OnePlus Nord 6 ಮತ್ತು OnePlus Nord 5: ಪ್ರಮುಖ ವ್ಯತ್ಯಾಸಗಳೇನು? ಯಾವುದು ಬೆಸ್ಟ್‌?

ಮಾರುಕಟ್ಟೆಯಲ್ಲಿ ಒನ್‌ಪ್ಲಸ್‌ ಕಂಪನಿಯ ಫೋನ್‌ಗಳಿಗೆ ಡಿಮ್ಯಾಂಡ್‌ ಇದೆ. ಸಂಸ್ಥೆಯು ಇತ್ತೀಚಿಗಷ್ಟೆ ಹೊಸದಾಗಿ OnePlus Nord 6 ಮೊಬೈಲ್‌ ಬಿಡುಗಡೆ ಮಾಡಿದ್ದು, ಸಖತ್ ಟ್ರೆಂಡ್‌ನಲ್ಲಿ ಕಾಣಿಸಿಕೊಂಡಿದೆ. ಹಾಗೆಯೇ ಒನ್‌ಪ್ಲಸ್‌ ಕಂಪನಿಯ OnePlus Nord 5 ಮೊಬೈಲ್‌ ಕೂಡಾ ಮಾರುಕಟ್ಟೆಯಲ್ಲಿ ಇನ್ನು ಜನಪ್ರಿಯತೆ ಉಳಿಸಿಕೊಂಡಿದೆ. ಈ ಎರಡು ಮೀಡ್‌ರೇಂಜ್‌ ಸ್ಮಾರ್ಟ್‌ಫೋನ್‌ಗಳು ಫ್ಲ್ಯಾಗ್‌ಶಿಪ್‌ ನಂತಹ ಫೀಚರ್ಸ್‌ ಒಳಗೊಂಡಿದ್ದು, ಉತ್ತಮ performance ಮತ್ತು premium design ಹೊಂದಿವೆ. ಅದಾಗ್ಯೂ, ಈ ಫೋನ್‌ಗಳ ನಡುವೆ ಕೆಲವು ಭಿನ್ನತೆಗಳು ಇವೆ. ಹಾಗಾದರೆ ಒನ್‌ಪ್ಲಸ್‌ ನಾರ್ಡ್‌ 6 vs ಒನ್‌ಪ್ಲಸ್‌ ನಾರ್ಡ್‌ 5 ಇವೆರಡರಲ್ಲಿ ಖರೀದಿಗೆ ಯಾವ ಫೋನ್‌ ಬೆಸ್ಟ್‌? ಫೀಚರ್ಸ್‌ ಹೇಗಿವೆ ಮುಂದೆ ತಿಳಿಯೋಣ.

Also Read : Samsung Galaxy S26 Ultra ಮತ್ತು Xiaomi 17 Ultra: ಖರೀದಿಗೆ ಯಾವುದು ಬೆಸ್ಟ್‌?

ಡಿಸ್‌ಪ್ಲೇ ಮತ್ತು ಡಿಸೈನ್‌ ಮಾಹಿತಿ

OnePlus Nord 6 ಮತ್ತು OnePlus Nord 5 ಫೋನ್‌ಗಳು ಡಿಸ್‌ಪ್ಲೇ ನೋಡುವುದಾರೆ ಒನ್‌ಪ್ಲಸ್‌ ನಾರ್ಡ್‌ 6 ಫೋನ್‌ 6.7 ಇಂಚಿನ AMOLED ಡಿಸ್‌ಪ್ಲೇ ಪಡೆದಿದೆ. ಹಾಗೆಯೇ 165 Hz ರಿಫ್ರೆಶ್ ರೇಟ್‌ ಜೊತೆಗೆ 1272 x 2772 ಪಿಕ್ಸಲ್‌ ರೆಸಲ್ಯೂಶನ್‌ ಹೊಂದಿದೆ. ಅದೇ ರೀತಿ ಒನ್‌ಪ್ಲಸ್‌ ನಾರ್ಡ್‌ 5 ಫೋನ್ 6.83 ಇಂಚಿನ ಸ್ವಿಫ್ಟ್ AMOLED ಡಿಸ್‌ಪ್ಲೇ ಹೊಂದಿದೆ. 144 Hz ರಿಫ್ರೆಶ್ ರೇಟ್‌ ಜೊತೆಗೆ 1272 x 2800 ಪಿಕ್ಸಲ್‌ ರೆಸಲ್ಯೂಶನ್‌ ಒಳಗೊಂಡಿದೆ.

ಪ್ರೊಸೆಸರ್‌ ಪವರ್‌ ಹೇಗಿದೆ

ಒನ್‌ಪ್ಲಸ್‌ ನಾರ್ಡ್‌ 6 ಮೊಬೈಲ್‌ ಸ್ನಾಪ್‌ಡ್ರಾಗನ್ 8s ಜನ್ 4 ಚಿಪ್‌ಸೆಟ್‌ ಪ್ರೊಸೆಸರ್‌ ಸಾಮರ್ಥ್ಯ ಹೊಂದಿದೆ. ಇನ್ನು ಒನ್‌ಪ್ಲಸ್‌ ನಾರ್ಡ್‌ 5 ಸ್ನಾಪ್‌ಡ್ರಾಗನ್ 8s ಜನ್ 3 ಚಿಪ್‌ಸೆಟ್‌ ಪ್ರೊಸೆಸರ್‌ ಪವರ್‌ನಲ್ಲಿ ಕೆಲಸ ಮಾಡುತ್ತದೆ. ಇನ್ನು ಸ್ಟೋರೇಜ್‌ ಹಾಗೂ ವೇರಿಯಂಟ್‌ ಆಯ್ಕೆಗಳಲ್ಲಿ ಈ ಎರಡು ಫೋನ್‌ಗಳು ಬಹುತೇಕ ಸಾಮ್ಯತೆ ಪಡೆದುಕೊಂಡಿವೆ.

ಕ್ಯಾಮೆರಾ ಸೆನ್ಸಾರ್‌ ಯಾವುದು

ಒನ್‌ಪ್ಲಸ್‌ ನಾರ್ಡ್‌ 6 ಮೊಬೈಲ್‌ ಹಿಂಭಾಗದಲ್ಲಿ 50MP + 8MP ಕ್ಯಾಮೆರಾ ಸೆನ್ಸಾರ್‌ ರಚನೆ ಪಡೆದಿದೆ. ಹಾಗೆಯೇ ಮುಂಭಾಗದಲ್ಲಿ 32MP ಸೆನ್ಸಾರ್‌ ಕ್ಯಾಮೆರಾ ಪಡೆದುಕೊಂಡಿದೆ. ಇನ್ನು ಒನ್‌ಪ್ಲಸ್‌ ನಾರ್ಡ್‌ 5 ಫೋನ್‌ ಹಿಂಬದಿಯಲ್ಲಿ 50MP + 8MP ಕ್ಯಾಮೆರಾ ಸೆನ್ಸಾರ್‌ ಸೆಟ್‌ಅಪ್‌ ಒಳಗೊಂಡಿದೆ. ಹಾಗೆಯೇ ಮುಂಭಾಗದಲ್ಲಿ 50MP ಸೆನ್ಸಾರ್‌ ಕ್ಯಾಮೆರಾ ಹೊಂದಿದೆ.

ಬ್ಯಾಟರಿ ಬ್ಯಾಕ್‌ಅಪ್‌ ಮಾಹಿತಿ

ಒನ್‌ಪ್ಲಸ್‌ ನಾರ್ಡ್‌ 6 ಫೋನ್‌ 9,000mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದುಕೊಂಡಿದೆ. ಇದರೊಂದಿಗೆ 80W ವೈರ್ಡ್ ಚಾರ್ಜಿಂಗ್ ಜೊತೆಗೆ ರಿವರ್ಸ್‌ ಚಾರ್ಜಿಂಗ್ ಸಪೋರ್ಟ್‌ ಸಹ ಪಡೆದುಕೊಂಡಿದೆ. ಇನ್ನು ಒನ್‌ಪ್ಲಸ್‌ ನಾರ್ಡ್‌ 5 ಮೊಬೈಲ್‌ 6,800mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದುಕೊಂಡಿದೆ. ಇದರೊಂದಿಗೆ 80W ವೈರ್ಡ್ ಚಾರ್ಜಿಂಗ್ ಜೊತೆಗೆ ರಿವರ್ಸ್‌ ಚಾರ್ಜಿಂಗ್ ಸಪೋರ್ಟ್‌ ಸಹ ಒಳಗೊಂಡಿದೆ.

ಕೊನೆಯ ಮಾತು

ಒನ್‌ಪ್ಲಸ್‌ ನಾರ್ಡ್‌ 6 ಹಾಗೂ ಒನ್‌ಪ್ಲಸ್‌ ನಾರ್ಡ್‌ 5 ಈ ಎರಡು ಮೊಬೈಲ್‌ಗಳು ಆಕರ್ಷಕ ಫೀಚರ್ಸ್‌ ಮೂಲಕ ಗಮನ ಸೆಳೆಯುತ್ತವೆ. ಅದಾಗ್ಯೂ, ಒನ್‌ಪ್ಲಸ್‌ ನಾರ್ಡ್‌ 6 ಅಪ್‌ಗ್ರೆಡ್‌ ಪ್ರೊಸೆಸರ್‌, ಕ್ಯಾಮೆರಾ, ಬಿಗ್ ಬ್ಯಾಟರಿ ಬ್ಯಾಕ್‌ಅಪ್‌ ಹಾಗೂ ಕಂಪ್ಯಾಕ್ಟ್‌ ಡಿಸ್‌ಪ್ಲೇ ಮೂಲಕ ಹೆಚ್ಚಿನ ಆಕರ್ಷಣೆ ಮಾಡುತ್ತದೆ. ಹಾಗೆಯೇ ಒನ್‌ಪ್ಲಸ್‌ ನಾರ್ಡ್‌ 5 ಫೋನ್‌ ಸಹ ಉತ್ತಮ ಫೀಚರ್ಸ್‌ ಪಡೆದಿದೆ. ಇದರ ಬ್ಯಾಟರಿ ನಾರ್ಡ್‌ 6 ಗಿಂತ ಕಡಿಮೆ ಆಗಿದೆ. ಹೊಸದಾಗಿ ಫೋನ್‌ ಖರೀದಿಸುವ ಗ್ರಾಹಕರಿಗೆ ಹಿಂದಿನ ಮಾಡೆಲ್‌ಗಿಂತ ಅಪ್‌ಗ್ರೇಡ್‌ ಇರುವ ಒನ್‌ಪ್ಲಸ್‌ ನಾರ್ಡ್‌ 6 ಉತ್ತಮ ಆಯ್ಕೆ ಎನಿಸುತ್ತದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :