Realme Buds Clip with new Open Ear Clip design launching on 29th January
Realme Buds Clip: ರಿಯಲ್‌ಮಿ ಬ್ರ್ಯಾಂಡ್ ಇಂದು Realme P4 Power 5G ಫೋನ್ ಲಾಂಚ್ ಮಾಡುವ ಜೊತೆಗೆ ಹೊಸ Realme Buds Clip ಇಯರ್‌ಬಡ್ಸ್ ಡಿವೈಸ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ನೂತನ ಇಯರ್‌ಬಡ್ಸ್ ಒಂದೇ ಚಾರ್ಜ್‌ನೊಂದಿಗೆ 36 ಗಂಟೆಗಳ ವರೆಗೆ ಪ್ಲೇಬ್ಯಾಕ್ ಸಪೋರ್ಟ್ ಜೊತೆಗೆ AI ಬೆಂಬಲಿತ ಪರಿಸರ ಶಬ್ದ ರದ್ದತಿ (ENC) ಆಯ್ಕೆ ಸಹ ಪಡೆದಿದೆ. ಇನ್ನು ಈ ವೈರ್‌ಲೆಸ್ ಇಯರ್‌ಬಡ್ಸ್ ಡಿವೈಸ್ ಓಪೆನ್ ಇಯರ್ ವಿನ್ಯಾಸವನ್ನು ಹೊಂದಿದೆ. ಇನ್ನುಳಿದಂತೆ Realme Buds Clip ಇಯರ್‌ಬಡ್ಸ್‌ನ ಬೆಲೆ ಹಾಗೂ ಫೀಚರ್ಸ್ ಬಗ್ಗೆ ಮುಂದೆ ತಿಳಿಯೋಣ.
Also Read : Jio ಟೆಲಿಕಾಂನ ಈ ಪ್ಲಾನ್‌ಗಳಲ್ಲಿ ಸಿಗುತ್ತೆ 84 ದಿನಗಳ ವ್ಯಾಲಿಡಿಟಿ, 168GB ಡೇಟಾ ಸೌಲಭ್ಯ!
ರಿಯಲ್‌ಮಿ ಕಂಪನಿಯ Realme Buds Clip ಇಯರ್‌ಬಡ್ಸ್ ಡಿವೈಸ್ 5,999 ರೂಗಳ ಪ್ರೈಸ್‌ಟ್ಯಾಗ್‌ನಲ್ಲಿ ಭಾರತೀಯ ಮಾರುಕಟ್ಟೆ ಪ್ರವೇಶಿಸಿದೆ. ಇನ್ನು ಈ ಇಯರ್‌ಬಡ್ಸ್ ಟೈಟಾನಿಯಂ ಬ್ಲಾಕ್ ಮತ್ತು ಟೈಟಾನಿಯಂ ಗೋಲ್ಡ್ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯ ಆಗಲಿದೆ. ಆಸಕ್ತ ಗ್ರಾಹಕರು ಅಧಿಕೃತ Realme ವೆಬ್‌ಸೈಟ್, Amazon, Flipkart ಮತ್ತು ಆಯ್ದ ಆಫ್‌ಲೈನ್ ಸ್ಟೋರ್‌ಗಳ ಮೂಲಕ ಖರೀದಿಗೆ ಲಭ್ಯ. ಇನ್ನು ಈ ಡಿವೈಸ್‌ಗೆ 500 ರೂಗಳ ರಿಯಾಯಿತಿ ಇದ್ದು ಗ್ರಾಹಕರು 5,499 ರೂಗಳಿಗೆ ಇದನ್ನು ಖರೀದಿಸಬಹುದು. Realme Buds Clip ಇಯರ್‌ಬಡ್ಸ್ ಡಿವೈಸ್ ಇದೇ ಫೆಬ್ರವರಿ 5 ರಂದು ಮಧ್ಯಾಹ್ನ 12 ಗಂಟೆಗೆ ಮಾರಾಟ ಪ್ರಾರಂಭ ಮಾಡಲಿದೆ.
ರಿಯಲ್‌ಮಿ ಸಂಸ್ಥೆಯ Realme Buds Clip ಇಯರ್‌ಬಡ್ಸ್ ಆಕರ್ಷಕ ಡಿಸೈನ್‌ನೊಂದಿಗೆ ಎಂಟ್ರಿ ಕೊಟ್ಟಿದೆ. ಇದು 11mm ಡ್ಯುಯಲ್ ಮ್ಯಾಗ್ನೆಟ್ ಡೈನಾಮಿಕ್ ಡ್ರೈವರ್‌ಗಳನ್ನು ಪಡೆದಿದ್ದು ಜೊತೆಗೆ NextBass ಅಲ್ಗಾರಿದಮ್ ಬೆಂಬಲಿತ ಬಾಸ್ ಬೂಸ್ಟ್ ಸಿಸ್ಟಮ್ ಅನ್ನು ಒಳಗೊಂಡಿದೆ. ಈ ಆಯ್ಕೆಯು ಬಳಕೆದಾರರಿಗೆ ಅತ್ಯುತ್ತಮವಾಗಿ ಆಡಿಯೋ ಕೇಳಲು ಪೂರಕವಾಗಿ ಇರಲಿದೆ ಎಂದು ಹೇಳಲಾಗಿದೆ. ಹಾಗೆಯೇ AI ಬೆಂಬಲಿತ ಶಬ್ದ ರದ್ದತಿ (ANC) ಹಾಗೂ ವಿಂಡ್ ರೆಡೆಕ್ಷನ್ ಜೊತೆಗೆ ಡ್ಯುಯಲ್ ಮೈಕ್ರೊಫೋನ್‌ಗಳು ಕರೆ ಗುಣಮಟ್ಟವನ್ನು ಉತ್ತಮಪಡಿಸಲು ನೆರವಾಗಲಿವೆ.
Realme Buds Clip ಇಯರ್‌ಬಡ್ಸ್ ಬ್ಲೂಟೂತ್ 5.4, ಡ್ಯುಯಲ್ ಡಿವೈಸ್ ಕನೆಕ್ಷನ್, ಮೈಕ್ರೋಸಾಫ್ಟ್ ಸ್ವಿಫ್ಟ್ ಪೇರ್ ಆಯ್ಕೆಗಳನ್ನು ಒಳಗೊಂಡಿದೆ. ಅಲ್ಲದೇ ಇದು 45ms ವರೆಗಿನ ಕಡಿಮೆ ಲೇಟೆನ್ಸಿಯನ್ನು ಸಪೋರ್ಟ್ ಮಾಡಲಿದೆ. ವಿಶೇಷ ಅಂದರೇ ಇದು Next AI ನಿಂದ ಬೆಂಬಲಿತವಾದ AI ಟ್ರಾನ್ಸ್‌ಲೇಟರ್ ಆಯ್ಕೆಯನ್ನು ಒಳಗೊಂಡಿದೆ. ಇದು 30 ಕ್ಕೂ ಹೆಚ್ಚು ಭಾಷೆಗಳಿಗೆ ರಿಯಲ್ ಟೈಮ್‌ನಲ್ಲಿ ಅನುವಾದವನ್ನು ನೀಡುತ್ತದೆ ಎನ್ನಲಾಗಿದೆ. ಹಾಗೆಯೇ ಈ ಡಿವೈಸ್ ಒಮ್ಮೆ ಚಾರ್ಜ್ ಮಾಡಿದರೆ ಬಡ್ಸ್ ಕ್ಲಿಪ್‌ನಲ್ಲಿ ಏಳು ಗಂಟೆಗಳ ವರೆಗೆ ಬ್ಯಾಕ್‌ಅಪ್ ನೀಡುತ್ತವೆ ಹಾಗೂ ಬಡ್ಸ್ ಕೇಸ್‌ನೊಂದಿಗೆ 36 ಗಂಟೆಗಳ ವರೆಗೆ ಬ್ಯಾಟರಿ ಬಾಳಿಕೆ ಲಭ್ಯ ಆಗಲಿದೆ.
ಇನ್ನು ಈ ಇಯರ್‌ಬಡ್ ಡಿವೈಸ್‌ನ ಪ್ರತಿ ಬಡ್ 45mAh ಬ್ಯಾಟರಿ ಸಪೋರ್ಟ್ ಪಡೆದಿವೆ ಹಾಗೆಯೇ ಇಯರ್‌ಬಡ್ಸ್ ಕೇಸ್ 530mAh ಬ್ಯಾಟರಿ ಬಲವನ್ನು ಹೊಂದಿದೆ ಎಂದು ವರದಿಯಾಗಿದೆ. ಇನ್ನು ಇದರ ಚಾರ್ಜಿಂಗ್ ಕೇಸ್ USB ಟೈಪ್ C ಪೋರ್ಟ್ ಅನ್ನು ಪಡೆದುಕೊಂಡಿದೆ. ಇವುಗಳು ಧೂಳು ಮತ್ತು ನೀರಿನ ರಕ್ಷಣೆಗಾಗಿ IP55 ರೇಟಿಂಗ್ ಸೌಲಭ್ಯ ಸಹ ಪಡೆದಿವೆ. ಅಲ್ಲದೇ ಬೆವರು ಮತ್ತು ಆಯಿಲ್ ರೆಸಿಸ್ಟೆನ್ಸ್‌ಗಾಗಿ ಮ್ಯಾಟ್ ಫಿನಿಶ್ ಜೊತೆಗೆ ಟೈಟಾನಿಯಂ-ಫಿಟ್ ವಿನ್ಯಾಸವನ್ನು ಪಡೆದಿದೆ.