ಅಗ್ರಸ್ಥಾನದ ಟೆಲಿಕಾಂ ಕಂಪನಿ ಎಂದೇ ಗುರುತಿಸಿಕೊಂಡಿರುವ ರಿಲಾಯನ್ಸ್ Jio ಭಿನ್ನ ಡೇಟಾ ಸೌಲಭ್ಯ ಇರುವ ಯೋಜನೆಗಳ ಆಯ್ಕೆಯನ್ನು ಹೊಂದಿದೆ. ಆಕರ್ಷಕ ಪ್ಲಾನ್‌ಗಳ ಈ ಮೂಲಕ ಏರ್‌ಟೆಲ್ ಹಾಗೂ ವಿ ಟೆಲಿಕಾಂಗಳಿಗೆ ಪೈಪೋಟಿ ನೀಡುತ್ತಾ ಮುಂದೆ ಸಾಗಿದೆ. ಆ ಪೈಕಿ ಜಿಯೋ ಟೆಲಿಕಾಂ ಕಂಪನಿಯ ಆಕರ್ಷಕ ವ್ಯಾಲಿಡಿಟಿ ಜೊತೆಗೆ ಪ್ರತಿದಿನ ಅಧಿಕ ಡೇಟಾ ಪ್ರಯೋಜನ ಒಳಗೊಂಡ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನ್‌ಗಳು ಬಳಕೆದಾರರನ್ನು ಆಕರ್ಷಿಸಿವೆ. ಮುಖ್ಯವಾಗಿ ದೈನಂದಿನ ಡೇಟಾ ಪ್ರಯೋಜನದೊಂದಿಗೆ ಇತರೆ ಹೆಚ್ಚುವರಿ ಸೌಲಭ್ಯ ಪಡೆದುಕೊಂಡಿರುವ ಯೋಜನೆಗಳು ಹೆಚ್ಚು ಲೀಡಿಂಗ್‌ನಲ್ಲಿ ಇವೆ. ಆ ಪೈಕಿ ಜಿಯೋ ಟೆಲಿಕಾಂನ 399 ರೂ. ಗಳ ಯೋಜನೆ ಗ್ರಾಹಕರ ಗಮನ ಸೆಳೆದಿದೆ. ಹಾಗಾದರೆ ಜಿಯೋ ಟೆಲಿಕಾಂನ ಅನ್‌ಲಿಮಿಟೆಡ್ ಡೇಟಾ ಪ್ರಯೋಜನ ನೀಡುವ ಕೆಲವು ಜನಪ್ರಿಯ ಯೋಜನೆಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : 80W SuperVOOC ಚಾರ್ಜಿಂಗ್ ಇರುವ Oppo F33 5G ಫೋನ್ ಈಗ ಆಫರ್‌ನಲ್ಲಿ ಲಭ್ಯ!
ರಿಲಾಯನ್ಸ್ ಜಿಯೋ ಕಂಪನಿಯ 399 ರೂ.ಗಳ ಈ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯು 28 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ವ್ಯಾಲಿಡಿಟಿ ಅವಧಿಯ ವರೆಗೂ ಬಳಕೆದಾರರಿಗೆ ಪ್ರತಿದಿನ 2.5GB Data ಪ್ರಯೋಜನ ಸಿಗಲಿದ್ದು, ಒಟ್ಟಾರೇ ಪೂರ್ಣ ವ್ಯಾಲಿಡಿಟಿ ಅವಧಿಗೆ 70GB ಡೇಟಾ ಪ್ರಯೋಜನ ದೊರೆಯುತ್ತದೆ. ಹಾಗೆಯೇ ಈ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಇರಲಿದೆ. ಬಜೆಟ್ ದರದಲ್ಲಿ ಅಧಿಕ ಡೇಟಾ ಹಾಗೂ ಓಟಿಟಿ ಬಯಸುವ ಗ್ರಾಹಕರಿಗೆ ಈ ಪ್ಲಾನ್ ಸೂಕ್ತ ಎನ್ನಬಹುದು. ಹಾಗೆಯೇ ಈ ಯೋಜನೆಯು ಜಿಯೋ ಗೇಮ್ಸ್, ಫ್ಯಾನ್ ಕೋಡ್, ಜಿಯೋ ಹಾಟ್‌ಸ್ಟಾರ್ ಓಟಿಟಿ ಚಂದಾದಾರಿಕೆ ಪಡೆದುಕೊಂಡಿದೆ.
ಜಿಯೋ ಕಂಪನಿಯ 459 ರೂ.ಗಳ ಈ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯು 28 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ವ್ಯಾಲಿಡಿಟಿ ಅವಧಿಯ ವರೆಗೂ ಬಳಕೆದಾರರಿಗೆ ಪ್ರತಿದಿನ 2GB Data (+5GB) ಪ್ರಯೋಜನ ಸಿಗಲಿದ್ದು, ಒಟ್ಟಾರೇ ಪೂರ್ಣ ವ್ಯಾಲಿಡಿಟಿ ಅವಧಿಗೆ 61GB ಡೇಟಾ ಪ್ರಯೋಜನ ದೊರೆಯುತ್ತದೆ. ಹಾಗೆಯೇ ಈ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಇರಲಿದೆ. ಹಾಗೆಯೇ ಈ ಯೋಜನೆಯು ಜಿಯೋ ಗೇಮ್ಸ್, ಫ್ಯಾನ್ ಕೋಡ್, ಸ್ನ್ಯಾಪ್‌ಚಾಟ್+ ಓಟಿಟಿ ಚಂದಾದಾರಿಕೆ ಪಡೆದುಕೊಂಡಿದೆ.
ಜಿಯೋ ಕಂಪನಿಯ 500 ರೂ.ಗಳ ಈ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯು 28 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ವ್ಯಾಲಿಡಿಟಿ ಅವಧಿಯ ವರೆಗೂ ಬಳಕೆದಾರರಿಗೆ ಪ್ರತಿದಿನ 2GB Data ಪ್ರಯೋಜನ ಸಿಗಲಿದ್ದು, ಒಟ್ಟಾರೇ ಪೂರ್ಣ ವ್ಯಾಲಿಡಿಟಿ ಅವಧಿಗೆ 56GB ಡೇಟಾ ಪ್ರಯೋಜನ ದೊರೆಯುತ್ತದೆ. ಹಾಗೆಯೇ ಈ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಇರಲಿದೆ. ಹಾಗೆಯೇ ಈ ಯೋಜನೆಯು ಯೂಟ್ಯೂಬ್ ಪ್ರಿಮಿಯಂ, ಪ್ರೈಮ್ ವಿಡಿಯೋ, ಸೋನಿ ಲೈವ್, ಜಿಯೋ ಹಾಟ್‌ಸ್ಟಾರ್, ಫ್ಯಾನ್ ಕೋಡ್ ಸೇರಿದಂತೆ 10ಕ್ಕೂ ಅಧಿಕ ಓಟಿಟಿ ಚಂದಾದಾರಿಕೆ ಪಡೆದುಕೊಂಡಿದೆ.