BSNL Rs 997 Plan: ಒಂದೇ ರೀಚಾರ್ಜ್‌ನಲ್ಲಿ ಡೇಟಾ ಹಾಗೂ ವ್ಯಾಲಿಡಿಟಿ ಪ್ರಯೋಜನ

HIGHLIGHTS

ಬಿಎಸ್‌ಎನ್‌ಎಲ್‌ ಟೆಲಿಕಾಂನ ಈ ಪ್ಲಾನ್‌ನಲ್ಲಿ 164 ದಿನಗಳ ವ್ಯಾಲಿಡಿಟಿ

ಬಿಎಸ್‌ಎನ್‌ಎಲ್‌ನ ಈ ಪ್ಲಾನ್‌ನಲ್ಲಿ ಅನಿಯಮಿತ ವಾಯ್ಸ್‌ ಕರೆಗಳ ಪ್ರಯೋಜನ ಲಭ್ಯ

ಗ್ರಾಹಕರು BSNL ವೆಬ್‌ಸೈಟ್ ಅಥವಾ BSNL ಸೆಲ್ಫ ಕೇರ್‌ ಆಪ್‌ ಮೂಲಕ ರೀಚಾರ್ಜ್ ಮಾಡಬಹುದು

BSNL Rs 997 Plan: ಸರ್ಕಾರಿ ಸ್ವಾಮ್ಯದ BSNL ಟೆಲಿಕಾಂ ಕೆಲವು ಆಕರ್ಷಕ ಪ್ರೀಪೇಯ್ಡ್‌ ಯೋಜನೆಗಳ ಮೂಲಕ ಖಾಸಗಿ ಟೆಲಿಕಂಗಳಿಗೆ ಪೈಪೋಟಿ ನೀಡುತ್ತಾ ಮುನ್ನಡೆದಿದೆ. ಆ ಪೈಕಿ BSNL ಟೆಲಿಕಾಂನ ಹಲವು ಪ್ರಿಪೇಯ್ಡ್ ರೀಚಾರ್ಜ್‌ ಯೋಜನೆಗಳು ಅಧಿಕ ದೈನಂದಿನ ಡೇಟಾ ಸೌಲಭ್ಯ ಒಳಗೊಂಡಿವೆ. ಹಾಗೆಯೇ ಈ ಯೋಜನೆಗಳು ಆಕರ್ಷಕ ವ್ಯಾಲಿಡಿಟಿ ಪ್ರಯೋಜನ ಸಹ ಪಡೆದುಕೊಂಡಿವೆ. ಅದೇ ರೀತಿ ಸಂಸ್ಥೆಯ ಬಿಎಸ್‌ಎನ್‌ಎಲ್‌ 997 ರೂಗಳ ಪ್ಲಾನ್‌ ಜನಪ್ರಿಯ ಯೋಜನೆಗಳ ಪೈಕಿ ಒಂದಾಗಿದೆ. ಪ್ರಸ್ತುತ ಈ ಯೋಜನೆಯ ವ್ಯಾಲಿಡಿಟಿ ಸೌಲಭ್ಯದಲ್ಲಿ ಹೆಚ್ಚುವರಿ ದಿನಗಳನ್ನು ಘೋಷಿಸುವ ಮೂಲಕ ಬಿಎಸ್‌ಎನ್‌ಎಲ್‌ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದೆ. ಹಾಗಾದರೆ BSNL ಟೆಲಿಕಾಂನ 997 ರೂಗಳ ಪ್ಲಾನ್‌ ಪ್ರಯೋಜನ ಕುರಿತ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : ಸದ್ದಿಲ್ಲದೆ ಭಾರತದಲ್ಲಿ Oppo K14 5G ಸ್ಮಾರ್ಟ್‌ಫೋನ್‌ ಲಾಂಚ್‌! ಬೆಲೆ ಮತ್ತು ಫೀಚರ್ಸ್‌ ನೋಡಿ

BSNL Rs 997 Plan: 14 ದಿನಗಳ ಎಕ್ಸ್‌ಟ್ರಾ ವ್ಯಾಲಿಡಿಟಿ

BSNL ಟೆಲಿಕಾಂ ಕಂಪನಿಯು ಭಿನ್ನ ಯೋಜನೆಗಳ ಆಯ್ಕೆಯನ್ನು ಗ್ರಾಹಕರಿಗೆ ನೀಡಿದೆ. ಅವುಗಳಲ್ಲಿ BSNL ಕಂಪನಿಯ 997 ರೂ.ಗಳ ಪ್ರೀಪೇಯ್ಡ್‌ ಪ್ಲಾನ್ ಬಜೆಟ್‌ ಬೆಲೆಯಲ್ಲಿ ಗ್ರಾಹಕರನ್ನು ಆಕರ್ಷಿಸಿದೆ. ಹೌದು, ಬಿಎಸ್‌ಎನ್‌ಎಲ್‌ ಟೆಲಿಕಾಂನ ಈ ಬಜೆಟ್‌ ರೀಚಾರ್ಜ್‌ ಯೋಜನೆಯು ಈಗ ಟ್ರೆಂಡ್‌ನಲ್ಲಿ ಕಾಣಿಸಿಕೊಂಡಿದೆ. ಏಕೆಂದರೆ ಸಂಸ್ಥೆಯು ಈಯೋಜನೆಯಲ್ಲಿ 14 ದಿನಗಳ ಹೆಚ್ಚುವರಿ ವ್ಯಾಲಿಡಿಟಿ ಸೌಲಭ್ಯ ಘೋಷಿಸಿದೆ. ಅಂದಹಾಗೆ ಇದು ಸೀಮಿತ ಅವಧಿಯ ಕೊಡುಗೆ ಆಗಿದ್ದು ಇದೇ ಮಾರ್ಚ್ 31, 2026 ರ ವರೆಗೆ ಮಾತ್ರ ಲಭ್ಯ ಎನ್ನಲಾಗಿದೆ. ಗ್ರಾಹಕರು ಅಧಿಕೃತ BSNL ವೆಬ್‌ಸೈಟ್, BSNL ಸೆಲ್ಫ್‌ಕೇರ್ ಮೊಬೈಲ್ ಆಪ್‌, ಥರ್ಡ್-ಪಾರ್ಟಿ ರೀಚಾರ್ಜ್ ಆಪ್ಸ್‌ ಹಾಗೂ ಮೊಬೈಲ್ ರಿಟೇಲ್‌ ಸ್ಟೋರ್‌ಗಳ ಮೂಲಕ ರೀಚಾರ್ಜ್ ಮಾಡಬಹುದು.

ಯೋಜನೆಯ ಇತರೆ ಪ್ರಮುಖ ಸೌಲಭ್ಯಗಳು

ಬಜೆಟ್‌ ಬೆಲೆಯಲ್ಲಿ ಕಾಣಿಸಿಕೊಂಡಿರುವ BSNL ಟೆಲಿಕಾಂನ 997 ರೂ.ಗಳ ಪ್ರೀಪೇಯ್ಡ್‌ ಪ್ಲಾನ್‌ ಒಟ್ಟು 150 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಆದರೆ ಸದ್ಯ ಕೊಡುಗೆಯಲ್ಲಿ ಲಭ್ಯವಿರುವ ಹೆಚ್ಚುವರಿ 14 ದಿನಗಳನ್ನು ಸೇರಿಸಿದರೆ ಒಟ್ಟು 164 ದಿನಗಳ ಮಾನ್ಯತೆ ದೊರೆಯುತ್ತದೆ. ಈ ವ್ಯಾಲಿಡಿಟಿ ಅವಧಿಯಲ್ಲಿ ಬಳಕೆದಾರರಿಗೆ ಪ್ರತಿದಿನ 100 SMS ಸೌಲಭ್ಯ ಪ್ರಯೋಜನ ಲಭ್ಯವಾಗಲಿದೆ. ಹಾಗೆಯೇ ಈ ಯೋಜನೆಯಲ್ಲಿ ಪ್ರತಿದಿನ 2GB ಹೈ ಸ್ಪೀಡ್ ಡೇಟಾ ಸೌಲಭ್ಯ ದೊರೆಯುತ್ತದೆ. ದೈನಂದಿನ ಡೇಟಾ ಮಿತಿ ಮುಗಿದರೆ ಇಂಟರ್ನೆಟ್‌ ವೇಗ ಕಡಿಮೆ ಆಗಲಿದೆ. ಅಂದಹಾಗೆ ಒಟ್ಟಾರೇ ಪೂರ್ಣ ವ್ಯಾಲಿಡಿಟಿ ಅವಧಿಗೆ ಈ ಯೋಜನೆಯಲ್ಲಿ 328GB ಡೇಟಾ ಪ್ರಯೋಜನ ಲಭ್ಯವಾಗಲಿದೆ.

ಹಾಗೆಯೇ ಬಿಎಸ್‌ಎನ್‌ಎಲ್‌ ಟೆಲಿಕಾಂನ 997 ರೂ.ಗಳ ಪ್ರೀಪೇಯ್ಡ್‌ ಯೋಜನೆಯಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಗೆ ಬಳಕೆದಾರರಿಗೆ ಭಾರತದ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ವಾಯ್ಸ್‌ ಕರೆಗಳ ಸೌಲಭ್ಯ ಸಹ ಸಿಗುತ್ತದೆ. ಒಂದೇ ರೀಚಾರ್ಜ್‌ನಲ್ಲಿ ದೀರ್ಘಾವಧಿಯ ವ್ಯಾಲಿಡಿಟಿ ಮತ್ತು ದೈನಂದಿನ ಡೇಟಾ ಈ ಎರಡು ಪ್ರಯೋಜನ ಪಡೆಯಲು ಈ ಯೋಜನೆಯು ಆಕರ್ಷಕವಾಗಿ ಕಾಣುತ್ತದೆ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :