Google Play Store: ಮೊಬೈಲ್ನಲ್ಲಿ APK ಫೈಲ್ ಇನ್ಸ್ಟಾಲ್ ಮಾಡುವ ಮುನ್ನ ಈ ಅಪಾಯಗಳ ಬಗ್ಗೆ ತಿಳಿಯಿರಿ
ಸ್ಮಾರ್ಟ್ಫೋನ್ ಬಳಸುವ ಬಹುತೇಕರು ಹೊಸ ಆಪ್ಗಳನ್ನು ಡೌನ್ಲೋಡ್ ಮಾಡಲು Google Play Store ಮೊರೆ ಹೋಗುತ್ತಾರೆ. ಆದರೆ ಮ್ಮೆಕೆಲವೊ Play Storeನಲ್ಲಿ ಲಭ್ಯವಿಲ್ಲದ ಆಪ್ಗಳನ್ನು ಬಳಸಲು ಅಥವಾ ಪಾವತಿ ಮಾಡಬೇಕಾದ ಅಯ್ಸ್ಪ್ಪಾ ಉಚಿತ ಆವೃತ್ತಿ ಪಡೆಯಲು ಇಂಟರ್ನೆಟ್ನಲ್ಲಿರುವ ಬೇರೆ ವೆಬ್ಸೈಟ್ಗಳಿಂದ APK ಫೈಲ್ಗಳನ್ನು ಡೌನ್ಲೋಡ್ ಮಾಡುತ್ತಾರೆ. ಇದನ್ನು ಸೈಡ್ಲೋಡಿಂಗ್ (Sideloading) ಎಂದು ಕರೆಯಲಾಗುತ್ತದೆ. ಕೆಲವು ಸಂದರ್ಭಗಳಲ್ಲಿ ಈ ಆಯ್ಕೆ ಅನುಕೂಲಕರವಾಗಿ ಕಂಡರೂ, ಅಪರಿಚಿತ ಮೂಲಗಳಿಂದ ಆಪ್ ಇನ್ಸ್ಟಾಲ್ ಮಾಡುವುದು ನಿಮ್ಮ ಸ್ಮಾರ್ಟ್ಫೋನ್ ಮತ್ತು ವೈಯಕ್ತಿಕ ಮಾಹಿತಿಗೆ ಅಪಾಯ ತಂದೊಡ್ಡಬಹುದು. ವಿಶೇಷವಾಗಿ ನಕಲಿ ಆಪ್ಗಳನ್ನು, ಮಾಲ್ವೇರ್ ಮತ್ತು ಡೇಟಾ ಕಳ್ಳತನದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾದರೆ Play Store ಹೊರಗಿನಿಂದ ಆಪ್ ನ್ಸ್ಟಾಲ್ ಮಾಡುವುದರಿಂದ ಎದುರಾಗುವ ಅಪಾಯಗಳೇನು? ತಿಳಿಯೋಣ.
Google Play Store: ನಿಮ್ಮ ಫೋನ್ಗೆ ವೈರಸ್ ಮತ್ತು ಮಾಲ್ವೇರ್ ದಾಳಿ
Google Play Store ಹೊರಗಿನಿಂದ ಡೌನ್ಲೋಡ್ ಮಾಡುವ ಪ್ರತಿಯೊಂದು APK ಫೈಲ್ ಅಪಾಯಕಾರಿ ಎಂದರ್ಥವಲ್ಲ. ಆದರೆ ವಿಶ್ವಾಸಾರ್ಹವಲ್ಲದ ವೆಬ್ಸೈಟ್ಗಳಿಂದ ಪಡೆಯುವ ಕೆಲವು ಫೈಲ್ಗಳಲ್ಲಿ ಮಾಲ್ವೇರ್ ಅಡಗಿರಬಹುದು. ಇಂತಹ ಆ್ಯಪ್ಗಳನ್ನು ಇನ್ಸ್ಟಾಲ್ ಮಾಡಿದ ನಂತರ ಅವು ನಿಮ್ಮ ಫೋನ್ನಲ್ಲಿ ಹಾನಿಕಾರಕ ಚಟುವಟಿಕೆಗಳನ್ನು ನಡೆಸಬಹುದು. ಕೆಲವು ಮಾಲ್ವೇರ್ಗಳು ಹಿನ್ನೆಲೆಯಲ್ಲೇ ಕಾರ್ಯನಿರ್ವಹಿಸಿ, ನಿಮ್ಮ ಅರಿವಿಲ್ಲದಂತೆ ಮಾಹಿತಿ ಸಂಗ್ರಹಿಸಬಹುದು. ಇನ್ನು ಕೆಲವು ಫೋನ್ನ ಕಾರ್ಯಕ್ಷಮತೆಯನ್ನು ಕುಗ್ಗಿಸುವುದರ ಜೊತೆಗೆ ಅನಗತ್ಯ ಜಾಹೀರಾತುಗಳನ್ನು ಪ್ರದರ್ಶಿಸಬಹುದು.
ಬ್ಯಾಂಕ್ ಖಾತೆ ಮತ್ತು ವೈಯಕ್ತಿಕ ಮಾಹಿತಿ ಕಳವು
ಇಂದಿನ ದಿನಗಳಲ್ಲಿ ಬಹುತೇಕರು ಮೊಬೈಲ್ ಬ್ಯಾಂಕಿಂಗ್, UPI ಪಾವತಿ ಮಉ್ತಮ ಕನತ್ತು ಡಿಜಿಟಲ್ ವ್ಯಾಲೆಟ್ಗಳನ್ನು ಬಳಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ನಕಲಿ ಆಪ್ಗಳು ನಿಮ್ಮ ವೈಯಕ್ತಿಕ ಮಾಹಿತಿಗೆ ಗುರಿಯಾಗಬಹುದು. ಕೆಲವು ಹಾನಿಕಾರಕ ಆಪ್ಗಳು ಲಾಗಿನ್ ವಿವರಗಳು, ಪಾಸ್ವರ್ಡ್ಗಳು, OTP ಅಥವಾ ಇತರ ಸೂಕ್ಷ್ಮ ಮಾಹಿತಿಯನ್ನು ಕದಿಯಲು ಪ್ರಯತ್ನಿಸಬಹುದು. ಕೆಲವು ಆ್ಯಪ್ಗಳು ನಕಲಿ ಬ್ಯಾಂಕಿಂಗ್ ಅಥವಾ ಪಾವತಿ ಆ್ಯಪ್ಗಳಂತೆ ಕಾಣಿಸಿಕೊಂಡು ಬಳಕೆದಾರರನ್ನು ವಂಚಿಸಬಹುದು. ಇದರಿಂದ ಹಣಕಾಸಿನ ನಷ್ಟ ಉಂಟಾಗುವ ಸಾಧ್ಯತೆಯೂ ಇದೆ.
3. ಅನಗತ್ಯ ಅನುಮತಿಗಳನ್ನು ಕೇಳಬಹುದುಯಾವುದೇ ಆಪ್ ಇನ್ಸ್ಟಾಲ್ ಮಾಡಿದಾಗ ಕ್ಯಾಮೆರಾ, ಮೈಕ್ರೋಫೋನ್, ಕಾಂಟ್ಯಾಕ್ಟ್ಗಳು, ಲೊಕೇಶನ್ ಮತ್ತು ಫೋಟೋಗಳಿಗೆ ಪ್ರವೇಶ ಅನುಮತಿ ಕೇಳಬಹುದು. ಆಪ್ನ ಕೆಲಸಕ್ಕೆ ಅಗತ್ಯವಿರುವ ಅನುಮತಿಗಳನ್ನು ನೀಡುವುದು ಸಹಜ. ಆದರೆ ಸಾಮಾನ್ಯ ಕ್ಯಾಲ್ಕುಲೇಟರ್ ಅಥವಾ ವಾಲ್ಪೇಪರ್ ಆ್ಯಪ್ ನಿಮ್ಮ ಕಾಂಟ್ಯಾಕ್ಟ್ಗಳು, ಮೈಕ್ರೋಫೋನ್ ಅಥವಾ SMSಗಳಿಗೆ ಪ್ರವೇಶ ಕೇಳಿದರೆ ಎಚ್ಚರಿಕೆ ವಹಿಸಬೇಕು. ಅಪರಿಚಿತ ಮೂಲಕ ಆಪ್ ಇಂತಹ ಅನುಮತಿಗಳನ್ನು ನೀಡುವುದರಿಂದ ನಿಮ್ಮ ಖಾಸಗಿ ಮಾಹಿತಿ ಸೋರಿಕೆಯಾಗುವ ಅಪಾಯವಿದೆ.
ನಕಲಿ ಆ್ಯಪ್ಗಳ ಮೂಲಕ ವಂಚನೆ
ನಕಲಿ ಆಪ್ಗಳ ಮೂಲಕ ವಂಚನೆಜನಪ್ರಿಯ ಆಪ್ಗಳ ಹೆಸರಿನಲ್ಲಿ ನಕಲಿ APK ಫೈಲ್ಗಳನ್ನು ಸೃಷ್ಟಿಸುವುದು ಸೈಬರ್ ವಂಚಕರ ಸಾಮಾನ್ಯ ತಂತ್ರವಾಗಿದೆ. ಮೂಲ ಆಪ್ನಂತೆಯೇ ಕಾಣುವ ಐಕಾನ್, ಹೆಸರು ಮತ್ತು ವಿನ್ಯಾಸವನ್ನು ಬಳಸಿ ಬಳಕೆದಾರರನ್ನು ಮೋಸಗೊಳಿಸಬಹುದು. ಉದಾಹರಣೆಗೆ ಜನಪ್ರಿಯ ವಿಡಿಯೋ ಎಡಿಟಿಂಗ್ ಆಪ್, ಗೇಮ್ ಅಥವಾ ಪ್ರೀಮಿಯಂ ಆಪ್ನ ಉಚಿತ ಆವೃತ್ತಿ ಎಂದು ಹೇಳಿ ನಕಲಿ ಫೈಲ್ಗಳನ್ನು ಹಂಚಿಕೊಳ್ಳಬಹುದು. ಇವುಗಳನ್ನು ಇನ್ಸ್ಟಾಲ್ ಮಾಡಿದ ಬಳಿಕ ನಿಮ್ಮ ಫೋನ್ಗೆ ಅನಗತ್ಯ ಜಾಹೀರಾತುಗಳು ಕಾಣಿಸಿಕೊಳ್ಳಬಹುದು ಅಥವಾ ವೈಯಕ್ತಿಕ ಮಾಹಿತಿ ಕಳವಾಗಬಹುದು.
ಆಪ್ ಅಪ್ಡೇಟ್ಗಳು
Google Play Store ಮೂಲಕ ಇನ್ಸ್ಟಾಲ್ ಮಾಡಿದ ಆಪ್ಗಳಿಗೆ ಸಾಮಾನ್ಯವಾಗಿ ಅಪ್ಡೇಟ್ಗಳು ಲಭ್ಯವಾಗುತ್ತವೆ. ಇವುಗಳಲ್ಲಿ ಹೊಸ ಫೀಚರ್ಗಳ ಜೊತೆಗೆ ಭದ್ರತಾ ದೋಷಗಳನ್ನು ಸರಿಪಡಿಸುವ ವ್ಯವಸ್ಥೆಯೂ ಇರುತ್ತದೆ. ಆದರೆ ಹೊರಗಿನ ವೆಬ್ಸೈಟ್ನಿಂದ APK ಫೈಲ್ ಡೌನ್ಲೋಡ್ ಮಾಡಿದರೆ ಅದಕ್ಕೆ ಸರಿಯಾದ ಅಪ್ಡೇಟ್ಗಳು ಸಿಗುತ್ತವೆ ಎಂಬ ಖಾತರಿ ಇರುವುದಿಲ್ಲ. ಹೀಗಾಗಿ ಹಳೆಯ ಆವೃತ್ತಿಯಲ್ಲಿರುವ ಭದ್ರತಾ ದೋಷಗಳು ಹಾಗೆಯೇ ಉಳಿಯಬಹುದು. ಇದರಿಂದ ಸೈಬರ್ ದಾಳಿಗಳಿಗೆ ಗುರಿಯಾಗುವ ಸಾಧ್ಯತೆ ಹೆಚ್ಚುತ್ತದೆ.
APK ಫೈಲ್ ಇನ್ಸ್ಟಾಲ್ ಮಾಡುವಾಗ ಈ ಮುನ್ನೆಚ್ಚರಿಕೆ ವಹಿಸಿ
Play Store ಹೊರಗಿನಿಂದ ಆಪ್ ಇನ್ಸ್ಟಾಲ್ ಮಾಡುವುದು ಅನಿವಾರ್ಯವಾದರೆ ಕೆಲವು ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಉತ್ತಮ.
ಸಾಧ್ಯವಾದಷ್ಟು Google Play Storeನಿಂದಲೇ ಆಪ್ಗಳನ್ನು ಡೌನ್ಲೋಡ್ ಮಾಡಿ.
APK ಫೈಲ್ಗಳನ್ನು ಅಪರಿಚಿತ ವೆಬ್ಸೈಟ್ಗಳಿಂದ ಡೌನ್ಲೋಡ್ ಮಾಡಬೇಡಿ.
ಆಪ್ ಕೇಳುವ ಅನುಮತಿಗಳನ್ನು ಪರಿಶೀಲಿಸಿ. ಅಗತ್ಯವಿಲ್ಲದ ಅನುಮತಿಗಳನ್ನು ನೀಡಬೇಡಿ.
Android ಫೋನ್ನಲ್ಲಿರುವ Google Play Protect ಸೌಲಭ್ಯವನ್ನು ಆನ್ನಲ್ಲಿಡಿ.
ಫೋನ್ನ ಆಪರೇಟಿಂಗ್ ಸಿಸ್ಟಮ್ ಮತ್ತು ಆಪ್ಗಳನ್ನು ನಿಯಮಿತವಾಗಿ ಅಪ್ಡೇಟ್ ಮಾಡಿ.
ಉಚಿತ ಪ್ರೀಮಿಯಂ ಆ್ಯಪ್ಗಳು, ಕ್ರ್ಯಾಕ್ ಮಾಡಿದ ಆಪ್ಗಳು ಮತ್ತು ಮೋಡಿಫೈಡ್ APKಗಳ ಆಮಿಷಕ್ಕೆ ಒಳಗಾಗಬೇಡಿ.
ಅನುಮಾನಾಸ್ಪದ ಆಪ್ ಕಂಡುಬಂದರೆ ತಕ್ಷಣ ಅದನ್ನು ಅನ್ಇನ್ಸ್ಟಾಲ್ ಮಾಡಿ