ದೇಶದ ಮುಂಚೂಣಿಯ ಟೆಲಿಕಾಂ ಸಂಸ್ಥೆ ಎನಿಸಿರುವ Jio ಸಂಸ್ಥೆಯು ಹಲವು ಆಕರ್ಷಕ ಪ್ರೀಪೇಯ್ಡ್ ಪ್ಲಾನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಗ್ರಾಹಕರ ಮನ ಗೆದ್ದಿದೆ. ಆ ಪೈಕಿ ಜಿಯೋ ಸಂಸ್ಥೆಯ ಬಹುತೇಕ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳು ಅಧಿಕ ಡೈಲಿ ಡೇಟಾ ಸೌಲಭ್ಯ ಒಳಗೊಂಡಿವೆ. ಹಾಗೆಯೇ ಈ ಯೋಜನೆಗಳು ಆಕರ್ಷಕ ವ್ಯಾಲಿಡಿಟಿ ಪ್ರಯೋಜನ ಸಹ ಪಡೆದುಕೊಂಡಿವೆ. ಅದಾಗ್ಯೂ, ಜಿಯೋ ಕಂಪನಿಯ ಕೆಲವೊಂದು ಪ್ರೀಪೇಯ್ಡ್ ರೀಚಾರ್ಜ್ ಪ್ಲಾನ್‌ಗಳು ಡೇಟಾ ಸೌಲಭ್ಯದ ಜೊತೆಗೆ ಟ್ರೆಂಡಿಂಗ್ ಓಟಿಟಿ ಪ್ಲಾಟ್‌ಫಾರ್ಮ್ ಗಳ ಚಂದಾದಾರಿಕೆ ಪ್ರಯೋಜನ ಸಹ ಪಡೆದಿವೆ. ಅದೇ ರೀತಿ ರಿಲಯನ್ಸ್ ಜಿಯೋ ಟೆಲಿಕಾಂನ 999 ರೂ.ಗಳ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನ್ ಪ್ರತಿದಿನ 2GB ಡೇಟಾ ಒಳಗೊಂಡಿರುವ ಮೂಲಕ ಬಿಗ್ ವ್ಯಾಲಿಡಿಟಿ ಸಹ ಪಡೆದಿದೆ. ಹಾಗಾದರೆ ಜಿಯೋ ಟೆಲಿಕಾಂನ 999 ರೂ.ಗಳ ಪ್ಲಾನ್ ಪ್ರಯೋಜನ ಕುರಿತ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : Realme ಕಂಪನಿಯ ಈ ಅಗ್ಗದ ಮೊಬೈಲ್ ಬೆಲೆಯಲ್ಲಿ ಮತ್ತಷ್ಟು ಇಳಿಕೆ! 6,000mAh ಬ್ಯಾಟರಿ ಹೈಲೈಟ್
ಜಿಯೋ ಟೆಲಿಕಾಂ ಕಂಪನಿಯು ಭಿನ್ನ ಯೋಜನೆಗಳ ಆಯ್ಕೆ ಪರಿಚಯಿಸಿದೆ. ಅವುಗಳಲ್ಲಿ ಜಿಯೋ ಸಂಸ್ಥೆಯ 999 ರೂ.ಗಳ ಪ್ರೀಪೇಯ್ಡ್ ಪ್ಲಾನ್ ಸದ್ದು ಮಾಡಿದೆ. ಹೌದು, ಜಿಯೋ ಕಂಪನಿಯ ಈ ಯೋಜನೆಯು ಪ್ರತಿದಿನ 2GB ಡೇಟಾ ಪ್ರಯೋಜನ ಪಡೆದುಕೊಂಡಿದೆ. ಅಲ್ಲದೇ ಇದರ ಪ್ರಮುಖ ಹೈಲೈಟ್ ಎಂದರೆ ಇದು 98 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದುಕೊಂಡಿದೆ. ಹಾಗೆಯೇ ಈ ಯೋಜನೆಯಲ್ಲಿ JioTV ಹಾಗೂ JioAICloud ಚಂದಾದಾರಿಕೆ ಪ್ರಯೋಜನ ಗ್ರಾಹಕರಿಗೆ ಲಭ್ಯವಿರುತ್ತದೆ.
ಬಜೆಟ್ ಬೆಲೆಯಲ್ಲಿ ಕಾಣಿಸಿಕೊಂಡಿರುವ ಜಿಯೋ ಟೆಲಿಕಾಂನ 999 ರೂ.ಗಳ ಪ್ರೀಪೇಯ್ಡ್ ಪ್ಲಾನ್ ಒಟ್ಟು 98 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ವ್ಯಾಲಿಡಿಟಿ ಅವಧಿಯಲ್ಲಿ ಬಳಕೆದಾರರಿಗೆ ಪ್ರತಿದಿನ 2 GB ಹೈ ಸ್ಪೀಡ್ ಡೇಟಾ ಪ್ರಯೋಜನ ಲಭ್ಯವಾಗಲಿದೆ. ಇನ್ನು ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 196 GB ಡೇಟಾ ಪ್ರಯೋಜನ ಸಿಗುತ್ತದೆ. ಹಾಗೆಯೇ ಇದರೊಂದಿಗೆ ಈ ಯೋಜನೆಯಲ್ಲಿ ಬಳಕೆದಾರರಿಗೆ ಅನಿಯಮಿತ ವಾಯ್ಸ್ ಕರೆಗಳ ಪ್ರಯೋಜನದ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಸಿಗುತ್ತದೆ. ಇದರೊಂದಿಗೆ ಈ ಯೋಜನೆಯಲ್ಲಿ JioTV ಹಾಗೂ JioAICloud ಚಂದಾದಾರಿಕೆ ಪ್ರಯೋಜನ ಗ್ರಾಹಕರಿಗೆ ಲಭ್ಯವಿರುತ್ತದೆ.
ಅದೇ ರೀತಿ ಜಿಯೋ ಟೆಲಿಕಾಂನ 899 ರೂ.ಗಳ ಪ್ರೀಪೇಯ್ಡ್ ಪ್ಲಾನ್ ಒಟ್ಟು 90 ದಿನಗಳ ದೀರ್ಘ ಅವಧಿಯ ವ್ಯಾಲಿಡಿಟಿ ಸೌಲಭ್ಯ ಹೊಂದಿದೆ. ಈ ವ್ಯಾಲಿಡಿಟಿ ಅವಧಿಯಲ್ಲಿ ಬಳಕೆದಾರರಿಗೆ ಪ್ರತಿದಿನ 2 GB ಹೈ ಸ್ಪೀಡ್ ಡೇಟಾ ಪ್ರಯೋಜನ ದೊರೆಯುತ್ತದೆ. ಇನ್ನು ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 200 GB ಡೇಟಾ ಪ್ರಯೋಜನ ಲಭ್ಯವಾಗುತ್ತದೆ ಜೊತೆಗೆ ಹೆಚ್ಚುವರಿಯಾಗಿ 20GB ಡೇಟಾ ಸೌಲಭ್ಯ ಸಿಗಲಿದೆ. ಇದರೊಂದಿಗೆ ಈ ಪ್ಲಾನಿನಲ್ಲಿ ಬಳಕೆದಾರರಿಗೆ ಅನಿಯಮಿತ ವಾಯ್ಸ್ ಕರೆಗಳ ಪ್ರಯೋಜನದ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ದೊರೆಯುತ್ತವೆ.