ್ ಪ್ರೊಸೆಸರ್ ಒಳಗೊಂಡಿದೆ
ಐಫೋನ್ 17 ಫೋನ್ ಆಪಲ್‌ನ A19 Bionic ಚಿಪ್ ಪವರ್‌ನಲ್ಲಿ ಕೆಲಸ ಮಾಡುತ್ತದೆ
Google Pixel 11 vs iPhone 17: ಜನಪ್ರಿಯ ಗೂಗಲ್ ಕಂಪನಿಯು ಮಾರುಕಟ್ಟೆಗೆ ಹೊಸದಾಗಿ Google Pixel 11 ಮೊಬೈಲ್ ಬಿಡುಗಡೆ ಮಾಡಿದ್ದು, ಈ ಫೋನ್ ಗ್ರಾಹಕರ ಗಮನ ಸೆಳೆಯುತ್ತಿದೆ. ಹಾಗೆಯೇ ಆಪಲ್ ಕಂಪನಿಯ ಇತ್ತೀಚಿನ iPhone 17 ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಈ ಎರಡು ಸ್ಮಾರ್ಟ್‌ಫೋನ್‌ಗಳು ಆಕರ್ಷಕ ಫೀಚರ್ಸ್ ಒಳಗೊಂಡಿದ್ದು, ಉತ್ತಮ ಕಾರ್ಯವೈಖರಿ ಮತ್ತು ಅತ್ಯುತ್ತಮ ಡಿಸೈನ್ ಮೂಲಕ ಹೆಚ್ಚಿನ ಗಮನ ಸೆಳೆಯುತ್ತಿವೆ. ಅದಾಗ್ಯೂ, ಈ ಎರಡು ಸ್ಮಾರ್ಟ್‌ಫೋನ್‌ಗಳ ನಡುವೆ ಕೆಲವು ಭಿನ್ನತೆಗಳು ಇವೆ. ಹಾಗಾದರೆ ಗೂಗಲ್ ಪಿಕ್ಸಲ್ 11 VS ಐಫೋನ್ 17 ಇವೆರಡು ಮೊಬೈಲ್‌ಗಳಲ್ಲಿ ಖರೀದಿಗೆ ಯಾವ ಫೋನ್ ಉತ್ತಮ? ಇವುಗಳ ಫೀಚರ್ಸ್ ಹೇಗಿವೆ ಮುಂದೆ ತಿಳಿಯೋಣ.
SurveyAlso Read : ಅಗ್ಗದ ಬೆಲೆಯಲ್ಲಿ ಲಭ್ಯವಿರುವ Jio ಟೆಲಿಕಾಂನ ಬೊಂಬಾಟ್ ರೀಚಾರ್ಜ್ ಪ್ಲಾನ್‌ಗಳ ಲಿಸ್ಟ್ ಇಲ್ಲಿದೆ
Google Pixel 11 vs iPhone 17: ಡಿಸ್‌ಪ್ಲೇ ಭಿನ್ನತೆ
ಈ ಎರಡು ಫೋನ್‌ಗಳ ಡಿಸ್‌ಪ್ಲೇ ವಿಷಯಕ್ಕೆ ಬಂದರೆ ಗೂಗಲ್ ಪಿಕ್ಸಲ್ 11 ಮತ್ತು ಐಫೋನ್ 17 ಎರಡೂ 6.3 ಇಂಚಿನ ಸ್ಕ್ರೀನ್ ಹೊಂದಿವೆ. ಆದರೆ ರೆಸಲ್ಯೂಶನ್ ಮತ್ತು ಡಿಸ್‌ಪ್ಲೇ ತಂತ್ರಜ್ಞಾನದಲ್ಲಿ ಕೆಲವು ವ್ಯತ್ಯಾಸಗಳಿವೆ. ಪಿಕ್ಸೆಲ್ 11 ನಲ್ಲಿ 6.3 ಇಂಚಿನ Actua OLED ಡಿಸ್ಪ್ಲೇ ಇದ್ದು, ಇದು 1080 x 2424 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿದೆ. ಹಾಗೆಯೇ ಐಫೋನ್ 17 ನಲ್ಲಿ 6.3 ಇಂಚಿನ Super Retina XDR OLED ಡಿಸ್‌ಪ್ಲೇ ನೀಡಲಾಗಿದ್ದು, 460ppi ಜೊತೆಗೆ 2622 x 1206 ಪಿಕ್ಸೆಲ್‌ಗಳ ರೆಸಲ್ಯೂಶನ್ ಹೊಂದಿದೆ. ಎರಡೂ ಫೋನ್‌ಗಳು 120Hz ರಿಫ್ರೆಶ್ ದರವನ್ನು ಬೆಂಬಲಿಸುವುದರಿಂದ ಸ್ಕ್ರೋಲಿಂಗ್, ದಿನನಿತ್ಯದ ಬಳಕೆಯಲ್ಲಿ ಎರಡೂ ಉತ್ತಮ ಅನುಭವಲ್ಲವು.

ಪಿಕ್ಸೆಲ್ 11 vs ಐಫೋನ್ 17: ಪ್ರೊಸೆಸರ್ ಪವರ್
ಕಾರ್ಯಕ್ಷಮತೆಯ ವಿಚಾರದಲ್ಲಿ ಗೂಗಲ್ ತನ್ನ ಹೊಸ Tensor G6 ಚಿಪ್‌ಸೆಟ್ ಅನ್ನು ಪಿಕ್ಸೆಲ್ 11 ಫೋನಿನಲ್ಲಿ ಬಳಸಿದೆ. ಇದಕ್ಕೆ 12GB RAM ಸಪೋರ್ಟ್ ನೀಡಲಾಗಿದೆ. ಮತ್ತೊಂದೆಡೆ ಐಫೋನ್ 17 ಫೋನಿನಲ್ಲಿ ಆಪಲ್‌ನ ಹೊಸ A19 Bionic ಚಿಪ್ ಜೊತೆಗೆ 8GB RAM ನೀಡಲಾಗಿದೆ. RAM ಪ್ರಮಾಣವನ್ನು ಮಾತ್ರ ನೋಡಿದರೆ ಪಿಕ್ಸಲ್ 11 ಗೆ ಮುನ್ನಡೆ ಇದೆ. ಹೆಚ್ಚಿನ RAM ಇರುವುದರಿಂದ ಒಂದೇ ಸಮಯದಲ್ಲಿ ಹಲವು ಅಪ್ಲಿಕೇಶನ್‌ಗಳನ್ನು ಹಿನ್ನೆಲೆಯಲ್ಲಿ ತೆರೆದಿಟ್ಟುಕೊಂಡು ಕೆಲಸ ಮಾಡಲು ಇದು ನೆರವಾಗಬಹುದು. ಆಪಲ್ ತನ್ನ ಚಿಪ್‌ಗಳ ಕಾರ್ಯಕ್ಷಮತೆ ಮತ್ತು ಪವರ್ ಎಫಿಷಿಯನ್ಸಿಗೆ ಹೆಚ್ಚಿನ ಒತ್ತು ನೀಡುತ್ತದೆ. ಹೀಗಾಗಿ ಭಾರೀ ಗೇಮಿಂಗ್, ವೀಡಿಯೊ ಎಡಿಟಿಂಗ್ ಅಥವಾ ಇತರ ಹೆಚ್ಚು ಸಂಪನ್ಮೂಲ ಬೇಕಾಗುವ ಕೆಲಸಗಳಲ್ಲಿ ಐಫೋನ್ 17 ಹೆಚ್ಚು ವೇಗದ ಅನುಭವ ನೀಡಬಹುದು.
ಪಿಕ್ಸೆಲ್ 11 vs ಐಫೋನ್ 17: ಕ್ಯಾಮೆರಾ ಸೆನ್ಸಾರ್
ಕ್ಯಾಮೆರಾ ವಿಭಾಗದಲ್ಲೂ ಎರಡೂ ಫೋನ್‌ಗಳು ತಮ್ಮದೇ ಆದ ವಿಶೇಷತೆಗಳನ್ನು ಹೊಂದಿವೆ. ಪಿಕ್ಸೆಲ್ 11 ನಲ್ಲಿ 48MP ಇಂಚಿನ ಪ್ರೈಮರಿ ಕ್ಯಾಮೆರಾ, 13MP ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು OIS ಬೆಂಬಲದ 10.8MP 3x ಟೆಲಿಫೋಟೋ ಕ್ಯಾಮೆರಾ ಇದೆ. ಸೆಲ್ಫಿ ಮತ್ತು ವೀಡಿಯೊ ಕರೆಗಳಿಗಾಗಿ ಮುಂಭಾಗದಲ್ಲಿ 10.5MP ಕ್ಯಾಮೆರಾ ನೀಡಲಾಗಿದೆ. ಐಫೋನ್ 17 ಫೋನಿನಲ್ಲಿ 48MP ಮುಖ್ಯ Fusion ಕ್ಯಾಮೆರಾ ಜೊತೆಗೆ 12MP ಅಲ್ಟ್ರಾ-ವೈಡ್ ಕ್ಯಾಮೆರಾ ಇದೆ. ಮುಂಭಾಗದಲ್ಲಿ ಆಪಲ್ 18MP ಸೆಲ್ಫಿ ಕ್ಯಾಮೆರಾವನ್ನು ನೀಡಿದೆ. ಹೀಗಾಗಿ ಕ್ಯಾಮೆರಾ ಆಯ್ಕೆಯಲ್ಲಿ ಕೇವಲ ಮೆಗಾಪಿಕ್ಸೆಲ್‌ಗಳನ್ನು ನೋಡುವುದಕ್ಕಿಂತ, ಫೋಟೋ ಪ್ರೊಸೆಸಿಂಗ್, ವೀಡಿಯೊ ಗುಣಮಟ್ಟ, ನೈಟ್ ಫೋಟೋಗ್ರಫಿ ಮತ್ತು AI ಆಧಾರಿತ ಕ್ಯಾಮೆರಾ ಆಯ್ಕೆಗಳನ್ನು ಪರಿಗಣಿಸುವುದು ಮುಖ್ಯ.
ಪಿಕ್ಸೆಲ್ 11 vs ಐಫೋನ್ 17: ಬ್ಯಾಟರಿ ಬ್ಯಾಕ್‌ಅಪ್
ಬ್ಯಾಟರಿ ಸಾಮರ್ಥ್ಯವನ್ನು ಗಮನಿಸಿದರೆ ಪಿಕ್ಸಲ್ 11 ಸ್ಪಷ್ಟ ಮುನ್ನಡೆ ಹೊಂದಿದೆ. ಇದು 4,985mAh ಬ್ಯಾಟರಿಯನ್ನು ಹೊಂದಿದ್ದರೆ, ಐಫೋನ್ 17 ನಲ್ಲಿ 3,692mAh ಬ್ಯಾಟರಿ ಇದೆ ಎಂದು ತಿಳಿಸಲಾಗಿದೆ. ಪಿಕ್ಸಲ್ 11ನಲ್ಲಿ ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್ ಸೌಲಭ್ಯವಿದ್ದು, ವೈರ್‌ಲೆಸ್ ಇಯರ್‌ಬಡ್ಸ್‌ನಂತಹ ಇತರ ಸಾಧನಗಳನ್ನು ಚಾರ್ಜ್ ಮಾಡಲು ಇದು ಉಪಯುಕ್ತವಾಗಬಹುದು. ಗೇಮಿಂಗ್ ಸಂದರ್ಭದಲ್ಲಿ ಫೋನ್‌ನ ಬ್ಯಾಟರಿ ಮೂಲಕ ನೇರವಾಗಿ ಪವರ್ ನೀಡುವ ಬೈಪಾಸ್ ಚಾರ್ಜಿಂಗ್ ಮೋಡ್ ಕೂಡ ಗಮನ ಸೆಳೆಯುತ್ತದೆ.
ಚಾರ್ಜಿಂಗ್ ವಿಚಾರದಲ್ಲಿ ಪಿಕ್ಸಲ್ 11 30W ವೈರ್ಡ್ ಚಾರ್ಜಿಂಗ್ ಮತ್ತು 25W Qi2 ವೈರ್‌ಲೆಸ್ ಚಾರ್ಜಿಂಗ್ ಬೆಂಬಲಿಸುತ್ತದೆ. ಐಫೋನ್ 17 ಸುಮಾರು 40W ವೈರ್ಡ್ ಚಾರ್ಜಿಂಗ್ ಬೆಂಬಲಿಸುವುದರಿಂದ ವೇಗದ ವೈರ್ಡ್ ಚಾರ್ಜಿಂಗ್‌ನಲ್ಲಿ ಆಪಲ್ ಮುನ್ನಡೆ ಸಾಧಿಸುತ್ತದೆ. MagSafe ಮೂಲಕ 25W ವೈರ್‌ಲೆಸ್ ಚಾರ್ಜಿಂಗ್ ಬೆಂಬಲವೂ ಇದೆ.
ಕೊನೆಯ ಮಾತು
ಗೂಗಲ್ ಪಿಕ್ಸೆಲ್ 11 vs ಐಫೋನ್ 17 ನಡುವೆ ಯಾವುದು ಉತ್ತಮ ಎಂಬುದು ಬಳಕೆದಾರರ ಅಗತ್ಯವನ್ನು ಅವಲಂಬಿಸಿರುತ್ತದೆ. ಗೂಗಲ್ ಪಿಕ್ಸೆಲ್ 11 ಫೋನಿನಲ್ಲಿ ಕ್ಲೀನ್ ಆಂಡ್ರಾಯ್ಡ್ ಅನುಭವ, ಗೂಗಲ್‌ನ AI ವೈಶಿಷ್ಟ್ಯಗಳು, ಹೆಚ್ಚಿನ RAM ಮತ್ತು ದೊಡ್ಡ ಬ್ಯಾಟರಿ ಪ್ರಮುಖ ಆಕರ್ಷಣೆಗಳಾಗಿವೆ. AI ವೈಶಿಷ್ಟ್ಯಗಳು, ಕಸ್ಟಮೈಸೇಶನ್ ಮತ್ತು ಉತ್ಪಾದಕತೆಯ ಮೇಲೆ ಹೆಚ್ಚು ಗಮನ ನೀಡುವವರಿಗೆ ಪಿಕ್ಸಲ್ 11 ಉತ್ತಮ ಆಯ್ಕೆಯಾಗಬಹುದು.
ಇನ್ನೊಂದಡೆ ಐಫೋನ್ 17 ತನ್ನ A19 Bionic ಚಿಪ್‌ನ ಕಾರ್ಯಕ್ಷಮತೆ, iOS ಪರಿಸರ ವ್ಯವಸ್ಥೆ ಮತ್ತು ವೇಗದ ಚಾರ್ಜಿಂಗ್‌ನಿಂದ ಗಮನ ಸೆಳೆಯುತ್ತದೆ. ಭಾರೀ ಗೇಮಿಂಗ್, ವೀಡಿಯೊ ಎಡಿಟಿಂಗ್ ಮತ್ತು ಹೆಚ್ಚಿನ ಕಾರ್ಯಕ್ಷಮತೆ ಅಗತ್ಯವಿರುವ ಬಳಕೆದಾರರಿಗೆ ಐಫೋನ್ 17 ಹೆಚ್ಚು ಸೂಕ್ತವಾಗಬಹುದು.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile
