ದೇಶದ ಎರಡನೇ ದೊಡ್ಡ ಟೆಲಿಕಾಂ ಸಂಸ್ಥೆ ಎಂದೆನಿಸಿರುವ Airtel ಸಂಸ್ಥೆಯು ಹಲವು ಆಕರ್ಷಕ ಪ್ರೀಪೇಯ್ಡ್ ಪ್ಲಾನ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಗ್ರಾಹಕರ ಮನ ಗೆದ್ದಿದೆ. ಆ ಪೈಕಿ ಏರ್‌ಟೆಲ್ ಸಂಸ್ಥೆಯ ಬಹುತೇಕ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಗಳು ಅಧಿಕ ಡೈಲಿ ಡೇಟಾ ಸೌಲಭ್ಯ ಒಳಗೊಂಡಿವೆ. ಹಾಗೆಯೇ ಈ ಪ್ಲಾನ್‌ಗಳು ಆಕರ್ಷಕ ವ್ಯಾಲಿಡಿಟಿ ಪ್ರಯೋಜನ ಸಹ ಪಡೆದುಕೊಂಡಿವೆ. ಅದಾಗ್ಯೂ, ಏರ್‌ಟೆಲ್ ಸಂಸ್ಥೆಯ ಕೆಲವೊಂದು ಪ್ರೀಪೇಯ್ಡ್ ರೀಚಾರ್ಜ್ ಪ್ಲಾನ್‌ಗಳು ಡೇಟಾ ಸೌಲಭ್ಯದ ಜೊತೆಗೆ ಟ್ರೆಂಡಿಂಗ್ ಓಟಿಟಿ ಪ್ಲಾಟ್‌ಫಾರ್ಮ್ ಗಳ ಚಂದಾದಾರಿಕೆ ಪ್ರಯೋಜನ ಸಹ ಪಡೆದಿವೆ. ಅದೇ ರೀತಿ ಭಾರ್ತಿ ಏರ್‌ಟೆಲ್‌ನ ಟೆಲಿಕಾಂನ 1849 ರೂ.ಗಳ ಪ್ರೀಪೇಯ್ಡ್ ರೀಚಾರ್ಜ್ ಪ್ಲಾನ್ ಬಿಗ್ ವ್ಯಾಲಿಡಿಟಿ ಸಹ ಪಡೆದಿದೆ. ಹಾಗಾದರೆ ಏರ್‌ಟೆಲ್‌ನ ಟೆಲಿಕಾಂನ 1849 ರೂ.ಗಳ ಪ್ಲಾನ್ ಪ್ರಯೋಜನ ಕುರಿತ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.
Also Read : ನಾಳೆಯಿಂದ Amazon ಎಲೆಕ್ಟ್ರಾನಿಕ್ಸ್ ಪ್ರೀಮಿಯರ್ ಲೀಗ್ ಸೇಲ್ ಶುರು! ಭರ್ಜರಿ ಆಫರ್‌ಗಳ ಸುರಿಮಳೆ
ಏರ್‌ಟೆಲ್‌ನ ಟೆಲಿಕಾಂ ಕಂಪನಿಯು ಭಿನ್ನ ಯೋಜನೆಗಳ ಆಯ್ಕೆ ಪರಿಚಯಿಸಿದೆ. ಅವುಗಳಲ್ಲಿ ಏರ್‌ಟೆಲ್ ಕಂಪನಿಯ 1849 ರೂ.ಗಳ ಪ್ರೀಪೇಯ್ಡ್ ಪ್ಲಾನ್ ಗ್ರಾಹಕರ ಗಮನ ಸೆಳೆದಿದೆ. ಹೌದು, ಏರ್‌ಟೆಲ್‌ನ ಕಂಪನಿಯ ಈ ಯೋಜನೆಯ ಪ್ರಮುಖ ಹೈಲೈಟ್ ಎಂದರೆ ಇದು 365 ದಿನಗಳ ವ್ಯಾಲಿಡಿಟಿ ಸೌಲಭ್ಯ ಪಡೆದುಕೊಂಡಿದೆ. ಹಾಗೆಯೇ ಈ ಪ್ರೀಪೇಯ್ಡ್ ಯೋಜನೆಯಲ್ಲಿ ಅಡೋಬ್ ಪ್ರೀಮಿಯರ್ ಎಕ್ಸ್‌ಪ್ರೆಸ್ ಚಂದಾದಾರಿಕೆ ಪ್ರಯೋಜನ ಗ್ರಾಹಕರಿಗೆ ಲಭ್ಯವಿರುತ್ತದೆ.
ಬಜೆಟ್ ದರದಲ್ಲಿ ಕಾಣಿಸಿಕೊಂಡಿರುವ ಏರ್‌ಟೆಲ್ ಟೆಲಿಕಾಂನ 1849 ರೂ.ಗಳ ಪ್ರೀಪೇಯ್ಡ್ ಪ್ಲಾನ್ ಒಟ್ಟು 365 ದಿನಗಳ ವ್ಯಾಲಿಡಿಟಿ ಅವಧಿಯನ್ನು ಹೊಂದಿದೆ. ಈ ವ್ಯಾಲಿಡಿಟಿ ಅವಧಿಯಲ್ಲಿ ಬಳಕೆದಾರರಿಗೆ 3600 SMS ಸೌಲಭ್ಯ ಪ್ರಯೋಜನ ಲಭ್ಯವಾಗಲಿದೆ. ಇನ್ನು ಪೂರ್ಣ ವ್ಯಾಲಿಡಿಟಿ ಅವಧಿಗೆ ಬಳಕೆದಾರರಿಗೆ ಅನಿಯಮಿತ ವಾಯ್ಸ್ ಕರೆಗಳ ಪ್ರಯೋಜನ ಸಹ ಸಿಗುತ್ತದೆ. ಇದರೊಂದಿಗೆ ಈ ಪ್ರೀಪೇಯ್ಡ್ ಯೋಜನೆಯಲ್ಲಿ ಅಡೋಬ್ ಪ್ರೀಮಿಯರ್ ಎಕ್ಸ್‌ಪ್ರೆಸ್ ಹಾಗೂ ಹೆಲೋ ಟ್ಯೂನ್ ಚಂದಾದಾರಿಕೆ ಪ್ರಯೋಜನ ಗ್ರಾಹಕರಿಗೆ ಲಭ್ಯವಿರುತ್ತದೆ.
ಅದೇ ರೀತಿ ಭಾರ್ತಿ ಏರ್‌ಟೆಲ್ ಟೆಲಿಕಾಂನ 2249 ರೂ.ಗಳ ಪ್ರೀಪೇಯ್ಡ್ ಪ್ಲಾನ್ ಒಟ್ಟು 365 ದಿನಗಳ ದೀರ್ಘ ಅವಧಿಯ ವ್ಯಾಲಿಡಿಟಿ ಸೌಲಭ್ಯ ಹೊಂದಿದೆ. ಈ ವ್ಯಾಲಿಡಿಟಿ ಅವಧಿಯಲ್ಲಿ ಬಳಕೆದಾರರಿಗೆ ಒಟ್ಟು 30 GB ಡೇಟಾ ಪ್ರಯೋಜನ ಲಭ್ಯವಾಗುತ್ತದೆ. ಇದರೊಂದಿಗೆ ಈ ಪ್ಲಾನಿನಲ್ಲಿ ಪೂರ್ಣ ವ್ಯಾಲಿಡಿಟಿ ಅವಧಿಯಲ್ಲಿ ಬಳಕೆದಾರರಿಗೆ 3600 SMS ಸೌಲಭ್ಯ ಪ್ರಯೋಜನ ಲಭ್ಯವಾಗಲಿದೆ. ಹಾಗೆಯೇ ಬಳಕೆದಾರರಿಗೆ ಅನಿಯಮಿತ ವಾಯ್ಸ್ ಕರೆಗಳ ಪ್ರಯೋಜನ ಸಹ ಸಿಗುತ್ತದೆ. ಇದರ ಜೊತೆಗೆ ಈ ಪ್ರೀಪೇಯ್ಡ್ ಯೋಜನೆಯಲ್ಲಿ ಅಡೋಬ್ ಪ್ರೀಮಿಯರ್ ಎಕ್ಸ್‌ಪ್ರೆಸ್ ಹಾಗೂ ಹೆಲೋ ಟ್ಯೂನ್ ಚಂದಾದಾರಿಕೆ ಪ್ರಯೋಜನ ಗ್ರಾಹಕರಿಗೆ ಲಭ್ಯವಿರುತ್ತದೆ.