Raksha Bandhan 2026: ಸಹೋದರಿಗೆ ಸರ್ಪ್ರೈಸ್ ನೀಡಲು ಬೆಸ್ಟ್ ಟೆಕ್ ಗಿಫ್ಟ್‌ ಐಡಿಯಾಗಳು

Raksha Bandhan 2026: ಸಹೋದರಿಗೆ ಸರ್ಪ್ರೈಸ್ ನೀಡಲು ಬೆಸ್ಟ್ ಟೆಕ್ ಗಿಫ್ಟ್‌ ಐಡಿಯಾಗಳು

Raksha Bandhan 2026: ರಕ್ಷಾ ಬಂಧನ ಎಂದರೆ ಕೇವಲ ಕೈಗೆ ರಾಖಿ ಕಟ್ಟುವ ಹಬ್ಬವಲ್ಲ. ಅದು ಸಹೋದರ–ಸಹೋದರಿಯ ನಡುವಿನ ಪ್ರೀತಿ, ಕಾಳಜಿ ಮತ್ತು ಆತ್ಮೀಯತೆಯನ್ನು ಮತ್ತೊಮ್ಮೆ ನೆನಪಿಸುವ ವಿಶೇಷ ದಿನ. ಈ ದಿನದಂದು ಸಹೋದರಿಗೆ ಅಥವಾ ಸಹೋದರನಿಗೆ ಗಿಫ್ಟ್ ನೀಡುವುದು ಸಂಪ್ರದಾಯದ ಭಾಗವಾಗಿದ್ದರೂ, ಉಡುಗೊರೆಯ ಬೆಲೆಗಿಂತ ಅದನ್ನು ಆಯ್ಕೆ ಮಾಡುವ ಹಿಂದಿನ ಭಾವನೆ ಹೆಚ್ಚು ಮುಖ್ಯ. ಈ ಬಾರಿ ಎಂದಿನ ಚಾಕೊಲೇಟ್, ಪರ್ಫ್ಯೂಮ್ ಅಥವಾ ಸಾಮಾನ್ಯ ಗಿಫ್ಟ್‌ಗಳಿಗೆ ಬದಲಾಗಿ ಅವರಿಗೆ ಉಪಯುಕ್ತ ಟೆಕ್‌ ಅಥವಾ ಗ್ಯಾಡ್ಜೆಟ್ಸ್‌ ಉಡುಗೊರೆ ನೀಡಬಹುದು. 2026 ರ ರಕ್ಷಾ ಬಂಧನ ಆಗಸ್ಟ್ 28 ರಂದು ನಡೆಯಲಿದ್ದು, ಈ ಸಂದರ್ಭದಲ್ಲಿ ನೀವು ಗ್ಯಾಡ್ಜೆಟ್ಸ್‌ ಉಡುಗೊರೆಗಳಿಗೆ ಹೆಚ್ಚಿನ ಆದ್ಯತೆ ನೀಡಬಹುದು. ಹಾಗಾದರೆ ಯಾವೆಲ್ಲಾ ಗ್ಯಾಡ್ಜೆಟ್ಸ್‌ ಉಡುಗೊರೆಯಾಗಿ ನೀಡಬಹುದು ಎನ್ನುವ ಬಗ್ಗೆ ಈ ಲೇಖನದಲ್ಲಿ ತಿಳಿಯೋಣ.

Digit.in Survey
✅ Thank you for completing the survey!

Also Read : ಸೆಪ್ಟೆಂಬರ್ 9 ರಂದು ಆಪಲ್ Surprise ಆಂಡ್‌ Shine ಈವೆಂಟ್: ಐಫೋನ್ 18 ಪ್ರೊ, ಫೋಲ್ಡಬಲ್ ಐಫೋನ್ ನಿರೀಕ್ಷೆ

Raksha Bandhan Gift: ಸ್ಮಾರ್ಟ್‌ವಾಚ್

ಟೆಕ್ ಪ್ರಿಯ ಸಹೋದರ ಅಥವಾ ಸಹೋದರಿಗೆ ಸ್ಮಾರ್ಟ್‌ವಾಚ್ ಉತ್ತಮ ಆಯ್ಕೆಯಾಗಬಹುದು. ಫಿಟ್‌ನೆಸ್ ಟ್ರ್ಯಾಕಿಂಗ್, ನೋಟಿಫಿಕೇಷನ್‌ಗಳು ಮತ್ತು ದಿನನಿತ್ಯದ ಬಳಕೆಗೆ ಇದು ಉಪಯುಕ್ತವಾಗುತ್ತದೆ. ಅಮೆಜಾನ್‌ ಅಥವಾ ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ತಾಣದಲ್ಲಿ ಆಕರ್ಷಕ ಹಾಗೂ ಭಿನ್ನ ಪ್ರೈಸ್‌ಟ್ಯಾಗ್‌ನ ವಾಚ್‌ಗಳು ಲಭ್ಯ.

Raksha Bandhan 2026 Best Tech Gifts to Surprise Your Sister
ai image

TWS ಇಯರ್‌ಬಡ್ಸ್

ರಕ್ಷಾ ಬಂಧನದ ಪ್ರಯುಕ್ತ ನೀವು ಉಡುಗೊರೆ ನೀಡಲು ಬಯಸಿದರೆ, ಇಯರ್‌ಬಡ್ಸ್‌ ಸಹ ಉತ್ತಮ ಆಯ್ಕೆ ಎನ್ನಬಹುದು. ಈ ಡಿವೈಸ್‌ ಅನ್ನು ಮ್ಯೂಸಿಕ್, ಕರೆಗಳು ಮತ್ತು ಪ್ರಯಾಣಕ್ಕೆ ಉತ್ತಮ ಆಯ್ಕೆ. ಕಾಂಪ್ಯಾಕ್ಟ್ ವಿನ್ಯಾಸದಿಂದ ಎಲ್ಲೆಡೆ ಸುಲಭವಾಗಿ ಬಳಸಬಹುದು.

ಸ್ಮಾರ್ಟ್ ಟ್ರ್ಯಾಕರ್

ಸ್ಮಾರ್ಟ್ ಟ್ರ್ಯಾಕರ್ ಡಿವೈಸ್‌ ಕೀ, ಬ್ಯಾಗ್ ಅಥವಾ ಇತರ ವಸ್ತುಗಳನ್ನು ಟ್ರ್ಯಾಕ್ ಮಾಡಲು ಸಹಾಯ ಮಾಡುತ್ತದೆ. ಮುಖ್ಯ ವಸ್ತುಗಳು ಎಲ್ಲಿವೆ ಎಂಬುದನ್ನು ಸುಲಭವಾಗಿ ಪತ್ತೆಹಚ್ಚಬಹುದು. ಈ ಡಿವೈಸ್‌ ಅನ್ನು ಸಹ ಗಿಫ್ಟ್‌ ನೀಡಬಹುದು.

ಪವರ್ ಬ್ಯಾಂಕ್

ಹೆಚ್ಚು ಪ್ರಯಾಣಿಸುವವರಿಗೆ ಅತ್ಯಂತ ಪವರ್ ಬ್ಯಾಂಕ್ ಉಪಯುಕ್ತ ಗಿಫ್ಟ್ ಎನಿಸುತ್ತದೆ. ಫೋನ್ ಬ್ಯಾಟರಿ ಖಾಲಿಯಾದಾಗ ತಕ್ಷಣ ಚಾರ್ಜ್ ಮಾಡಲು ಸಹಾಯ ಮಾಡುತ್ತದೆ. ರಕ್ಷಾ ಬಂಧನದ ಪ್ರಯುಕ್ತ ಪವರ್ ಬ್ಯಾಂಕ್ ಸಹ ನೀಡಬಹುದು.

ಮೊಬೈಲ್ ಗಿಂಬಲ್

ರಕ್ಷಾ ಬಂಧನದ ಪ್ರಯುಕ್ತ ಮೊಬೈಲ್ ಗಿಂಬಲ್ ಸಹ ಉಡುಗೊರೆಯಾಗಿ ನೀಡಬಹುದು. ಫೋಟೋ ಮತ್ತು ವಿಡಿಯೋ ಕ್ರಿಯೇಟರ್‌ಗಳಿಗೆ ಇದು ಉತ್ತಮ ಗಿಫ್ಟ್. ಮೊಬೈಲ್ ಮೂಲಕ ಸ್ಥಿರ ಹಾಗೂ ಉತ್ತಮ ಗುಣಮಟ್ಟದ ವಿಡಿಯೋ ರೆಕಾರ್ಡಿಂಗ್‌ಗೆ ಇದು ಸಹಾಯ ಮಾಡುತ್ತದೆ.

ಪೋರ್ಟಬಲ್ SSD ಅಥವಾ USB ಡ್ರೈವ್

ಫೋಟೋ, ವಿಡಿಯೋ ಮತ್ತು ಪ್ರಮುಖ ಫೈಲ್‌ಗಳನ್ನು ಸಂಗ್ರಹಿಸಲು ಉಪಯುಕ್ತ. ಹೆಚ್ಚುವರಿ ಸ್ಟೋರೇಜ್ ಅಗತ್ಯವಿರುವವರಿಗೆ ಇದು ಪ್ರಾಕ್ಟಿಕಲ್ ಗಿಫ್ಟ್.

ಇತರೆ ಗ್ಯಾಡ್ಜೆಟ್ಸ್‌ ಗಿಫ್ಟ್‌ ಐಡಿಯಾ

ಸ್ಮಾರ್ಟ್‌ಫೋನ್‌, ಬ್ಲೂಟೂತ್ ಸ್ಪೀಕರ್, ಫಾಸ್ಟ್ ಚಾರ್ಜರ್, ವೈರ್‌ಲೆಸ್ ಕೀಬೋರ್ಡ್ ಮತ್ತು ಮೌಸ್, ಮೊಬೈಲ್ ಆಕ್ಸೆಸರಿ ಕಿಟ್, ಫೋನ್ ಕವರ್, ಟೆಂಪರ್ಡ್ ಗ್ಲಾಸ್, ಕೇಬಲ್ ಮತ್ತು ಕಾರ್ ಚಾರ್ಜರ್ ಒಳಗೊಂಡ ಕಿಟ್ ನೀಡಬಹುದು.

Manthesh B

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile