Airtel
Airtel ಕಂಪನಿ ದೇಶದ ಎರಡನೇ ದೊಡ್ಡ ಟೆಲಿಕಾಂ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ಏರ್‌ಟೆಲ್ ಸಂಸ್ಥೆಯು ಹಲವು ಭಿನ್ನ ಪ್ರಿಪೇಯ್ಡ್ ಯೋಜನೆಗಳ ಮೂಲಕ ಮಾರುಕಟ್ಟೆಯಲ್ಲಿ ಗ್ರಾಹಕರ ಗಮನ ಸೆಳೆದಿದೆ. ಆ ಪೈಕಿ ಏರ್‌ಟೆಲ್ ಟೆಲಿಕಾಂನ ಬಹುತೇಕ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳು ಅಧಿಕ ದೈನಂದಿನ ಡೇಟಾ ಪ್ರಯೋಜನ ಪಡೆದುಕೊಂಡಿವೆ. ಅಲ್ಲದೇ ಈ ಪ್ಲಾನ್‌ಗಳು ಆಕರ್ಷಕ ವ್ಯಾಲಿಡಿಟಿ ಪ್ರಯೋಜನ ಸಹ ಪಡೆದುಕೊಂಡಿವೆ. ಅದಾಗ್ಯೂ, ಏರ್‌ಟೆಲ್ ಟೆಲಿಕಾಂನ ಕೆಲವೊಂದು ಪ್ರೀಪೇಯ್ಡ್ ರೀಚಾರ್ಜ್ ಪ್ಲಾನ್‌ಗಳು ಡೇಟಾ ಸೌಲಭ್ಯದ ಜೊತೆಗೆ ಜನಪ್ರಿಯ OTT ತಾಣಗಳ ಚಂದಾದಾರಿಕೆಯ ಪ್ರಯೋಜನ ಕೂಡಾ ಪಡೆದಿವೆ. ಅಂತಹ ಪ್ರೀಪೇಯ್ಡ್ ಯೋಜನೆಗಳು ಹೆಚ್ಚು ಡಿಮ್ಯಾಂಡ್‌ನಲ್ಲಿ ಕಾಣಿಸಿಕೊಂಡಿವೆ. ಆ ಪೈಕಿ ಏರ್‌ಟೆಲ್ ಟೆಲಿಕಾಂನ 979 ರೂ.ಗಳ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಯು ಅಧಿಕ OTT ತಾಣಗಳ ಚಂದಾದಾರಿಕೆ ಒಳಗೊಂಡಿರುವ ಮೂಲಕ ಹೆಚ್ಚು ಗಮನ ಸೆಳೆದಿದೆ. ಹಾಗಾದರೆ ಏರ್‌ಟೆಲ್ ಟೆಲಿಕಾಂನ 979 ರೂ.ಗಳ ಪ್ಲಾನ್ ಪ್ರಯೋಜನ ಕುರಿತ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : Samsung Galaxy S25 ಬೆಲೆಯಲ್ಲಿ ದಿಢೀರ್ ಇಳಿಕೆ! ಸ್ನ್ಯಾಪ್‌ಡ್ರಾಗನ್ ಪ್ರೊಸೆಸರ್, ಟ್ರಿಪಲ್ ಕ್ಯಾಮೆರಾ
ಏರ್‌ಟೆಲ್ ಟೆಲಿಕಾಂ ಕಂಪನಿಯು ಭಿನ್ನ ಯೋಜನೆಗಳ ಆಯ್ಕೆ ಪರಿಚಯಿಸಿದೆ. ಅವುಗಳಲ್ಲಿ ಏರ್‌ಟೆಲ್ ಸಂಸ್ಥೆಯ 979 ರೂ.ಗಳ ಪ್ರೀಪೇಯ್ಡ್ ಪ್ಲಾನ್ ಸದ್ದು ಮಾಡಿದೆ. ಹೌದು, ಏರ್‌ಟೆಲ್ ಸಂಸ್ಥೆಯ ಈ ಪ್ಲಾನ್ ಒಟ್ಟು 20 OTT ಪ್ಲಾಟ್‌ಫಾರ್ಮ್‌ಗಳ ಚಂದಾದಾರಿಕೆ ಪಡೆದುಕೊಂಡಿದೆ. ಈ ಮೂಲಕ ಓಟಿಟಿ ಸೌಲಭ್ಯ ಬಯಸುವ ಬಳಕೆದಾರರ ಗಮನ ಸೆಳೆದಿದೆ. ಇನ್ನು ಈ ಯೋಜನೆಯಲ್ಲಿ Sony LIV, ZEE5, Lionsgate Play, Aha, Sun NXT, Kanchha Lannka, ErosNow, Chaupal, Hoichoi, Airtel Xstream Play ಚಂದಾದಾರಿಕೆ ಪ್ರಯೋಜನ ಗ್ರಾಹಕರಿಗೆ ಲಭ್ಯವಿರುತ್ತದೆ. ಮೊಬೈಲ್‌ನಲ್ಲಿ ಜನಪ್ರಿಯ ಓಟಿಟಿ ಕಾರ್ಯಕ್ರಮಗಳನ್ನು ವೀಕ್ಷಿಸುವ ಗ್ರಾಹಕರಿಗೆ ಈ ಯೋಜನೆಯು ಅತ್ಯಂತ ಉತ್ತಮ ಎಂದೆನಿಸುತ್ತದೆ.
ಗ್ರಾಹಕಸ್ನೇಹಿ ಬೆಲೆಯಲ್ಲಿ ಕಾಣಿಸಿಕೊಂಡಿರುವ ಏರ್‌ಟೆಲ್ ಟೆಲಿಕಾಂನ 979 ರೂ.ಗಳ ಪ್ರೀಪೇಯ್ಡ್ ಪ್ಲಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ವ್ಯಾಲಿಡಿಟಿ ಅವಧಿಯಲ್ಲಿ ಬಳಕೆದಾರರಿಗೆ ಪ್ರತಿದಿನ 2 GB ಹೈ ಸ್ಪೀಡ್ ಡೇಟಾ ಪ್ರಯೋಜನ ದೊರೆಯುತ್ತದೆ. ಇನ್ನು ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 168 GB ಡೇಟಾ ಪ್ರಯೋಜನ ಲಭ್ಯವಾಗುತ್ತದೆ. ಇದರ ಜೊತೆಗೆ ಈ ಪ್ಲಾನಿನಲ್ಲಿ ಬಳಕೆದಾರರಿಗೆ ಅನಿಯಮಿತ ವಾಯ್ಸ್ ಕರೆಗಳ ಪ್ರಯೋಜನದ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಸಿಗುತ್ತದೆ.
ಹೆಚ್ಚುವರಿಯಾಗಿ ಈ ಯೋಜನೆಯಲ್ಲಿ ಬಳಕೆದಾರರಿಗೆ Sony LIV, ZEE5, Lionsgate Play, Aha, Sun NXT, Kanchha Lannka, ErosNow, Chaupal, Hoichoi, Airtel Xstream Play ಚಂದಾದಾರಿಕೆ ಪ್ರಯೋಜನ ಗ್ರಾಹಕರಿಗೆ ಲಭ್ಯವಿರುತ್ತದೆ. ಇದರೊಂದಿಗೆ Adobe Premiere Express ಚಂದಾದಾರಿಕೆ ಸಹ ಲಭ್ಯ.