BSNL
ಸರ್ಕಾರಿ ಸ್ವಾಮ್ಯದ ಟೆಲಿಕಾಂ ಸಂಸ್ಥೆ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ತನ್ನ ಬಳಕೆದಾರರಿಗಾಗಿ ಹಲವು ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳನ್ನು ನೀಡುತ್ತಿದೆ. ಆ ಪೈಕಿ ಬಿಎಸ್‌ಎನ್‌ಎಲ್ 225 ರೂ.ಗಳ ರೀಚಾರ್ಜ್ ಯೋಜನೆಯು ಆಕರ್ಷಕ ಆಯ್ಕೆಯಾಗಿ ಕಾಣಿಸಿಕೊಂಡಿದೆ. ಈ ಪ್ಲಾನಿನಲ್ಲಿ ಅನಿಯಮಿತ ವಾಯ್ಸ್ ಕಾಲಿಂಗ್, ಪ್ರತಿದಿನ 100 ಎಸ್‌ಎಮ್‌ಎಸ್ ಸೇರಿದಂತೆ ಹಲವು ಪ್ರಯೋಜನಗಳು ಲಭ್ಯವಿವೆ. ಅಂದಹಾಗೆ ದೇಶಾದ್ಯಂತ ಬಿಎಸ್‌ಎನ್‌ಎಲ್ ಗ್ರಾಹಕರಿಗೆ ಈ 225 ರೂ.ಗಳ ಯೋಜನೆ ಲಭ್ಯವಿದೆ. ಆದರೆ ಈ ಯೋಜನೆಯು ಇದೀಗ ಗ್ರಾಹಕರಿಗೆ ಸ್ವಲ್ಪ ದುಬಾರಿಯಾಗಿ ಪರಿಣಮಿಸಿದೆ. ಹಾಗಾದರೆ ಬಿಎಸ್‌ಎನ್‌ಎಲ್‌ನ 225 ರೂ.ಗಳ ಯೋಜನೆಯಲ್ಲಿ ಏನೆಲ್ಲಾ ಬದಲಾವಣೆಗಳಾಗಿವೆ? ಪ್ರಸ್ತುತ ಇದರ ವ್ಯಾಲಿಡಿಟಿ ಎಷ್ಟು? ಈ ಯೋಜನೆ ನಿಜವಾಗಿಯೂ ಗ್ರಾಹಕರಿಗೆ ಎಷ್ಟು ದುಬಾರಿಯಾಗುತ್ತದೆ ಎಂಬುದನ್ನು ತಿಳಿಯೋಣ.
Also Read : Vivo V70 Elite ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಭಾರೀ ಇಳಿಕೆ; 6,500mAh ಸಾಮರ್ಥ್ಯದ ಬ್ಯಾಟರಿ
ಬಿಎಸ್‌ಎನ್‌ಎಲ್‌ನ ಈ ರೀಚಾರ್ಜ್ ಯೋಜನೆಯಲ್ಲಿ ಆಗಿರುವ ಪ್ರಮುಖ ಬದಲಾವಣೆ ಎಂದರೆ ಅದು ವ್ಯಾಲಿಡಿಟಿ ಅವಧಿ ಕಡಿಮೆಯಾಗಿರುವುದು. ಈ ಮೊದಲು 225 ರೂ.ಗಳ ರೀಚಾರ್ಜ್ ಯೋಜನೆಯು 30 ದಿನಗಳ ವ್ಯಾಲಿಡಿಟಿ ನೀಡುತ್ತಿತ್ತು. ಆದರೆ ಇದೀಗ ಈ ವ್ಯಾಲಿಡಿಟಿ ಅವಧಿಯನ್ನು 28 ದಿನಗಳಿಗೆ ಇಳಿಸಲಾಗಿದೆ. 30 ದಿನಗಳ ವ್ಯಾಲಿಡಿಟಿಯನ್ನು ಪರಿಗಣಿಸಿದರೆ ಈ ಯೋಜನೆಯ ಒಂದು ದಿನದ ವೆಚ್ಚ ಸುಮಾರು 7.50 ರೂ.ಗಳ ಆಗಿತ್ತು. ಆದರೆ ಈಗ 28 ದಿನಗಳ ವ್ಯಾಲಿಡಿಟಿ ಇರುವುದರಿಂದ ದಿನಕ್ಕೆ ಸರಾಸರಿ ವೆಚ್ಚ ಸುಮಾರು 8.03 ರೂ.ಗಳ ಏರಿಕೆಯಾಗಿದೆ.
ಬಿಎಸ್‌ಎನ್‌ಎಲ್‌ನ 225 ರೂ.ಗಳ ಪ್ರಿಪೇಯ್ಡ್ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿದಿನ 2.5GB ಡೇಟಾ ಸೌಲಭ್ಯ ಸಿಗುತ್ತದೆ. ಇದರ ಜೊತೆಗೆ ದೇಶಾದ್ಯಂತ ಅನಿಯಮಿತ ವಾಯ್ಸ್ ಕರೆಯ ಹಾಗೂ ಪ್ರತಿದಿನ 100 ಎಸ್‌ಎಮ್‌ಎಸ್ ಪ್ರಯೋಜನವೂ ಲಭ್ಯವಿದೆ. ನಿಗದಿತ ದೈನಂದಿನ 2.5GB ಡೇಟಾ ಬಳಕೆ ಮುಗಿದ ಬಳಿಕ ಇಂಟರ್ನೆಟ್ ವೇಗ ಕಡಿಮೆಯಾಗುತ್ತದೆ. ಈ ಪ್ಲಾನಿನಲ್ಲಿ ಯಾವುದೇ OTT ಸಬ್‌ಸ್ಕ್ರಿಪ್ಷನ್ ಅಥವಾ ಇತರೆ ಮನರಂಜನಾ ಪ್ರಯೋಜನಗಳು ಸೇರಿಲ್ಲ.
ಬಿಎಸ್‌ಎನ್‌ಎಲ್ ಟೆಲಿಕಾಂನ 599 ರೂ.ಗಳ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿದಿನ 3GB ಡೇಟಾ ಸೌಲಭ್ಯ ದೊರೆಯುತ್ತದೆ. ಅಲ್ಲದೇ ಈ ಯೋಜನೆಯು 70 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಹಾಗೆಯೇ ಈ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್ ವಾಯ್ಸ್ ಕರೆಗಳ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಇರಲಿದೆ. ಕಡಿಮೆ ಬೆಲೆಯಲ್ಲಿ ಅಧಿಕ ವ್ಯಾಲಿಡಿಟಿ ಬೇಕು ಎನ್ನುವ ಗ್ರಾಹಕರಿಗೆ ಈ ಪ್ಲಾನ್ ಆಕರ್ಷಕ ಎನಿಸುತ್ತದೆ.
ಬಿಎಸ್‌ಎನ್‌ಎಲ್ ಟೆಲಿಕಾಂನ 997 ರೂ.ಗಳ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯಲ್ಲಿ ಗ್ರಾಹಕರಿಗೆ ಪ್ರತಿದಿನ 2GB ಡೇಟಾ ಸೌಲಭ್ಯ ದೊರೆಯುತ್ತದೆ. ಅಲ್ಲದೇ ಈ ಯೋಜನೆಯು 150 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿದೆ. ಹಾಗೆಯೇ ಈ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್ ವಾಯ್ಸ್ ಕರೆಗಳ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಇರಲಿದೆ. ಕಡಿಮೆ ಬೆಲೆಯಲ್ಲಿ ಅಧಿಕ ವ್ಯಾಲಿಡಿಟಿ ಬೇಕು ಎನ್ನುವ ಗ್ರಾಹಕರಿಗೆ ಈ ಪ್ಲಾನ್ ಆಕರ್ಷಕ ಎನಿಸುತ್ತದೆ.