vodafone idea (9)
ವೊಡಾಫೋನ್ ಐಡಿಯಾ (Vi) ಟೆಲಿಕಾಂ ಆಕರ್ಷಕ ಪೋಸ್ಟ್‌ಪೇಯ್ಡ್ ಹಾಗೂ ಪ್ರೀಪೇಯ್ಡ್ ಯೋಜನೆಗಳ ಮೂಲಕ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ಹಲವು ಭಿನ್ನ ಪ್ರೈಸ್‌ಟ್ಯಾಗ್‌ನಲ್ಲಿ ಯೋಜನೆಗಳನ್ನು ಪರಿಚಯಿಸಿರುವ ವಿ ಟೆಲಿಕಾಂ ಆಕರ್ಷಕ ಡೇಟಾ ಹಾಗೂ ಬಿಗ್ ವ್ಯಾಲಿಡಿಟಿ ಸೌಲಭ್ಯದ ಪ್ಲಾನ್‌ಗಳ ಲಿಸ್ಟ್ ಸಹ ಒಳಗೊಂಡಿದೆ. ವಿ ಟೆಲಿಕಾಂನ ಜನಪ್ರಿಯ ಯೋಜನೆಗಳ ಲಿಸ್ಟ್‌ನಲ್ಲಿ ಬಜೆಟ್ ದರದಲ್ಲಿ ದೈನಂದಿನ ಡೇಟಾ ಸೌಲಭ್ಯ ಪಡೆದ ಯೋಜನೆಗಳು ಸೇರಿವೆ. ಅದಾಗ್ಯೂ, ಕಡಿಮೆ ಬೆಲೆಯಲ್ಲಿ ಆಕರ್ಷಕ ವ್ಯಾಲಿಡಿಟಿ ಜೊತೆಗೆ ಪ್ರತಿದಿನ ಡೇಟಾ ಪ್ರಯೋಜನ ಒಳಗೊಂಡಿರುವ ರೀಚಾರ್ಜ್ ಯೋಜನೆಗಳು ಅತ್ಯುತ್ತಮ ಎನಿಸಿವೆ. ಆ ಪೈಕಿ ವಿ ಟೆಲಿಕಾಂನ 56 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದಿರುವ ಯೋಜನೆಗಳು ಬೇಡಿಕೆಯಲ್ಲಿ ಕಾಣಿಸಿಕೊಂಡಿದೆ. ಹಾಗಾದರೆ ವಿ ಟೆಲಿಕಾಂನ 56 ದಿನಗಳ ವ್ಯಾಲಿಡಿಟಿ ಇರುವ ಯೋಜನೆಗಳ ಸಂಪೂರ್ಣ ಮಾಹಿತಿ ಮುಂದೆ ತಿಳಿಯೋಣ.
Also Read : ಸ್ಮಾರ್ಟ್‌ಫೋನಿನಲ್ಲಿ ಡಿಲೀಟ್ ಆದ Photos ಮರಳಿ ಪಡೆಯುವುದು ಸುಲಭ! ಈ ವಿಧಾನ ಉತ್ತಮ
ವಿ ಟೆಲಿಕಾಂನ 579 ರೂ.ಗಳ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯಲ್ಲಿ ಬಳಕೆದಾರರಿಗೆ ಒಟ್ಟು 56 ದಿನಗಳ ವ್ಯಾಲಿಡಿಟಿ ಪ್ರಯೋಜನ ದೊರೆಯುತ್ತದೆ. ಈ ರೀಚಾರ್ಜ್ ಯೋಜನೆಯಲ್ಲಿ ಪ್ರತಿದಿನ 1.5GB ಡೇಟಾ ಸೌಲಭ್ಯ ಲಭ್ಯವಾಗಲಿದೆ. ಹಾಗೆಯೇ ಈ ರೀಚಾರ್ಜ್ ಪ್ಲಾನಿನಲ್ಲಿ ಅನಿಯಮಿತ ವಾಯ್ಸ್ ಕರೆಯ ಸೌಲಭ್ಯ ಸಹ ಲಭ್ಯವಾಗಲಿದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್ ಪ್ರಯೋಜನ ಲಭ್ಯ ಇರಲಿದೆ.
ವಿ ಕಂಪನಿಯ 670 ರೂ.ಗಳ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯಲ್ಲಿ ಬಳಕೆದಾರರಿಗೆ ಒಟ್ಟು 56 ದಿನಗಳ ವ್ಯಾಲಿಡಿಟಿ ಪ್ರಯೋಜನ ದೊರೆಯುತ್ತದೆ. ಈ ರೀಚಾರ್ಜ್ ಯೋಜನೆಯಲ್ಲಿ ಅನಿಯಮಿತ ಡೇಟಾ ಪ್ರಯೋಜನ ಲಭ್ಯವಾಗಲಿದೆ. ಅಲ್ಲದೇ ಈ ರೀಚಾರ್ಜ್ ಪ್ಲಾನಿನಲ್ಲಿ ಅನಿಯಮಿತ ವಾಯ್ಸ್ ಕರೆಯ ಸೌಲಭ್ಯ ಸಹ ಲಭ್ಯವಾಗಲಿದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್ ಪ್ರಯೋಜನ ಲಭ್ಯ ಇರಲಿದೆ.
ವಿ ಕಂಪನಿಯ 696 ರೂ.ಗಳ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯಲ್ಲಿ ಬಳಕೆದಾರರಿಗೆ ಒಟ್ಟು 56 ದಿನಗಳ ವ್ಯಾಲಿಡಿಟಿ ಪ್ರಯೋಜನ ದೊರೆಯುತ್ತದೆ. ಈ ರೀಚಾರ್ಜ್ ಯೋಜನೆಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಅಲ್ಲದೇ ಈ ರೀಚಾರ್ಜ್ ಪ್ಲಾನಿನಲ್ಲಿ ಅನಿಯಮಿತ ವಾಯ್ಸ್ ಕರೆಯ ಸೌಲಭ್ಯ ಸಹ ಲಭ್ಯವಾಗಲಿದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್ ಪ್ರಯೋಜನ ಲಭ್ಯ ಇರಲಿದೆ.
ವಿ ಕಂಪನಿಯ 795 ರೂ.ಗಳ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರಿಗೆ ಒಟ್ಟು 56 ದಿನಗಳ ವ್ಯಾಲಿಡಿಟಿ ಪ್ರಯೋಜನ ದೊರೆಯುತ್ತದೆ. ಈ ರೀಚಾರ್ಜ್ ಯೋಜನೆಯಲ್ಲಿ ಪ್ರತಿದಿನ 3GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಅಲ್ಲದೇ ಈ ರೀಚಾರ್ಜ್ ಪ್ಲಾನಿನಲ್ಲಿ ಅನಿಯಮಿತ ವಾಯ್ಸ್ ಕರೆಯ ಸೌಲಭ್ಯ ಸಹ ಲಭ್ಯವಾಗಲಿದೆ. ಇದರೊಂದಿಗೆ ಪ್ರತಿದಿನ 100 ಎಸ್‌ಎಮ್‌ಎಸ್ ಪ್ರಯೋಜನ ಲಭ್ಯ ಇರಲಿದೆ.