Jio ಗ್ರಾಹಕರಿಗೆ ಗುಡ್‌ನ್ಯೂಸ್: ಈ ವಾರ್ಷಿಕ ಪ್ಲಾನ್‌ನಲ್ಲಿ 120GB ಬೋನಸ್ ಡೇಟಾ ಘೋಷಣೆ

ಜಿಯೋ ಹತ್ತನೇ ವಾರ್ಷಿಕೋತ್ಸವದ (Jio 10th Anniversary) ಪ್ರಯುಕ್ತ ತನ್ನ ತನ್ನ 3,599 ರೂ.ಗಳ ವಾರ್ಷಿಕ ಪ್ರಿಪೇಯ್ಡ್ ಯೋಜನೆಗೆ ಮೆಗಾ ವಾರ್ಷಿಕೋತ್ಸವದ ಕೊಡುಗೆ ಘೋಷಿಸಿದೆ. ಈ ಆಫರ್‌ನಲ್ಲಿ ಗ್ರಾಹಕರಿಗೆ 120GB ಹೆಚ್ಚುವರಿ ಡೇಟಾ ಮತ್ತು 12 JioTV Pro ಪ್ಯಾಕ್ ವೋಚರ್‌ಗಳು ಸಿಗಲಿವೆ. ಇದರೊಂದಿಗೆ ಯೋಜನೆಯ ಸಾಮಾನ್ಯ ವಾಯ್ಸ್ ಕರೆ, ಡೇಟಾ, ಮನರಂಜನೆ, ಕ್ಲೌಡ್ ಸ್ಟೋರೇಜ್ ಹಾಗೂ AI ಸಂಬಂಧಿತ ಪ್ರಯೋಜನಗಳೂ ಸಹ ಲಭ್ಯವಿವೆ. ಹಾಗಾದರೆ ಜಿಯೋದ ಈ ಕೊಡುಗೆಯ ಕುರಿತು ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : 6,000mAh ಬ್ಯಾಟರಿ ಸೌಲಭ್ಯ ಇರುವ Vivo T4 Lite 5G ಬೆಲೆಯಲ್ಲಿ ಭಾರೀ ಡಿಸ್ಕೌಂಟ್‌

Jio 3,599 ರೂ.ಗಳ ಪ್ಲಾನ್‌ ಮಾಹಿತಿ

ಜಿಯೋದ ಈ ವಾರ್ಷಿಕ ಯೋಜನೆಯ 365 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಇದರೊಂದಿಗೆ ಪ್ರತಿದಿನ 2.5GB ಡೇಟಾ ಸಿಗುತ್ತದೆ. ಪೂರ್ಣ ವ್ಯಾಲಿಡಿಟಿ ಅವಧಿಯಲ್ಲಿ ಒಟ್ಟು 912.5GB ಡೇಟಾ ಬಳಕೆಗೆ ಲಭ್ಯವಾಗುತ್ತದೆ. ಇದರೊಂದಿಗೆ ಅನಿಯಮಿತ ವಾಯ್ಸ್ ಕಾಲಿಂಗ್ ಮತ್ತು ಪ್ರತಿದಿನ 100 SMS ಸೌಲಭ್ಯವೂ ದೊರೆಯುತ್ತದೆ. ಹಾಗೆಯೇ ಇದರೊಂದಿಗೆ JioTV ಹಾಗೂ JioAICloud ಚಂದಾದಾರಿಕೆಯ ಪ್ರಯೋಜನ ಸಹ ಲಭ್ಯವಾಗಲಿದೆ.

120GB ಹೆಚ್ಚುವರಿ ಡೇಟಾ ಲಭ್ಯ

ಜಿಯೋದ ಮೆಗಾ ವಾರ್ಷಿಕೋತ್ಸವದ ಕೊಡುಗೆಯ ಪ್ರಮುಖ ಆಕರ್ಷಣೆ 120GB ಹೆಚ್ಚುವರಿ ಡೇಟಾ. ಈ ಡೇಟಾವನ್ನು 12 ತಿಂಗಳ ಅವಧಿಯಲ್ಲಿ ಪ್ರತಿ ತಿಂಗಳು 10GB ಬೋನಸ್ ಡೇಟಾ ರೂಪದಲ್ಲಿ ನೀಡಲಾಗುತ್ತದೆ. ಹೀಗಾಗಿ ಯೋಜನೆಯಲ್ಲಿರುವ 912.5GB ಸಾಮಾನ್ಯ ಡೇಟಾ ಮತ್ತು 120GB ಹೆಚ್ಚುವರಿ ಡೇಟಾವನ್ನು ಸೇರಿಸಿದರೆ, ಗ್ರಾಹಕರು ಒಂದು ವರ್ಷದಲ್ಲಿ ಒಟ್ಟು 1,032.5GB ವರೆಗೆ ಡೇಟಾ ಪಡೆಯಬಹುದು.

JioTV Pro ಮೂಲಕ 1,000ಕ್ಕೂ ಹೆಚ್ಚು ಚಾನೆಲ್‌ಗಳು

ಜಿಯೋದ ಮೆಗಾ ವಾರ್ಷಿಕೋತ್ಸವದ ಕೊಡುಗೆಯಲ್ಲಿ 12 JioTV Pro ಪ್ಯಾಕ್ ವೋಚರ್‌ಗಳನ್ನೂ ನೀಡಲಾಗುತ್ತಿದೆ. ಪ್ರತಿ ವೋಚರ್‌ನ ಮೌಲ್ಯ 55 ರೂ.ಗಳು ಆಗಿದೆ. JioTV Pro ಮೂಲಕ ಗ್ರಾಹಕರು 1,000ಕ್ಕೂ ಹೆಚ್ಚು ಟಿವಿ ಚಾನೆಲ್‌ಗಳನ್ನು ವೀಕ್ಷಿಸುವ ಅವಕಾಶ ಪಡೆಯುತ್ತಾರೆ.

ಹೆಚ್ಚುವರಿ ಪ್ರಯೋಜನಗಳು

ಜಿಯೋದ 3,599 ರೂ.ಗಳ ರೀಚಾರ್ಜ್‌ನ ಮತ್ತೊಂದು ಪ್ರಯೋಜನವೆಂದರೆ JioHotstar Mobile + Hollywood ಚಂದಾದಾರಿಕೆ. ಈ ಸೌಲಭ್ಯವನ್ನು ಬಳಸಲು ಗ್ರಾಹಕರು ರೀಚಾರ್ಜ್ ಸಕ್ರಿಯಗೊಳಿಸಿದ ಅದೇ ಜಿಯೋ ಮೊಬೈಲ್ ಸಂಖ್ಯೆಯ ಮೂಲಕ JioHotstarಗೆ ಲಾಗಿನ್ ಮಾಡಬೇಕು. ಹಾಗೆಯೇ ಈ ಯೋಜನೆಯಡಿ ಗ್ರಾಹಕರಿಗೆ JioAICloud ಮೂಲಕ 50GB ಉಚಿತ ಕ್ಲೌಡ್ ಸ್ಟೋರೇಜ್ ಕೂಡ ದೊರೆಯುತ್ತದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :