ಭಾರ್ತಿ Airtel ಭಾರತದಲ್ಲಿ ಪ್ರಮುಖ ಟೆಲಿಕಾಂ ಸೇವಾ ಪೂರೈಕೆದಾರ ಕಂಪನಿಗಳ ಪೈಕಿ ಒಂದಾಗಿದೆ. ಇದು ತನ್ನ ಬಳಕೆದಾರರಿಗೆ ಭಿನ್ನ ಮಾದರಿಯ ಯೋಜನೆಗಳ ಆಯ್ಕೆ ನೀಡಿದ್ದು, ಅವುಗಳ ಪೈಕಿ ಡೇಟಾ ಪ್ಯಾಕ್ ಯೋಜನೆಗಳನ್ನು ನೀಡುತ್ತದೆ. ಪ್ರಸ್ತುತ ಇಂಟರ್ನೆಟ್ ಬಳಕೆ ಹೆಚ್ಚಾಗಿರುವುದರಿಂದ ಕೆಲವೊಮ್ಮೆ ಬಳಕೆದಾರರಿಗೆ ಹೆಚ್ಚುವರಿ ಡೇಟಾ ಅಗತ್ಯ ಇರುತ್ತದೆ. ಅಂತಹ ಸಂದರ್ಭಗಳಲ್ಲಿ ಈ ಡೇಟಾ ಪ್ಯಾಕ್‌ಗಳು ಬಹಳ ಉಪಯುಕ್ತ ಎನಿಸುತ್ತವೆ. ಏರ್‌ಟೆಲ್ ಡೇಟಾ ಪ್ಯಾಕ್‌ಗಳು ಮುಖ್ಯವಾಗಿ ಆಡ್ ಆನ್ ಪ್ಲಾನ್ ಆಗಿದ್ದು, ಇವು ಬಳಕೆದಾರರ ಚಾಲ್ತಿ ರೀಚಾರ್ಜ್ ಯೋಜನೆಗೆ ಹೆಚ್ಚುವರಿ ಡೇಟಾವನ್ನು ಸೇರ್ಪಡೆ ಮಾಡುತ್ತವೆ. ಕೆಲವು ಡೇಟಾ ಪ್ಯಾಕ್‌ಗಳು ಜಿಯೋ ಹಾಟ್‌ಸ್ಟಾರ್ ಸೌಲಭ್ಯ ಪಡೆದಿವೆ. ಹಾಗಾದರೆ ಏರ್‌ಟೆಲ್ ಟೆಲಿಕಾಂನ ಡೇಟಾ ಪ್ಯಾಕ್‌ಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : Reliance Jio ಸಂಸ್ಥೆಯ 369 ರೂ.ಗಳ ಪ್ಲಾನಿನಲ್ಲಿ 84 ದಿನಗಳ ವ್ಯಾಲಿಡಿಟಿ ಪಕ್ಕಾ! ಡೇಟಾ ಸಹ ಲಭ್ಯ
ಏರ್‌ಟೆಲ್ ಟೆಲಿಕಾಂನ 48 ರೂ.ಗಳ ಡೇಟಾ ಪ್ಯಾಕ್‌ನಲ್ಲಿ ಬಳಕೆದಾರರಿಗೆ 1GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಈ ಪ್ಯಾಕ್ ಒಂದು ತಿಂಗಳ ವ್ಯಾಲಿಡಿಟಿ ಸೌಲಭ್ಯ ಸಹ ಒಳಗೊಂಡಿದೆ. ಹಾಗೆಯೇ ಒಂದು ತಿಂಗಳ ಅವಧಿಗೆ ಜಿಯೋ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯ ಸೌಲಭ್ಯ ಕೂಡಾ ದೊರೆಯುತ್ತದೆ. ಇನ್ನು ಏರ್‌ಟೆಲ್‌ನ 33 ರೂ.ಗಳ ಡೇಟಾ ಪ್ಯಾಕ್ ರೀಚಾರ್ಜ್‌ನಲ್ಲಿ 2GB ಡೇಟಾ ಪ್ರಯೋಜನ ಸಿಗುತ್ತದೆ. ಅಲ್ಲದೇ ಒಂದು ದಿನದ ವ್ಯಾಲಿಡಿಟಿ ದೊರೆಯುತ್ತದೆ.
ಏರ್‌ಟೆಲ್ ಟೆಲಿಕಾಂನ 100 ರೂ.ಗಳ ಡೇಟಾ ಪ್ಯಾಕ್‌ನಲ್ಲಿ ಬಳಕೆದಾರರಿಗೆ 6GB ಡೇಟಾ ಪ್ರಯೋಜನ ದೊರೆಯುತ್ತದೆ. ಈ ಪ್ಯಾಕ್ 30 ದಿನಗಳ ವ್ಯಾಲಿಡಿಟಿ ಸೌಲಭ್ಯ ಸಹ ಒಳಗೊಂಡಿದೆ. ಹಾಗೆಯೇ ಒಂದು ತಿಂಗಳ ಅವಧಿಗೆ ಜಿಯೋ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯ ಸೌಲಭ್ಯ ಕೂಡಾ ದೊರೆಯುತ್ತದೆ. ಅದೇ ರೀತಿ ಏರ್‌ಟೆಲ್ ಟೆಲಿಕಾಂನ 49 ರೂ.ಗಳ ಡೇಟಾ ಪ್ಯಾಕ್ ರೀಚಾರ್ಜ್‌ನಲ್ಲಿ ಅನಿಯಮಿತ ಡೇಟಾ ಪ್ರಯೋಜನ ಸಿಗುತ್ತದೆ. ಅಲ್ಲದೇ ಒಂದು ದಿನದ ವ್ಯಾಲಿಡಿಟಿ ದೊರೆಯುತ್ತದೆ. ಏರ್‌ಟೆಲ್‌ನ 33 ರೂ.ಗಳ ಡೇಟಾ ಪ್ಯಾಕ್ ರೀಚಾರ್ಜ್‌ನಲ್ಲಿ 2GB ಡೇಟಾ ಪ್ರಯೋಜನ ಸಿಗುತ್ತದೆ. ಅಲ್ಲದೇ ಒಂದು ದಿನದ ವ್ಯಾಲಿಡಿಟಿ ದೊರೆಯುತ್ತದೆ.
ಏರ್‌ಟೆಲ್ ಟೆಲಿಕಾಂನ 195 ರೂ.ಗಳ ಡೇಟಾ ಪ್ಯಾಕ್‌ನಲ್ಲಿ ಬಳಕೆದಾರರಿಗೆ 12GB ಡೇಟಾ ಪ್ರಯೋಜನ ದೊರೆಯುತ್ತದೆ. ಈ ಪ್ಯಾಕ್ 30 ದಿನಗಳ ವ್ಯಾಲಿಡಿಟಿ ಸೌಲಭ್ಯ ಸಹ ಒಳಗೊಂಡಿದೆ. ಹಾಗೆಯೇ ಮೂರು ತಿಂಗಳ ಅವಧಿಗೆ ಜಿಯೋ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯ ಸೌಲಭ್ಯ ಕೂಡಾ ದೊರೆಯುತ್ತದೆ. ಏರ್‌ಟೆಲ್ ಟೆಲಿಕಾಂನ 161 ರೂ.ಗಳ ಡೇಟಾ ಪ್ಯಾಕ್‌ನಲ್ಲಿ ಬಳಕೆದಾರರಿಗೆ 12GB ಡೇಟಾ ಪ್ರಯೋಜನ ದೊರೆಯುತ್ತದೆ. ಈ ಪ್ಯಾಕ್ 30 ದಿನಗಳ ವ್ಯಾಲಿಡಿಟಿ ಸೌಲಭ್ಯ ಸಹ ಒಳಗೊಂಡಿದೆ.
ಏರ್‌ಟೆಲ್ ಟೆಲಿಕಾಂನ 361 ರೂ.ಗಳ ಡೇಟಾ ಪ್ಯಾಕ್‌ನಲ್ಲಿ ಬಳಕೆದಾರರಿಗೆ 50GB ಡೇಟಾ ಪ್ರಯೋಜನ ದೊರೆಯುತ್ತದೆ. ಈ ಪ್ಯಾಕ್ 30 ದಿನಗಳ ವ್ಯಾಲಿಡಿಟಿ ಸೌಲಭ್ಯ ಸಹ ಒಳಗೊಂಡಿದೆ. ಹಾಗೆಯೇ ಮೂರು ತಿಂಗಳ ಅವಧಿಗೆ ಜಿಯೋ ಹಾಟ್‌ಸ್ಟಾರ್ ಮೊಬೈಲ್ ಚಂದಾದಾರಿಕೆಯ ಸೌಲಭ್ಯ ಕೂಡಾ ದೊರೆಯುತ್ತದೆ.