ಪ್ರೀಮಿಯಂ ಫೋನ್‌ಗಳಿಗಿಂತ Budget ಸ್ಮಾರ್ಟ್‌ಫೋನ್‌ಗಳೇ ಬೆಸ್ಟ್ ಆಯ್ಕೆಯಾಗುತ್ತಿವೆಯೇ?
ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಒಂದು ಕಾಲದಲ್ಲಿ ಪ್ರೀಮಿಯಂ ಸ್ಮಾರ್ಟ್‌ಫೋನ್‌ಗಳೇ ಅತ್ಯುತ್ತಮ ಆಯ್ಕೆಯಾಗಿ ಪರಿಗಣಿಸಲಾಗುತ್ತಿತ್ತು. ಅತ್ಯುತ್ತಮ ಕ್ಯಾಮೆರಾ, ವೇಗವಾದ ಕಾರ್ಯಕ್ಷಮತೆ ಮತ್ತು ಆಕರ್ಷಕ ವಿನ್ಯಾಸಕ್ಕಾಗಿ ಗ್ರಾಹಕರು ಹೆಚ್ಚಿನ ಹಣ ಖರ್ಚು ಮಾಡಲು ಸಿದ್ಧರಾಗಿದ್ದರು. ಆದರೆ ಇತ್ತೀಚಿನ ಕೆಲವು ವರ್ಷಗಳಲ್ಲಿ Budget ಬೆಲೆಯ ಸ್ಮಾರ್ಟ್‌ಫೋನ್‌ಗಳು ಗಮನಾರ್ಹವಾಗಿ ಅಪ್‌ಡೇಟ್ ಹೊಂದಿವೆ. ಈಗ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳಲ್ಲಿಯೇ 5G ಕನೆಕ್ಟಿವಿಟಿ, ಅಧಿಕ ರಿಫ್ರೆಶ್ ರೇಟ್ ಡಿಸ್‌ಪ್ಲೇ, ಪವರ್‌ಫುಲ್ ಪ್ರೊಸೆಸರ್ ಮತ್ತು ಅತ್ಯುತ್ತಮ ಕ್ಯಾಮೆರಾ ಸೌಲಭ್ಯಗಳು ಒಳಗೊಂಡಿವೆ. ಇದರಿಂದ ಅನೇಕ ಗ್ರಾಹಕರು ದುಬಾರಿ ಫ್ಲ್ಯಾಗ್‌ಶಿಪ್ ಫೋನ್‌ಗಳ ಬದಲಿಗೆ ಕೈಗೆಟುಕುವ ಬೆಲೆಯ ಫೋನ್‌ಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಹಾಗಾದರೆ ಬಜೆಟ್ ಸ್ಮಾರ್ಟ್‌ಫೋನ್‌ಗಳು ಪ್ರೀಮಿಯಂ ಫೋನ್‌ಗಳಿಗೆ ಹೇಗೆ ಪೈಫೋಟಿ ನೀಡುತ್ತಿವೆ ಎಂಬುದನ್ನು ಮುಂದೆ ತಿಳಿಯೋಣ.
SurveyAlso Read : ಅಗ್ಗದ ಬೆಲೆಯಲ್ಲಿ Jio Bharat V4 4G ಮೊಬೈಲ್ ಬಿಡುಗಡೆ: ಬೆಲೆ ಹಾಗೂ ಫೀಚರ್ಸ್ ನೋಡಿ
Budget ಬೆಲೆ ಫೋನ್‌ಗಳಲ್ಲಿ ಆಕರ್ಷಕ ಫೀಚರ್ಸ್
ಪ್ರಸ್ತುತ 15,000 ರೂ.ಗಳಿಂದ 25,000 ರೂ.ಗಳ ವರೆಗಿನ ಬೆಲೆಯ ಸ್ಮಾರ್ಟ್‌ಫೋನ್‌ಗಳಲ್ಲಿಯೇ 120Hz ಡಿಸ್‌ಪ್ಲೇ, 5G ಕನೆಕ್ಟಿವಿಟಿ, 50 ಮೆಗಾಪಿಕ್ಸೆಲ್ ಅಥವಾ ಅದಕ್ಕಿಂತ ಹೆಚ್ಚಿನ ಕ್ಯಾಮೆರಾ, ದೊಡ್ಡ ಬ್ಯಾಟರಿ ಹಾಗೂ ಫಾಸ್ಟ್ ಚಾರ್ಜಿಂಗ್ ಸೌಲಭ್ಯಗಳು ಲಭ್ಯವಾಗುತ್ತಿವೆ. ಕೆಲವು ವರ್ಷಗಳ ಹಿಂದೆ ಇಂತಹ ಫೀಚರ್ಸ್‌ಗಳು ಕೇವಲ ದುಬಾರಿ ಫ್ಲ್ಯಾಗ್‌ಶಿಪ್ ಫೋನ್‌ಗಳಲ್ಲಿ ಮಾತ್ರ ಕಂಡುಬರುತ್ತಿದ್ದವು.

ಕಡಿಮೆ ಬೆಲೆಯಲ್ಲಿ ಹೆಚ್ಚು ಫೀಚರ್ಸ್
ಚೀನಾದ ಹಾಗೂ ಭಾರತೀಯ ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಲವು ಕಂಪನಿಗಳು ಕಡಿಮೆ ಬೆಲೆಯಲ್ಲಿ ಹೆಚ್ಚು ಫೀಚರ್ಸ್‌ಗಳನ್ನು ನೀಡುವ ಮೂಲಕ ಗ್ರಾಹಕರ ಗಮನ ಸೆಳೆಯುತ್ತಿವೆ. ರೆಡ್ಮಿ, ರಿಯಲ್‌ಮಿ, ಐಕ್ಯೂ, ಮೊಟೊರೊಲಾ ಮತ್ತು ಪೊಕೊ ಸೇರಿದಂತೆ ಹಲವು ಬ್ರ್ಯಾಂಡ್‌ಗಳು ಉತ್ತಮ ಕಾರ್ಯಕ್ಷಮತೆಯ ಫೋನ್‌ಗಳನ್ನು ಕೈಗೆಟುಕುವ ಬೆಲೆಯಲ್ಲಿ ಪರಿಚಯಿಸುತ್ತಿವೆ. ಇದರಿಂದಾಗಿ ಅನೇಕ ಗ್ರಾಹಕರು ದುಬಾರಿ ಫೋನ್‌ಗಳ ಬದಲಿಗೆ ಬಜೆಟ್ ಅಥವಾ ಮಿಡ್‌ರೇಂಜ್ ಫೋನ್‌ಗಳತ್ತ ಮುಖ ಮಾಡುತ್ತಿದ್ದಾರೆ.
ಉತ್ತಮ ಫೋಟೋಗ್ರಫಿ
ಕ್ಯಾಮೆರಾ ವಿಭಾಗದಲ್ಲಿಯೂ ಬಜೆಟ್ ಫೋನ್‌ಗಳು ಸಾಕಷ್ಟು ಪ್ರಗತಿ ಸಾಧಿಸಿವೆ. ಕೃತಕ ಬುದ್ಧಿಮತ್ತೆ (AI) ಆಧಾರಿತ ಫೋಟೋಗ್ರಫಿ ತಂತ್ರಜ್ಞಾನದಿಂದ ಕಡಿಮೆ ಬೆಲೆಯ ಫೋನ್‌ಗಳಲ್ಲಿಯೂ ಉತ್ತಮ ಗುಣಮಟ್ಟದ ಫೋಟೋಗಳನ್ನು ಸೆರೆಹಿಡಿಯಲು ಸಾಧ್ಯವಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಮತ್ತು ವಿಡಿಯೊಗಳನ್ನು ಹಂಚಿಕೊಳ್ಳುವ ಹೆಚ್ಚಿನ ಬಳಕೆದಾರರಿಗೆ ಈ ಗುಣಮಟ್ಟ ಸಾಕಷ್ಟು ತೃಪ್ತಿಕರವಾಗಿದೆ. ಇದರ ಜೊತೆಗೆ, ಪ್ರೊಸೆಸರ್ ತಂತ್ರಜ್ಞಾನದಲ್ಲಿನ ಅಭಿವೃದ್ಧಿಯೂ ಪ್ರಮುಖ ಕಾರಣವಾಗಿದೆ. ಇಂದಿನ ಬಜೆಟ್ ಸ್ಮಾರ್ಟ್‌ಫೋನ್‌ಗಳು ದಿನನಿತ್ಯದ ಕೆಲಸಗಳು, ಗೇಮಿಂಗ್ ಮತ್ತು ಮಲ್ಟಿಟಾಸ್ಕಿಂಗ್ ಅನ್ನು ಸುಲಭವಾಗಿ ನಿರ್ವಹಿಸಬಲ್ಲವು. ಹೀಗಾಗಿ ಸಾಮಾನ್ಯ ಬಳಕೆದಾರರಿಗೆ ಪ್ರೀಮಿಯಂ ಫೋನ್ ಖರೀದಿಸುವ ಅಗತ್ಯತೆ ಕಡಿಮೆಯಾಗುತ್ತಿದೆ.
ಆದಾಗ್ಯೂ, ಪ್ರೀಮಿಯಂ ಫೋನ್‌ಗಳು ಇನ್ನೂ ಕೆಲವು ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿವೆ. ಅತ್ಯುತ್ತಮ ಕ್ಯಾಮೆರಾ ವ್ಯವಸ್ಥೆ, ಪ್ರೀಮಿಯಂ ವಿನ್ಯಾಸ, ಉನ್ನತ ಗುಣಮಟ್ಟದ ನಿರ್ಮಾಣ, ವೈರ್‌ಲೆಸ್ ಚಾರ್ಜಿಂಗ್ ಮತ್ತು ದೀರ್ಘಾವಧಿಯ ಸಾಫ್ಟ್‌ವೇರ್ ಬೆಂಬಲದಂತಹ ವೈಶಿಷ್ಟ್ಯಗಳು ಇನ್ನೂ ದುಬಾರಿ ಡಿವೈಸ್‌ಗಳ ಪ್ರಮುಖ ಆಕರ್ಷಣೆಯಾಗಿವೆ. ಒಟ್ಟಾರೆ, ಬಜೆಟ್ ಸ್ಮಾರ್ಟ್‌ಫೋನ್‌ಗಳ ವೇಗವಾದ ಬೆಳವಣಿಗೆ ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳನ್ನು ನೀಡಿದೆ. ಈಗ ಕಡಿಮೆ ಹಣದಲ್ಲಿ ಉತ್ತಮ ಅನುಭವ ಪಡೆಯಲು ಸಾಧ್ಯವಾಗುತ್ತಿರುವುದರಿಂದ, ಪ್ರೀಮಿಯಂ ಸಾಧನಗಳು ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಇನ್ನಷ್ಟು ಹೊಸತನವನ್ನು ತರುವ ಅವಶ್ಯಕತೆ ಎದುರಾಗಿದೆ.
ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. View Full Profile
