ಭಾರತದಲ್ಲಿ ಅತಿ ದೊಡ್ಡ ಕಾಲೇಜುಗಳ ಇ-ಸ್ಪೋರ್ಟ್ಸ್ (eSports) ಪಂದ್ಯಾವಳಿಗಳನ್ನು ಘೋಷಿಸಿದ SKOAR. ಇದು ಡಿಜಿಟ್ ಮತ್ತು ಟೈಮ್ಸ್ ನೆಟ್‌ವರ್ಕ್ ಭಾರತದ ಪ್ರೀಮಿಯಂ ಪ್ರಸಾರ ಮತ್ತು ಡಿಜಿಟಲ್ ನೆಟ್‌ವರ್ಕ್‌ಗಳ ಅಡಿಯಲ್ಲಿ SKOAR College Cup Championship 2025 ಅನ್ನು ಘೋಷಿಸಿವೆ. ಇದರ ವಿಶೇಷತೆ ನೋಡುವುದಾದರೆ ಇದು ಭಾರತದ ಅತಿ ದೊಡ್ಡ ಕಾಲೇಜು ಇ-ಸ್ಪೋರ್ಟ್ಸ್ (esports) ಪಂದ್ಯಾವಳಿಯಾಗಿದ್ದು ₹30 ಲಕ್ಷ ರೂಪಾಯಿಗಳ ಬಹುಮಾನದ ಮೊತ್ತವನ್ನು ಹೊಂದಿದೆ. ಈ ಕಾರ್ಯಕ್ರಮವನ್ನು ಒಪ್ಪೋ (OPPO) ಮತ್ತು ಸ್ಯಾನ್‌ಡಿಸ್ಕ್ (SanDisk) ಸಹಭಾಗಿತ್ವದಲ್ಲಿ ಆಯೋಜಿಸಲಾಗುವುದು.
ಟೈಮ್ಸ್ ನೆಟ್‌ವರ್ಕ್ ಭಾರತದಲ್ಲಿ ಕಾಲೇಜು ಇ-ಸ್ಪೋರ್ಟ್ಸ್ ಬೆಳವಣಿಗೆಯನ್ನು ಹೆಚ್ಚಿಸುವ ತನ್ನ ಬದ್ಧತೆಯನ್ನು ಈ ಪಂದ್ಯಾವಳಿಯ ಮೂಲಕ ಪುನರುಚ್ಚರಿಸಿದೆ. ಈ ಹೊಸ ಆವೃತ್ತಿಯು ರಾಜಧಾನಿ ಪ್ರದೇಶದ (Delhi-NCR) ಉನ್ನತ ವಿದ್ಯಾರ್ಥಿ ಗೇಮರ್‌ಗಳನ್ನು (Gamers) ಒಂದುಗೂಡಿಸಿ ದೊಡ್ಡ ಪ್ರಮಾಣದ ಹೆಚ್ಚು ಸ್ಪರ್ಧಾತ್ಮಕ ಪ್ರದರ್ಶನವನ್ನು ನೀಡುತ್ತದೆ. ಪಂದ್ಯಾವಳಿಯು ಭಾರತದ ಅತ್ಯಂತ ಜನಪ್ರಿಯ ಇ-ಸ್ಪೋರ್ಟ್ಸ್ ಆಟಗಳಾದ ವಾಲರಂಟ್ (VALORANT) ಮತ್ತು ಬಿಜಿಎಂಐ (BGMI) ಪ್ರಾಮುಖ್ಯತೆ ನೀಡುತ್ತದೆ. ಇದು ಕಾಲೇಜು ತಂಡಗಳಿಗೆ ರಾಷ್ಟ್ರೀಯ ವೇದಿಕೆಯಲ್ಲಿ ಸ್ಪರ್ಧಿಸಲು ಮತ್ತು ಬೆಳೆಯುತ್ತಿರುವ ಭಾರತೀಯ ಇ-ಸ್ಪೋರ್ಟ್ಸ್ ಪರಿಸರ ವ್ಯವಸ್ಥೆಯಲ್ಲಿ ಗುರುತಿಸಿಕೊಳ್ಳಲು ಅವಕಾಶ ನೀಡುತ್ತದೆ.
ಇದರಲ್ಲಿ 200 ಕ್ಕೂ ಹೆಚ್ಚು ಕಾಲೇಜುಗಳಿಂದ ಮತ್ತು 2,000 ಕ್ಕೂ ಹೆಚ್ಚು ತಂಡಗಳ ಭಾಗವಹಿಸುವಿಕೆ ಹಾಗೂ ₹ 30 ಲಕ್ಷ ಬಹುಮಾನದ ಮೊತ್ತದೊಂದಿಗೆ ಈ ಕಾರ್ಯಕ್ರಮವು ಭಾರತದ ವಿದ್ಯಾರ್ಥಿ ಇ-ಸ್ಪೋರ್ಟ್ಸ್‌ಗೆ ಒಂದು ಮಹತ್ವದ ಮೈಲಿಗಲ್ಲಾಗಿದೆ. ಈ ಪಂದ್ಯಾವಳಿಯಲ್ಲಿ ಹೊಸ ದೆಹಲಿ, ನೋಯ್ಡಾ, ಗುರುಗ್ರಾಮ್ ಮತ್ತು ಫರಿದಾಬಾದ್ ಸೇರಿದಂತೆ ದೆಹಲಿ-ಎನ್‌ಸಿಆರ್‌ನ ಪ್ರಮುಖ ನಗರಗಳ ಭಾಗವಹಿಸುವಿಕೆ ಇರುತ್ತದೆ. ಉದಯೋನ್ಮುಖ ಪ್ರತಿಭೆಗಳನ್ನು ಪೋಷಿಸುವುದು ಮತ್ತು ಈ ಕ್ಷೇತ್ರದಲ್ಲಿ ಮುಂದುವರಿಯಲು ಬಯಸುವ ಇ-ಸ್ಪೋರ್ಟ್ಸ್ ಆಟಗಾರರಿಗೆ ಒಂದು ಹೆಬ್ಬಾಗಿಲಾಗಿ ಕಾರ್ಯನಿರ್ವಹಿಸುವುದು ಈ ಪಂದ್ಯಾವಳಿಯ ಉದ್ದೇಶವಾಗಿದೆ.
ಬಹು-ಹಂತದ ಈ ಸ್ಪರ್ಧೆಯು ಮುಂದಿನ ವರ್ಷ ಅಂದರೆ ಫೆಬ್ರವರಿ 2026 ರಲ್ಲಿ ನಡೆಯುವ ಆಕ್ಷನ್-ಪ್ಯಾಕ್ಡ್ ಗ್ರ್ಯಾಂಡ್ ಫಿನಾಲೆಯೊಂದಿಗೆ (Grand Finale) ಕೊನೆಗೊಳ್ಳುತ್ತದೆ. ಅಲ್ಲಿ ಉನ್ನತ ಅರ್ಹತಾ ತಂಡಗಳು ಚಾಂಪಿಯನ್‌ಶಿಪ್ ಪ್ರಶಸ್ತಿಗಾಗಿ ಹೋರಾಡುತ್ತವೆ. ಈ ಪಂದ್ಯಾವಳಿಯ ಮೂಲಕ ಸ್ಕೋಆರ್! ಯುವ ಗೇಮರ್‌ಗಳು ಮತ್ತು ಇ-ಸ್ಪೋರ್ಟ್ಸ್ ಆಕಾಂಕ್ಷಿಗಳಿಗೆ ರಚನಾತ್ಮಕ, ಉನ್ನತ-ಪರಿಣಾಮದ ವೇದಿಕೆಯನ್ನು ನಿರ್ಮಿಸುವುದನ್ನು ಮುಂದುವರಿಸಿದೆ. ಭಾರತದಾದ್ಯಂತದ ವಿದ್ಯಾರ್ಥಿಗಳು, ಗೇಮಿಂಗ್ ಸಮುದಾಯಗಳು ಮತ್ತು ಇ-ಸ್ಪೋರ್ಟ್ಸ್ ಉತ್ಸಾಹಿಗಳು ಈ ಪಂದ್ಯಾವಳಿಯ ಪ್ರಯಾಣವನ್ನು ಅನುಸರಿಸಲು ತಮ್ಮ ನೆಚ್ಚಿನ ತಂಡಗಳನ್ನು ಬೆಂಬಲಿಸಲು ಮತ್ತು ವ್ಯಾಪಕವಾದ ಸ್ಕೋಆರ್! ಇ-ಸ್ಪೋರ್ಟ್ಸ್ ಚಳುವಳಿಯೊಂದಿಗೆ ತೊಡಗಿಸಿಕೊಳ್ಳಲು ಆಹ್ವಾನಿಸಲಾಗಿದೆ.
ಪಂದ್ಯದ ವೇಳಾಪಟ್ಟಿಗಳು, ಹೈಲೈಟ್‌ಗಳು ಮತ್ತು ಅಪ್‌ಡೇಟ್‌ಗಳಿಗಾಗಿ ಇನ್‌ಸ್ಟಾಗ್ರಾಮ್‌ನಲ್ಲಿ @skoar.gg ಅನ್ನು ಅನುಸರಿಸಬಹುದು. ಅಲ್ಲದೆ ಈ ಪಂದ್ಯಾವಳಿಯನ್ನು ಇತ್ತೀಚೆಗೆ ನವದೆಹಲಿಯಲ್ಲಿ ಆಯೋಜಿಸಲಾದ ಈ Digit Zero1 Awards ಸಮಾರಂಭದಲ್ಲಿ ಅನಾವರಣಗೊಳಿಸಲಾಯಿತು. ಆ ಕಾರ್ಯಕ್ರಮವು ಭಾರತದ ತಂತ್ರಜ್ಞಾನ ದಾರ್ಶನಿಕರನ್ನು ಗೌರವಿಸಿತು ಮತ್ತು ದೇಶದ ತಾಂತ್ರಿಕ ಭವಿಷ್ಯವನ್ನು ರೂಪಿಸುವ ಅದ್ಭುತ ಪ್ರಗತಿಗಳನ್ನು ಎತ್ತಿ ತೋರಿಸಿತು ಇದು ನಿರಂತರ ಹೊಸತನ ಮತ್ತು ಬೆಳವಣಿಗೆಗೆ ವೇದಿಕೆ ಸಿದ್ಧಪಡಿಸಿದೆ.