JioHotstar ಚಂದಾದಾರಿಕೆ ಲಭ್ಯವಿರುವ ಅಗ್ಗದ ಬೆಲೆಯ Vi ಡೇಟಾ ಪ್ಲಾನ್‌ಗಳ ಮಾಹಿತಿ

HIGHLIGHTS

ವಿ ಟೆಲಿಕಾಂನ 101 ರೂ.ಗಳ ಡೇಟಾ ಪ್ಯಾಕ್‌ ಜಿಯೋ ಹಾಟ್‌ಸ್ಟಾರ್‌ ಲಭ್ಯ

ವಿ ಟೆಲಿಕಾಂನ ಈ ಡೇಟಾ ಪ್ಯಾಕ್‌ ಒಂದು ತಿಂಗಳ ವ್ಯಾಲಿಡಿಟಿ ಪಡೆದುಕೊಂಡಿದೆ

ವಿ ಕಂಪನಿಯ 101 ರೂ.ಗಳ ಡೇಟಾ ಪ್ಯಾಕ್‌ 5GB ಡೇಟಾ ಸೌಲಭ್ಯ ಹೊಂದಿದೆ

ವೊಡಾಫೋನ್‌ ಐಡಿಯಾ (Vi) ಟೆಲಿಕಾಂನ ಸಂಸ್ಥೆಯು ಭಾರತದಲ್ಲಿ ಜಿಯೋ ಹಾಗೂ ಏರ್‌ಟೆಲ್‌ ಕಂಪನಿಗಳೊಂದಿಗೆ ಪೈಪೋಟಿ ನೀಡುತ್ತಾ ಮುನ್ನಡೆದಿದೆ. ವಿ ಟೆಲಿಕಾಂ ತನ್ನ ಬಳಕೆದಾರರಿಗೆ ಭಿನ್ನ ಮಾದರಿಯ ರೀಚಾರ್ಜ್ ಯೋಜನೆಗಳ ಆಯ್ಕೆ ನೀಡಿದ್ದು, ಅವುಗಳ ಪೈಕಿ ಡೇಟಾ ಪ್ಯಾಕ್ ಆಯ್ಕೆಗಳನ್ನು ನೀಡುತ್ತಿದೆ. ದೈನಂದಿನ ನಿಗದಿತ ಡೇಟಾ ಖಾಲಿ ಆದ ಸಂದರ್ಭಗಳಲ್ಲಿ ಈ ಡೇಟಾ ಪ್ಯಾಕ್‌ಗಳು ಬಹಳ ಉಪಯುಕ್ತ ಎನಿಸುತ್ತವೆ. ವಿ ಟೆಲಿಕಾಂನ ಡೇಟಾ ಪ್ಯಾಕ್‌ಗಳು ಮುಖ್ಯವಾಗಿ ಆಡ್‌ ಆನ್‌ ಪ್ಲಾನ್‌ ಆಗಿದ್ದು, ಇವು ಬಳಕೆದಾರರ ಚಾಲ್ತಿ ರೀಚಾರ್ಜ್ ಪ್ಲಾನಿಗೆ ಹೆಚ್ಚುವರಿ ಡೇಟಾವನ್ನು ಸೇರ್ಪಡೆ ಮಾಡುತ್ತವೆ. ಕೆಲವು ಡೇಟಾ ಪ್ಯಾಕ್‌ಗಳು JioHotstar ಸೌಲಭ್ಯ ಪಡೆದಿವೆ. ಹಾಗಾದರೆ ವಿ ಟೆಲಿಕಾಂನ ಡೇಟಾ ಪ್ಯಾಕ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : Airtel ಟೆಲಿಕಾಂನ ಡೇಟಾ ಪ್ಯಾಕ್‌ಗಳಲ್ಲಿ ಜಿಯೋ ಹಾಟ್‌ಸ್ಟಾರ್‌ ಚಂದಾದಾರಿಕೆ ಲಭ್ಯ!

JioHotstar ಚಂದಾದಾರಿಕೆ ಸೌಲಭ್ಯ

ವಿ ಟೆಲಿಕಾಂನ 101 ರೂ.ಗಳ ಡೇಟಾ ಪ್ಯಾಕ್‌ನಲ್ಲಿ ಬಳಕೆದಾರರಿಗೆ 5GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಈ ಪ್ಯಾಕ್‌ ಒಂದು ತಿಂಗಳ ವ್ಯಾಲಿಡಿಟಿ ಸೌಲಭ್ಯ ಕೂಡಾ ಒಳಗೊಂಡಿದೆ. ಹಾಗೆಯೇ 28 ದಿನಗಳ ಅವಧಿಗೆ ಜಿಯೋ ಹಾಟ್‌ಸ್ಟಾರ್‌ ಮೊಬೈಲ್‌ ಚಂದಾದಾರಿಕೆಯ ಸೌಲಭ್ಯ ಕೂಡಾ ದೊರೆಯುತ್ತದೆ. ಹಾಗೆಯೇ ವಿ ಟೆಲಿಕಾಂನ 175 ರೂ.ಗಳ ಡೇಟಾ ಪ್ಯಾಕ್‌ನಲ್ಲಿ ಬಳಕೆದಾರರಿಗೆ 10GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಈ ಪ್ಯಾಕ್‌ 28 ದಿನಗಳ ವ್ಯಾಲಿಡಿಟಿ ಸೌಲಭ್ಯ ಸಹ ಒಳಗೊಂಡಿದೆ. ಹಾಗೆಯೇ JioHotstar ಮೊಬೈಲ್ ಸೇರಿದಂತೆ ZEE5, SonyLIV, FanCode, Lionsgate Play ಒಳಗೊಂಡಂತೆ 19 OTT ಚಂದಾದಾರಿಕೆ ಸಿಗುತ್ತದೆ.

ಅದೇ ರೀತಿ ವಿ ಟೆಲಿಕಾಂನ 248 ರೂ.ಗಳ ಡೇಟಾ ಪ್ಯಾಕ್‌ನಲ್ಲಿ ಬಳಕೆದಾರರಿಗೆ 6GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಈ ಪ್ಯಾಕ್‌ 30 ದಿನಗಳ ವ್ಯಾಲಿಡಿಟಿ ಸೌಲಭ್ಯ ಸಹ ಒಳಗೊಂಡಿದೆ. ಹಾಗೆಯೇ JioHotstar ಮೊಬೈಲ್ ಸೇರಿದಂತೆ ZEE5, SonyLIV, FanCode, Lionsgate Play ಒಳಗೊಂಡಂತೆ 20 OTT ಚಂದಾದಾರಿಕೆ ಸಿಗುತ್ತದೆ. ಇನ್ನು ವಿ ಟೆಲಿಕಾಂನ 44 ರೂ.ಗಳ ಡೇಟಾ ಪ್ಯಾಕ್‌ನಲ್ಲಿ ಬಳಕೆದಾರರಿಗೆ 1GB ಡೇಟಾ ಪ್ರಯೋಜನ ದೊರೆಯುತ್ತದೆ. ಈ ಪ್ಯಾಕ್‌ ಒಂದು ದಿನದ ವ್ಯಾಲಿಡಿಟಿ ಸೌಲಭ್ಯ ಪಡೆದುಕೊಂಡಿದೆ. ಇದರೊಂದಿಗೆ ಜಿಯೋ ಹಾಟ್‌ಸ್ಟಾರ್‌ ಮೊಬೈಲ್‌ ಚಂದಾದಾರಿಕೆಯ ಸೌಲಭ್ಯ ಕೂಡಾ ದೊರೆಯುತ್ತದೆ.

ಇನ್ನು ವಿ ಟೆಲಿಕಾಂನ 169 ರೂ.ಗಳ ಡೇಟಾ ಪ್ಯಾಕ್‌ನಲ್ಲಿ ಬಳಕೆದಾರರಿಗೆ 8GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಈ ಪ್ಯಾಕ್‌ನಲ್ಲಿ ಬಳಕೆದಾರರಿಗೆ 90 ದಿನಗಳ ವ್ಯಾಲಿಡಿಟಿ ಸೌಲಭ್ಯ ಸಹ ದೊರೆಯುತ್ತದೆ. ಹಾಗೆಯೇ 84 ದಿನಗಳ ಅವಧಿಗೆ ಜಿಯೋ ಹಾಟ್‌ಸ್ಟಾರ್‌ ಮೊಬೈಲ್‌ ಚಂದಾದಾರಿಕೆಯ ಸೌಲಭ್ಯ ಕೂಡಾ ದೊರೆಯುತ್ತದೆ. ವಿ ಟೆಲಿಕಾಂನ 151 ರೂ.ಗಳ ಡೇಟಾ ಪ್ಯಾಕ್‌ನಲ್ಲಿ ಬಳಕೆದಾರರಿಗೆ 4GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಈ ಪ್ಯಾಕ್‌ನಲ್ಲಿ ಬಳಕೆದಾರರಿಗೆ 90 ದಿನಗಳ ವ್ಯಾಲಿಡಿಟಿ ಸೌಲಭ್ಯ ಸಹ ದೊರೆಯುತ್ತದೆ. ಹಾಗೆಯೇ 84 ದಿನಗಳ ಅವಧಿಗೆ ಜಿಯೋ ಹಾಟ್‌ಸ್ಟಾರ್‌ ಮೊಬೈಲ್‌ ಚಂದಾದಾರಿಕೆಯ ಸೌಲಭ್ಯ ಕೂಡಾ ದೊರೆಯುತ್ತದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :