iQOO Neo 10 ಈಗ ಭಾರತದಲ್ಲಿ ಎರಡು ಹೊಸ ಬಣ್ಣ ಆಯ್ಕೆಗಳಲ್ಲಿ ಬಿಡುಗಡೆ ಆಗಿದೆ. ಅವುಗಳು ಕ್ರಮವಾಗಿ ಇನ್ಫರ್ನೊ ರೆಡ್ ಮತ್ತು ಟೈಟಾನಿಯಂ ಕ್ರೋಮ್ ಬಣ್ಣಗಳ ಆಯ್ಕೆ ಆಗಿದೆ. ಈ ಮೊಬೈಲ್ ಬಿಡುಗಡೆ ಆಗಿ ಸುಮಾರು ಒಂದು ವರ್ಷದ ಬಳಿಕ ಸಂಸ್ಥೆಯು ಹೊಸ ಬಣ್ಣ ಆಯ್ಕೆಗಳಲ್ಲಿ ಮತ್ತೆ ಮಾರುಕಟ್ಟೆಗೆ ಪರಿಚಯಿಸಿದೆ. ಅಂದಹಾಗೆ ಈ ಫೋನ್ ಇನ್ಫರ್ನೊ ರೆಡ್ ಮತ್ತು ಟೈಟಾನಿಯಂ ಕ್ರೋಮ್ ಬಣ್ಣಗಳ ಆಯ್ಕೆಯಲ್ಲಿ ಲಭ್ಯವಿದೆ. ಇನ್ನು ಈ ಫೋನ್ Snapdragon 8 Gen 4 ಚಿಪ್ಸೆಟ್ ಪ್ರೊಸೆಸರ್ ಪವರ್ನಲ್ಲಿ ಕೆಲಸ ಮಾಡಲಿದೆ. ಇದಲ್ಲದೇ ಈ ಮೊಬೈಲ್ 7,000mAh ಬ್ಯಾಟರಿ ಬ್ಯಾಕ್ಅಪ್ ಸಪೋರ್ಟ್ ಅನ್ನು ಪಡೆದುಕೊಂಡಿದೆ. ಹಾಗಾದರೆ ಐಕ್ಯೂ ನಿಯೋ 10 ಮೊಬೈಲ್ ಹೊಸ ಕಲರ್ ಲಾಂಚ್ ಮಾಹಿತಿ ಹಾಗೂ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ.
Also Read : LPG, PAN ಕಾರ್ಡ್, ಕ್ರೆಡಿಟ್ ಕಾರ್ಡ್, UPI ಬಳಕೆಯಲ್ಲಿ ನಾಳೆಯಿಂದ ಹೊಸ ನಿಯಮಗಳು!
iQOO ಕಂಪನಿಯ ಐಕ್ಯೂ ನಿಯೋ 10 ಮೊಬೈಲ್ ಈಗಾಗಲೇ ಗ್ರಾಹಕರ ಗಮನ ಸೆಳೆದಿದೆ. ಈ ಸ್ಮಾರ್ಟ್ಫೋನ್ ಈಗ Alpine White ಹಾಗೂ Asphalt Black ಕಲರ್ ಆಯ್ಕೆಗಳಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇನ್ನು ಈ ಮೊಬೈಲ್ನ ಹೊಸ 8GB RAM + 256GB ಸ್ಟೋರೇಜ್ ವೇರಿಯಂಟ್ ಬೆಲೆ 37,999 ರೂ.ಗಳು ಆಗಿದೆ. ಹಾಗೆಯೇ 16GB + 256GB ವೇರಿಯಂಟ್ ದರವು 42,999 ರೂ.ಗಳು ಆಗಿದೆ. ಆದರೆ ಆರಂಭಿಕ ಕೊಡುಗೆಯಾಗಿ 8GB ಮತ್ತು 16GB RAM ವೇರಿಯಂಟ್ಗಳು ಕ್ರಮವಾಗಿ 34,999 ರೂ.ಗಳು ಮತ್ತು Rs. 40,999 ರೂ.ಗಳ ಬೆಲೆಯಲ್ಲಿ ಖರೀದಿಗೆ ಲಭ್ಯ. ಇನ್ನು ಮೇ 5 ರಿಂದ ಮಧ್ಯಾಹ್ನ 12 ಗಂಟೆಗೆ ಅಮೆಜಾನ್ನಲ್ಲಿ ಮಾರಾಟ ಪ್ರಾರಂಭಿಸಲಿದೆ.
ಐಕ್ಯೂ ನಿಯೋ 10 ಮೊಬೈಲ್ 6.78 ಇಂಚಿನ 1.5K AMOLED ಡಿಸ್ಪ್ಲೇ ಅನ್ನು ಒಳಗೊಂಡಿದ್ದು, 144Hz ರಿಫ್ರೆಶ್ ರೇಟ್ ಸಪೋರ್ಟ್ ಹೊಂದಿದೆ. ಅಲ್ಲದೇ ಈ ಡಿಸ್ಪ್ಲೇಯು 1,260×2,800 ಪಿಕ್ಸಲ್ ರೆಸಲ್ಯೂಶನ್ ಅನ್ನು ಒಳಗೊಂಡಿದೆ. ಹಾಗೆಯೇ ಈ ಫೋನ್ Snapdragon 8 Gen 4 ಚಿಪ್ಸೆಟ್ ಪ್ರೊಸೆಸರ್ ಸಾಮರ್ಥ್ಯದಲ್ಲಿ ಕಾರ್ಯ ನಿರ್ವಹಿಸಲಿದೆ. ಇದಕ್ಕೆ ಪೂರಕವಾಗಿ 8GB RAM + 128GB ಹಾಗೂ 16GB + 256GB ವೇರಿಯಂಟ್ ಆಯ್ಕೆ ಪಡೆದಿದೆ.
ಹಾಗೆಯೇ ಐಕ್ಯೂ ನಿಯೋ 10 ಮೊಬೈಲ್ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ರಚನೆ ಪಡೆದಿದ್ದು, ಪ್ರಾಥಮಿಕ ಕ್ಯಾಮೆರಾವು 50MP ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಸೆಕೆಂಡರಿ ಕ್ಯಾಮೆರಾವು 8MP ಸೆನ್ಸಾರ್ ಸಾಮರ್ಥ್ಯದಲ್ಲಿ ಇದೆ. ಸೆಲ್ಫಿ ಹಾಗೂ ವಿಡಿಯೋ ಕರೆಗಳಿಗಾಗಿ ಮುಂಭಾಗದಲ್ಲಿ 32 MP ಸೆನ್ಸಾರ್ನ ಕ್ಯಾಮೆರಾ ಪಡೆದಿದೆ. ಈ ಮೊಬೈಲ್ 7,000mAh ಸಾಮರ್ಥ್ಯದ ಬ್ಯಾಟರಿ ಪವರ್ ಹೊಂದಿದೆ. ಇದಕ್ಕೆ ಪೂರಕವಾಗಿ ಈ ಮೊಬೈಲ್ 120W ವೈರ್ಡ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಸಹ ಒಳಗೊಂಡಿದೆ.