Vi (ವೊಡಾಫೋನ್ ಐಡಿಯಾ) ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಮೂರನೇ ದೊಡ್ಡ ಟೆಲಿಕಾಂ ಕಂಪನಿಯಾಗಿ ಬಿಂಬಿತವಾಗಿದೆ. ವಿ ಟೆಲಿಕಾಂ ಗ್ರಾಹಕರ ಅಗತ್ಯತೆಗೆ ಅನುಗುಣವಾಗಿ ಹಲವು ಪ್ರೀಪೇಡ್ ಹಾಗೂ ಪೋಸ್ಟ್‌ಪೇಯ್ಡ್ ಪ್ಲಾನ್‌ಗಳನ್ನು ನೀಡುತ್ತಿದೆ. ಅವುಗಳ ಪೈಕಿ ವಿ ಟೆಲಿಕಾಂ 751 ರೂ.ಗಳ ಪೋಸ್ಟ್‌ಪೇಯ್ಡ್ ಪ್ಲಾನ್ ಬಹಳ ಜನಪ್ರಿಯವಾಗಿದ್ದು, ಕುಟುಂಬ ಬಳಕೆದಾರರು ಮತ್ತು ಹೆಚ್ಚಿನ ಡೇಟಾ ಬಳಸುವವರಿಗೆ ಸೂಕ್ತ ಆಯ್ಕೆಯಾಗಿದೆ. ಈ ಯೋಜನೆಯಲ್ಲಿ ಆಕರ್ಷಕ ಡೇಟಾ ಪ್ರಯೋಜನ ಹಾಗೂ ಆಡ್ ಆನ್ ಸಿಮ್ ಆಯ್ಕೆ ಸಹ ದೊರೆಯುತ್ತದೆ. ಹಾಗಾದರೆ ವಿ ಟೆಲಿಕಾಂನ 751 ರೂ.ಗಳ ಪೋಸ್ಟ್‌ಪೇಯ್ಡ್ ಯೋಜನೆಯ ಹಾಗೂ ಇತರೆ ಜನಪ್ರಿಯ ಪ್ಲಾನ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : Realme NARZO 80 Pro 5G ಫೋನ್‌ಗೆ ಭಾರೀ ಡಿಸ್ಕೌಂಟ್! ಈಗ ಕಡಿಮೆ ಬೆಲೆಯಲ್ಲಿ ಲಭ್ಯ
ವಿ ಟೆಲಿಕಾಂನ 751 ರೂ.ಗಳ ಪೋಸ್ಟ್‌ಪೇಡ್ ಪ್ಲಾನ್‌ನಲ್ಲಿ ಒಂದು ರೆಗ್ಯುಲರ್ ಸಿಮ್ ಆಯ್ಕೆ ಇರುತ್ತದೆ. ಹಾಗೆಯೇ ಈ ಯೋಜನೆಯಲ್ಲಿ ಅನಿಯಮಿತ ಡೇಟಾ ಸೌಲಭ್ಯ ಸಹ ದೊರೆಯುತ್ತದೆ. ಇದರೊಂದಿಗೆ ಅನಿಯಮಿತ ಲೋಕಲ್, ನ್ಯಾಷನಲ್ ರೋಮಿಂಗ್ ವಾಯ್ಸ್ ಕರೆಗಳ ಪ್ರಯೋಜನ ಕೂಡಾ ಗ್ರಾಹಕರಿಗೆ ಲಭ್ಯವಿರುತ್ತದೆ. ಜೊತೆಗೆ ಪ್ರತಿ ತಿಂಗಳು 3000 ಎಸ್‌ಎಮ್‌ಎಸ್ ಸೌಲಭ್ಯ ಸಿಗುತ್ತದೆ. ಇದರಲ್ಲಿ ಹೆಚ್ಚುವರಿಯಾಗಿ ಅಮೆಜಾನ್ ಪ್ರೈಮ್, ಜಿಯೋಹಾಟ್ ಸ್ಟಾರ್ ಅಥವಾ ಸೋನಿ ಲೈವ್ ಚಂದಾದಾರಿಕೆ, ಈಜಿ ಡಿನ್ನರ್ ಕೋಪನ್ ಈ ಆಯ್ಕೆಗಳಲ್ಲಿ ಯಾವುದಾದರೂ ಮೂರನ್ನು ಆಯ್ಕೆ ಮಾಡುವ ಅವಕಾಶ ಇದೆ. ಅಲ್ಲದೇ ವಿಐ ಗೇಮ್ಸ್ ಆಕ್ಸಸ್ ಸಿಗಲಿದೆ.
ವಿ ಟೆಲಿಕಾಂನ 551 ರೂ.ಗಳ ಪೋಸ್ಟ್‌ಪೇಡ್ ಯೋಜನೆಯಲ್ಲಿ ಒಂದು ರೆಗ್ಯುಲರ್ ಸಿಮ್ ಆಯ್ಕೆ ಇರುತ್ತದೆ. ಹಾಗೆಯೇ ಈ ಪ್ಲಾನಿನಲ್ಲಿ ಅನಿಯಮಿತ ಡೇಟಾ ಸೌಲಭ್ಯ ಸಹ ಸಿಗುತ್ತದೆ. ಇದರೊಂದಿಗೆ ಅನಿಯಮಿತ ಲೋಕಲ್, ನ್ಯಾಷನಲ್ ರೋಮಿಂಗ್ ವಾಯ್ಸ್ ಕರೆಗಳ ಪ್ರಯೋಜನ ಕೂಡಾ ಗ್ರಾಹಕರಿಗೆ ಲಭ್ಯವಿರುತ್ತದೆ. ಇದರೊಂದಿಗೆ ಪ್ರತಿ ತಿಂಗಳು 3000 ಎಸ್‌ಎಮ್‌ಎಸ್ ಪ್ರಯೋಜನ ಸಿಗುತ್ತದೆ. ಇದರಲ್ಲಿ ಹೆಚ್ಚುವರಿಯಾಗಿ ಜಿಯೋಹಾಟ್ ಸ್ಟಾರ್ ಅಥವಾ ಸೋನಿ ಲೈವ್ ಚಂದಾದಾರಿಕೆ ಈ ಓಟಿಟಿಗಳಲ್ಲಿ ಯಾವುದಾದರೂ ಎರಡನ್ನು ಆಯ್ಕೆ ಮಾಡುವ ಅವಕಾಶ ಇದೆ. ಅಲ್ಲದೇ ವಿಐ ಗೇಮ್ಸ್ ಆಕ್ಸಸ್ ಲಭ್ಯ.
ವಿ ಟೆಲಿಕಾಂ ಸಂಸ್ಥೆಯ 451 ರೂ.ಗಳ ಪೋಸ್ಟ್‌ಪೇಡ್ ಪ್ಲಾನ್‌ನಲ್ಲಿ ಒಂದು ರೆಗ್ಯುಲರ್ ಸಿಮ್ ಆಯ್ಕೆ ಇರುತ್ತದೆ. ಹಾಗೆಯೇ ಈ ಯೋಜನೆಯಲ್ಲಿ ಅನಿಯಮಿತ ಡೇಟಾ ಸೌಲಭ್ಯ ಸಹ ದೊರೆಯುತ್ತದೆ. ಇದರೊಂದಿಗೆ ಅನಿಯಮಿತ ಲೋಕಲ್, ನ್ಯಾಷನಲ್ ರೋಮಿಂಗ್ ವಾಯ್ಸ್ ಕರೆಗಳ ಪ್ರಯೋಜನ ಕೂಡಾ ಗ್ರಾಹಕರಿಗೆ ಲಭ್ಯವಿರುತ್ತದೆ. ಜೊತೆಗೆ ಪ್ರತಿ ತಿಂಗಳು 3000 ಎಸ್‌ಎಮ್‌ಎಸ್ ಸೌಲಭ್ಯ ದೊರೆಯುತ್ತದೆ. ಇದರಲ್ಲಿ ಹೆಚ್ಚುವರಿಯಾಗಿ ಜಿಯೋಹಾಟ್ ಸ್ಟಾರ್ ಅಥವಾ ಸೋನಿ ಲೈವ್ ಚಂದಾದಾರಿಕೆ ಈ ಓಟಿಟಿಗಳಲ್ಲಿ ಒಂದನ್ನು ಆಯ್ಕೆ ಮಾಡುವ ಅವಕಾಶ ಇದೆ. ಅಲ್ಲದೇ ವಿಐ ಗೇಮ್ಸ್ ಆಕ್ಸಸ್ ಸಿಗಲಿದೆ.