Jio 75 recharge plan for JioPhone users offer 23 days validity, data and unlimited calls
ದೇಶದ ಟೆಲಿಕಾಂ ವಲಯದಲ್ಲಿ Jio ಸಂಸ್ಥೆ ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ. Jio ಕಂಪನಿಯು ತನ್ನ ಗ್ರಾಹಕರಿಗಾಗಿ ಹಲವು ಭಿನ್ನ ಪ್ರಯೋಜನಗಳ ಆಯ್ಕೆ ನೀಡಿದೆ. ಆ ಪೈಕಿ ಪ್ರತಿದಿನ ಅಧಿಕ ಡೇಟಾ ಸೌಲಭ್ಯದ ಯೋಜನೆಗಳ ಆಯ್ಕೆ ಇವೆ. ಹಾಗೆಯೇ ಹೆಚ್ಚು data ಬಳಕೆ ಮಾಡದ ಹಾಗೂ ದೀರ್ಘಾವಧಿ ವ್ಯಾಲಿಡಿಟಿ ಬಯಸುವ ಗ್ರಾಹಕರಿಗಾಗಿ ವ್ಯಾಲ್ಯೂ (Value) ಪ್ರೀಪೇಯ್ಡ್ ಯೋಜನೆಗಳ ಆಯ್ಕೆ ಲಭ್ಯ ಮಾಡಿದೆ. ಜಿಯೋ 1748 ರೂ ಹಾಗೂ ಜಿಯೋ 448 ರೂಗಳ ಈ ವ್ಯಾಲ್ಯೂ ಪ್ರೀಪೇಯ್ಡ್ ಯೋಜನೆಗಳು ಗ್ರಾಹಕರಿಗೆ ಆಕರ್ಷಕ ವ್ಯಾಲಿಡಿಟಿ ಜೊತೆಗೆ ಉಚಿತ ವಾಯ್ಸ್ ಕರೆಗಳ ಪ್ರಯೋಜನ ನೀಡುತ್ತವೆ. ಹಾಗಾದರೆ ಜಿಯೋ 1748 ರೂ ಮತ್ತು ಜಿಯೋ 448 ರೂಗಳ ಪ್ಲಾನಿನ ಒಟ್ಟಾರೇ ಪ್ರಯೋಜನಗಳ ಬಗ್ಗೆ ತಿಳಿಯೋಣ.
Also Read : iPhone 17 Pro ಖರೀದಿಸಲು ಇದು ಬೆಸ್ಟ್ ಟೈಮ್! ನೀವು ಬೇಡ ಅಂದ್ರೂ ಸಿಗುತ್ತೆ ಈ ಕೊಡುಗೆ!
ರಿಲಯನ್ಸ್ Jio ಟೆಲಿಕಾಂನ 1748 ರೂ.ಗಳ ವ್ಯಾಲ್ಯೂ ಪ್ರೀಪೇಯ್ಡ್ ಯೋಜನೆಗಳಲ್ಲಿ ಇದು ಸಹ ಒಂದಾಗಿದೆ. ಸಂಸ್ಥೆಯ ಈ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರಿಗೆ ಒಟ್ಟಾರೇ 336 ದಿನಗಳ ವ್ಯಾಲಿಡಿಟಿ ಪ್ರಯೋಜನ ದೊರೆಯುತ್ತದೆ. ಈ ಅವಧಿಯಲ್ಲಿ ಬಳಕೆದಾರರಿಗೆ ದೈನಂದಿನ ನಿರ್ಬಂಧ ಇಲ್ಲದ 3600 ಉಚಿತ SMS ಸೌಲಭ್ಯ ಸಿಗಲಿದೆ. ಹಾಗೆಯೇ ಸಂಪೂರ್ಣ ಉಚಿತ ಅನ್‌ಲಿಮಿಟೆಡ್ ವಾಯ್ಸ್ ಕರೆಗಳ ಪ್ರಯೋಜನ ಸಹ ಲಭ್ಯ ಆಗುತ್ತದೆ. ಅಲ್ಲದೇ JioTV ಮತ್ತು JioAICloud ಚಂದಾದಾರಿಕೆಯ ಪ್ರಯೋಜನ ಸಹ ಸಿಗುತ್ತದೆ. ಅಂದಹಾಗೆ ಈ ಯೋಜನೆಯಲ್ಲಿ ಯಾವುದೇ ಡೇಟಾ ಪ್ರಯೋಜನ ದೊರೆಯುವುದಿಲ್ಲ.
ರಿಲಯನ್ಸ್ Jio ಸಂಸ್ಥೆಯ 448 ರೂ.ಗಳ ವ್ಯಾಲ್ಯೂ ಪ್ರೀಪೇಯ್ಡ್ ಯೋಜನೆಗಳಲ್ಲಿ ಇದು ಕೂಡಾ ಒಂದು. ಕಂಪನಿಯ ಈ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯಲ್ಲಿ ಬಳಕೆದಾರರಿಗೆ ಒಟ್ಟಾರೇ 84 ದಿನಗಳ ವ್ಯಾಲಿಡಿಟಿ ಪ್ರಯೋಜನ ಸಿಗುತ್ತದೆ. ಈ ಅವಧಿಯಲ್ಲಿ ಬಳಕೆದಾರರಿಗೆ ದೈನಂದಿನ ನಿರ್ಬಂಧ ಇಲ್ಲದ 1000 ಉಚಿತ SMS ಸೌಲಭ್ಯ ಸಿಗಲಿದೆ. ಹಾಗೆಯೇ ಸಂಪೂರ್ಣ ಉಚಿತ ಅನ್‌ಲಿಮಿಟೆಡ್ ವಾಯ್ಸ್ ಕರೆಗಳ ಪ್ರಯೋಜನ ಸಹ ಲಭ್ಯ ಇರಲಿದೆ. ಅಲ್ಲದೇ JioTV ಮತ್ತು JioAICloud ಚಂದಾದಾರಿಕೆಯ ಪ್ರಯೋಜನ ಸಹ ಸಿಗುತ್ತದೆ. ಅಂದಹಾಗೆ ಈ ಯೋಜನೆಯಲ್ಲಿ ಯಾವುದೇ ಡೇಟಾ ಪ್ರಯೋಜನ ದೊರೆಯುವುದಿಲ್ಲ.
ಅಲ್ಲದೇ ಜಿಯೋದ ಇನ್ನೊಂದು ಗಮನ ಸೆಳೆಯುವ ಯೋಜನೆ ಅಂದ್ರೆ ಅದುವೇ ಜಿಯೋ 799 ರೂಗಳ ಪ್ಲಾನ್ ಆಗಿದೆ. ಈ ರೀಚಾರ್ಜ್ ಯೋಜನೆಯು ಒಟ್ಟು 84 ದಿನಗಳ ವ್ಯಾಲಿಡಿಟಿ ಪ್ರಯೋಜನವನ್ನು ಒಳಗೊಂಡಿದೆ. ಈ ಅವಧಿಯಲ್ಲಿ ಬಳಕೆದಾರರಿಗೆ ಪ್ರತಿದಿನ 1.5GB ಡೇಟಾ ಪ್ರಯೋಜನ ದೊರೆಯುತ್ತದೆ ಅಲ್ಲದೇ ಪ್ರತಿದಿನ 100 ಉಚಿತ SMS ಸೌಲಭ್ಯ ಕೂಡಾ ಸಿಗಲಿದೆ. ಇದರೊಂದಿಗೆ ಪೂರ್ಣ ವ್ಯಾಲಿಡಿಟಿ ಅವಧಿಗೆ ಅನಿಯಮಿತ ವಾಯ್ಸ್ ಕರೆಗಳ ಪ್ರಯೋಜನ ಸಹ ದೊರೆಯುತ್ತದೆ. ಇನ್ನು ಒಟ್ಟಾರೇ ವ್ಯಾಲಿಡಿಟಿ ಅವಧಿಗೆ ಒಟ್ಟು 126GB ಡೇಟಾ ಪ್ರಯೋಜನ ಗ್ರಾಹಕರಿಗೆ ಲಭ್ಯ ಆಗಲಿದೆ.