LPG, PAN ಕಾರ್ಡ್‌, ಕ್ರೆಡಿಟ್‌ ಕಾರ್ಡ್‌, UPI ಬಳಕೆಯಲ್ಲಿ ನಾಳೆಯಿಂದ ಹೊಸ ನಿಯಮಗಳು!

New Rules From May 1: ನಾಳೆಯಿಂದ (ಮೇ 1 ರಿಂದ) ಮೇ ತಿಂಗಳು ಶುರುವಾಗಲಿದ್ದು, ಅದರೊಂದಿಗೆ ಜನರ ದೈನಂದಿನ ವಹಿವಾಟುಗಳ ಮೇಲೆ ಪರಿಣಾಮ ಬೀರುವ ಕೆಲವು ಬದಲಾವಣೆಗಳು ಆಗಲಿವೆ. ಪ್ರತಿ ತಿಂಗಳ ಆರಂಭದಂತೆಯೇ ಈ ಬಾರಿಯೂ ಸಹ LPG ಬುಕಿಂಗ್, ಪ್ಯಾನ್‌ ಕಾರ್ಡ್ ಕಾರ್ಯ ವಿಧಾನಗಳಿಂದ ಹಿಡಿದು ಕ್ರೆಡಿಟ್ ಕಾರ್ಡ್ ಶುಲ್ಕಗಳು ಮತ್ತು ಡಿಜಿಟಲ್ ಭದ್ರತಾ ಪ್ರೋಟೋಕಾಲ್‌ಗಳ ವರೆಗೆ ಕೆಲವು ಪ್ರಮುಖ ಬದಲಾವಣೆಗಳು ನಡೆಯಲಿವೆ. ಈ ಹೊಸ ಬದಲಾವಣೆಗಳು ಸಾಮಾನ್ಯ ಜನರ ಜೇಬಿನ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳು ಇವೆ. ಹಾಗಾದರೆ ಮೇ 1 ರಿಂದ ಜಾರಿಗೆ ಬರಲಿರುವ ಕೆಲವು ಹೊಸ ನಿಯಮಗಳ ಕುರಿತು ಈ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : 12GB RAM ಇರುವ OnePlus 13 ಮೊಬೈಲ್‌ ಈಗ ಭಾರೀ ಬೆಲೆ ಇಳಿಕೆಯಲ್ಲಿ ಲಭ್ಯ!

LPG ಸಿಲಿಂಡರ್ ಬುಕಿಂಗ್ ಮತ್ತು ವಿತರಣೆಗೆ ಹೊಸ ನಿಯಮಗಳು

ಈ ಮೊದಲು ನಗರ ಪ್ರದೇಶಗಳಲ್ಲಿ ಎರಡನೇ ಬುಕ್ ಮಾಡಿದ LPG ಸಿಲಿಂಡರ್ ಅನ್ನು 21 ದಿನಗಳಲ್ಲಿ ಸ್ವೀಕರಿಸಬಹುದಾಗಿತ್ತು. ಆದಾಗ್ಯೂ ಹೊಸ ನಿಯಮಗಳ ಅಡಿಯಲ್ಲಿ ಈಗ ಎರಡು ಸಿಲಿಂಡರ್ ಬುಕಿಂಗ್‌ಗಳ ನಡುವೆ 25 ದಿನಗಳ ಕಡ್ಡಾಯ ಅಂತರದ ಅಗತ್ಯವಿದೆ. ಗ್ರಾಮೀಣ ಪ್ರದೇಶಗಳಲ್ಲಿ ಈ ಅಂತರವು 45 ದಿನಗಳವರೆಗೆ ವಿಸ್ತರಿಸಬಹುದು. ಹೆಚ್ಚುವರಿಯಾಗಿ, ಬಳಕೆದಾರರು ಈಗ ವಿತರಣೆಯ ಸಮಯದಲ್ಲಿ OTP ಆಧಾರಿತ ಪರಿಶೀಲನಾ ಕೋಡ್ ಅನ್ನು ಒದಗಿಸಬೇಕಾಗುತ್ತದೆ. ವಿತರಣಾ ಏಜೆಂಟ್ OTP ಇಲ್ಲದೆ ಸಿಲಿಂಡರ್ ಅನ್ನು ಹಸ್ತಾಂತರಿಸುವುದಿಲ್ಲ. ಇನ್ನು ಸಬ್ಸಿಡಿ ಸಂಪರ್ಕಗಳಿಗೆ ಒಬ್ಬರ ಆಧಾರ್ eKYC ಅನ್ನು ಅಪ್‌ಡೇಟ್‌ ಮಾಡುವುದು ಕಡ್ಡಾಯವಾಗಿರುತ್ತದೆ.

ಕ್ರೆಡಿಟ್ ಕಾರ್ಡ್ ನಿಯಮಗಳಲ್ಲಿ ಬದಲಾವಣೆಗಳು

ಮೇ 1 ರಿಂದ ಎಸ್‌ಬಿಐ ಕಾರ್ಡ್ ಸೇರಿದಂತೆ ಹಲವಾರು ಬ್ಯಾಂಕ್‌ಗಳು late payment ಶುಲ್ಕಗಳು, ವಾರ್ಷಿಕ ಶುಲ್ಕಗಳು ಮತ್ತು ರಿವಾರ್ಡ್ ಪಾಯಿಂಟ್‌ಗಳಿಗೆ ಸಂಬಂಧಿಸಿದಂತೆ ತಮ್ಮ ರೂಲ್ಸ್‌ಗಳನ್ನು ಪರಿಷ್ಕರಿಸುತ್ತಿವೆ. late payment ಶುಲ್ಕಗಳು ಹೆಚ್ಚಾಗಬಹುದು ಎನ್ನಲಾಗಿದೆ. ಆದರೆ ಕೆಲವು ಯುಟಿಲಿಟಿ ಬಿಲ್ ಪಾವತಿಗಳು ಮತ್ತು ಬಾಡಿಗೆ ವಹಿವಾಟುಗಳಲ್ಲಿ ಗಳಿಸಿದ ರಿವಾರ್ಡ್ ಪಾಯಿಂಟ್‌ಗಳು ಕಡಿಮೆಯಾಗಬಹುದು. ಅಂತರರಾಷ್ಟ್ರೀಯ ವಹಿವಾಟುಗಳಿಗೆ ಹೆಚ್ಚುವರಿ KYC ಪರಿಶೀಲನೆ ಅಗತ್ಯವಾಗಬಹುದು. ಹಾಗೆಯೇ 5,000 ರೂ.ಗಳಿಗಿಂತ ಹೆಚ್ಚಿನ ಎಲ್ಲಾ ವ್ಯವಹಾರಗಳಿಗೆ ಬ್ಯಾಂಕುಗಳು ಈಗ ಕಡ್ಡಾಯ SMS ಅಥವಾ ಆಪ್‌ ನೋಟಿಫಿಕೇಶನ್‌ ಕಳುಹಿಸುತ್ತವೆ.

UPI ಮತ್ತು ಬ್ಯಾಂಕಿಂಗ್ ವಹಿವಾಟುಗಳಿಗೆ ಭದ್ರತೆ

ಡಿಜಿಟಲ್ ಪಾವತಿಗಳನ್ನು ಇನ್ನಷ್ಟು ಸುರಕ್ಷಿತವಾಗಿಸಲು ಎಲ್ಲಾ UPI, ನೆಟ್ ಬ್ಯಾಂಕಿಂಗ್ ಮತ್ತು ಕಾರ್ಡ್ ವಹಿವಾಟುಗಳಲ್ಲಿ ಟು ಸ್ಟೇಪ್ ಅಥೆಂಟಿಕೇಶನ್ (2FA) ಅನ್ನು ಹೊಸದಾಗಿ ಜಾರಿಗೊಳಿಸಲಾಗುತ್ತದೆ. ಯಾವುದೇ ಅನಧಿಕೃತ ಅಥವಾ ಅನುಮಾನಾಸ್ಪದ ವಹಿವಾಟುಗಳಿಗೆ ಇನ್‌ಸ್ಟಂಟ್‌ ಅಲರ್ಟ್‌ ನೋಟಿಫಿಕೇಶನ್‌ಗಳನ್ನು ಕಳುಹಿಸಲಾಗುತ್ತದೆ.

ಆನ್‌ಲೈನ್ ಗೇಮಿಂಗ್ ಮತ್ತು ಹೂಡಿಕೆ ರೂಲ್ಸ್‌ನಲ್ಲಿ ಬದಲಾವಣೆಗಳು

ಮೇ 1 ರಿಂದ ಜಾರಿಗೆ ಬರುವಂತೆ ಹೊಸ ಆನ್‌ಲೈನ್ ಗೇಮಿಂಗ್ ನಿಯಮಗಳ ಅಡಿಯಲ್ಲಿ ಆನ್‌ಲೈನ್ ಗೇಮಿಂಗ್ ಪ್ರಾಧಿಕಾರವನ್ನು ಸ್ಥಾಪಿಸಲಾಗುತ್ತದೆ. ನೈಜ-ಹಣದ ಗೇಮಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಕಟ್ಟುನಿಟ್ಟಾದ KYC ಮಾನದಂಡಗಳು, ತೆರಿಗೆ ಅನುಸರಣೆ ಮತ್ತು ವಿಷಯ ನಿಯಮಗಳನ್ನು ಜಾರಿಗೊಳಿಸಲಾಗುವುದು. ಸರಳವಾಗಿ ಹೇಳುವುದಾದರೆ ಹಣಕಾಸಿನ ವ್ಯವಹಾರ ಒಳಗೊಂಡಿರುವ ಗೇಮ್‌ಗಳನ್ನು ಆಯೋಜಿಸುವ ಪ್ಲಾಟ್‌ಫಾರ್ಮ್‌ಗಳು ಪ್ರಾಧಿಕಾರದಲ್ಲಿ ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗುತ್ತದೆ.

PAN ಮತ್ತು ಹಣಕಾಸಿನ ಹೊಸ ನಿಯಮ

PAN ಕಾರ್ಡ್‌ಗಳಿಗೆ ಸಂಬಂಧಿಸಿದ ನಿಯಮಗಳನ್ನು ಬಿಗಿಗೊಳಿಸಲಾಗುತ್ತಿದೆ. ಹೀಗಾಗಿ ನಿಮ್ಮ ಕೆವೈಸಿ ವಿವರಗಳನ್ನು ಅಪ್‌ಡೇಟ್‌ ಮಾಡುವುದು ಕಡ್ಡಾಯವಾಗುತ್ತದೆ. ಅಪ್‌ಡೇಟ್‌ ಮಾಡಲು ವಿಫಲವಾದರೆ ಕೆಲವು ಹಣಕಾಸು ಸೇವೆಗಳಲ್ಲಿ ಅಡಚಣೆ ಉಂಟಾಗಬಹುದು.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :