Jio ಟೆಲಿಕಾಂನ ಈ ಕಡಿಮೆ ಬೆಲೆಯ ಪ್ಲಾನ್‌ನಲ್ಲಿ 84 ದಿನಗಳ ವ್ಯಾಲಿಡಿಟಿ! ಇಲ್ಲಿದೆ ಪೂರ್ಣ ಮಾಹಿತಿ

HIGHLIGHTS

ಜಿಯೋದ ಈ ಯೋಜನೆಯು ಅಧಿಕ ವ್ಯಾಲಿಡಿಟಿ ಬಯಸುವ ಗ್ರಾಹಕರಿಗೆ ಬೆಸ್ಟ್‌

ಜಿಯೋ 448 ರೂ.ಗಳ ಯೋಜನೆಯಲ್ಲಿ 84 ದಿನಗಳ ವ್ಯಾಲಿಡಿಟಿ ಪ್ರಯೋಜನ

ಜಿಯೋ ಟೆಲಿಕಾಂನ ಈ ಪ್ಲಾನ್‌ನಲ್ಲಿ JioTV ಹಾಗೂ JioAICloud ಚಂದಾದಾರಿಕೆ ಲಭ್ಯ

Jio ಟೆಲಿಕಾಂ ಕಂಪನಿಯು ಈಗಾಗಲೇ ಮಾರುಕಟ್ಟೆಯಲ್ಲಿ ಜನಪ್ರಿಯತೆ ಪಡೆದುಕೊಂಡಿದೆ. ಅಲ್ಲದೇ ಜಿಯೋ ಸಂಸ್ಥೆಯು ವಿ ಹಾಗೂ ಏರ್‌ಟೆಲ್‌ ಕಂಪನಿಗಳಿಗೆ ನೇರ ಟಾಂಗ್‌ ನೀಡುತ್ತಾ ಸಾಗಿದೆ. ಜಿಯೋ ಸಂಸ್ಥೆಯ ಕೆಲವು ಯೋಜನೆಗಳು ಅಧಿಕ ದೈನಂದಿನ ಡೇಟಾ ಮೂಲಕ ಗಮನ ಸೆಳೆದಿವೆ. ಹಾಗೆಯೇ ಜಿಯೋದ value ರೀಚಾರ್ಜ್‌ ಪ್ಲಾನ್‌ಗಳು ಆಕರ್ಷಕ ವ್ಯಾಲಿಡಿಟಿ ಮೂಲಕ ಸದ್ದು ಮಾಡಿವೆ. ಆ ಪೈಕಿ ಜಿಯೋ ಟೆಲಿಕಾಂನ 448 ರೂ.ಗಳ ಬೆಲೆಯ ವ್ಯಾಲ್ಯೂ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆ ಹೆಚ್ಚು ಆಕರ್ಷಕವಾಗಿ ಕಾಣಿಸಿಕೊಂಡಿದೆ. ಈ ಬಜೆಟ್ ದರದ ಯೋಜನೆಯು ದೈನಂದಿನ ಡೇಟಾ ಸೌಲಭ್ಯ ಪಡೆದುಕೊಂಡಿರುವ ಜೊತೆಗೆ ಆಕರ್ಷಕ ವ್ಯಾಲಿಡಿಟಿ ಸಹ ಒಳಗೊಂಡಿದೆ. ಇದರೊಂದಿಗೆ ಓಟಿಟಿ ಪ್ರಯೋಜನ ಸಹ ಒಳಗೊಂಡಿದೆ. ಹಾಗಾದರೆ ಜಿಯೋ ಟೆಲಿಕಾಂನ 448 ರೂ.ಗಳ ಪ್ಲಾನ್‌ ಹಾಗೂ ಇತರೆ ವ್ಯಾಲ್ಯೂ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಗಳ ಸಂಪೂರ್ಣ ಮಾಹಿತಿ ಮುಂದೆ ತಿಳಿಯೋಣ.

Also Read : ಕಡಿಮೆ ಬೆಲೆಯಲ್ಲಿ ಲಾಂಚ್‌ ಆಯ್ತು Redmi A7 Pro 5G ಸ್ಮಾರ್ಟ್‌ಫೋನ್‌! ಫೀಚರ್ಸ್‌ ಹೀಗಿವೆ

Jio ಟೆಲಿಕಾಂನ 448 ರೂ.ಗಳ ಪ್ಲಾನ್ ಮಾಹಿತಿ

ಜಿಯೋ ಟೆಲಿಕಾಂನ 448 ರೂ.ಗಳ ವ್ಯಾಲ್ಯೂ ಪ್ರೀಪೇಯ್ಡ್‌ ರೀಚಾರ್ಜ್‌ ಪ್ಲಾನಿನಲ್ಲಿ ಬಳಕೆದಾರರಿಗೆ ಒಟ್ಟು 84 ದಿನಗಳ ವ್ಯಾಲಿಡಿಟಿ ಪ್ರಯೋಜನ ದೊರೆಯುತ್ತದೆ. ಈ ಯೋಜನೆಯು ವಾಯ್ಸ್‌ ಓನ್ಲಿ ಪ್ಲಾನ್‌ ಆಗಿರುವುದರಿಂದ ಇದರಲ್ಲಿ ಡೇಟಾ ಸೌಲಭ್ಯ ಲಭ್ಯವಿರುವುದಿಲ್ಲ. ಅಂದಹಾಗೆ ಈ ಯೋಜನೆಯ ಒಟ್ಟಾರೇ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 1000 ಎಸ್‌ಎಮ್‌ಎಸ್‌ ಪ್ರಯೋಜನ ಸಿಗಲಿದೆ. ಹಾಗೆಯೇ ಈ ಪ್ಲಾನಿನಲ್ಲಿ JioHotstar, JioTV ಹಾಗೂ JioAICloud ಚಂದಾದಾರಿಕೆ ಸೌಲಭ್ಯ ಲಭ್ಯ.

ಜಿಯೋದ ಇತರೆ ಆಕರ್ಷಕ ಪ್ಲಾನ್‌ಗಳ ಮಾಹಿತಿ

ಜಿಯೋ ಕಂಪನಿಯ 1748 ರೂ.ಗಳ ವ್ಯಾಲ್ಯೂ ಪ್ರೀಪೇಯ್ಡ್‌ ರೀಚಾರ್ಜ್‌ ಬಳಕೆದಾರರಿಗೆ ಒಟ್ಟು 336 ದಿನಗಳ ವ್ಯಾಲಿಡಿಟಿ ಪ್ರಯೋಜನ ದೊರೆಯುತ್ತದೆ. ಈ ಯೋಜನೆಯು ವಾಯ್ಸ್‌ ಓನ್ಲಿ ಪ್ಲಾನ್‌ ಆಗಿರುವುದರಿಂದ ಇದರಲ್ಲಿ ಡೇಟಾ ಸೌಲಭ್ಯ ಲಭ್ಯವಿರುವುದಿಲ್ಲ. ಅಂದಹಾಗೆ ಈ ಯೋಜನೆಯ ಒಟ್ಟಾರೇ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 3600 ಎಸ್‌ಎಮ್‌ಎಸ್‌ ಪ್ರಯೋಜನ ಸಿಗಲಿದೆ. ಹಾಗೆಯೇ ಈ ಪ್ಲಾನಿನಲ್ಲಿ JioHotstar, JioTV ಹಾಗೂ JioAICloud ಚಂದಾದಾರಿಕೆ ಸೌಲಭ್ಯ ಲಭ್ಯ.

ಜಿಯೋ ಟೆಲಿಕಾಂನ 799 ರೂಗಳ ಪ್ರೀಪೇಯ್ಡ್‌ ರೀಚಾರ್ಜ್‌ ಪ್ಲಾನ್‌ನಲ್ಲಿ ಬಳಕೆದಾರರಿಗೆ ಪ್ರತಿದಿನ 1.5GB ಡೇಟಾ ಪ್ರಯೋಜನ ದೊರೆಯುತ್ತದೆ. ಅಲ್ಲದೇ ಒಟ್ಟಾರೇ ವ್ಯಾಲಿಡಿಟಿ ಅವಧಿಗೆ ಒಟ್ಟು 126GB Data ಸೌಲಭ್ಯ ದೊರೆಯುತ್ತದೆ. ಅಂದಹಾಗೆ ಈ ಯೋಜನೆಯು 84 ದಿನಗಳ ವ್ಯಾಲಿಡಿಟಿ ಪ್ರಯೋಜನ ಪಡೆದುಕೊಂಡಿದೆ. ಇನ್ನು ಈ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌ ಸೌಲಭ್ಯ ಸಹ ಲಭ್ಯವಾಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ. ಹಾಗೆಯೇ ಈ ಯೋಜನೆಯಲ್ಲಿ JioTV ಹಾಗೂ JioAICloud ಚಂದಾದಾರಿಕೆ ಸೌಲಭ್ಯ ಲಭ್ಯ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :