Galaxy Watch 9 Watch Ultra 2
ಸ್ಯಾಮ್‌ಸಂಗ್ ತನ್ನ ಗ್ಯಾಲಕ್ಸಿ Unpacked 2026 ಕಾರ್ಯಕ್ರಮದಲ್ಲಿ ನೂತನ Samsung Galaxy Watch 9 ಮತ್ತು Galaxy Watch Ultra 2 ಸ್ಮಾರ್ಟ್‌ವಾಚ್‌ಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ಬಾರಿ ಬಿಡುಗಡೆಯಾದ ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ 9 ಹಿಂದಿನ ಮಾದರಿಗಳಿಗಿಂತ ಹಲವು ಪ್ರಮುಖ ಅಪ್‌ಗ್ರೇಡ್ ಫೀಚರ್ಸ್‌ಗಳೊಂದಿಗೆ ಬಂದಿದೆ. ಹೊಸ ಕ್ವಾಲ್ಕಮ್ ಸ್ನ್ಯಾಪ್‌ಡ್ರ್ಯಾಗನ್ ವೇರ್ ಇಲೈಟ್ ಪ್ರೊಸೆಸರ್, ಸೂಪರ್ AMOLED ಆಲ್ವೇಸ್ ಆನ್ ಡಿಸ್‌ಪ್ಲೇ, AI ಆಧಾರಿತ ಆರೋಗ್ಯ ಟ್ರ್ಯಾಕಿಂಗ್ ಹಾಗೂ ಹಲವು ಹೊಸ ವೆಲ್‌ನೆಸ್ ಫೀಚರ್‌ಗಳು ಈ ವಾಚ್‌ನ ಪ್ರಮುಖ ಆಕರ್ಷಣೆಗಳಾಗಿವೆ.
Also Read : ಬಹುನಿರೀಕ್ಷಿತ Samsung Galaxy Z Fold 8 ಮೊಬೈಲ್ ಬಿಡುಗಡೆ! ಪ್ರೀಮಿಯಂ ಫೀಚರ್ಸ್
ಸ್ಯಾಮ್‌ಸಂಗ್ ಗ್ಯಾಲಕ್ಸಿ ವಾಚ್ 9 ಈಗಾಗಲೇ ಕೆಲವು ಜಾಗತಿಕ ಮಾರುಕಟ್ಟೆಗಳಲ್ಲಿ ಪ್ರೀ-ಆರ್ಡರ್‌ಗೆ ಲಭ್ಯವಾಗಿದೆ. ಈ ಸ್ಮಾರ್ಟ್‌ವಾಚ್ 40mm ವೇರಿಯಂಟ್ ಬೆಲೆಯು 37,999 ರೂ.ಗಳು ಆಗಿದೆ. ಹಾಗೆಯೇ 44mm ವೇರಿಯಂಟ್ ಬೆಲೆಯು 40,999 ರೂ.ಗಳು ಆಗಿದೆ. ಇನ್ನು Watch Ultra 2 ಡಿವೈಸ್ ಬೆಲೆಯು 64,999 ರೂ.ಗಳು ಆಗಿದೆ. ಇನ್ನು ಈ ವಾಚ್‌ಗಳು ಪ್ರೀ-ಆರ್ಡರ್‌ಗೆ ಲಭ್ಯ ಇವೆ.
ನೂತನ ವಾಚ್ 44mm ಮಾದರಿಯಲ್ಲಿ 1.47 ಇಂಚಿನ ಸೂಪರ್ AMOLED ಡಿಸ್ಪ್ಲೇ ಇದ್ದು, 480×480 ಪಿಕ್ಸೆಲ್ ರೆಸಲ್ಯೂಶನ್ ನೀಡುತ್ತದೆ. 40mm ಮಾದರಿಯಲ್ಲಿ 1.34 ಇಂಚಿನ AMOLED ಸ್ಕ್ರೀನ್ ಇದ್ದು, 438×438 ಪಿಕ್ಸೆಲ್ ರೆಸಲ್ಯೂಶನ್ ಹೊಂದಿದೆ. ಎರಡೂ ಮಾದರಿಗಳು 3000 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಹಾಗೂ Sapphire Crystal Glass ರಕ್ಷಣೆಯೊಂದಿಗೆ ಬರುತ್ತವೆ. ಇವು ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ ವೇರ್ ಇಲೈಟ್ ಚಿಪ್‌ಸೆಟ್ ಪವರ್ ಹೊಂದಿದೆ. ಇದರಲ್ಲಿ 2GB RAM ಮತ್ತು 32GB ಸ್ಟೋರೇಜ್ ನೀಡಲಾಗಿದ್ದು Wear OS 7 ಆಧಾರಿತ One UI 9 Watch ನಲ್ಲಿ ಕಾರ್ಯನಿರ್ವಹಿಸುತ್ತದೆ.
ಈ ಹೊಸ ವಾಚ್‌ನಲ್ಲಿ BioActive Sensor ಅನ್ನು ಅಳವಡಿಸಲಾಗಿದ್ದು, ಹೃದಯ ಬಡಿತ, ECG ಹಾಗೂ Body Composition ಅನ್ನು ನಿಖರವಾಗಿ ಅಳೆಯಲು ಸಹಾಯ ಮಾಡುತ್ತದೆ. ಜೊತೆಗೆ ಟೆಂಪ್ರಚರ್ ಸೆನ್ಸಾರ್ ಸೇರಿದಂತೆ ಹಲವು ಆರೋಗ್ಯ ಸೆನ್ಸರ್‌ಗಳನ್ನು ಒಳಗೊಂಡಿದೆ. ಇದರ ಜೊತೆಗೆ Samsung ಹಲವು ಹೊಸ AI ಆಧಾರಿತ ವೆಲ್‌ನೆಸ್ ಫೀಚರ್‌ಗಳನ್ನು ಪರಿಚಯಿಸಿದೆ. ಇನ್ನು 44mm ಮಾದರಿಯಲ್ಲಿ 445mAh ಬ್ಯಾಟರಿ ಹಾಗೂ 40mm ಮಾದರಿಯಲ್ಲಿ 390mAh ಬ್ಯಾಟರಿ ನೀಡಲಾಗಿದೆ. ಇದು WPC ಆಧಾರಿತ ವೇಗದ ವೈರ್‌ಲೆಸ್ ಚಾರ್ಜಿಂಗ್ ಬೆಂಬಲಿಸುತ್ತದೆ. ಸಂಪರ್ಕಕ್ಕಾಗಿ LTE, ಬ್ಲೂಟೂತ್ 6.0 ಸೌಲಭ್ಯಗಳಿವೆ.