Exclusive: ಟೆಲಿಗ್ರಾಮ್‌ನಲ್ಲಿ ಭಾರತೀಯರ ವೈಯಕ್ತಿಕ ಡೇಟಾ ಕೇವಲ ₹99 ರೂಗಳಿಗೆ ಮಾರಾಟವಾಗುತ್ತಿದೆ!

Updated on 27-Jun-2025
HIGHLIGHTS

ಟೆಲಿಗ್ರಾಮ್‌ ಬೋಟ್ ಕೇವಲ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ವಂಚನೆಗೆ ಸಾಕಾಗುವಷ್ಟು ನಿಮ್ಮ ವೈಯಕ್ತಿಕ ಡೇಟಾ ನೀಡುತ್ತದೆ.

ಮಾರಾಟವಾಗುವ ಡೇಟಾದಲ್ಲಿ ಆಧಾರ್, ಪ್ಯಾನ್, ಮತದಾರರ ಗುರುತಿನ ಚೀಟಿ, ವಿಳಾಸ ಮತ್ತು ಕುಟುಂಬದ ವಿವರಗಳನ್ನು ನೀಡುತ್ತದೆ.

ಟೆಲಿಗ್ರಾಮ್‌ ವಂಚನೆಯ ಬೋಟ್ ಸೇವೆ ಬೆಲೆ ನೋಡುವುದಾದರೆ ಪ್ರತಿ ಹುಡುಕಾಟಕ್ಕೆ ₹99 ರೂ.ಗಳಿಂದ ಪ್ರಾರಂಭವಾಗಿ ₹4,999 ರೂಗಳವರೆಗೆ ಇದೆ.

ಟೆಲಿಗ್ರಾಮ್‌ ಬೋಟ್ ಕೇವಲ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ವಂಚನೆಗೆ ಸಾಕಾಗುವಷ್ಟು ನಿಮ್ಮ ವೈಯಕ್ತಿಕ ಡೇಟಾ ನೀಡುತ್ತದೆ. ಈ ಆಘಾತಕಾರಿ ಆವಿಷ್ಕಾರ ಜನಪ್ರಿಯ ಟೆಲಿಗ್ರಾಮ್ ಬಾಟ್ (Telegram Bot) ಭಾರತೀಯ ನಾಗರಿಕರ ಅತ್ಯಂತ ಸೂಕ್ಷ್ಮ ವೈಯಕ್ತಿಕ ಡೇಟಾವನ್ನು ಕೇವಲ ₹99 ರೂಪಾಯಿಗಳಿಗೆ ಬಹಿರಂಗವಾಗಿ ಮಾರಾಟ ಮಾಡುತ್ತಿರುವುದು ಕಂಡುಬಂದಿರುವ ಬಗ್ಗೆ ‘ಡಿಜಿಟ್’ ವರದಿ ಮಾಡಿದೆ. ಈ ಆತಂಕಕಾರಿ ಬೆಳವಣಿಗೆಯು ಡಿಜಿಟಲ್ ಭದ್ರತೆಯಲ್ಲಿ ಗಮನಾರ್ಹ ಅಂತರವನ್ನು ಎತ್ತಿ ತೋರಿಸಿದೆ.

ಡೇಟಾ ಪ್ರೈವಸಿ ಮತ್ತು ರಾಷ್ಟ್ರೀಯ ಭದ್ರತೆಯ ಬಗ್ಗೆ ಗಂಭೀರ ಕಳವಳಗಳನ್ನು ಹುಟ್ಟುಹಾಕಿದೆ. ನಾವು ಹೆಚ್ಚಾಗಿ ಬಳಸುವ ಹೆಚ್ಚಿನ ಪ್ರೊಟೆಕ್ಷನ್ (Two-factor authentication (2FA) ಮತ್ತು ವಂಚಕರ ಕರೆ ಅಥವಾ ಲಿಂಕ್ಗಳಿಂದ ಎಚ್ಚರಿಕೆಯಿಂದ ನಿರ್ಬಂಧಿಸುವುದು ಮಾತ್ರ ಸಾಕಾಗೋಲ್ಲ ಎನ್ನುವುದು ಸಾಬೀತುಪಡಿಸಿದೆ.

ಈ ಆತಂಕಕಾರಿ ಆವಿಷ್ಕಾರ ಬಾಟ್ ಅನ್ನು ಹೇಗೆ ಕಂಡುಕೊಂಡೆವು?

ಸಣ್ಣ ಶುಲ್ಕಕ್ಕೆ ವೈಯಕ್ತಿಕ ಮಾಹಿತಿಯನ್ನು ನೀಡುವ ಟೆಲಿಗ್ರಾಮ್ ಬಾಟ್ ಬಗ್ಗೆ ಸುಳಿವು ಪಡೆದ ನಂತರ ಡಿಜಿಟ್ ತಂಡವು ಈ ಆತಂಕಕಾರಿ ಚಟುವಟಿಕೆಯನ್ನು ಕಂಡುಕೊಂಡಿತು. ಮೊಬೈಲ್ ಸಂಖ್ಯೆಯನ್ನು ಆಧರಿಸಿ ಸಂಪೂರ್ಣ ವೈಯಕ್ತಿಕ ಪ್ರೊಫೈಲ್‌ಗಳನ್ನು ಒದಗಿಸುವುದಾಗಿ ಬೋಟ್ ನಿರ್ಲಜ್ಜವಾಗಿ ಹೇಳಿಕೊಂಡಿದೆ. ಇದರ “ಬೆಲೆ ಪಟ್ಟಿ” ಪ್ರತಿ ಹುಡುಕಾಟಕ್ಕೆ ₹99 ರಿಂದ ಅನಿಯಮಿತ ಹುಡುಕಾಟ ಮಾಸಿಕ ಪ್ರವೇಶಕ್ಕಾಗಿ ₹4,999 ವರೆಗೆ ನಿಗದಿಯಾಗಿದೆ.

ಈ ಹಕ್ಕುಗಳನ್ನು ಪರಿಶೀಲಿಸಲು ನಮ್ಮ ವರದಿಗಾರರು ಈ ಸೇವೆಗೆ ಚಂದಾದಾರರಾಗಿ ಅವರ ಸ್ವಂತ ಫೋನ್ ಸಂಖ್ಯೆಯನ್ನು ನಮೂದಿಸುವ ಮೂಲಕ ಕೆಲವೇ ಸೆಕೆಂಡುಗಳಲ್ಲಿ ಆಘಾತಕಾರಿ ವಿವರವಾದ ವರದಿಯನ್ನು ಪಡೆದರು. ಈ ವರದಿಯಲ್ಲಿ ಅವರ ಪೂರ್ಣ ಹೆಸರು, ತಂದೆಯ ಹೆಸರು, ಪ್ರಸ್ತುತ ಮತ್ತು ಹಳೆಯ ವಿಳಾಸಗಳು, ಪರ್ಯಾಯ ಮೊಬೈಲ್ ನಂಬರ್ ಮತ್ತು ಆಧಾರ್ ಮಾಹಿತಿಯೂ ಸೇರಿತ್ತು. ಕೆಲವು ಸಂದರ್ಭಗಳಲ್ಲಿ ಬೋಟ್ ಮತದಾರರ ಗುರುತಿನ ಚೀಟಿ ಮತ್ತು ಪ್ಯಾನ್ ಕಾರ್ಡ್ ಸಂಖ್ಯೆಗಳನ್ನು ಸಹ ಬಹಿರಂಗಪಡಿಸಲು ಸಾಧ್ಯವಾಯಿತು ಅಂದ್ರೆ ನೀವೇ ಲೆಕ್ಕ ಹಾಕಿ ಇದು ಡೇಟಾ ಉಲ್ಲಂಘನೆಯ ಆಳವನ್ನು ದೃಢಪಡಿಸುತ್ತದೆ.

Also Read: 4K QLED Smart TV: ಬರೋಬ್ಬರಿ 50 ಇಂಚಿನ ಜಬರ್ದಸ್ತ್ ಸ್ಮಾರ್ಟ್ ಟಿವಿ ₹25 ಸಾವಿರಕ್ಕಿಂತ ಕಡಿಮೆ ಬೆಲೆಗೆ ಲಭ್ಯ! ಲಿಮಿಟೆಡ್ ಟೈಮ್ ಆಫರ್!

ಈ ಡೇಟಾ ಎಲ್ಲಿಂದ ಬರುತ್ತದೆ? ಮತ್ತು ಇದರಿಂದ ಆಗಬಹುದುದಾದ ಅಪಾಯಗಳೇನು?

ಪ್ರಸ್ತುತ ತನಿಖೆಗಳು ಸೂಚಿಸುವಂತೆ ಈ ಬಾಟ್‌ಗೆ ನೀಡಲಾಗುವ ಡೇಟಾವನ್ನು ಸಾರ್ವಜನಿಕ ಉಪಯುಕ್ತತೆಗಳು, ಫಿನ್‌ಟೆಕ್ ಅಪ್ಲಿಕೇಶನ್‌ಗಳು ಮತ್ತು ಟೆಲಿಕಾಂ ಕಂಪನಿಗಳನ್ನು ಒಳಗೊಂಡ ವಿವಿಧ ಉಲ್ಲಂಘನೆಗಳಿಂದ ಹಲವು ವರ್ಷಗಳಿಂದ ಸಂಗ್ರಹಿಸಲಾಗಿದೆ. ಇದು ಡಾರ್ಕ್ ವೆಬ್ ಅಥವಾ ಖಾಸಗಿ ಸರ್ವರ್‌ನಲ್ಲಿ ಹೋಸ್ಟ್ ಮಾಡಲಾದ ಗುಪ್ತ ಡೇಟಾಬೇಸ್‌ನಿಂದ ಮಾಹಿತಿಯನ್ನು ಎಳೆದಂತೆ ಕಂಡುಬಂದಿದೆ. ಪ್ರಸ್ತುತ ಒದಗಿಸಲಾದ ಮಾಹಿತಿಯು ಭಯಾನಕ ಮತ್ತು ಲೇಟೆಸ್ಟ್ ಅಪ್ಡೇಟ್ ಮಾಹಿತಿಗಳನ್ನು ನೀಡುತ್ತದೆ.

ವಿಳಾಸದ ವಿಷಯದಲ್ಲಿ ಕಳೆದ 3 ರಿಂದ 4 ವರ್ಷ ಹಳೆಯದಾಗಿದ್ದರೂ ಇದರಲ್ಲಿ ಕಾಣಬಹುದು. ಅಂತಹ ಪ್ರವೇಶಿಸಬಹುದಾದ ಡೇಟಾದ ಪರಿಣಾಮಗಳು ಅಗಾಧ ಮತ್ತು ಭಯಾನಕವಾಗಿವೆ. ಈ ಮಾಹಿತಿಯು ಗುರುತಿನ ಕಳ್ಳತನ, ಮೋಸದ KYC ನೋಂದಣಿಗಳು, ಸಾಲ ವಂಚನೆಗಳು, ಅನಧಿಕೃತ ಬ್ಯಾಂಕ್ ಖಾತೆ ಪ್ರವೇಶ, ಸಿಮ್ ಕಾರ್ಡ್ ಕ್ಲೋನಿಂಗ್ ಅಥವಾ ಕುಟುಂಬಗಳನ್ನು ಗುರಿಯಾಗಿಸಿಕೊಂಡು ಕಿರುಕುಳ ನೀಡಬಹುದು.

ಭಾರತೀಯ ನಾಗರಿಕರ ಅಂತಹ ಸೂಕ್ಷ್ಮ ಗುರುತಿನ ಡೇಟಾವನ್ನು ಒಂದು ಸರಕಿನಂತೆ ಪರಿಗಣಿಸಲಾಗುತ್ತಿತ್ತು ಕಡಿಮೆ ಹೊಣೆಗಾರಿಕೆಯೊಂದಿಗೆ ಎನ್‌ಕ್ರಿಪ್ಟ್ ಮಾಡಿದ ಮೆಸೇಜಿಂಗ್ ಅಪ್ಲಿಕೇಶನ್ ಮೂಲಕ ಖರೀದಿಸಲಾಗುತ್ತಿತ್ತು ಮತ್ತು ಮಾರಾಟ ಮಾಡಲಾಗುತ್ತಿತ್ತು ಇದು ಗಂಭೀರ ರಾಷ್ಟ್ರೀಯ ಭದ್ರತಾ ಅಪಾಯವನ್ನು ಪ್ರಸ್ತುತಪಡಿಸುತ್ತದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :