ದಿನನಿತ್ಯದ ಕೆಲಸ ಸುಲಭಗೊಳಿಸುವ 5 ಬೆಸ್ಟ್‌ Smartphone ಫೀಚರ್‌ಗಳು: ಒಮ್ಮೆ ಟ್ರೈ ಮಾಡಿ ನೋಡಿ

Smartphone ಖರೀದಿಸುವಾಗ ಅದರ ಕ್ಯಾಮೆರಾ, ಬ್ಯಾಟರಿ, ಪ್ರೊಸೆಸರ್ ಮತ್ತು ಡಿಸ್‌ಪ್ಲೇ ಬಗ್ಗೆ ಹೆಚ್ಚು ಗಮನ ಕೊಡುತ್ತೇವೆ. ಆದರೆ ಫೋನ್‌ನಲ್ಲಿರುವ ಹಲವು ಉಪಯುಕ್ತ ಫೀಚರ್‌ಗಳನ್ನು ಮಾತ್ರ ಬಳಸುವುದೇ ಇಲ್ಲ. ನಿತ್ಯವೂ ಫೋನ್ ಬಳಸುವವರಿಗೂ ಅದರಲ್ಲಿರುವ ಕೆಲವು ಸೌಲಭ್ಯಗಳ ಪರಿಚಯವಿರುವುದಿಲ್ಲ. ಕರೆ ಮಾಡುವುದರಿಂದ ಹಿಡಿದು ಫೋಟೋ ತೆಗೆಯುವುದು, ಇಂಟರ್‌ನೆಟ್ ಬಳಸುವುದು ಮತ್ತು ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿಟ್ಟುಕೊಳ್ಳುವವರೆಗೆ ಹಲವು ಕೆಲಸಗಳನ್ನು ಸುಲಭಗೊಳಿಸುವ ಫೀಚರ್‌ಗಳು ಸ್ಮಾರ್ಟ್‌ಫೋನ್‌ನಲ್ಲಿವೆ. ಅವುಗಳಲ್ಲಿ ಬಹುತೇಕರು ಹೆಚ್ಚಾಗಿ ಗಮನಿಸದೇ ಇರುವ ಐದು ಉಪಯುಕ್ತ ಫೀಚರ್‌ಗಳ ಮಾಹಿತಿ ಇಲ್ಲಿದೆ.

Also Read : ಡಿಸ್ಕೌಂಟ್‌ ಬೆಲೆಯಲ್ಲಿ Oppo K14x ಮೊಬೈಲ್‌ ಖರೀದಿ ಮಾಡಲು ಇದು ಸೂಕ್ತ ಸಮಯ!

– Smartphone ನೋಟಿಫಿಕೇಷನ್ ಹಿಸ್ಟರಿ

ಕೆಲವೊಮ್ಮೆ ಫೋನ್‌ಗೆ ಬಂದ ಮುಖ್ಯವಾದ ನೋಟಿಫಿಕೇಷನ್ ಅನ್ನು ತಿಳಿಯದೇ ಕ್ಲಿಯರ್ ಮಾಡಿರುತ್ತೇವೆ. ನಂತರ ಆ ಮೆಸೇಜ್ ಯಾವ ಆಪ್‌ನಿಂದ ಬಂದಿತ್ತು ಎಂದು ಹುಡುಕಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಆಂಡ್ರಾಯ್ಡ್‌ ಫೋನ್‌ನಲ್ಲಿರುವ Notification ಹಿಸ್ಟರಿ ಫೀಚರ್ ಸಹಾಯಕ್ಕೆ ಬರುತ್ತದೆ. ಇದನ್ನು ಆನ್ ಮಾಡಿದರೆ ಇತ್ತೀಚೆಗೆ ಬಂದ ನೋಟಿಫಿಕೇಷನ್‌ಗಳ ದಾಖಲೆಯನ್ನು ನೋಡಬಹುದು. ಉದಾಹರಣೆಗೆ, ವಾಟ್ಸಾಪ್ ಮೆಸೇಜ್ ಅಥವಾ ಬೇರೆ ಆ್ಯಪ್‌ನಿಂದ ಬಂದ ಅಲರ್ಟ್ ಅನ್ನು ತಪ್ಪಾಗಿ ತೆಗೆದುಹಾಕಿದ್ದರೆ ಮತ್ತೆ ಪರಿಶೀಲಿಸಬಹುದು.

– Split Screen: ಒಂದೇ ಸಮಯದಲ್ಲಿ ಎರಡು ಆ್ಯಪ್ ಬಳಸಿ

ಒಂದು ಆ್ಯಪ್‌ನಲ್ಲಿ ವಿಡಿಯೋ ನೋಡುತ್ತಲೇ ಮತ್ತೊಂದು ಆ್ಯಪ್‌ನಲ್ಲಿ ಮೆಸೇಜ್ ಕಳುಹಿಸಬೇಕೇ? ಅದಕ್ಕಾಗಿ ಪದೇಪದೇ ಆ್ಯಪ್ ಬದಲಾಯಿಸುವ ಅಗತ್ಯವಿಲ್ಲ. ಸ್ಪ್ಲಿಟ್ Screen ಫೀಚರ್ ಮೂಲಕ ಒಂದೇ ಸ್ಕ್ರೀನ್‌ನಲ್ಲಿ ಎರಡು ಆಪ್‌ಗಳನ್ನು ತೆರೆಯಬಹುದು.

– App Pinning: ಬೇರೆಯವರಿಗೆ ಫೋನ್ ಕೊಟ್ಟಾಗ ಖಾಸಗಿತನ ಕಾಪಾಡಿ

ಯಾರಿಗಾದರೂ ಫೋಟೋ ತೋರಿಸಲು ಅಥವಾ ವಿಡಿಯೋ ನೋಡಲು ನಿಮ್ಮ ಫೋನ್ ಕೊಡುವ ಸಂದರ್ಭ ಬರುತ್ತದೆ. ಆದರೆ ಅವರು ಬೇರೆ ಆ್ಯಪ್‌ಗಳನ್ನು ತೆರೆಯಬಹುದು ಎಂಬ ಆತಂಕವಿರುತ್ತದೆ. ಇಂತಹ ಸಂದರ್ಭದಲ್ಲಿ App Pinning ಉಪಯುಕ್ತ. ಈ ಫೀಚರ್ ಮೂಲಕ ನಿರ್ದಿಷ್ಟ ಆ್ಯಪ್ ಅನ್ನು ಸ್ಕ್ರೀನ್‌ನಲ್ಲಿ ಲಾಕ್ ಮಾಡಬಹುದು. ಫೋನ್ ಪಡೆದವರು ಬೇರೆ ಆ್ಯಪ್‌ಗೆ ಹೋಗಲು ಸಾಧ್ಯವಾಗುವುದಿಲ್ಲ. ಮತ್ತೆ ಹೊರಬರಲು ನಿಮ್ಮ PIN ಅಥವಾ ಪಾಸ್‌ವರ್ಡ್ ಅಗತ್ಯವಾಗುವಂತೆ ಸೆಟ್ ಮಾಡಬಹುದು.

– Quick Share: ಇಂಟರ್‌ನೆಟ್ ಇಲ್ಲದೆಯೂ ಫೈಲ್‌ಗಳನ್ನು ಹಂಚಿಕೊಳ್ಳಿ

ಫೋಟೋ, ವಿಡಿಯೋ ಅಥವಾ ದೊಡ್ಡ ಫೈಲ್‌ಗಳನ್ನು ಮತ್ತೊಂದು Android ಫೋನ್‌ಗೆ ಕಳುಹಿಸಲು WhatsApp ಬಳಸುವ ಅಗತ್ಯವಿಲ್ಲ. Quick Share ಮೂಲಕ ಹತ್ತಿರದಲ್ಲಿರುವ ಹೊಂದಾಣಿಕೆಯ ಸಾಧನಗಳಿಗೆ ಫೈಲ್‌ಗಳನ್ನು ನೇರವಾಗಿ ಕಳುಹಿಸಬಹುದು. ಇದರಿಂದ WhatsApp ಮೂಲಕ ಕಳುಹಿಸುವಾಗ ಉಂಟಾಗಬಹುದಾದ ಫೋಟೋ ಕಂಪ್ರೆಷನ್ ಸಮಸ್ಯೆಯನ್ನೂ ತಪ್ಪಿಸಬಹುದು. ಫೈಲ್ ವರ್ಗಾವಣೆಗೆ ಮೊಬೈಲ್ ಡೇಟಾ ಬಳಸುವ ಅಗತ್ಯವಿಲ್ಲ. ಸಾಧನಗಳು ಮತ್ತು ಸಂಪರ್ಕದ ಸ್ಥಿತಿಗೆ ಅನುಗುಣವಾಗಿ Wi-Fi ಹಾಗೂ Bluetooth ಬಳಸಲಾಗುತ್ತದೆ.

– Clipboard History: ಕಾಪಿ ಮಾಡಿದ ಮಾಹಿತಿಯನ್ನು ಮತ್ತೆ ಬಳಸಿ

ಫೋನ್‌ನಲ್ಲಿ ಒಂದು ವಿಷಯವನ್ನು ಕಾಪಿ ಮಾಡಿದ ನಂತರ ಮತ್ತೊಂದು ವಿಷಯ ಕಾಪಿ ಮಾಡಿದರೆ ಹಿಂದಿನ ಮಾಹಿತಿ ಕಳೆದುಹೋಗುತ್ತದೆ ಎಂದು ಹಲವರು ಭಾವಿಸುತ್ತಾರೆ. ಆದರೆ Gboard ಕೀಬೋರ್ಡ್‌ನ Clipboard History ಫೀಚರ್ ಮೂಲಕ ಇತ್ತೀಚೆಗೆ ಕಾಪಿ ಮಾಡಿದ ಹಲವು ಮಾಹಿತಿಗಳನ್ನು ಮತ್ತೆ ಬಳಸಬಹುದು. ಉದಾಹರಣೆಗೆ, ವಿಳಾಸ, ಫೋನ್ ನಂಬರ್ ಅಥವಾ ವೆಬ್‌ಸೈಟ್ ಲಿಂಕ್‌ಗಳನ್ನು ಪದೇಪದೇ ಕಾಪಿ ಮಾಡಬೇಕಾದಾಗ ಇದು ಸಹಾಯಕ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :