Airtel ಟೆಲಿಕಾಂ ಕಂಪನಿಯು ಈಗಾಗಲೇ ಮಾರುಕಟ್ಟೆಯಲ್ಲಿ ಡಿಮ್ಯಾಂಡ್‌ನಲ್ಲಿ ಕಾಣಿಸಿಕೊಂಡಿದೆ. ಅಲ್ಲದೇ ಏರ್‌ಟೆಲ್ ಸಂಸ್ಥೆಯು ಜಿಯೋ ಹಾಗೂ ವಿ ಟೆಲಿಕಾಂ ಕಂಪನಿಗಳಿಗೆ ಫೈಟ್ ನೀಡುತ್ತಾ ಸಾಗಿದೆ. ಏರ್‌ಟೆಲ್ ಸಂಸ್ಥೆಯ ಕೆಲವು ಯೋಜನೆಗಳು ಅಧಿಕ ದೈನಂದಿನ ಡೇಟಾ ಮೂಲಕ ಗಮನ ಸೆಳೆದಿವೆ. ಹಾಗೆಯೇ ಏರ್‌ಟೆಲ್‌ನ 56 ದಿನಗಳ ವ್ಯಾಲಿಡಿಟಿಯ ರೀಚಾರ್ಜ್ ಪ್ಲಾನ್‌ಗಳು ಆಕರ್ಷಕ ಪ್ರಯೋಜನಗಳ ಮೂಲಕ ಸದ್ದು ಮಾಡಿವೆ. ಆ ಪೈಕಿ ಏರ್‌ಟೆಲ್ ಟೆಲಿಕಾಂನ 649 ರೂ.ಗಳ ಬೆಲೆಯ ಪ್ರೀಪೇಯ್ಡ್ ರೀಚಾರ್ಜ್ ಯೋಜನೆ ಹೆಚ್ಚು ಆಕರ್ಷಕವಾಗಿ ಕಾಣಿಸಿಕೊಂಡಿದೆ. ಈ ಬಜೆಟ್ ಬೆಲೆಯ ಯೋಜನೆಯು ದೈನಂದಿನ ಡೇಟಾ ಸೌಲಭ್ಯ ಪಡೆದುಕೊಂಡಿರುವ ಜೊತೆಗೆ ಆಕರ್ಷಕ ವ್ಯಾಲಿಡಿಟಿ ಸಹ ಒಳಗೊಂಡಿದೆ. ಇದರೊಂದಿಗೆ ಓಟಿಟಿ ಪ್ರಯೋಜನ ಸಹ ಒಳಗೊಂಡಿದೆ. ಹಾಗಾದರೆ ಏರ್‌ಟೆಲ್ ಟೆಲಿಕಾಂನ 649 ರೂ.ಗಳ ಪ್ಲಾನ್ ಹಾಗೂ ಇತರೆ ಪ್ರೀಪೇಯ್ಡ್ ರೀಚಾರ್ಜ್ ಯೋಜನೆಗಳ ಸಂಪೂರ್ಣ ಮಾಹಿತಿ ಮುಂದೆ ತಿಳಿಯೋಣ.
Also Read : 5000mAh ಬ್ಯಾಟರಿ ಇರುವ ಈ ಮೊಬೈಲ್ ಜಸ್ಟ್ 8,999 ರೂ.ಗಳಿಗೆ ಲಭ್ಯ! ಬೆಸ್ಟ್ ಆಫರ್ ಇದೆ
ಏರ್‌ಟೆಲ್ ಟೆಲಿಕಾಂನ 649 ರೂ.ಗಳ ವ್ಯಾಲ್ಯೂ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನಿನಲ್ಲಿ ಬಳಕೆದಾರರಿಗೆ ಒಟ್ಟು 56 ದಿನಗಳ ವ್ಯಾಲಿಡಿಟಿ ಪ್ರಯೋಜನ ದೊರೆಯುತ್ತದೆ. ಈ ಯೋಜನೆಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ಸಿಗಲಿದ್ದು, ಒಟ್ಟಾರೇ ವಾರ್ಷಿಕ ವ್ಯಾಲಿಡಿಟಿ ಅವಧಿಗೆ ಒಟ್ಟು 112GB ಡೇಟಾ ದೊರೆಯುತ್ತದೆ. ಹಾಗೆಯೇ ಈ ಯೋಜನೆಯಲ್ಲಿ ಅನಿಯಮಿತ ವಾಯ್ಸ್ ಕರೆಗಳ ಪ್ರಯೋಜನ ಸಹ ಲಭ್ಯವಾಗಲಿದೆ. ಅಂದಹಾಗೆ ಈ ಯೋಜನೆಯ ಪ್ರತಿದಿನ 100 ಎಸ್‌ಎಮ್‌ಎಸ್ ಪ್ರಯೋಜನ ಕೂಡಾ ಸಿಗಲಿದೆ. ಹಾಗೆಯೇ ಈ ಪ್ಲಾನಿನಲ್ಲಿ Adobe express Premium ಚಂದಾದಾರಿಕೆ ಸೌಲಭ್ಯ ಲಭ್ಯ.
ಏರ್‌ಟೆಲ್ ಕಂಪನಿಯ 838 ರೂ.ಗಳ ವಾರ್ಷಿಕ ವ್ಯಾಲಿಡಿಟಿ ಪ್ರೀಪೇಯ್ಡ್ ರೀಚಾರ್ಜ್ ಬಳಕೆದಾರರಿಗೆ ಒಟ್ಟು 56 ದಿನಗಳ ವ್ಯಾಲಿಡಿಟಿ ಪ್ರಯೋಜನ ದೊರೆಯುತ್ತದೆ. ಈ ಯೋಜನೆಯಲ್ಲಿ ಪ್ರತಿದಿನ 3GB ಡೇಟಾ ಪ್ರಯೋಜನ ಸಿಗಲಿದ್ದು, ಒಟ್ಟಾರೇ ವಾರ್ಷಿಕ ವ್ಯಾಲಿಡಿಟಿ ಅವಧಿಗೆ ಒಟ್ಟು 168GB ಡೇಟಾ ದೊರೆಯುತ್ತದೆ. ಹಾಗೆಯೇ ಈ ಯೋಜನೆಯಲ್ಲಿ ಅನಿಯಮಿತ ವಾಯ್ಸ್ ಕರೆಗಳ ಪ್ರಯೋಜನ ಸಹ ಲಭ್ಯವಾಗಲಿದೆ. ಅಂದಹಾಗೆ ಈ ಯೋಜನೆಯ ಪ್ರತಿದಿನ 100 ಎಸ್‌ಎಮ್‌ಎಸ್ ಪ್ರಯೋಜನ ಕೂಡಾ ಸಿಗಲಿದೆ. ಹಾಗೆಯೇ ಈ ಪ್ಲಾನಿನಲ್ಲಿ Adobe express Premium ಚಂದಾದಾರಿಕೆ ಸೌಲಭ್ಯ ಲಭ್ಯ.
ಏರ್‌ಟೆಲ್ ಟೆಲಿಕಾಂನ 579 ರೂ.ಗಳ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನ್‌ನಲ್ಲಿ ಬಳಕೆದಾರರಿಗೆ ಪ್ರತಿದಿನ 1.5GB ಡೇಟಾ ಪ್ರಯೋಜನ ದೊರೆಯುತ್ತದೆ. ಅಲ್ಲದೇ ಒಟ್ಟಾರೇ ವ್ಯಾಲಿಡಿಟಿ ಅವಧಿಗೆ ಒಟ್ಟು 84GB ಡೇಟಾ ಸೌಲಭ್ಯ ದೊರೆಯುತ್ತದೆ. ಅಂದಹಾಗೆ ಈ ಯೋಜನೆಯು 56 ದಿನಗಳ ವ್ಯಾಲಿಡಿಟಿ ಪ್ರಯೋಜನ ಪಡೆದುಕೊಂಡಿದೆ. ಇನ್ನು ಈ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್ ವಾಯ್ಸ್ ಕಾಲ್ ಸೌಲಭ್ಯ ಸಹ ಲಭ್ಯವಾಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ. ಹಾಗೆಯೇ ಈ ಯೋಜನೆಯಲ್ಲಿ Adobe express Premium ಚಂದಾದಾರಿಕೆ ಸೌಲಭ್ಯ ಲಭ್ಯ.