ಇವೇಲ್ಲಾ ಅತ್ಯುತ್ತಮ 64MP ಕ್ಯಾಮರಾವುಳ್ಳ ಸ್ಮಾರ್ಟ್ಫೋನ್ಗಳು - 2020

ಇವರಿಂದ Ravi Rao | ಅಪ್‌ಡೇಟ್ ಮಾಡಲಾಗಿದೆ Jan 14 2020
Slide 1 - ಇವೇಲ್ಲಾ ಅತ್ಯುತ್ತಮ 64MP ಕ್ಯಾಮರಾವುಳ್ಳ ಸ್ಮಾರ್ಟ್ಫೋನ್ಗಳು - 2020

ವಿಶ್ವ ಮತ್ತು ದೇಶದ ಕಂಪನಿಗಳು ಈಗ ತಮ್ಮ ತಮ್ಮ ಮುಂಬರಲಿರುವ ಮತ್ತು ಸದ್ಯಕ್ಕೆ ಬಿಡುಗಡೆಯಾಗಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿವೆ. ಗ್ರಾಹಕರನ್ನು ಪ್ರಲೋಭಿಸಲು ಕಂಪನಿಗಳು ಸ್ಮಾರ್ಟ್ಫೋನ್ ಕ್ಯಾಮೆರಾಗಳಿಗೆ ವಿಶೇಷ ಗಮನ ನೀಡಿದೆ. ಹೆಚ್ಚಿನ ರೆಸಲ್ಯೂಶನ್ ಕ್ಯಾಮೆರಾಗಳನ್ನು ನೀಡುವುದರ ಹೊರತಾಗಿ ಕಂಪನಿಗಳು ಉತ್ತಮ ಫೋಟೋಗ್ರಾಫಿಗಾಗಿ ಅನೇಕ ಬ್ಯಾಕ್ ಕ್ಯಾಮೆರಾ ಸೆಟಪ್ ಅನ್ನು ಸಹ ನೀಡುತ್ತಿವೆ. ಮಾತ್ರವಲ್ಲ ಇವು ಸದ್ಯದ ಮಾರುಕಟ್ಟೆಯ ಗರಿಷ್ಠ ಮಟ್ಟದ 64MP ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ ಲೆನ್ಸ್ಗಳು ಸಹ ಸ್ಮಾರ್ಟ್ಫೋನ್ಗಳಲ್ಲಿ ಬರುತ್ತಿವೆ. ಈ 64MP ಮೆಗಾಪಿಕ್ಸೆಲ್‌ಗಳನ್ನು ಹೊಂದಿರುವ ಕೆಲವು ಅತ್ಯುತ್ತಮ ಕ್ಯಾಮೆರಾ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಇಲ್ಲಿ ಹೇಳಲಾಗಿದೆ. ಇವು ನಿಮ್ಮ ಫೋಟೋಗ್ರಾಫಿ ಹವ್ಯಾಸವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವಲ್ಲಿ ಹೆಚ್ಚು ಸಹಕರಿಸಲಿವೆ. ಏಕೆಂದರೆ ಇದರಲ್ಲಿನ ಕೆಲವು ಫೋನ್ಗಳನ್ನು ನಾವೀಗಾಗಲೇ ಟೆಸ್ಟ್ ಮಾಡಿ ನೋಡಿದ್ದೇವೆ.

Slide 2 - ಇವೇಲ್ಲಾ ಅತ್ಯುತ್ತಮ 64MP ಕ್ಯಾಮರಾವುಳ್ಳ ಸ್ಮಾರ್ಟ್ಫೋನ್ಗಳು - 2020

Realme X2

ಈ ಸ್ಮಾರ್ಟ್ಫೋನ್ 64MP ಕ್ಯಾಮೆರಾವನ್ನು ಪ್ಯಾಕ್ ಮಾಡುವ ಇತ್ತೀಚಿನ realme ಕಂಪನಿಯ ಕೊಡುಗೆಯಾಗಿದೆ. ಇದು XT ಫೋನಂತೆಯೇ  ಬಹುತೇಕ ಸ್ಪೆಕ್ಸ್ ಅನ್ನು ಹೊಂದಿದೆ. ಆದರೆ ಹೆಚ್ಚು ಶಕ್ತಿಶಾಲಿ ಸ್ನಾಪ್‌ಡ್ರಾಗನ್ 730G ಪ್ರೊಸೆಸರ್ ಹೊಂದಿದೆ. ಈ ಹ್ಯಾಂಡ್‌ಸೆಟ್‌ನ ಹಿಂದಿನ ಕ್ಯಾಮೆರಾ ಕ್ವಾಡ್ 64MP ಸ್ಯಾಮ್‌ಸಂಗ್ GW1 ಪ್ರೈಮರಿ ಸೆನ್ಸರ್ ಜೊತೆಗೆ 8MP ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಮತ್ತು 2MP ಡೆಪ್ತ್ ಸೆನ್ಸಾರ್ ಕೊನೆಯದಾಗಿ 2MP ಮ್ಯಾಕ್ರೋ ಸೆನ್ಸಾರ್ ಅನ್ನು ತೋರಿಸುತ್ತದೆ. ಇದರಲ್ಲಿ ಸೆಲ್ಫಿಗಳಿಗಾಗಿ ಇದು ಮುಂಭಾಗದಲ್ಲಿರುವ 16MP ಸೆನ್ಸರ್ ಬದಲು 32MP ಶೂಟರ್ ನೀಡಲಾಗಿದೆ.

Slide 3 - ಇವೇಲ್ಲಾ ಅತ್ಯುತ್ತಮ 64MP ಕ್ಯಾಮರಾವುಳ್ಳ ಸ್ಮಾರ್ಟ್ಫೋನ್ಗಳು - 2020

Realme X2 Pro

ಈ ಸ್ಮಾರ್ಟ್ಫೋನಿನ ಹಿಂಭಾಗದಲ್ಲಿ ಕ್ವಾಡ್ ಕ್ಯಾಮೆರಾ ಸೆಟಪ್ ಶ್ರೇಣಿಯನ್ನು ಹೊಂದಿದೆ. ಇದರಲ್ಲಿ ಸ್ಯಾಮ್‌ಸಂಗ್ GW1 ಸೆನ್ಸರ್ 64MP ಪ್ರೈಮರಿ ಸೆನ್ಸರ್ 20x ಹೈಬ್ರಿಡ್ ಜೂಮ್ ಹೊಂದಿರುವ 13MP ಟೆಲಿಫೋಟೋ ಲೆನ್ಸ್ 115 ಡಿಗ್ರಿ ಫೀಲ್ಡ್-ಆಫ್-ವ್ಯೂ ಮತ್ತು 8MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್, ಮತ್ತು ಪೋಟ್ರೇಟ್ ಶಾಟ್ಗಳಿಗಾಗಿ 2MP ಡೆಪ್ತ್ ಸೆನ್ಸರ್ ನೀಡಲಾಗಿದೆ. ಆದರೆ ಇದರಲ್ಲಿ 2MP ಮ್ಯಾಕ್ರೋ ಲೆನ್ಸ್ ನೀಡಿಲ್ಲ. Realme X2 Pro ಭಾರತದಲ್ಲಿ 90Hz ಅಲ್ಟ್ರಾ ಸ್ಮೂತ್ ಡಿಸ್ಪ್ಲೇ ಮತ್ತು Snapdragon 855 ಪ್ಲಸ್ ಹೊಂದಿರುವ ಕಡಿಮೆ ಬೆಲೆಯ ಅತ್ಯುತ್ತಮವಾದ ಸ್ಮಾರ್ಟ್ಫೋನ್ ವಿಭಾಗದಲ್ಲಿ ಮೊದಲಿಗನಾಗಿದೆ.

Slide 4 - ಇವೇಲ್ಲಾ ಅತ್ಯುತ್ತಮ 64MP ಕ್ಯಾಮರಾವುಳ್ಳ ಸ್ಮಾರ್ಟ್ಫೋನ್ಗಳು - 2020

Xaiomi Redmi Note 8 Pro

ಭಾರತದಲ್ಲಿ ಬಿಡುಗಡೆಯಾಗಿರುವ Redmi Note 8 Pro ಸ್ಮಾರ್ಟ್ಫೋನ್ 64MP ಪ್ರೈಮರಿ ಸೆನ್ಸಾರ್ ಆಗಿದ್ದು 8MP ಸೆಕೆಂಡರಿ ಲೆನ್ಸ್ ಮತ್ತು ಮ್ಯಾಕ್ರೋ  ಶಾಟ್‌ ಹಾಗು ಡೆಪ್ತ್ ಸೆನ್ಸರ್ಗಳಿಗಾಗಿ 2MP + 2MP ಸೆನ್ಸರ್‌ಗಳನ್ನು ಹೊಂದಿರುವ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಇದರ ಕ್ರಮವಾಗಿ ಫೋನ್‌ನ ಮುಂಭಾಗದ ಕ್ಯಾಮೆರಾವು ಸೆಲ್ಫಿಗಳು ಮತ್ತು ವಿಡಿಯೋ ಕರೆಗಾಗಿ 6.53 ಇಂಚಿನ LCD ಡಿಸ್ಪ್ಲೇಯ ಮೇಲೆ 20MP ಶೂಟರ್ ಅನ್ನು ಪಡೆಯುತ್ತದೆ. ಒರ್ರತೆಯಾಗಿ ಈ ರೇಂಜಲ್ಲಿ ಈ ಸ್ಮಾರ್ಟ್ಫೋನ್ ಡಿಸೆಂಟ್ ಆಗಿದೆ.

Slide 5 - ಇವೇಲ್ಲಾ ಅತ್ಯುತ್ತಮ 64MP ಕ್ಯಾಮರಾವುಳ್ಳ ಸ್ಮಾರ್ಟ್ಫೋನ್ಗಳು - 2020

Realme XT

ಈಗಾಗಲೇ ತಿಳಿದಿರುವ ಹಾಗೆ ಭಾರತದ ಮಾರುಕಟ್ಟೆಯನ್ನು Realme ಮತ್ತು Xiaomi ಅಥವಾ Redmi ಅತಿ ಹೆಚ್ಚಾಗಿ ಆವರಿಸಿಕೊಂಡಿದೆ. ಈ ಸ್ಮಾರ್ಟ್ಫೋನ್ ಸಹ 64MP ಕ್ಯಾಮೆರಾದೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಕಾಲಿಟ್ಟ ಮೊದಲ ಸ್ಮಾರ್ಟ್‌ಫೋನ್ ಆಗಿ ಬಿಡುಗಡೆಯಾಯಿತು. ಕಂಪನಿಯು ಆಗಸ್ಟ್‌ನಲ್ಲಿ ಈ ಫೋನ್ ಅನ್ನು ಮತ್ತೆ ಪರಿಚಯಿಸಿತು. ಇದರ ಹಿಂಭಾಗದಲ್ಲಿ ಕ್ವಾಡ್ ಕ್ಯಾಮೆರಾಗಳೊಂದಿಗೆ ಬರುತ್ತದೆ. ಇದು ಅದೇ ಮಾದರಿಯ ಸ್ಯಾಮ್‌ಸಂಗ್‌ನ GW1 ಸೆನ್ಸರ್ ಜೊತೆಗೆ 64MP ಪ್ರೈಮರಿ ಕ್ಯಾಮೆರಾ 8MP ಅಲ್ಟ್ರಾ ವೈಡ್ ಆಂಗಲ್ ಸೆನ್ಸರ್ 2MP ಡೆಪ್ತ್ ಸೆನ್ಸಾರ್ ಮತ್ತು 2MP ಮ್ಯಾಕ್ರೋ ಸೆನ್ಸಾರ್‌ನೊಂದಿಗೆ ಜೋಡಿಯಾಗಿದೆ.

Slide 6 - ಇವೇಲ್ಲಾ ಅತ್ಯುತ್ತಮ 64MP ಕ್ಯಾಮರಾವುಳ್ಳ ಸ್ಮಾರ್ಟ್ಫೋನ್ಗಳು - 2020

Samsung Galaxy A70s

ಈ ಹೊಸ Samsung Galaxy A70s ಸ್ಮಾರ್ಟ್ಫೋನ್ ಕಂಪನಿಯ ಈ ವಿಭಾಗದ ಮೊದಲ ಸ್ಮಾರ್ಟ್ಫೋನ್ ಆಗಿದ್ದು ಭಾರತದ ಎರಡನೆಯದಾಗಿದೆ. 64MP ಕ್ಯಾಮೆರಾ ಹೊಂದಿರುವ ಸ್ಯಾಮ್‌ಸಂಗ್‌ನ ಮೊದಲ ಸ್ಮಾರ್ಟ್‌ಫೋನ್ ಆಗಿದೆ. ಈ ಹ್ಯಾಂಡ್‌ಸೆಟ್ ಸ್ಪಷ್ಟವಾಗಿ ಮನೆಯೊಳಗಿನ ISOCELL ಬ್ರೈಟ್ GW1 ಸೆನ್ಸರ್ ಜೊತೆಗೆ ಇದರ 64MP ಪ್ರೈಮರಿ ಸೆನ್ಸರ್ ಜೊತೆಗೆ 5MP ಡೆಪ್ತ್ ಸೆನ್ಸಾರ್ ಮತ್ತು 8MP ಅಲ್ಟ್ರಾ-ವೈಡ್ ಲೆನ್ಸ್‌ನೊಂದಿಗೆ ಜೋಡಿಯಾಗಿ ಟ್ರಿಪಲ್ ಕ್ಯಾಮೆರಾ ಸೆನ್ಸರ್‌ಗಳನ್ನು ಒಳಗೊಂಡಿದೆ.

Slide 7 - ಇವೇಲ್ಲಾ ಅತ್ಯುತ್ತಮ 64MP ಕ್ಯಾಮರಾವುಳ್ಳ ಸ್ಮಾರ್ಟ್ಫೋನ್ಗಳು - 2020

Oppo K5

ಈ ಸ್ಮಾರ್ಟ್ಫೋನ್ ಸಹ ಅದೇ ಮಾದರಿಯಲ್ಲಿ ಪರಿಚಯಿಸಿದಂತೆ ಸ್ಯಾಮ್‌ಸಂಗ್‌ನ ISOCELL ಸೆನ್ಸರ್ ಒಳಗೊಂಡಿದ್ದು 64MP ಮೆಗಾಪಿಕ್ಸೆಲ್ ಸಂವೇದಕದಲ್ಲಿ ಒಪ್ಪೊ ಸಾಕಷ್ಟು ಉತ್ತಮವಾಗಿದೆ. ಇದು ಸಹ ಕ್ವಾಡ್ ಬ್ಯಾಕ್ ಕ್ಯಾಮೆರಾ ಸೆಟಪ್ ಅನ್ನು 64MP ಪ್ರೈಮರಿ ಮತ್ತು 8MP ವೈಡ್ ಆಂಗಲ್ ಲೆನ್ಸ್ 119 ಡಿಗ್ರಿ ಫೀಲ್ಡ್-ಆಫ್ ವ್ಯೂ 2MP ಡೆಪ್ತ್ ಸೆನ್ಸಿಂಗ್ ಯುನಿಟ್ ಮತ್ತು 2MP ಮ್ಯಾಕ್ರೋ ಲೆನ್ಸ್ ಅನ್ನು ಒಳಗೊಂಡಿದೆ. ಇದರ  ಮುಂಭಾಗದಲ್ಲಿ 32MP ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.

Slide 8 - ಇವೇಲ್ಲಾ ಅತ್ಯುತ್ತಮ 64MP ಕ್ಯಾಮರಾವುಳ್ಳ ಸ್ಮಾರ್ಟ್ಫೋನ್ಗಳು - 2020

Motorola One Hyper

ಈ ಹೊಸ ಮೊಟೊರೊಲಾ ಒನ್ ಹೈಪರ್ ಸಾಕಷ್ಟು ಆಸಕ್ತಿದಾಯಕ ಫೋನ್ ಆಗಿದೆ. ಇದರಲ್ಲಿ 64MP ಹಿಂಬದಿಯ ಕ್ಯಾಮೆರಾ ಹೊರತುಪಡಿಸಿ ಫೋನ್ 32MP ಪಾಪ್-ಅಪ್ ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ. ಆದರೆ ಫೋನ್‌ಗೆ ಅದರ ಹೆಸರನ್ನು ನೀಡುವ ತಂತ್ರಜ್ಞಾನವು 45W ಹೈಪರ್ ಚಾರ್ಜಿಂಗ್ ಆಗಿದ್ದು ಇದು 4000mAh ಬ್ಯಾಟರಿಯ 75% ಅನ್ನು ಕೇವಲ 30 ನಿಮಿಷಗಳಲ್ಲಿ ಟಾಪ್ ಅಪ್ ಮಾಡಬಹುದು.

Slide 9 - ಇವೇಲ್ಲಾ ಅತ್ಯುತ್ತಮ 64MP ಕ್ಯಾಮರಾವುಳ್ಳ ಸ್ಮಾರ್ಟ್ಫೋನ್ಗಳು - 2020

Nokia 8.2

ಈ ನೋಕಿಯಾ 8.2 ಎಚ್‌ಎಂಡಿ ಗ್ಲೋಬಲ್‌ನ ಅಂದ್ರೆ ನೋಕಿಯಾದ ಮೊಟ್ಟ ಮೊದಲ 64MP ಕ್ಯಾಮೆರಾ ಫೋನ್ ಆಗಲಿದೆ. ಈ ಹ್ಯಾಂಡ್‌ಸೆಟ್ ಈ  ವರ್ಷದ ಆರಂಭದಲ್ಲಿನ ಸ್ಪೇನ್‌ನ ಬಾರ್ಸಿಲೋನಾದಲ್ಲಿ ನಡೆಯುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್ (MWC 2020) ರಲ್ಲಿ ಬಿಡುಗಡೆಯಾಗಲಿದೆ ಎಂಬ ವದಂತಿ ಇದೆ. ನೋಕಿಯಾ 8.2 ಕ್ವಾಡ್ ಬ್ಯಾಕ್ ಕ್ಯಾಮೆರಾ ಸೆಟಪ್ ಅನ್ನು 64MP ಪ್ರೈಮರಿ ಸೆನ್ಸಾರ್ ಮತ್ತು ನೈಟ್ ಮೋಡ್ನೊಂದಿಗೆ ಕಡಿಮೆ ಬೆಳಕಿನ ವಾತಾವರಣದಲ್ಲಿ ಚಿತ್ರಗಳನ್ನು ತೆಗೆದುಕೊಳ್ಳಲು ಪ್ಯಾಕ್ ಮಾಡುತ್ತದೆ ಎಂದು ವರದಿಯಾಗಿದೆ. 

Slide 10 - ಇವೇಲ್ಲಾ ಅತ್ಯುತ್ತಮ 64MP ಕ್ಯಾಮರಾವುಳ್ಳ ಸ್ಮಾರ್ಟ್ಫೋನ್ಗಳು - 2020

Xiaomi Redmi K30

ಇದರಲ್ಲಿ ಅದೇ ಸ್ಯಾಮ್‌ಸಂಗ್ GW1 ಬದಲಿಗೆ 64MP ಸೋನಿ IMX 686 ಸೆನ್ಸಾರ್ ಹೊಂದಿರುವ ವಿಶ್ವದ ಮೊದಲ ಸ್ಮಾರ್ಟ್‌ಫೋನ್ ಆಗಿದೆ. ಇದು f/ 1.89 ಅಪರ್ಚರ್ f/ 1.7 ಸೆನ್ಸರ್ 6P ಲೆನ್ಸ್ ಅನ್ನು ಹೊಂದಿದೆ. ಮತ್ತು 5MP ಮ್ಯಾಕ್ರೋ ಲೆನ್ಸ್ 2MP ಡೆಪ್ತ್ ಸೆನ್ಸಾರ್ ಮತ್ತು 120 ಡಿಗ್ರಿ ಫೀಲ್ಡ್-ಆಫ್-ವ್ಯೂ ಹೊಂದಿರುವ 8MP ವೈಡ್ ಆಂಗಲ್ ಸೆನ್ಸಾರ್ ಸಹಾಯ ಮಾಡುತ್ತದೆ. ಇದು ಫೋನ್‌ನ 5G ರೂಪಾಂತರಕ್ಕಾಗಿದೆ. ಇದೇ Xiaomi Redmi K30 4G ಮಾದರಿಯಲ್ಲಿ 64 ಜೊತೆಗೆ 5MP ಮ್ಯಾಕ್ರೋ ಲೆನ್ಸ್ ಅನ್ನು 2MP ಡೆಪ್ತ್ ಸೆನ್ಸಾರ್ ಕ್ಯಾಮೆರಾ ನೀಡುವ ನಿರೀಕ್ಷೇಯಿದೆ.

ಸಂಬಂಧಿತ / ಇತ್ತೀಚಿನ ಫೋಟೋ ಸ್ಟೋರಿಗಳು

ಎಲ್ಲವನ್ನು ವೀಕ್ಷಿಸಿ
Advertisements

ಜನಪ್ರಿಯ ಫೋಟೋ ಸ್ಟೋರಿಗಳು

ಎಲ್ಲವನ್ನು ವೀಕ್ಷಿಸಿ
Advertisements

ಹಾಟ್ ಡೀಲ್ಗಳು

ಎಲ್ಲವನ್ನು ವೀಕ್ಷಿಸಿ
Advertisements

Digit caters to the largest community of tech buyers, users and enthusiasts in India. The all new Digit in continues the legacy of Thinkdigit.com as one of the largest portals in India committed to technology users and buyers. Digit is also one of the most trusted names when it comes to technology reviews and buying advice and is home to the Digit Test Lab, India's most proficient center for testing and reviewing technology products.

We are about leadership-the 9.9 kind! Building a leading media company out of India.And,grooming new leaders for this promising industry.(Kannada)

DMCA.com Protection Status