Airtel ಟೆಲಿಕಾಂನ ಈ ಪ್ಲಾನ್‌ಗಳಲ್ಲಿ ಸಿಗುತ್ತೆ ಭರ್ಜರಿ ಡೇಟಾ ಜೊತೆಗೆ 56 ದಿನಗಳ ವ್ಯಾಲಿಡಿಟಿ

Updated on 11-Feb-2026
HIGHLIGHTS

Airtel ಕಂಪನಿಯ ಈ ಪ್ಲಾನ್‌ಗಳಲ್ಲಿ ಡೇಟಾ ಜೊತೆಗೆ 56 ದಿನಗಳ ಮಾನ್ಯತೆ ಸಿಗುತ್ತೆ

Airtel ನ ಈ ಯೋಜನೆಗಳಲ್ಲಿ Adobe Express Premium ಚಂದಾದಾರಿಕೆ ಲಭ್ಯ

ಈ ಪ್ಲಾನ್‌ಗಳು ಉಚಿತ SMS ಹಾಗೂ ವಾಯ್ಸ್‌ ಕರೆಯ ಸೌಲಭ್ಯ ಪಡೆದುಕೊಂಡಿವೆ

ದೇಶದ ಟೆಲಿಕಾಂ ವಲಯದಲ್ಲಿ ಎರಡನೇ ದೊಡ್ಡ ಕಂಪನಿಯಾಗಿ Airtel ಕಾಣಿಸಿಕೊಂಡಿದೆ. ಈ ಕಂಪನಿಯು ಹಲವು ಆಕರ್ಷಕ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನಗಳನ್ನು ಒಳಗೊಂಡಿದೆ. ಅವುಗಳ ಪೈಕಿ ಅಲ್ಪಾವಧಿಯ ಹಾಗೂ ದೀರ್ಘಾವಧಿ ವ್ಯಾಲಿಡಿಟಿಯ ಯೋಜನೆಗಳು ಸಹ ಸೇರಿವೆ. ಕೆಲವು ಪ್ಲಾನ್‌ಗಳು ಅಧಿಕ ವ್ಯಾಲಿಡಿಟಿ ಜೊತೆಗೆ ದೈನಂದಿನ ಡೇಟಾ ಸೌಲಭ್ಯ ಒಳಗೊಂಡಿವೆ. ಹಾಗೆಯೇ ಇನ್ನ ಕೆಲವು ಯೋಜನೆಗಳು ಅಧಿಕ ವ್ಯಾಲಿಡಿಟಿ ಜೊತೆಗೆ ಓಟಿಟಿ ಸೌಲಭ್ಯ ಸಹ ಪಡೆದು ಗಮನ ಸೆಳೆದಿವೆ. ಅದರಲ್ಲಿಯೂ ಮುಖ್ಯವಾಗಿ 56 ದಿನಗಳ ಮಾನ್ಯತೆ ಪಡೆದ ಕೆಲವು ರೀಚಾರ್ಜ್‌ ಪ್ಲಾನ್‌ಗಳು ಹೆಚ್ಚು ಟ್ರೆಂಡ್‌ನಲ್ಲಿ ಕಾಣಿಸಿಕೊಂಡಿವೆ. ಹಾಗಾದರೆ Airtel ಟೆಲಿಕಾಂನ 56 ದಿನಗಳ ವ್ಯಾಲಿಡಿಟಿಯ ಯೋಜನೆಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ.

Also Read : iPhone 17 ಬೆಲೆ ಇಳಿಕೆ! ವ್ಯಾಲೆಂಟೈನ್ಸ್​ ಡೇ ಪ್ರಯುಕ್ತ ನಿಮ್ಮ ಪ್ರೀತಿಪಾತ್ರರಿಗೆ ಈ ಐಫೋನ್‌ ಗಿಫ್ಟ್‌ ಕೊಡಬಹುದು

Airtel ಸಂಸ್ಥೆಯ 649 ರೂ.ಗಳ ಯೋಜನೆಯ ಮಾಹಿತಿ

Airtel ಟೆಲಿಕಾಂನ 649 ರೂ.ಗಳ ಪ್ರೀಪೇಯ್ಡ್‌ ರೀಚಾರ್ಜ್‌ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್‌ + ಪ್ರತಿದಿನ 2GB Data ಸೌಲಭ್ಯ ಸಿಗಲಿದೆ. ಅಲ್ಲದೇ ಈ ಯೋಜನೆಯಲ್ಲಿ ಗ್ರಾಹಕರಿಗೆ 56 ದಿನಗಳ ವ್ಯಾಲಿಡಿಟಿ ಪ್ರಯೋಜನ ಒದಗಿಸುತ್ತದೆ. ಹಾಗೆಯೇ ಈ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌ ಸೌಲಭ್ಯ ಸಹ ಸಿಗಲಿದೆ. ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಇರಲಿದೆ. ಹಾಗೆಯೇ ಇದರಲ್ಲಿ 4000ರೂ ಮೌಲ್ಯದ Adobe Express Premium ಚಂದಾದಾರಿಕೆಯು ಲಭ್ಯ.

Airtel ಸಂಸ್ಥೆಯ 838 ರೂ.ಗಳ ಪ್ಲಾನ್ ಮಾಹಿತಿ

Airtel ಕಂಪನಿಯ 838 ರೂಗಳ ಪ್ರೀಪೇಯ್ಡ್‌ ರೀಚಾರ್ಜ್‌ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್‌ + ಪ್ರತಿದಿನ 3GB Data ಪ್ರಯೋಜನ ಸಿಗಲಿದೆ. ಅಲ್ಲದೇ ಈ ರೀಚಾರ್ಜ್‌ ಯೋಜನೆಯು 56 ದಿನಗಳ ವ್ಯಾಲಿಡಿಟಿ ಸೌಲಭ್ಯ ಒಳಗೊಂಡಿದೆ. ಇದರೊಂದಿಗೆ ಬಳಕೆದಾರರಿಗೆ ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌ ಸೌಲಭ್ಯ ಸಹ ಸಿಗಲಿದೆ. ಹಾಗೆಯೇ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ ಆಗುತ್ತದೆ. ಇದರೊಂದಿಗೆ ಅಮೆಜಾನ್‌ ಪ್ರೈಮ್‌ ಲೈಟ್‌, ಸೋನಿ ಲೈವ್‌ ಸೇರಿದಂತೆ ಕೆಲವು ಓಟಿಟಿ ಪ್ಲಾಟ್‌ಫಾರ್ಮ್ ಗಳ ಚಂದಾದಾರಿಕೆಯ ಸೌಲಭ್ಯ ಸಹ ದೊರೆಯುತ್ತದೆ. ಅಲ್ಲದೇ ಒಂದು ವರ್ಷದ Adobe Premiere Express ಚಂದಾದಾರಿಕೆ ಸಹ ಲಭ್ಯ.

Airtel ಸಂಸ್ಥೆಯ 579 ರೂ.ಗಳ ರೀಚಾರ್ಜ್‌ ಪ್ಲಾನ್ ಮಾಹಿತಿ

Airtel ಟೆಲಿಕಾಂನ 579 ರೂ.ಗಳ ಪ್ರೀಪೇಯ್ಡ್‌ ರೀಚಾರ್ಜ್‌ ಪ್ಲಾನಿನಲ್ಲಿ ಬಳಕೆದಾರರಿಗೆ ಪ್ರತಿದಿನ 1.5GB Data ಸೌಲಭ್ಯ ಸಿಗಲಿದೆ. ಅಲ್ಲದೇ ಈ ಯೋಜನೆಯಲ್ಲಿ ಗ್ರಾಹಕರಿಗೆ 56 ದಿನಗಳ ವ್ಯಾಲಿಡಿಟಿ ಪ್ರಯೋಜನ ದೊರೆಯುತ್ತದೆ. ಹಾಗೆಯೇ ಈ ಪ್ಲಾನಿನಲ್ಲಿ ಬಳಕೆದಾರರಿಗೆ ಅನ್‌ಲಿಮಿಟೆಡ್‌ ವಾಯ್ಸ್‌ ಕಾಲ್‌ ಸೌಲಭ್ಯ ಸಹ ಸಿಗಲಿದ್ದು, ಇದರ ಜೊತೆಗೆ ಪ್ರತಿದಿನ 100 SMS ಸೌಲಭ್ಯ ಸಹ ಲಭ್ಯ. ಈ ಯೋಜನೆಯೊಂದಿಗೆ ಹೆಚ್ಚುವರಿಯಾಗಿ 4000ರೂ ಮೌಲ್ಯದ Adobe Express Premium ಚಂದಾದಾರಿಕೆಯು ಲಭ್ಯ.

Manthesh B

ಮಾಂತೇಶ್ ಎಂ.ಬಿ. ಅವರು ಮಾಧ್ಯಮ ಕ್ಷೇತ್ರದಲ್ಲಿ ಎಂಟು ವರ್ಷಗಳಿಗೂ ಹೆಚ್ಚು ಅನುಭವ ಹೊಂದಿರುವ ಪತ್ರಕರ್ತರು. ಪ್ರಸ್ತುತ ಅವರು ಟೈಮ್ಸ್ ಗ್ರೂಪ್‌ನ ಡಿಜಿಟ್ ಕನ್ನಡ ವಿಭಾಗದಲ್ಲಿ ಚೀಫ್ ಕಾಪಿ ಎಡಿಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪತ್ರಿಕೆ, ಟಿವಿ ಹಾಗೂ ವೆಬ್ ಪೋರ್ಟಲ್‌ಗಳಲ್ಲಿ ಅನುಭವ ಪಡೆದಿರುವ ಅವರು, ಈ ಹಿಂದೆ ಒನ್‌ಇಂಡಿಯಾ ಸಂಸ್ಥೆಯ ಗಿಜ್‌ಬಾಟ್ ಟೆಕ್ ವಿಭಾಗದಲ್ಲಿಯೂ ಉಪಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.

Connect On :