Jio ಟೆಲಿಕಾಂನ ಕಡಿಮೆ ಬೆಲೆಯ ಈ ಪ್ಲಾನ್‌ಗಳಲ್ಲಿ ಸಿಗುತ್ತೆ ಜಬರ್ದಸ್ತ್‌ ವ್ಯಾಲಿಡಿಟಿ

Updated on 12-Feb-2026
HIGHLIGHTS

Jio ಕಂಪನಿಯ ಎರಡು ಪ್ಲಾನ್‌ಗಳಲ್ಲಿ ಡೇಟಾ ಜೊತೆಗೆ 56 ದಿನಗಳ ವ್ಯಾಲಿಡಿಟಿ ಲಭ್ಯ

Jio ಸಂಸ್ಥೆಯ ಈ ಯೋಜನೆಗಳಲ್ಲಿ ವಾಯ್ಸ್‌ ಕರೆ ಹಾಗೂ ಉಚಿತ ಎಸ್‌ಎಮ್‌ಎಸ್‌ ಲಭ್ಯ

Jio ಟೆಲಿಕಾಂನ 666 ರೂಗಳ ಪ್ಲಾನ್‌ 70 ದಿನಗಳ ವ್ಯಾಲಿಡಿಟಿ ಒಳಗೊಂಡಿದೆ

ದೇಶದ ಟೆಲಿಕಾಂ ವಲಯದಲ್ಲಿ ಅಗ್ರಸ್ಥಾನದಲ್ಲಿ ಕಾಣಿಸಿಕೊಂಡಿರುವ Jio ಕಂಪನಿಯು ಹಲವು ಆಕರ್ಷಕ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಗಳ ಆಯ್ಕೆಯನ್ನು ಒಳಗೊಂಡಿದೆ. ಅವುಗಳ ಪೈಕಿ ಅಧಿಕ ವ್ಯಾಲಿಡಿಟಿ ಹಾಗೂ ದೈನಂದಿನ ಡೇಟಾ ಸೌಲಭ್ಯ ಪಡೆದಿರುವ ಯೋಜನೆಗಳು ಹೆಚ್ಚು ಆಕರ್ಷಕವಾಗಿ ಕಾಣಿಸಿಕೊಂಡಿವೆ. ಹಾಗೆಯೇ ಜಿಯೋ ಅಲ್ಪಾವಧಿ ವ್ಯಾಲಿಡಿಟಿ ಪ್ರಯೋಜನ ಪಡೆದ ಪ್ಲಾನ್‌ಗಳ ಲಿಸ್ಟ್‌ ಸಹ ಒಳಗೊಂಡಿದೆ. ಅದಾಗ್ಯೂ, ಜಿಯೋ ಟೆಲಿಕಾಂನ ಪ್ರತಿದಿನ ಡೇಟಾ ಜೊತೆಗೆ 56 ದಿನಗಳ ವ್ಯಾಲಿಡಿಟಿ ಪಡೆದ ಕೆಲವು ರೀಚಾರ್ಜ್‌ ಯೋಜನೆಗಳು ಟ್ರೆಂಡಿಂಗ್‌ನಲ್ಲಿ ಕಾಣಿಸಿಕೊಂಡಿವೆ. ಹಾಗಾದರೆ Jio ಟೆಲಿಕಾಂನ 56 ದಿನಗಳ ವ್ಯಾಲಿಡಿಟಿಯ ಯೋಜನೆಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : iPhone 16 Plus ಬೆಲೆಯಲ್ಲಿ ಮತ್ತೆ ಭರ್ಜರಿ ಇಳಿಕೆ! ಈ ಬೊಂಬಾಟ್‌ ಆಫರ್‌ ಒಮ್ಮೆ ಗಮನಿಸಿ

Jio ಸಂಸ್ಥೆಯ 579 ರೂ.ಗಳ ರೀಚಾರ್ಜ್‌ ಪ್ಲಾನ್ ಮಾಹಿತಿ

Jio ಟೆಲಿಕಾಂನ 579 ರೂ.ಗಳ ಪ್ರೀಪೇಯ್ಡ್‌ ರೀಚಾರ್ಜ್‌ ಪ್ಲಾನಿನಲ್ಲಿ ಬಳಕೆದಾರರಿಗೆ ಪ್ರತಿದಿನ 1.5GB Data ಸೌಲಭ್ಯ ಸಿಗಲಿದ್ದು ಒಟ್ಟಾರೇ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 84 GB ಡೇಟಾ ದೊರೆಯುತ್ತದೆ. ಅಲ್ಲದೇ ಈ ಯೋಜನೆಯಲ್ಲಿ ಗ್ರಾಹಕರಿಗೆ 56 ದಿನಗಳ ವ್ಯಾಲಿಡಿಟಿ ಪ್ರಯೋಜನ ದೊರೆಯುತ್ತದೆ. ಹಾಗೆಯೇ ಈ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌ ಸೌಲಭ್ಯ ಸಹ ಸಿಗಲಿದ್ದು, ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ. ಈ ಯೋಜನೆಯೊಂದಿಗೆ ಹೆಚ್ಚುವರಿಯಾಗಿ JioTV ಹಾಗೂ JioAICloud ಚಂದಾದಾರಿಕೆಯು ಲಭ್ಯ.

Jio ಸಂಸ್ಥೆಯ 629 ರೂ.ಗಳ ಯೋಜನೆಯ ಮಾಹಿತಿ

Jio ಟೆಲಿಕಾಂನ 629 ರೂ.ಗಳ ಪ್ರೀಪೇಯ್ಡ್‌ ರೀಚಾರ್ಜ್‌ ಪ್ಲಾನಿನಲ್ಲಿ ಬಳಕೆದಾರರಿಗೆ ಪ್ರತಿದಿನ 2GB Data ಸೌಲಭ್ಯ ಸಿಗಲಿದ್ದು ಒಟ್ಟಾರೇ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 112 GB ಡೇಟಾ ದೊರೆಯುತ್ತದೆ. ಅಲ್ಲದೇ ಈ ಯೋಜನೆಯಲ್ಲಿ ಗ್ರಾಹಕರಿಗೆ 56 ದಿನಗಳ ವ್ಯಾಲಿಡಿಟಿ ಪ್ರಯೋಜನ ದೊರೆಯುತ್ತದೆ. ಹಾಗೆಯೇ ಈ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌ ಸೌಲಭ್ಯ ಸಹ ಸಿಗಲಿದ್ದು, ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ. ಈ ಯೋಜನೆಯೊಂದಿಗೆ ಹೆಚ್ಚುವರಿಯಾಗಿ JioTV ಹಾಗೂ JioAICloud ಚಂದಾದಾರಿಕೆಯು ಲಭ್ಯ.

Jio ಸಂಸ್ಥೆಯ 666 ರೂ.ಗಳ ಪ್ಲಾನ್ ಮಾಹಿತಿ

Jio ಟೆಲಿಕಾಂನ 666 ರೂ.ಗಳ ಪ್ರೀಪೇಯ್ಡ್‌ ರೀಚಾರ್ಜ್‌ ಪ್ಲಾನಿನಲ್ಲಿ ಬಳಕೆದಾರರಿಗೆ ಪ್ರತಿದಿನ 1.5GB Data ಸೌಲಭ್ಯ ಸಿಗಲಿದ್ದು ಒಟ್ಟಾರೇ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 105 GB ಡೇಟಾ ದೊರೆಯುತ್ತದೆ. ಅಲ್ಲದೇ ಈ ಯೋಜನೆಯಲ್ಲಿ ಗ್ರಾಹಕರಿಗೆ 70 ದಿನಗಳ ವ್ಯಾಲಿಡಿಟಿ ಪ್ರಯೋಜನ ದೊರೆಯುತ್ತದೆ. ಹಾಗೆಯೇ ಈ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌ ಸೌಲಭ್ಯ ಸಹ ಸಿಗಲಿದ್ದು, ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ. ಈ ಯೋಜನೆಯೊಂದಿಗೆ ಹೆಚ್ಚುವರಿಯಾಗಿ JioTV ಹಾಗೂ JioAICloud ಚಂದಾದಾರಿಕೆಯು ಲಭ್ಯ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :